Tuesday, August 4, 2026
Tuesday, August 4, 2026

ತತ್ಕಾಲ್ ಬುಕಿಂಗ್‌ಗೆ ಹೊಸ ನಿಯಮಾವಳಿಗಳು ಜಾರಿ: IRCTC

ಈ ಹೊಸ ಸುಧಾರಣೆಗಳಿಂದಾಗಿ ನೈಜ ಪ್ರಯಾಣಿಕರಿಗೆ ತುರ್ತು ಸಂದರ್ಭಗಳಲ್ಲಿ ಕನ್ಫರ್ಮ್ಡ್ ತತ್ಕಾಲ್ ಟಿಕೆಟ್ ಪಡೆಯುವುದು ಮತ್ತಷ್ಟು ಸುಲಭ ಮತ್ತು ಪಾರದರ್ಶಕವಾಗಲಿದೆ.

ಭಾರತೀಯ ರೈಲ್ವೇ ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ಏಜೆಂಟ್‌ಗಳ ಅಕ್ರಮ ಹಸ್ತಕ್ಷೇಪ ಹಾಗೂ ಬೋಟ್ ಸಾಫ್ಟ್‌ವೇರ್‌ಗಳ ಬಳಕೆಯನ್ನು ತಡೆಯಲು ಭಾರತೀಯ ರೈಲ್ವೇ ಮತ್ತು ಐಆರ್‌ಸಿಟಿಸಿ ನೂತನ ಕಟ್ಟುನಿಟ್ಟಿನ ನಿಯಮಗಳನ್ನು ಬಿಡುಗಡೆ ಮಾಡಿವೆ. ಸಾಮಾನ್ಯ ಪ್ರಯಾಣಿಕರಿಗೆ ಕೊನೆ ಕ್ಷಣದಲ್ಲಿ ತುರ್ತು ಟಿಕೆಟ್ ಸಿಗುವುದನ್ನು ಸುಲಭಗೊಳಿಸಲು ಈ ಹೊಸ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ.

ತತ್ಕಾಲ್ ಬುಕಿಂಗ್ ಸಮಯಾವಕಾಶದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಎಂದಿನಂತೆಯೇ ಮುಂದುವರಿಯಲಿದೆ.

ಇದನ್ನೂ ಓದಿ: ದೇಶ ಸುತ್ತಲು ವೇಗದ ರೈಲುಗಳೇ ಹೊಸ ಆಯ್ಕೆ

ದಲ್ಲಾಳಿಗಳು ಬಲ್ಕ್ ಆಗಿ ಫೇಕ್ ಐಡಿಗಳನ್ನು ಬಳಸಿ ಟಿಕೆಟ್ ಬುಕ್ ಮಾಡುವುದನ್ನು ತಡೆಯಲು, ತತ್ಕಾಲ್ ಟಿಕೆಟ್ ಕಾಯ್ದಿರಿಸುವ ಐಆರ್‌ಸಿಟಿಸಿ ಖಾತೆಗಳನ್ನು ಕಡ್ಡಾಯವಾಗಿ ಆಧಾರ್‌ನೊಂದಿಗೆ ಲಿಂಕ್ ಮಾಡಿರಬೇಕು. ಬುಕಿಂಗ್ ಸಮಯದಲ್ಲಿ ಲಿಂಕ್ ಆದ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ನಮೂದಿಸುವುದು ಕಡ್ಡಾಯವಾಗಿದೆ.

ಅಧಿಕೃತ ಐಆರ್‌ಸಿಟಿಸಿ ಏಜೆಂಟರುಗಳು ತತ್ಕಾಲ್ ಬುಕಿಂಗ್ ಆರಂಭವಾದ ಮೊದಲ 30 ನಿಮಿಷಗಳ ಕಾಲ (AC ಗೆ 10:00-10:30 ಮತ್ತು Non-AC ಗೆ 11:00-11:30) ಟಿಕೆಟ್ ಬುಕ್ ಮಾಡಲು ಅವಕಾಶವಿರುವುದಿಲ್ಲ. ಈ ಮೊದಲ 30 ನಿಮಿಷಗಳನ್ನು ಕೇವಲ ಸಾಮಾನ್ಯ ಸಾರ್ವಜನಿಕರಿಗೆ ಮಾತ್ರ ಸೀಮಿತಗೊಳಿಸಲಾಗಿದೆ.

ಬೋಟ್ ಸಾಫ್ಟ್‌ವೇರ್‌ಗಳನ್ನು ತಡೆಯಲು ಪಾವತಿಯ ಮುನ್ನ ಸುಧಾರಿತ ಡಿಜಿಟಲ್ ಕ್ಯಾಪ್ಚಾ ಹಾಗೂ 'ಬಯೋಮೆಟ್ರಿಕ್/ಸ್ಮಾರ್ಟ್ ಲಾಗಿನ್' ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಆಧಾರ್ ಲಿಂಕ್ ಆದ ಐಆರ್‌ಸಿಟಿಸಿ ಖಾತೆಯಿಂದ ತಿಂಗಳಿಗೆ ಗರಿಷ್ಠ 24 ಟಿಕೆಟ್‌ಗಳನ್ನು ಬುಕ್ ಮಾಡಲು ಅವಕಾಶ ನೀಡಲಾಗಿದ್ದು, ಸಾಮಾನ್ಯ ತತ್ಕಾಲ್ ಬುಕಿಂಗ್‌ನಲ್ಲಿ ಒಂದೇ ಪಿಎನ್‌ಆರ್ ಅಡಿಯಲ್ಲಿ ಗರಿಷ್ಠ 4 ಪ್ರಯಾಣಿಕರಿಗೆ ಮಾತ್ರ ಟಿಕೆಟ್ ಕಾಯ್ದಿರಿಸಬಹುದು.

ಸಾಮಾನ್ಯ ನಿಯಮಗಳಂತೆ, ಕನ್ಫರ್ಮ್ ಆಗಿರುವ ತತ್ಕಾಲ್ ಟಿಕೆಟ್‌ಗಳನ್ನು ರದ್ದುಗೊಳಿಸಿದರೆ ಯಾವುದೇ ಹಣ ಮರುಪಾವತಿ ಸಿಗುವುದಿಲ್ಲ. ತತ್ಕಾಲ್ ವೇಟಿಂಗ್ ಲಿಸ್ಟ್‌ನಲ್ಲಿರುವ ಟಿಕೆಟ್ ಕನ್ಫರ್ಮ್ ಆಗದೆ ಆಟೋ-ಕ್ಯಾನ್ಸಲ್ ಆದರೆ ಅಥವಾ ನಿಗದಿತ ಸಮಯದ ಮುಂಚಿತವಾಗಿ ರದ್ದುಗೊಳಿಸಿದರೆ ನಿಯಮಿತ ಕ್ಲರಿಕಲ್ ಶುಲ್ಕವನ್ನು ಕಡಿತಗೊಳಿಸಿ ಬಾಕಿ ಹಣವನ್ನು ಮರುಪಾವತಿಸಲಾಗುತ್ತದೆ.

ರೈಲು ಸಂಪೂರ್ಣ ರದ್ದಾದರೆ ಅಥವಾ ನಿಗದಿತ ಸಮಯಕ್ಕಿಂತ 3 ಗಂಟೆಗೂ ಹೆಚ್ಚು ತಡವಾಗಿ ಚಲಿಸಿದರೆ, ತತ್ಕಾಲ್ ಟಿಕೆಟ್‌ನ ಪೂರ್ಣ ಹಣ ವಾಪಸ್ ಸಿಗಲಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ