Wednesday, September 16, 2026
Wednesday, September 16, 2026

90's ವಂಟಗದಿ ಕೋರಮಂಗಲದಲ್ಲೊಂದು ತೆಲುಗು ರುಚಿ

ಆಂಧ್ರದ ಆಹಾರದ ರುಚಿಗೆ ಮನಸೋಲದ ಆಹಾರಪ್ರಿಯರೇ ಇಲ್ಲ. ಖಾದ್ಯಗಳು ಸಖತ್‌ ಖಾರವಾದರೂ ಮತ್ತೆ ಮತ್ತೆ ತಿನ್ನಬೇಕೆನಿಸುವಷ್ಟು ನಾಲಿಗೆ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಬೆಂಗಳೂರಿನಲ್ಲಿ ತೆಲುಗು ರುಚಿಗಾಗಿ ಹುಡುಕಾಡುವುದೆಲ್ಲಿ ಎನ್ನುವವರಿಗಾಗಿಯೇ ಕೋರಮಂಗಲದಲ್ಲೊಂದು ಹೊಸ ಫುಡ್‌ ಅಡ್ಡಾ ಪ್ರಾರಂಭವಾಗಿದೆ. 90's ವಂಟಗದಿ ಪ್ರಾರಂಭವಾಗಿ ತಿಂಗಳೊಳಗೆ ಆಹಾರಪ್ರಿಯರ ನೆಚ್ಚಿನ ತಾಣವಾಗಿ ರೂಪುಗೊಂಡಿದೆ.

ಮಹಾನಗರಿ ಬೆಂಗಳೂರು ದೇಶ-ವಿದೇಶಿಗರಿಗೆ ಆಶ್ರಯ ನೀಡುವ ಹೆಮ್ಮರವಾಗಿ ಬೆಳೆದುನಿಂತಿದೆ. ವಿದ್ಯಾಭ್ಯಾಸ, ಉದ್ಯೋಗದ ಕನಸುಗಳನ್ನು ಹೊತ್ತು ಸಿಲಿಕಾನ್‌ ಸಿಟಿಗೆ ಬರುವ ಮಂದಿ ಇಲ್ಲಿನ ಬಹು ಸಂಸ್ಕೃತಿಗಷ್ಟೇ ಅಲ್ಲದೆ ರುಚಿಕರ ಆಹಾರಕ್ಕೂ ಮನಸೋಲದೇ ಇರುವುದಿಲ್ಲ. ಮಂಗಳೂರು, ಮೈಸೂರು, ಉತ್ತರ ಕನ್ನಡ, ಉತ್ತರ ಕರ್ನಾಟಕ ಸೇರಿದಂತೆ ಕರ್ನಾಟಕದೊಳಗೆ, ಗಡಿ ದಾಟಿ ಬೆಂಗಳೂರಿಗೆ ಬಂದು ನೆಲೆಸುವ ಅನ್ಯ ರಾಜ್ಯಗಳ ಮಂದಿಗೂ ನೆಲೆ ಕಲ್ಪಿಸುವಲ್ಲಿ ಬೆಂಗಳೂರಿನ ಪಾತ್ರ ಪ್ರಮುಖವಾದುದು.

Untitled design - 2026-09-16T181834.017

ಸ್ವಂತ ಊರನ್ನು ಬಿಟ್ಟು ಬೆಂಗಳೂರಿಗೆ ಬಂದು ಜೀವನ ಕಟ್ಟಿಕೊಳ್ಳುವ ಮಂದಿಯನ್ನೇ ಗಮನದಲ್ಲಿಟ್ಟುಕೊಂಡು ನಗರದಲ್ಲಿ ಅನೇಕ ಹೊಟೇಲ್‌ ಹಾಗೂ ರೆಸ್ಟೋರೆಂಟ್ಸ್‌ ತಲೆ ಎತ್ತಿವೆ. ಆಯಾ ರಾಜ್ಯಗಳ ಶುಚಿ-ರುಚಿಯಾದ ಆಹಾರವನ್ನು ಉಣಬಡಿಸುವ ಮೂಲಕ ಹುಟ್ಟಿ ಬೆಳೆದ ಊರನ್ನೇ ಮರೆಸುವ ಶಕ್ತಿ ಅಂಥ ಆಹಾರ ತಾಣಗಳಿವೆ. ಅವುಗಳ ಪೈಕಿ ಬೆಂಗಳೂರಿನ ಹೃದಯಭಾಗದ ಕೋರಮಂಗಲದಲ್ಲಿರುವ 90ರ ದಶಕದ ಅಪ್ಪಟ ತೆಲುಗು ಶೈಲಿಯ ಆಹಾರ ತಾಣ ʻ90's ವಂಟಗದಿʼ ಇತ್ತೀಚೆಗೆ ಸುದ್ದಿಯಲ್ಲಿದೆ.

ಇದನ್ನೂಓದಿ:ರಾಜಸ್ಥಾನದ 2 ಹೊಟೇಲ್‌ಗಳಿಗೆ ವಿಶ್ವಮಾನ್ಯತೆ

90's ವಂಟಗದಿ – ದ ಟೇಸ್ಟ್ ಆಫ್ ತೆಲುಗು ಕಿಚನ್

ಬೆಂಗಳೂರು ನಗರದಲ್ಲಿ ಹೊಸಹೊಸ ಥೀಮ್ ರೆಸ್ಟೋರೆಂಟ್‌ಗಳು ಸಾಕಷ್ಟಿದ್ದರೂ, ಕೋರಮಂಗಲದಲ್ಲಿರುವ 90's ವಂಟಗದಿ ಮಾತ್ರ ತನ್ನ ವಿಶಿಷ್ಟ ಪರಿಕಲ್ಪನೆಯಿಂದ ಆಹಾರಪ್ರಿಯರನ್ನು ಸೆಳೆಯುತ್ತಿದೆ. ಇಲ್ಲಿ ಕಾಲಿಟ್ಟ ತಕ್ಷಣವೇ 1990ರ ದಶಕದ ತೆಲಂಗಾಣದ ನೆನಪುಗಳು ಮತ್ತೆ ಜೀವಂತವಾಗಿಬಿಡುತ್ತದೆ. ಅದರಲ್ಲೂ 90ರ ದಶಕದಲ್ಲಿ ತೆಲುಗು ಭಾಷಿಕರ ಮನೆಯ ಗೋಡೆಗಳ ಮೇಲೆ ಆಕರ್ಷಕವಾಗಿ ಕಂಗೋಳಿಸುತ್ತಿದ್ದ ಸಿನಿಮ ಸ್ಟಾರ್‌ಗಳ ಫೊಟೋ, ಪೋಸ್ಟರ್‌ಗಳು.. ಆ ಕಾಲದ ಗೃಹೋಪಯೋಗಿ ವಸ್ತುಗಳು, ಹಳೆಯ ರೇಡಿಯೋ, ಟೆಲಿಫೋನ್, ಕ್ಯಾಸೆಟ್‌ಗಳು ಹಾಗೂ ಗ್ರಾಮೀಣ ಮನೆಗಳ ವಿಂಟೇಜ್‌ ಚಿತ್ರಣವನ್ನು ನೆನಪಿಸುವ ಅಲಂಕಾರಗಳು ಗ್ರಾಹಕರನ್ನು ಬಾಲ್ಯದ ದಿನಗಳಿಗೆ ಕರೆದೊಯ್ಯುತ್ತವೆ. ವಿಟೇಂಜ್‌ ಲುಕ್‌ ಹೇಗಿರಬಹುದೆಂದು ಸಿನಿಮಾಗಳಲ್ಲಷ್ಟೇ ನೋಡಿದ್ದ ಜೆನ್‌z ಗಳಿಗೆ ಈ ರೆಸ್ಟೋರೆಂಟ್‌ ಮೂಲಕ ಹೊಸ ಅನುಭವ ಸಿಗುವುದಂತೂ ಸತ್ಯ.

Untitled design - 2026-09-16T182037.891

ಆಂಧ್ರ-ತೆಲಂಗಾಣ ಶೈಲಿಯ ಸಾಂಪ್ರದಾಯಿಕ ಅಡುಗೆ

ರೆಸ್ಟೋರೆಂಟ್‌ನ ಪ್ರಮುಖ ಆಕರ್ಷಣೆಯೆಂದರೆ ಅಲ್ಲಿ ತಯಾರಾಗುವ ಮನೆಯೂಟದ ಸವಿರುಚಿ. ಕೋಲ್ಡ್‌ ಪ್ರೆಸ್ಡ್‌ ಎಣ್ಣೆ, ಕೇರಳದಿಂದ ತರಿಸುವ ಸಾಂಪ್ರದಾಯಿಕ ಮಸಾಲೆಗಳ ಬಳಕೆ ಹಾಗೂ ಹಳ್ಳಿ ಅಡುಗೆಯ ಸುವಾಸನೆ ಇಲ್ಲಿನ ವಿಶೇಷತೆಗಳು. ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ವಿಭಾಗಗಳಲ್ಲಿ ಅನೇಕ ಆಯ್ಕೆಗಳಿದ್ದು, ವಿಶೇಷವಾಗಿ ಆಂಧ್ರ ಶೈಲಿಯ ಖಾರ ಖಾರವಾದ ಖಾದ್ಯಗಳು ಹಾಗೂ ಸಾಂಪ್ರದಾಯಿಕ ಊಟ ಹೆಚ್ಚು ಜನಪ್ರಿಯವಾಗಿವೆ.

ಆಹಾರ ಪ್ರವಾಸೋದ್ಯಮ ಪರಿಕಲ್ಪನೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಕೇವಲ ಹೊಟ್ಟೆ ತುಂಬಿಸುವುದಕ್ಕಿಂತ ವಿಭಿನ್ನ ಅನುಭವ ನೀಡುವ ಸ್ಥಳಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆ ನಿಟ್ಟಿನಲ್ಲಿ ʻ90's ವಂಟಗದಿʼ ಒಂದು ಉತ್ತಮ ಉದಾಹರಣೆಯಾಗಿದೆ. ಇಲ್ಲಿಗೆ ಬರುವ ಗ್ರಾಹಕರಿಗೆ ರುಚಿಯಾದ ಆಂದ್ರ ಆಹಾರವನ್ನು ಉಣಬಡಿಸುವುದಷ್ಟೇ ಅಲ್ಲದೆ ಹಾಗೂ ಆ ಮೂಲಕ ವರು 90ರ ದಶಕದ ಜೀವನಶೈಲಿಯನ್ನು ಮತ್ತೊಮ್ಮೆ ಅನುಭವಿಸುವ ಅವಕಾಶವನ್ನು ಪಡೆಯುತ್ತಾರೆ.

ಇದನ್ನೂ ಓದಿ:ಮಂಗಳೂರಿನಲ್ಲಿ 130 ವರ್ಷಗಳ ಐತಿಹಾಸಿಕ ಹೊಟೇಲ್‌

ಫೊಟೋ ಪಾಯಿಂಟ್ಸ್‌

ಆಹಾರ ಹೊಟ್ಟೆಗಷ್ಟೇ ಅಲ್ಲ, ಮನಸಿಗೂ ಹಿತವೆನಿಸಲಿ ಎಂಬ ಉದ್ದೇಶದಿಂದ ಇಲ್ಲಿ ಬರುವ ಗ್ರಾಹಕರಿಗಾಗಿಯೇ ಪ್ರತ್ಯೇಕ ಫೊಟೋ ಫ್ರೇಮ್‌ ತಾಣಗಳಲ್ಲೂ ಇಲ್ಲಿ ನಿರ್ಮಿಸಲಾಗಿದೆ. ಕುಟುಂಬ ಅಥವಾ ಸ್ನೇಹಿತರ ಜತೆ ಇಲ್ಲಿಗೆ ಭೇಟಿ ಕೊಟ್ಟರೆ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವುದಕ್ಕೆ ಸಾಕಷ್ಟು ಫೊಟೋ, ವಿಡಿಯೋಗಳನ್ನು ಶೂಟ್‌ ಮಾಡಿಕೊಳ್ಳಲು ಅವಕಾಶವಿದೆ.

Untitled design - 2026-09-16T182254.333

ಒಟ್ಟಿನಲ್ಲಿ ಕೋರಮಂಗಲದ ಹೃದಯಭಾಗದಲ್ಲಿರುವ ಈ ರೆಸ್ಟೋರೆಂಟ್ ಉತ್ತಮ ವಾತಾವರಣವನ್ನು ಕಲ್ಪಿಸಿರುವುದರ ಜತೆಗೆ ಬಜೆಟ್‌ ಫ್ರೆಂಡ್‌ ಆಹಾರ ತಾಣಗಳನ್ನು ಹುಡುಕುವವರಿಗೂ ಉತ್ತಮ ಆಯ್ಕೆಯಾಗಿದೆ. ಸಾಂಪ್ರದಾಯಿಕ ತೆಲುಗು ರುಚಿಯನ್ನು ಬಯಸುವ ಬೆಂಗಳೂರಿಗರು ಅಥವಾ ಬೆಂಗಳೂರಿಗೆ ಪ್ರವಾಸ ಮಾಡುವವರು ನೀವಾದರೆ ನಗರದ ಪ್ರಸಿದ್ಧ ತಾಣಗಳ ಜತೆಗೆ ಸ್ಥಳೀಯ ಆಹಾರ ಸಂಸ್ಕೃತಿಯನ್ನು ತಿಳಿಯಲು ಇಂಥ ಥೀಮ್ ರೆಸ್ಟೋರೆಂಟ್‌ಗೆ ಭೇಟಿ ನೀಡಬಹುದು. ಕನ್ನಡದ ನೆಲದಲ್ಲೂ ತೆಲುಗು ರುಚಿಯನ್ನು ಆಸ್ವಾದಿಸಬಹುದು.

ಬಾಕ್ಸ್‌ ಐಟಂ:

ಆಹಾರ ಪ್ರಿಯರಿಗೆ ಮುಕ್ತವಾಗಿ ತಿಂಗಳು ತುಂಬಿಲ್ಲ

ಕೋರಮಂಗಲ 1ನೇ ಬ್ಲಾಕ್ನ ಮಾರ್ವೆಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಪಕ್ಕದಲ್ಲಿ ಇದೇ ಜುಲೈ 12ರಂದು 90's ವಂಟಗದಿ ಶುಭಾರಂಭಗೊಂಡಿದೆ. ರಾಜ್ಯದ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹಾಗೂ ತೆಲುಗು ಚಿತ್ರರಂಗದ ನಿರ್ದೇಶಕ ಪೂರಿ ಜಗನ್ನಾಥ್‌ ಅವರ ಪುತ್ರ ನಟ ಆಕಾಶ್‌ ಜಗನ್ನಾಥ್ ಈ ರೆಸ್ಟೋರೆಂಟ್‌ಗೆ ಚಾಲನೆ ನೀಡಿದರು. ಗ್ರಾಹಕರಿಗೆ ಮುಕ್ತವಾಗಿ ತಿಂಗಳು ಪೂರ್ಣವಾಗುವ ಮುನ್ನವೇ ಇಲ್ಲಿನ ಆಹಾರಕ್ಕೆ ಜನ ಮನಸೋತಿದ್ದಾರೆ.

Untitled design - 2026-09-16T182652.877

ವಿಳಾಸ:

154, 1ನೇ ಕ್ರಾಸ್ ರಸ್ತೆ, ಮಾರ್ವೆಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಪಕ್ಕ, 1ನೇ ಬ್ಲಾಕ್ ಕೋರಮಂಗಲ, ಬೆಂಗಳೂರು, ಕರ್ನಾಟಕ 560034

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ