ನ್ಯೂಜಿಲೆಂಡ್‌ನ ಪ್ರಮುಖ ಪ್ರವಾಸೋದ್ಯಮ ಸಂಸ್ಥೆಯಾದ ಜನರಲ್ ಟ್ರಾವೆಲ್ ನ್ಯೂಜಿಲೆಂಡ್ (General Travel New Zealand) ಭಾರತದಲ್ಲಿ ತನ್ನ ಪ್ರವಾಸೋದ್ಯಮವನ್ನು ಉತ್ತೇಜಿಸಲು ಆರು ನಗರಗಳ ರೋಡ್‌ಶೋವನ್ನು ಆರಂಭಿಸಿದೆ. ಭಾರತದ ಪ್ರವಾಸೋದ್ಯಮ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮುಂಬಯಿ, ಅಹಮದಾಬಾದ್, ಇಂದೋರ್, ಚಂಡೀಗಢ, ದೆಹಲಿ ಹಾಗೂ ಕೊಲ್ಕತ್ತಾದಲ್ಲಿ ಈ ರೋಡ್‌ ಶೋ ನಡೆಯಲಿದೆ.

Untitled design - 2026-07-29T155500.591

ಈ ರೋಡ್‌ ಶೋದಲ್ಲಿ ನ್ಯೂಜಿಲೆಂಡ್‌ನ 11 ಪ್ರಮುಖ ಪ್ರವಾಸೋದ್ಯಮ ಪಾಲುದಾರರು ಭಾಗವಹಿಸಿದ್ದು, ಭಾರತೀಯ ಟ್ರಾವೆಲ್ ಏಜೆಂಟ್‌ಗಳು, ಟೂರ್ ಆಪರೇಟರ್‌ಗಳು ಹಾಗೂ ಪ್ರವಾಸೋದ್ಯಮ ವೃತ್ತಿಪರರೊಂದಿಗೆ ನೇರವಾಗಿ ಸಂಪರ್ಕ ಸಾಧಿಸುತ್ತಿದ್ದಾರೆ. ನ್ಯೂಜಿಲೆಂಡ್‌ನ ಪ್ರಕೃತಿ ಸೌಂದರ್ಯ, ಸಾಹಸ ಪ್ರವಾಸ, ಮಾವೋರಿ ಸಂಸ್ಕೃತಿ, ಐಷಾರಾಮಿ ವಾಸ್ತವ್ಯ, ವೈನ್ ಹಾಗೂ ಆಹಾರ ಪ್ರವಾಸ, ಸ್ವಯಂ ಚಾಲನಾ (Self-drive) ಪ್ರವಾಸ ಮತ್ತು ಕುಟುಂಬ ಪ್ರವಾಸದ ಅವಕಾಶಗಳನ್ನು ಪರಿಚಯಿಸಲಾಗುತ್ತಿದೆ.

ಕೋಲ್ಕತ್ತಾ

ಭಾರತವು ಜನರಲ್ ಟ್ರಾವೆಲ್ ನ್ಯೂಜಿಲೆಂಡ್‌ಗೆ ಅತ್ಯಂತ ಪ್ರಮುಖ ಮೂಲ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ವಿಶೇಷವಾಗಿ ಮೈಸ್ (MICE), ಐಷಾರಾಮಿ ಹಾಗೂ ವೈಯಕ್ತಿಕ ಪ್ರವಾಸಗಳಿಗೆ ಭಾರತೀಯರ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಪ್ರವಾಸೋದ್ಯಮ ವಲಯದೊಂದಿಗೆ ದೀರ್ಘಕಾಲೀನ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವುದು ರೋಡ್‌ ಶೋದ ಪ್ರಮುಖ ಉದ್ದೇಶವಾಗಿದೆ.