Monday, March 16, 2026
Monday, March 16, 2026

NHAI: ಏಪ್ರಿಲ್‌ 1ರಿಂದ ಪರಿಷ್ಕೃತ ವಾರ್ಷಿಕ ಫಾಸ್ಟ್‌ಟ್ಯಾಗ್‌ ಶುಲ್ಕ

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾರ್ಷಿಕ ಫಾಸ್ಟ್‌ಟ್ಯಾಗ್‌ ಪರಿಷ್ಕೃತ ಶುಲ್ಕ ಘೋಷಿಸಿದೆ. 2026-27ರ ಹಣಕಾಸು ವರ್ಷದ ಏಪ್ರಿಲ್‌ 1ರಿಂದ ಈ ಪರಿಷ್ಕೃತ ಜಾರಿಗೆ ಬರಲಿದೆ. ಪ್ರಸ್ತುತ ಇರುವ ವಾರ್ಷಿಕ ಪಾಸ್‌ ಶುಲ್ಕ, ಬದಲಾದ ಶುಲ್ಕ ಮತ್ತು ಕಾರಣಗಳೇನು ಎಲ್ಲದಕ್ಕೂ ಉತ್ತರ ಇಲ್ಲಿದೆ.

ಪ್ರಸ್ತುತ ವಾರ್ಷಿಕ ಫಾಸ್‌ಟ್ಯಾಗ್‌ ಶುಲ್ಕವು 3,000 ರುಪಾಯಿ ಆಗಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿರುವ ಪರಿಷ್ಕೃತ ಶುಲ್ಕದಂತೆ ಏಪ್ರಿಲ್‌ 1ರಿಂದ ಈ ಶುಲ್ಕ 3,075 ರುಪಾಯಿಗಳಾಗಲಿದೆ. ಇದರಿಂದ ಒಟ್ಟು 75 ರುಪಾಯಿ ಶುಲ್ಕ ಮೊತ್ತ ಏರಿಕೆಯಾಗಲಿದೆ.

ಪರಿಣಾಮಗಳು ಏನಾಗಬಹುದು

ಹೆಚ್ಚಾಗಿ ಪ್ರಯಾಣಕ್ಕೆ ರಾಷ್ಟ್ರೀಯ ಹೆದ್ದಾರಿಯನ್ನು ಅವಲಂಭಿಸುವ ಪ್ರಯಾಣಿಕರು ವಾರ್ಷಿಕ ಫಾಸ್ಟ್‌ಟ್ಯಾಗ್‌ಗಳನ್ನು ಬಳಸುತ್ತಿದ್ದು, 75 ರುಪಾಯಿ ಹೆಚ್ಚುವರಿ ಶುಲ್ಕ ಪಾವರಿಸಬೇಕಾಗುತ್ತದೆ.

ವಾರ್ಷಿಕ ಪಾಸ್‌ಗೆ 75 ರುಪಾಯಿ ಶುಲ್ಕ ಹೆಚ್ಚಾಗಿರುವುದರಿಂದ ಫಾಸ್ಟ್‌ಟ್ಯಾಗ್‌ ಬಳಸಿ ಸಂಚರಿಸುವವರಿಗೆ ಹೆಚ್ಚೇನೂ ಹೊರಯಾಗದಿರಬಹುದು.

ಬದಲಾವಣೆಗೆ ಕಾರಣ ಏನು?

ಹಣದುಬ್ಬರ, ಮೂಲಸೌಕರ್ಯಗಳ ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಕೇಂದ್ರೀಕರಿಸಿ ಫಾಸ್ಟ್‌ಟ್ಯಾಗ್‌ ಶುಲ್ಕಗಳನ್ನು ನಿಯಮಿತವಾಗಿ ಪರಿಷ್ಕರಣೆ ಮಾಡುವುದು ಅಗತ್ಯವಾಗಿರುತ್ತದೆ.

ಹೆದ್ದಾರಿ ನಿರ್ವಹಣೆ ಮತ್ತು ವಿಸ್ತರಣೆಗೆ ಸಹಕಾರಿಯಾಗುವಂತೆ NHAI ಈ ಪರಿಷ್ಕೃತ ಶುಲ್ಕವನ್ನು ಬಳಸುತ್ತದೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ