ಮಾಲ್ಡೀವ್ಸ್‌ನ ಉತ್ತರ ಅಟೋಲ್ ಪ್ರದೇಶದಲ್ಲಿರುವ ಹನಿಮಾಧೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣಾ ಯೋಜನೆ, ಭಾರತ ಮತ್ತು ಮಾಲ್ಡೀವ್ಸ್ ದೇಶಗಳ ಪ್ರಾದೇಶಿಕ ಸಹಕಾರಕ್ಕೆ ಉತ್ತಮ ನಿದರ್ಶನವಾಗಿದೆ. ಭಾರತದ ನೆರವಿನಿಂದ ನಿರ್ಮಾಣಗೊಂಡ ಈ ನವೀಕರಿಸಿದ ವಿಮಾನ ನಿಲ್ದಾಣವು ಎರಡು ರಾಷ್ಟ್ರಗಳ ನಡುವಿನ ಪ್ರವಾಸೋದ್ಯಮ ಹಾಗೂ ಆರ್ಥಿಕ ಸಂಪರ್ಕವನ್ನು ಮತ್ತಷ್ಟು ಬಲಪಡಿಸಿದೆ.

Hanimadhoo International Airport


ಹೊಸ ಟರ್ಮಿನಲ್‌ ನಿರ್ಮಾಣ ಮತ್ತು ರನ್‌ವೇ ವಿಸ್ತರಣೆ ಸೇರಿದಂತೆ ಹಲವು ಮೂಲಸೌಕರ್ಯ ಸುಧಾರಣೆಗಳೊಂದಿಗೆ ಹನಿಮಾಧೂ ವಿಮಾನ ನಿಲ್ದಾಣವು ಈಗ ವರ್ಷಕ್ಕೆ ಸುಮಾರು 13 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಪಡೆದಿದೆ. ಈ ನವೀಕರಣದಿಂದಾಗಿ ಪ್ರಮುಖ ಅಂತಾರಾಷ್ಟ್ರೀಯ ವಿಮಾನಗಳು ನೇರವಾಗಿ ಹನಿಮಾಧೂ ವಿಮಾನ ನಿಲ್ದಾಣದಲ್ಲಿ ಇಳಿಯಬಹುದು.

ಈ ಯೋಜನೆಗೆ ಭಾರತದಿಂದ ಆರ್ಥಿಕ ಮತ್ತು ತಾಂತ್ರಿಕ ಸಹಾಯ ದೊರೆತಿದ್ದು, ಇದು ಎರಡೂ ದೇಶಗಳ ನಡುವಿನ ಉತ್ತಮ ಬಾಂಧವ್ಯದ ಸಾಕ್ಷಿಯಾಗಿದೆ. ಭಾರತದ ಸಹಕಾರದೊಂದಿಗೆ ನಿರ್ಮಾಣವಾದ ಈ ವಿಮಾನ ನಿಲ್ದಾಣವು ಭಾರತ–ಮಾಲ್ಡೀವ್ಸ್ ನಡುವಿನ ವಾಣಿಜ್ಯ, ಶಿಕ್ಷಣ ಮತ್ತು ಮೆಡಿಕಲ್‌ ಟೂರಿಸಂ ವಲಯಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ.