Saturday, July 26, 2025
Saturday, July 26, 2025

ಕೇವಲ ಐದು ಗಂಟೆಗಳ ಪ್ರಯಾಣ...11 ರು. ಇದ್ದರೆ ವಿಯೆಟ್ನಾಂಗೆ ಹಾರಬಹುದು!

ಹೊ ಚಿ ಮಿನ್ಸ್ ಸಿಟಿಯಿಂದ, ವುಂಗ್ ಟಾವ್, ಕು ಚಿ ಟನಲ್, ಮೆಕಾಂಗ್ ಡೆಲ್ವಾ, ವಾರ್ ಮ್ಯೂಸಿಯಂ, ಸೈಗಾನ್ ನದಿ, ಬೆನ್ ಥಾನ್ ಮಾರ್ಕೆಟ್, ಮುಂತಾದ ಐತಿಹಾಸಿಕ ಪ್ರಸಿದ್ದಿಯ ಹಾಗೂ ಪ್ರಾಕೃತಿಕ ಅಚ್ಚರಿಯ ತಾಣಗಳನ್ನು ನೋಡಿ ಬರಲು ವಿಯೆಟ್ ಜೆಟ್ ನ ರೌಂಡ್ ಟ್ರಿಪ್ ಹೇಳಿ ಮಾಡಿಸಿದಂತಿದೆ. ಬೇಕೆನಿಸಿದಲ್ಲಿ ನಾ ಟ್ರಾಂಗ್, ಡಾನಾಂಗ್, ಹಾನಾಯ್, ಪು ಕೊಕ್ ದ್ವೀಪಗಳ ಕಡೆಗೂ ಒಮ್ಮೆ ಹೋಗಿ ಬರಬಹುದು. ಬಹಳ ಕಡಿಮೆ ಖರ್ಚಿನಲ್ಲಿ ವಿಯೆಟ್ನಾಂ ಸಮುದ್ರದ ಬೀಚ್, ವಿಯೆಟ್ನಾಂ ನೈಟ್ ಲೈಫ್, ಆಹಾರ ಪದ್ಧತಿ, ವೈವಿಧ್ಯಮಯ ಸಂಸ್ಕೃತಿ ಸವಿದು ಬರಲು ಇದು ಸಕಾಲ.

- ನವೀನ್ ಸಾಗರ್, ಹೊ ಚಿ ಮಿನ್ಸ್ ಸಿಟಿ ವಿಯೆಟ್ನಾಂ

ಕರ್ನಾಟಕದ ಪ್ರವಾಸಿಪ್ರಿಯರಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ. ಕೇವಲ ಇಪ್ಪತ್ತು ಸಾವಿರ ರುಪಾಯಿ ಇದ್ದರೆ ನೀವು ವಿಯೆಟ್ನಾಂ ದೇಶಕ್ಕೆ ಹೋಗಿ ವಾಪಸ್ ಬರಬಹುದು. ಹೌದು, ಇದನ್ನು ಸಾಧ್ಯವಾಗಿಸುತ್ತಿರುವುದು ವಿಯೆಟ್ ಜೆಟ್ ಏರ್‌ಲೈನ್ಸ್.

ದಕ್ಷಿಣ ವಿಯೆಟ್ನಾಂನ ಪ್ರಮುಖ ನಗರವಾಗಿರುವ ಸೈಗಾನ್ ಅಲಿಯಾಸ್ ಹೊ ಚಿ ಮಿನ್ಸ್ ಸಿಟಿಗೆ ಇದೀಗ ಬೆಂಗಳೂರಿನಿಂದ ವಿಯೆಟ್ ಜೆಟ್ ನೇರ ವಿಮಾನ ಸಂಪರ್ಕ ಲಭ್ಯವಾಗಿಸಿದೆ. ವಾರದಲ್ಲಿ ನಾಲ್ಕು ಬಾರಿ ವಿಯೆಟ್ ಜೆಟ್ ವಿಮಾನಗಳು ಬೆಂಗಳೂರು ಮತ್ತು ಹೊ ಚಿ ಮಿನ್ಸ್ ಸಿಟಿ ನಡುವೆ ಹಾರಾಡಲಿವೆ. ಬೆಂಗಳೂರಿನಿಂದ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಟೂ ಮೂಲಕ ಹೊ ಚಿ ಮಿನ್ಸ್ ತಲುಪುವ ವಿಯೆಟ್ ಜೆಟ್ ಅಲ್ಲಿಂದ ವಾರಕ್ಕೆ ಮೂರು ಬಾರಿ ಬೆಂಗಳೂರಿಗೆ ಪಯಣಿಸಲಿದೆ.

vietnam vietjetairlines

ವೀಸಾ ಆನ್ ಅರೈವಲ್ ಸೌಲಭ್ಯ ಕೂಡ ಹೊಂದಿರುವ ವಿಯೆಟ್ನಾಂಗೆ ವಲಸೆ ಪ್ರಕ್ರಿಯೆ ಮತ್ತು ವೀಸಾ ಪ್ರಕ್ರಿಯೆಗಳು ಬಹಳ ಸರಳವಿದ್ದು, ಮಧ್ಯಮವರ್ಗದವರೂ ವಿಯೆಟ್ ಜೆಟ್ ಮೂಲಕ ವಿಯೆಟ್ನಾಂ ಹೋಗಿ ಬರುವ ಕನಸನ್ನು ನನಸಾಗಿಸಿಕೊಳ್ಳಬಹುದು. ಫ್ರೆಂಚರ, ಚೀನಾದ ಮತ್ತು ಅಮೆರಿಕನ್ನರ ದಾಳಿಗಳಿಗೆ ತುತ್ತಾಗಿ ಯುದ್ಧ ನಡೆಸಿ ಸ್ವಾತಂತ್ರ್ಯ ಪಡೆದಿರುವ ನಾಡು ವಿಯೆಟ್ನಾಂ, 1975ರಲ್ಲಿ ಸ್ವತಂತ್ರವಾದ ನಂತರದಲ್ಲಿ ಅಭಿವೃದ್ಧಿಗೊಂಡ ರೀತಿಯೇ ಅದ್ಭುತ. ಅತ್ಯುತ್ತಮ ಪ್ರವಾಸೋದ್ಯಮ ಯೋಜನೆಗಳ ಮೂಲಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ವಿಯೆಟ್ನಾಂ, ವಾಣಿಜ್ಯನಗರಿ ಹೊ ಚಿ ಮಿನ್ಸ್ ಮೂಲಕ ಪ್ರವಾಸಿ ತಾಣಗಳಿಗೆ ಪ್ರವೇಶ ಒದಗಿಸುತ್ತಿದೆ.

vietnam 1 vietjetairlines

ಈ ಕಾರುಬಾರಿಗೆ ವಿಯೆಟ್ ಜೆಟ್ ಕೈಜೋಡಿಸಿದ್ದು, ಹಲವು ಆಫರ್‌ಗಳ ಮೂಲಕ ವಿಯೆಟ್‌ಜೆಟ್ ಭಾರತದ ಪ್ರತಿ ಪ್ರಮುಖ ನಗರಗಳಿಂದ ನೇರ ವಿಮಾನ ಸೇವೆ ನೀಡುತ್ತಿದೆ. ಬರುವ ಸೆಪ್ಟೆಂಬರ್‌ನಿಂದ ಮುಂದಿನ ಮೇ ಅವಧಿಯಲ್ಲಿ ವಿಯೆಟ್ನಾಂ ಹೋಗುವವರಿಗೆ ಒಂದು ಅಚ್ಚರಿಯ ಆಫರ್ ಕೊಡ ನೀಡಿದ್ದು, ಇಂದೇ ಬುಕ್ ಮಾಡಿ ದರೆ ಕೇವಲ 11 ರುಪಾಯಿಯಲ್ಲಿ ವಿಯೆಟ್ನಾಂ ತಲುಪಬಹುದು.

ಆಫರ್‌ ಗಾಗಿ www.vietjetair.com ಭೇಟಿ ಕೊಡಿ

ಹೌದು, ಕೇವಲ 11 ರು.ಗೆ ವಿಯೆಟ್ನಾಂ ತಲುಪಿಸುವ ವಿಶೇಷ ಆಫರ್ ಕೂಡ ವಿಯೆಟ್ ಜೆಟ್ ನೀಡಿದ್ದು, ಇದರ ಬಗ್ಗೆ ತಿಳಿಯಲು www.vietjetair.com ಸಂಪರ್ಕಿಸಬೇಕಾಗುತ್ತದೆ. ಇದರ ಹೊರತಾಗಿಯೂ ಮಿಕ್ಕೆಲ್ಲಾ ವಿಮಾನಗಳಿಗಿಂತ ವಿಯೆಟ್ ಜೆಟ್ ದರ ಗಣನೀಯವಾಗಿ ಕಡಿಮೆ ಇದೆ. ವಿಯೆಟ್ ಜೆಟ್‌ನಲ್ಲಿ ಆತಿಥ್ಯ ಉಪಚಾರದ ಜತೆ ಸೌಲಭ್ಯಗಳೂ ಹಿತಕರವಾಗಿವೆ. ಸೈಬಾಸ್ ಎಂಬ ಸ್ಪೆಷಲ್ ದರ್ಜೆ ಸೇವೆಯೂ ಇದರಲ್ಲಿದ್ದು, ಲಾಂಜ್, ಆಹಾರ ವ್ಯವಸ್ಥೆ, ಸುಲಭ ಇಮ್ಮಿಗ್ರೇಷನ್ ಸೌಕರ್ಯ ಸಿಗುತ್ತವೆ.

vietnam 1

ವಿಯೆಟ್ನಾಂ ಮತ್ತು ಭಾರತದ ಎಲ್ಲ ಪ್ರಮುಖ ನಗರಗಳ ಮಧ್ಯೆ ನೇರ ವಿಮಾನ ಸಂಪರ್ಕ ಕಲ್ಪಿಸುವುದು ವಿಯೆಟ್ ಜೆಟ್‌ನ ಗುರಿ. ಅದರ ಜತೆಯಲ್ಲಿ ವಿಯೆಟ್ನಾಂ ಪ್ರವಾಸವು ಮಧ್ಯಮ ವರ್ಗದ ಜನರಿಗೂ ಕೈಗೆಟುಕುವಂತೆ ಮಾಡುವುದು ನಮ್ಮ ಆದ್ಯತೆ. ಪ್ರವಾಸಿಗರಿಗೂ ಉದ್ಯಮಿಗಳಿಗೂ ಅನುಕೂಲವಾಗುವಂಥ ವೇಳಾಪಟ್ಟಿಯೊಂದಿಗೆ ಅತ್ಯುತ್ತಮ ವೈಮಾನಿಕ ಅನುಭವ ನೀಡುವುದು ನಮ್ಮ ಆಶಯ.
-ಕೀವ್‌ ಡಿಯಿಂಗ್‌ ಎಮಿ ,ಅಂತಾರಾಷ್ಟ್ರೀಯ ಸಂಪರ್ಕಾಧಿಕಾರಿ, ವಿಯೆಟ್ ಜೆಟ್ ಏರ್ ಲೈನ್ಸ್
Naveen Sagar

Naveen Sagar

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!