Tuesday, July 28, 2026
Tuesday, July 28, 2026

ಭಾರತದ ಗಡಿ ಪ್ರವಾಸ ಕೈಗೊಳ್ಳಲು ಪಿಎಂ ಮೋದಿ ಕರೆ

ಗಡಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ, ಪ್ರವಾಸಿಗರು ಭೇಟಿ ನೀಡಲೇಬೇಕಾದ ಭಾರತದ ಅತ್ಯಂತ ಸುಂದರ ಪ್ರಮುಖ ಗಡಿ ಗ್ರಾಮಗಳ ವಿವರಗಳು ಇಲ್ಲಿವೆ:

ದೇಶದ ಯುವಜನತೆ ಭಾರತದ ಗಡಿ ಭಾಗದ ಗ್ರಾಮಗಳಿಗೆ ಭೇಟಿ ನೀಡಬೇಕು ಮತ್ತು ಅಲ್ಲಿನ ವೈವಿಧ್ಯಮಯ ಸಂಸ್ಕೃತಿ ಹಾಗೂ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಹಿಂದೆ ʼಭಾರತದ ಕೊನೆಯ ಹಳ್ಳಿಗಳುʼ ಎಂದು ಕರೆಯಲ್ಪಡುತ್ತಿದ್ದ ಗಡಿ ಪ್ರದೇಶದ ಗ್ರಾಮಗಳನ್ನು ಈಗ ʼಭಾರತದ ಮೊದಲ ಗ್ರಾಮಗಳುʼ ಎಂದು ಪುನರ್ ನಾಮಕರಣ ಮಾಡಲಾಗಿದ್ದು, ಕೇಂದ್ರ ಸರಕಾರದ 'ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ' ಅಡಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ.

ಇದನ್ನೂ ಓದಿ: ಮೋದಿ ಭೇಟಿ ಬಳಿಕ ಜಾಗತಿಕ ಗಮನ ಸೆಳೆದ ಪ್ರಾಂಬನನ್ ದೇವಾಲಯ

ಭೇಟಿ ನೀಡಲೇಬೇಕಾದ ಭಾರತದ ಪ್ರಮುಖ 5 ಗಡಿ ಗ್ರಾಮಗಳು:

  1. ಮಾಣಾ ಗ್ರಾಮ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಮಾಣಾ ಗ್ರಾಮವನ್ನು ಅಧಿಕೃತವಾಗಿ ʼಭಾರತದ ಮೊದಲ ಗ್ರಾಮʼ ಎಂದು ಘೋಷಿಸಲಾಗಿದೆ. ಸಮುದ್ರ ಮಟ್ಟದಿಂದ ಸುಮಾರು 3,200 ಮೀಟರ್ ಎತ್ತರದಲ್ಲಿದ್ದು, ಬದರೀನಾಥ ಧಾಮದ ಹತ್ತಿರದಲ್ಲಿದೆ. ವ್ಯಾಸ ಗುಹೆ, ಗಣೇಶ ಗುಹೆ ಮತ್ತು ಸ್ವರ್ಗಾರೋಹಿಣಿಗೆ ಸಂಪರ್ಕ ಕಲ್ಪಿಸುವ ಪೌರಾಣಿಕ ಭೀಮ ಸೇತುವೆ ಇಲ್ಲಿನ ಪ್ರಮುಖ ಆಕರ್ಷಣೆಗಳು.
  2. ಚುಶುಲ್ ಮತ್ತು ಟುರ್ಟುಕ್: ಭಾರತ ಮತ್ತು ಚೀನಾ ಗಡಿಯಲ್ಲಿರುವ ಚುಶುಲ್ ಹಾಗೂ ಭಾರತ-ಪಾಕಿಸ್ತಾನ ಗಡಿಯ ಹತ್ತಿರವಿರುವ ಟುರ್ಟುಕ್ ಗ್ರಾಮಗಳು ಲಡಾಖ್‌ನ ವಿಸ್ಮಯ ತಾಣಗಳಾಗಿವೆ. ಇಲ್ಲಿ ಬಲ್ತಿ ಸಂಸ್ಕೃತಿಯ ವಿಶಿಷ್ಟ ಶೈಲಿಯ ಜೀವನಶೈಲಿ, ಏಪ್ರಿಕಾಟ್ ತೋಟಗಳು ಮತ್ತು ರಮಣೀಯ ಹಿಮಚ್ಛಾದಿತ ಪರ್ವತ ಶ್ರೇಣಿಗಳನ್ನು ನೋಡಬಹುದು.
  3. ಕಿಬಿತ (ಅರುಣಾಚಲ ಪ್ರದೇಶ: ದೇಶದಲ್ಲೇ ಅತ್ಯಂತ ಮೊದಲು ಸೂರ್ಯೋದಯವಾಗುವ ಅರುಣಾಚಲ ಪ್ರದೇಶದ ಕಿಬಿತು ಗ್ರಾಮವು ಭಾರತದ ಪೂರ್ವ ಗಡಿಯಲ್ಲಿದೆ. ದಟ್ಟವಾದ ಕಾಡುಗಳು, ಸುಂದರವಾದ ಲೋಹಿತ್ ನದಿ ಹಾಗೂ ನಿಸರ್ಗದ ಮಡಿಲಲ್ಲಿರುವ ಚಾರಣ ಮಾರ್ಗಗಳು ಇಲ್ಲಿವೆ.
  4. ಚಿತ್ಕುಲ್ (ಹಿಮಾಚಲ್‌ ಪ್ರದೇಶ): ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿರುವ ಚಿತ್ಕುಲ್ ಭಾರತ-ಟಿಬೆಟ್ ಗಡಿಯಲ್ಲಿರುವ ಅತ್ಯಂತ ಸುಂದರವಾದ ಕೊನೆಯ ನಿವಾಸಿತ ಗ್ರಾಮವಾಗಿದೆ. ಐತಿಹಾಸಿಕ ಮರದ ದೇವಾಲಯಗಳು, ಆಪಲ್ ತೋಟಗಳು ಮತ್ತು ಬಸ್ಪಾ ನದಿಯ ಸ್ಫಟಿಕದಂಥ ಸ್ವಚ್ಛ ನೀರು ಇಲ್ಲಿ ಕಾಣಸಿಗುತ್ತದೆ.
  5. ಧೋರ್ಡೊ (ಗುಜರಾತ್‌): ಕಚ್‌ನ ರನ್ ಆಫ್ ಕಚ್ ಮರುಭೂಮಿಯ ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ಧೋರ್ಡೊ ಗ್ರಾಮವು ಯುಎನ್‌ಡಬ್ಲ್ಯೂಟಿಒದಿಂದ ʼಅತ್ಯುತ್ತಮ ಪ್ರವಾಸಿ ಗ್ರಾಮʼ ಪ್ರಶಸ್ತಿ ಪಡೆದಿದೆ. ಬಿಳಿ ಮರುಭೂಮಿ ಮತ್ತು ವಿಶ್ವಪ್ರಸಿದ್ಧ 'ರನ್ ಉತ್ಸವ' ನೋಡಲು ಇಲ್ಲಿಗೆ ಭೇಟಿ ನೀಡಬಹುದು.
Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ