Tuesday, July 7, 2026
Tuesday, July 7, 2026

ಪುರಿ, ಬಾಲೇಶ್ವರ ಹೂಡಿಕೆದಾರರ ಮೊದಲ ಆಯ್ಕೆ

ಭೂ ಆಧಾರಿತ, ಜಲ ಆಧಾರಿತ ಸಾಹಸ ಚಟುವಟಿಕೆಗಳ ಅಭಿವೃದ್ಧಿಗಾಗಿ ಒಟ್ಟು 27 ಪ್ರಸ್ತಾವನೆಗಳು ಸರಕಾರಕ್ಕೆ ಸಲ್ಲಿಕೆಯಾಗಿವೆ. ಈ ಯೋಜನೆಗಳು ಬಾಲೇಶ್ವರ, ಜಗತ್ಸಿಂಗ್‌ಪುರ್, ಪುರಿ, ಸುಂದರ್‌ಗಢ, ಕೋರಾಪುಟ್, ಮಯೂರ್ಭಂಜ್ ಹಾಗೂ ಸಂಬಲ್ಪುರ ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿವೆ.

ಒಡಿಶಾ ರಾಜ್ಯವು ಸಾಹಸ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸುವತ್ತ ದಾಪುಗಾಲಿಟ್ಟಿದೆ. ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ‘ಗೋ ಅಡ್ವೆಂಚರ್’ (Go Adventure) ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದ್ದು, ಪುರಿ ಹಾಗೂ ಬಾಲೇಶ್ವರ ಜಿಲ್ಲೆಗಳು ಹೂಡಿಕೆದಾರರ ಅತ್ಯಂತ ಮೆಚ್ಚಿನ ತಾಣಗಳಾಗಿ ಹೊರಹೊಮ್ಮಿವೆ. ರಾಜ್ಯವನ್ನು 2029ರೊಳಗೆ ಭಾರತದ ಪ್ರಮುಖ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಭೂ ಆಧಾರಿತ, ಜಲ ಆಧಾರಿತ ಸಾಹಸ ಚಟುವಟಿಕೆಗಳ ಅಭಿವೃದ್ಧಿಗಾಗಿ ಒಟ್ಟು 27 ಪ್ರಸ್ತಾವನೆಗಳು ಸರಕಾರಕ್ಕೆ ಸಲ್ಲಿಕೆಯಾಗಿವೆ. ಈ ಯೋಜನೆಗಳು ಬಾಲೇಶ್ವರ, ಜಗತ್ಸಿಂಗ್‌ಪುರ್, ಪುರಿ, ಸುಂದರ್‌ಗಢ, ಕೋರಾಪುಟ್, ಮಯೂರ್ಭಂಜ್ ಹಾಗೂ ಸಂಬಲ್ಪುರ ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿವೆ.

Untitled design (6)

ಅತ್ಯಧಿಕವಾಗಿ ಪುರಿ ಜಿಲ್ಲೆಗೆ 12 ಪ್ರಸ್ತಾವನೆಗಳು ಬಂದಿದ್ದು, ನಂತರ ಬಾಲೇಶ್ವರಕ್ಕೆ 6 ಹಾಗೂ ಕೋರಾಪುಟ್‌ಗೆ 4 ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ಉಳಿದ ಜಿಲ್ಲೆಗಳಿಗೂ ವಿವಿಧ ಸಾಹಸ ಚಟುವಟಿಕೆಗಳಿಗೆ ಸಂಬಂಧಿಸಿದ ಯೋಜನೆಗಳು ಲಭಿಸಿವೆ. ಇದರಿಂದ ಈ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ವಿಸ್ತರಣೆ, ಖಾಸಗಿ ಹೂಡಿಕೆ ಹೆಚ್ಚಳ ಮತ್ತು ಸ್ಥಳೀಯ ಉದ್ಯೋಗಾವಕಾಶಗಳ ಸೃಷ್ಟಿಗೆ ಉತ್ತೇಜನ ದೊರೆಯಲಿದೆ.

ಒಟ್ಟು ಸಲ್ಲಿಕೆಯಾಗಿರುವ ಪ್ರಸ್ತಾವನೆಗಳಲ್ಲಿ 16 ವೈಮಾನಿಕ ಸಾಹಸ ಚಟುವಟಿಕೆಗಳಿಗೆ, 10 ಜಲಕ್ರೀಡೆಗಳಿಗೆ ಸಂಬಂಧಿಸಿದ್ದು, ರಾಜ್ಯದಲ್ಲಿ ವಿಭಿನ್ನ ರೀತಿಯ ಸಾಹಸ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬೇಡಿಕೆ ಇರುವುದನ್ನು ಇದು ಸೂಚಿಸುತ್ತದೆ.

ಇದನ್ನೂ ಓದಿ: ಒಡಿಶಾ ಪ್ರವಾಸಿಗರ ಸಂಖ್ಯೆ ಏರಿಕೆ, ಆದಾಯದಲ್ಲಿ ಕುಸಿತ

ಈ ಬೆಳವಣಿಗೆಗೆ ಭದ್ರ ಅಡಿಪಾಯವಾಗಿ, ರಾಜ್ಯ ಸರಕಾರವು 2026ರ ಫೆಬ್ರವರಿ 24ರಂದು ‘ಗೋ ಅಡ್ವೆಂಚರ್’ ಪೋರ್ಟಲ್ ಅನ್ನು ಆರಂಭಿಸಿತ್ತು. ಸಾಹಸ ಪ್ರವಾಸೋದ್ಯಮ ಯೋಜನೆಗಳ ನೋಂದಣಿ, ಪರಿಶೀಲನೆ ಮತ್ತು ಪರವಾನಗಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲ್‌ಗೊಳಿಸುವ ಉದ್ದೇಶದಿಂದ ಈ ಪೋರ್ಟಲ್ ರೂಪಿಸಲಾಗಿದೆ. ಇದರ ಮೂಲಕ ಹೂಡಿಕೆದಾರರಿಗೆ ಪಾರದರ್ಶಕ ಮತ್ತು ವೇಗವಾದ ಸೇವೆ ಒದಗಿಸಲಾಗುತ್ತಿದೆ.

Untitled design (7)

ಒಡಿಶಾ ಪ್ರವಾಸೋದ್ಯಮ ನೀತಿ–2026 ಅಡಿಯಲ್ಲಿ ಸಾಹಸ ಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಪೂರ್ವ ಭಾರತದ ಪ್ರಮುಖ ಸಾಹಸ ಪ್ರವಾಸೋದ್ಯಮ ಕೇಂದ್ರವಾಗಿ ಒಡಿಶಾವನ್ನು ಬೆಳೆಸುವುದು ಸರಕಾರದ ಉದ್ದೇಶವಾಗಿದೆ.

ಜಲಾಧಾರಿತ ಸಾಹಸ ಚಟುವಟಿಕೆಗಳ ಸುರಕ್ಷತೆ ಮತ್ತು ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ, ರಾಜ್ಯ ಪ್ರವಾಸೋದ್ಯಮ ಇಲಾಖೆ ಗೋವಾದ ರಾಷ್ಟ್ರೀಯ ಜಲಕ್ರೀಡಾ ಸಂಸ್ಥೆ (National Institute of Water Sports) ಹಾಗೂ ಒಡಿಶಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಜತೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಇದರ ಮೂಲಕ ಸಿಬ್ಬಂದಿಗೆ ತರಬೇತಿ, ಸುರಕ್ಷತಾ ಮಾನದಂಡಗಳ ಅನುಷ್ಠಾನ ಹಾಗೂ ಅತ್ಯಾಧುನಿಕ ತಾಂತ್ರಿಕ ಪರಿಣತಿಯನ್ನು ರಾಜ್ಯದ ಜಲಕ್ರೀಡೆ ಕ್ಷೇತ್ರಕ್ಕೆ ಪರಿಚಯಿಸಲಾಗುತ್ತಿದೆ.

ಸಮುದ್ರತೀರಗಳು, ನದಿಗಳು, ಅರಣ್ಯ ಪ್ರದೇಶಗಳು ಹಾಗೂ ಗುಡ್ಡಗಾಡುಗಳನ್ನು ಹೊಂದಿರುವ ಒಡಿಶಾ, ಸಾಹಸ ಪ್ರವಾಸೋದ್ಯಮಕ್ಕೆ ಸೂಕ್ತವಾದ ನೈಸರ್ಗಿಕ ಸಂಪತ್ತನ್ನು ಹೊಂದಿದೆ. ಸರಕಾರದ ಈ ಹೊಸ ಪ್ರಯತ್ನಗಳು ಯಶಸ್ವಿಯಾದರೆ, ಪುರಿ ಮತ್ತು ಬಾಲೇಶ್ವರ ಮಾತ್ರವಲ್ಲದೆ ರಾಜ್ಯದ ಇತರೆ ಜಿಲ್ಲೆಗಳೂ ದೇಶ-ವಿದೇಶದ ಪ್ರವಾಸಿಗರನ್ನು ಸೆಳೆಯುವ ಸಾಹಸ ತಾಣಗಳಾಗಿ ಬೆಳೆಯುವ ಸಾಧ್ಯತೆ ಇದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..