Wednesday, August 12, 2026
Wednesday, August 12, 2026

ಭಾರತೀಯರಿಗೆ ಹೆಚ್ಚುತ್ತಿರುವ ಶೆಂಗನ್ ವೀಸಾ ತಿರಸ್ಕಾರ

ಕೇವಲ ವೀಸಾ ಉದ್ದೇಶಕ್ಕಾಗಿ ಕಾಯ್ದಿರಿಸಿ, ನಂತರ ರದ್ದುಗೊಳಿಸುವ ತಾತ್ಕಾಲಿಕ ಹೊಟೇಲ್ ಹಾಗೂ ವಿಮಾನ ಟಿಕೆಟ್ ಬುಕಿಂಗ್‌ಗಳನ್ನು ಶೆಂಗನ್ ಎಂಬಸಿಗಳು ತಕ್ಷಣವೇ ಗುರುತಿಸಿ ತಿರಸ್ಕರಿಸುತ್ತಿವೆ.

ವಿಶ್ವದಲ್ಲೇ ಅತಿ ಹೆಚ್ಚು ಶೆಂಗನ್ ವೀಸಾ ಅರ್ಜಿಸಲ್ಲಿಸುವ ದೇಶಗಳ ಪಟ್ಟಿಯಲ್ಲಿ ಭಾರತವು ಮೂರನೆಯ ಸ್ಥಾನದಲ್ಲಿದ್ದರೂ, ಭಾರತೀಯ ಪ್ರಯಾಣಿಕರ ವೀಸಾ ತಿರಸ್ಕಾರದ ದರ ಮಾತ್ರ ಗಣನೀಯವಾಗಿ ಹೆಚ್ಚಾಗುತ್ತಿದೆ. ಐರೋಪ್ಯ ಒಕ್ಕೂಟದ ನೂತನ ಪ್ರವಾಸೋದ್ಯಮ ದತ್ತಾಂಶಗಳ ಪ್ರಕಾರ, ಪ್ರತಿವರ್ಷ ಲಕ್ಷಾಂತರ ಭಾರತೀಯರು ವೀಸಾ ಪ್ರಕ್ರಿಯೆಗಾಗಿ ಕೋಟಿಗಟ್ಟಲೆ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ.

ವೀಸಾ ತಿರಸ್ಕಾರಕ್ಕೆ ಮುಖ್ಯ ಕಾರಣಗಳು:

  • ಆಹ್ವಾನ ಪತ್ರಗಳು, ಪ್ರಯಾಣದ ವಿವರವಾದ ವೇಳಾಪಟ್ಟಿ ಅಥವಾ ಪ್ರವಾಸಿ ಯೋಜನೆಯಲ್ಲಿ ನಿಖರತೆ ಇಲ್ಲದಿರುವುದು.
  • ಯುರೋಪ್ ಪ್ರವಾಸದ ಸಂಪೂರ್ಣ ವೆಚ್ಚವನ್ನು ಭರಿಸಲು ಅಗತ್ಯವಿರುವಷ್ಟು ಹಣ ಖಾತೆಯಲ್ಲಿದೆ ಎಂಬುದನ್ನು ಸಾಬೀತುಪಡಿಸುವ ಬ್ಯಾಂಕ್ ಸ್ಟೇಟ್‌ಮೆಂಟ್ ಹಾಗೂ ಆದಾಯ ತೆರಿಗೆ ರಿಟರ್ನ್ಸ್ ದಾಖಲೆಗಳಲ್ಲಿ ಸ್ಪಷ್ಟತೆ ಇಲ್ಲದಿರುವುದು.
  • ಕೇವಲ ವೀಸಾ ಉದ್ದೇಶಕ್ಕಾಗಿ ಕಾಯ್ದಿರಿಸಿ, ನಂತರ ರದ್ದುಗೊಳಿಸುವ ತಾತ್ಕಾಲಿಕ ಹೊಟೇಲ್ ಹಾಗೂ ವಿಮಾನ ಟಿಕೆಟ್ ಬುಕಿಂಗ್‌ಗಳನ್ನು ಶೆಂಗನ್ ಎಂಬಸಿಗಳು ತಕ್ಷಣವೇ ಗುರುತಿಸಿ ತಿರಸ್ಕರಿಸುತ್ತಿವೆ.
  • ಪ್ರವಾಸ ಮುಗಿದ ನಂತರ ಅರ್ಜಿದಾರರು ಕಡ್ಡಾಯವಾಗಿ ಭಾರತಕ್ಕೆ ಹಿಂತಿರುಗುತ್ತಾರೆ ಎಂಬುದನ್ನು ಸಾಬೀತುಪಡಿಸುವ ಸೂಕ್ತ ಉದ್ಯೋಗ ಪತ್ರ, ಆಸ್ತಿ ದಾಖಲೆ ಅಥವಾ ಕೌಟುಂಬಿಕ ಬದ್ಧತೆಗಳ ಸಾಕ್ಷಿ ಕೊರತೆ.

ಹಲವು ಅರ್ಜಿದಾರರು ಸುಲಭವಾಗಿ ವೀಸಾ ನೀಡುವ ಸಣ್ಣ ಯುರೋಪಿಯನ್ ದೇಶಗಳ (ಉದಾಹರಣೆಗೆ ಹಂಗೇರಿ, ಸ್ಲೋವೇನಿಯಾ) ಮೂಲಕ ವೀಸಾ ಪಡೆದು, ನಂತರ ಪ್ರಮುಖ ದೇಶಗಳಿಗೆ (ಫ್ರಾನ್ಸ್, ಜರ್ಮನಿ, ಇಟಲಿ) ಪ್ರಯಾಣಿಸುವ 'ವೀಸಾ ಶಾಪಿಂಗ್' ತಂತ್ರವನ್ನು ಬಳಸುತ್ತಿದ್ದಾರೆ. ಇದನ್ನು ಶೆಂಗನ್ ಎಂಬಸಿಗಳು ಗಂಭೀರವಾಗಿ ಪರಿಗಣಿಸಿದ್ದು, ಇಂಥ ಅರ್ಜಿಗಳನ್ನು ಕಟ್ಟುನಿಟ್ಟಾಗಿ ನಿರಾಕರಿಸುತ್ತಿವೆ.

ಹೆಚ್ಚುತ್ತಿರುವ ತಿರಸ್ಕಾರ ದರದ ನಡುವೆಯೂ, ನಿಯಮಿತವಾಗಿ ಪ್ರಯಾಣಿಸುವ ಹಾಗೂ ಉತ್ತಮ ವೀಸಾ ದಾಖಲೆ ಹೊಂದಿರುವ ಭಾರತೀಯ ಪ್ರಯಾಣಿಕರಿಗಾಗಿ ಯುರೋಪಿಯನ್ ಯೂನಿಯನ್ 'ಕ್ಯಾಸ್ಕೇಡ್ ವೀಸಾ ನಿಯಮ' ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಮೊದಲ ಬಾರಿಗೆ 2 ವರ್ಷಗಳ ಮಲ್ಟಿಪಲ್ ಎಂಟ್ರಿ ವೀಸಾ ಮತ್ತು ನಂತರ 5 ವರ್ಷಗಳ ದೀರ್ಘಾವಧಿ ಶೆಂಗನ್ ವೀಸಾವನ್ನು ಸುಲಭವಾಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ