ಸೌದಿ ಅರೇಬಿಯಾದಿಂದ ನೂತನ ದಂಡ ನೀತಿ ಜಾರಿ
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉತ್ತಮ ವಾತಾವರಣ ನಿರ್ಮಿಸುವುದು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಬಲತೆಯನ್ನು ಒದಗಿಸುವುದು ಹಾಗೂ ಪ್ರವಾಸಿಗರ ಹಕ್ಕುಗಳನ್ನು ಕಾಯುವ ಉದ್ದೇಶದೊಂದಿಗೆ ಸೌದಿ ಅರೇಬಿಯಾ ನೂತನ ದಂಡ ನೀತಿಯನ್ನು ಜಾರಿಗೊಳಿಸಿದೆ.
ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸೌದಿ ಅರೇಬಿಯಾವು ಪ್ರವಾಸೋದ್ಯಮದ ನಿಯಮ ಉಲ್ಲಂಘನೆ ವಿಚಾರವಾಗಿ ನೂತನ ದಂಡ ನೀತಿಯನ್ನು ಜಾರಿಗೊಳಿಸಿದೆ. ಈ ನಿಯಮಾವಳಿಗಳಂತೆ ಸಣ್ಣ ಪ್ರಮಾದಗಳಿಗೆ ಪ್ರಾಥಮಿಕವಾಗಿ ಎಚ್ಚರಿಕೆ ನೀಡಿ, ತಪ್ಪು ತಿದ್ದಿಕೊಳ್ಳುವ ಅವಕಾಶವನ್ನು ನೀಡಲಾಗಿದ್ದು, ಪರವಾನಗಿ ಇಲ್ಲದೆ ಚಟುವಟಿಕೆ ನಡೆಸುವುದು, ಪ್ರವಾಸಿಗರ ಸುರಕ್ಷತೆಯನ್ನು ಅಪಾಯಕ್ಕೆ ಒಡ್ಡುವುದು ಮತ್ತು ನಿಯಂತ್ರಣಾಧಿಕಾರಿಗಳೊಂದಿಗೆ ಸಹಕರಿಸಲು ನಿರಾಕರಿಸುವಂಥ ಕೃತ್ಯಗಳಿಗೆ ಗಂಭೀರ ಶಿಕ್ಷೆಗಳು ವಿಧಿಸಲ್ಪಡಲಿವೆ. ಇವುಗಳಲ್ಲಿ ಪರವಾನಗಿ ರದ್ದುಪಡಿಸುವುದು, ಚಟುವಟಿಕೆಗಳನ್ನು ತಾತ್ಕಾಲಿಕ ಅಥವಾ ಶಾಶ್ವತವಾಗಿ ಸ್ಥಗಿತಗೊಳಿಸುವುದು ಮತ್ತು ಭಾರೀ ಮೊತ್ತದ ದಂಡ ವಿಧಿಸುವ ಕ್ರಮಗಳು ಸೇರಿವೆ.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉತ್ತಮ ವಾತಾವರಣ ನಿರ್ಮಿಸುವುದು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಬಲತೆಯನ್ನು ಒದಗಿಸುವುದು ಹಾಗೂ ಪ್ರವಾಸಿಗರ ಹಕ್ಕುಗಳನ್ನು ಕಾಯುವ ಉದ್ದೇಶದೊಂದಿಗೆ ಸೌದಿ ಅರೇಬಿಯಾ ಈ ನೀತಿ ಜಾರಿಗೊಳಿಸಿದೆ. ಸೌದಿ ಅರೇಬಿಯಾ ಪ್ರವಾಸೋದ್ಯಮ ಸಚಿವಾಲಯದ ಈ ಹೊಸ ನೀತಿಗಳು ದೇಶದ ಪ್ರವಾಸೋದ್ಯಮ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹ, ಸುರಕ್ಷಿತ ಮತ್ತು ಗುಣಮಟ್ಟದ ಅನುಭವ ನೀಡುವಂತೆ ರೂಪಿಸಲು ಸಹಕಾರಿಯಾಗಿವೆ.