ಸುಸ್ಥಿರ ಪ್ರವಾಸೋದ್ಯಮ ವಲಯದಲ್ಲಿ ಶ್ರೀಲಂಕಾಗೆ ಪ್ರಶಸ್ತಿ
ಶ್ರೀಲಂಕಾ, ಇತ್ತೀಚೆಗೆ ನಡೆದ Global Responsible Tourism Awards 2025 ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ. ಪ್ರಕೃತಿ ಮತ್ತು ಪ್ರವಾಸೋದ್ಯಮದ ನಡುವೆ ಸಮತೋಲನ ಕಾಯ್ದುಕೊಳ್ಳುವ ದೃಷ್ಟಿಯಿಂದ ಶ್ರೀಲಂಕಾ ದೇಶದ ಪ್ರವಾಸೋದ್ಯಮ ಇಲಾಖೆ ಹಲವು ನೂತನ ಯೋಜನೆಗಳನ್ನು ಕೈಗೊಂಡಿದೆ ಮತ್ತು ಈ ಯೋಜನೆಗಳು ಇತರ ದೇಶಗಳಿಗೆ ಮಾದರಿಯಾಗಿವೆ.
ಪರಿಸರ ಸಂರಕ್ಷಣೆ, ಸ್ಥಳೀಯ ಸಮುದಾಯಗಳ ಅಭಿವೃದ್ಧಿ ಮತ್ತು ಸುಸ್ಥಿರ ಪ್ರವಾಸೋದ್ಯಮದ ವಲಯದಲ್ಲಿ ಹಲವಾರು ಉತ್ತಮ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಿದ್ದಕ್ಕಾಗಿ ಶ್ರೀಲಂಕಾ, ಇತ್ತೀಚೆಗೆ ನಡೆದ Global Responsible Tourism Awards 2025 ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ.

ಪ್ರಕೃತಿ ಮತ್ತು ಪ್ರವಾಸೋದ್ಯಮದ ನಡುವೆ ಸಮತೋಲನ ಕಾಯ್ದುಕೊಳ್ಳುವ ದೃಷ್ಟಿಯಿಂದ ಶ್ರೀಲಂಕಾ ದೇಶದ ಪ್ರವಾಸೋದ್ಯಮ ಇಲಾಖೆ ಹಲವು ನೂತನ ಯೋಜನೆಗಳನ್ನು ಕೈಗೊಂಡಿದೆ ಮತ್ತು ಈ ಯೋಜನೆಗಳು ಇತರ ದೇಶಗಳಿಗೆ ಮಾದರಿಯಾಗಿವೆ.
Heritance Kandalama ಮತ್ತು Jetwing Vil Uyana ಸೇರಿದಂತೆ ಅನೇಕ ಹೊಟೇಲ್‌ಗಳು ಮತ್ತು ರೆಸಾರ್ಟ್‌ಗಳು ಪರಿಸರ ಸ್ನೇಹಿ ತಂತ್ರಗಳನ್ನು ಅನುಸರಿಸುತ್ತಿವೆ. ಉದಾಹರಣೆಗೆ, ಕಸದ ಮರುಬಳಕೆ, ಪ್ಲಾಸ್ಟಿಕ್ ಬಳಕೆಯ ನಿರ್ಬಂಧ, ಸ್ಥಳೀಯ ಉತ್ಪನ್ನಗಳ ಪ್ರೋತ್ಸಾಹ ಮತ್ತು ಜೈವ ವೈವಿಧ್ಯ ಸಂರಕ್ಷಣೆ ಮುಂತಾದ ಕ್ರಮಗಳು ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ದಿಕ್ಸೂಚಿಗಳಾಗಿವೆ.