ಗಂಗಾನದಿಯ ತಟದಲ್ಲಿ ಹೊಸ ವಸತಿಧಾಮ
ಉತ್ತರಾಖಂಡದ ಪ್ರಮುಖ ಪ್ರವಾಸಿ ತಾಣವಾದ ಋಷಿಕೇಶದ ಶಿವಪುರಿಯಲ್ಲಿ ಸಮಿಟ್ ಹೋಟೆಲ್ಸ್ ಆ್ಯಂಡ್ ರೆಸಾರ್ಟ್ಸ್ ಸಂಸ್ಥೆಯು 'ಸಮಿಟ್ ಗಂಗಾಸ್ ಗೇಟ್‌ವೇ' (Summit Ganges Gateway) ಎಂಬ ನೂತನ ಹೊಟೇಲ್ ಆರಂಭಿಸಿದೆ.
ಉತ್ತರಾಖಂಡದ ಪ್ರಮುಖ ಪ್ರವಾಸಿ ತಾಣವಾದ ಋಷಿಕೇಶದ ಶಿವಪುರಿಯಲ್ಲಿ ಸಮಿಟ್ ಹೋಟೆಲ್ಸ್ ಆ್ಯಂಡ್ ರೆಸಾರ್ಟ್ಸ್ ಸಂಸ್ಥೆಯು 'ಸಮಿಟ್ ಗಂಗಾಸ್ ಗೇಟ್‌ವೇ' (Summit Ganges Gateway) ಎಂಬ ನೂತನ ಹೊಟೇಲ್ ಆರಂಭಿಸಿದೆ.
ಋಷಿಕೇಶ–ಬದರಿನಾಥ ಹೆದ್ದಾರಿಯ ಸಮೀಪ, ಗಂಗಾನದಿಯ ತಟದಲ್ಲಿರುವ ಈ ಹೋಟೆಲ್‌ನಲ್ಲಿ ಒಟ್ಟು 32 ಕೊಠಡಿಗಳಿವೆ. ಡಿಲಕ್ಸ್, ಸುಪೀರಿಯರ್, ಪ್ರೀಮಿಯಂ, ಬಾಲ್ಕನಿಯುಳ್ಳ ಎಕ್ಸಿಕ್ಯೂಟಿವ್ ಹಾಗೂ ಸೂಟ್ ಸೇರಿದಂತೆ ಐದು ವಿಭಾಗಗಳಲ್ಲಿ ಕೊಠಡಿಗಳನ್ನು ವಿನ್ಯಾಸಗೊಳಿಸಲಾಗಿದೆ.
ಕೆಲವು ಕೊಠಡಿಗಳಿಂದ ಬೆಟ್ಟಗಳ ದೃಶ್ಯವನ್ನು ಆಸ್ವಾದಿಸಬಹುದಾಗಿದ್ದು, ಬಾಲ್ಕನಿಯುಳ್ಳ ಎಕ್ಸಿಕ್ಯೂಟಿವ್ ಕೊಠಡಿಗಳಿಂದ ಗಂಗಾನದಿಯ ಸೊಬಗನ್ನೂ ವೀಕ್ಷಿಸಬಹುದು. ಹೊರಾಂಗಣ ಈಜುಕೊಳ, 40 ಆಸನಗಳ ಬಹುಪಾಕಶೈಲಿಯ ರೆಸ್ಟೋರೆಂಟ್ ಹಾಗೂ ಸುಮಾರು 35 ಜನರು ಭಾಗವಹಿಸಬಹುದಾದ ಔತಣಕೂಟ ಸಭಾಂಗಣ ಇಲ್ಲಿನ ಪ್ರಮುಖ ಸೌಲಭ್ಯಗಳು. ಕೇಂದ್ರ ಋಷಿಕೇಶದಿಂದ ಸುಮಾರು 15 ಕಿಮೀ. ದೂರದಲ್ಲಿರುವ ಈ ಹೊಟೇಲ್ ಧಾರ್ಮಿಕ ಪ್ರವಾಸಿಗರು, ಕುಟುಂಬಗಳು, ಸಾಹಸಪ್ರಿಯರು ಹಾಗೂ ಪ್ರಕೃತಿಪ್ರಿಯರನ್ನು ಆಕರ್ಷಿಸುವ ನಿರೀಕ್ಷೆಯಿದೆ.
ಈ ಹೊಸ ಹೊಟೇಲ್ ಆರಂಭದಿಂದ ಉತ್ತರಾಖಂಡದಲ್ಲಿ ಸಂಸ್ಥೆಯ ಡೆಸ್ಟಿನೇಷನ್ ವೆಡ್ಡಿಂಗ್‌ಗಳಿಗೆ ಲಭ್ಯವಿರುವ ಒಟ್ಟು ಕೊಠಡಿಗಳ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. ಸಣ್ಣಮಟ್ಟದ ಮದುವೆ ಸಮಾರಂಭಗಳು, ಖಾಸಗಿ ಕಾರ್ಯಕ್ರಮಗಳು ಮತ್ತು ಕಾರ್ಪೊರೆಟ್ ಸಭೆಗಳಿಗೂ ಇಲ್ಲಿ ಅವಕಾಶವಿದೆ.