Tuesday, August 25, 2026
Tuesday, August 25, 2026

ಪ್ರವಾಸಿಗರಿಗೆ ಶಾಂತಿ ಮಾರಾಟ ಮಾಡುತ್ತಿರುವ ಸ್ವಿಟ್ಜರ್‌ಲ್ಯಾಂಡ್‌

ಭಾರತದ ಶ್ರೀಮಂತ ಹಾಗೂ ಹೈ-ಎಂಡ್ ಪ್ರವಾಸಿಗರು ಈಗ ಸಾಂಪ್ರದಾಯಿಕ ಮತ್ತು ಹೆಚ್ಚು ಜನದಟ್ಟಣೆ ಇರುವ ಸ್ವಿಟ್ಜರ್‌ಲ್ಯಾಂಡ್‌ನ ನಗರಗಳಿಗಿಂತ ಏಕಾಂತ ಹಾಗೂ ಪ್ರಶಾಂತವಾಗಿರುವ ಆಲ್ಪೈನ್ ಪರ್ವತ ಪ್ರಾಂತ್ಯಗಳು ಮತ್ತು ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ.

ಯುರೋಪಿನ ಸುಂದರ ತಾಣವೆಂದೇ ಖ್ಯಾತಿ ಪಡೆದಿರುವ ಸ್ವಿಟ್ಜರ್‌ಲ್ಯಾಂಡ್‌ ಪ್ರವಾಸೋದ್ಯಮ ಕ್ಷೇತ್ರವು ತನ್ನ ಮಾರ್ಕೆಟಿಂಗ್ ತಂತ್ರದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಅತಿ ಹೆಚ್ಚು ಜನಸಂದಣಿ ಇರುವ ಪ್ರವಾಸಿ ತಾಣಗಳು ಮತ್ತು ಗದ್ದಲದ ಆಕರ್ಷಣೆಗಳ ಬದಲು, ಭಾರತದ ಸಿರಿವಂತ ಹಾಗೂ ಐಷಾರಾಮಿ ಪ್ರವಾಸಿಗರಿಗೆ 'ಶಾಂತಿ ಮತ್ತು ನಿಶ್ಶಬ್ದ' ವಾತಾವರಣವನ್ನು ಪರಿಚಯಿಸಿ ಮಾರಾಟ ಮಾಡುತ್ತಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಮುಂಭಾಗದ ಚಕ್ರವಿಲ್ಲದೆ 7,000 ಕಿಮೀ. ಸೈಕಲ್ ಸವಾರಿ

ಭಾರತದ ಶ್ರೀಮಂತ ಹಾಗೂ ಹೈ-ಎಂಡ್ ಪ್ರವಾಸಿಗರು ಈಗ ಸಾಂಪ್ರದಾಯಿಕ ಮತ್ತು ಹೆಚ್ಚು ಜನದಟ್ಟಣೆ ಇರುವ ಸ್ವಿಟ್ಜರ್‌ಲ್ಯಾಂಡ್‌ನ ನಗರಗಳಿಗಿಂತ ಏಕಾಂತ ಹಾಗೂ ಪ್ರಶಾಂತವಾಗಿರುವ ಆಲ್ಪೈನ್ ಪರ್ವತ ಪ್ರಾಂತ್ಯಗಳು ಮತ್ತು ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ. ಕೇವಲ ಪ್ರಸಿದ್ಧ ಸ್ಮಾರಕಗಳು ಅಥವಾ ವೀಕ್ಷಣೆಗಳಿಗಿಂತ, ಮಾನಸಿಕ ನೆಮ್ಮದಿ, ಪ್ರಕೃತಿಯ ಮಡಿಲಲ್ಲಿ ವಿಶ್ರಾಂತಿ ಹಾಗೂ ವಿಶಿಷ್ಟ ಅನುಭವಗಳನ್ನು ಪಡೆಯಲು ಹೆಚ್ಚಿನ ಹಣ ಖರ್ಚು ಮಾಡಲು ಸಿದ್ಧರಿದ್ದಾರೆ.

ಗದ್ದಲದ ಪ್ರದರ್ಶನಗಳನ್ನು ಮೀರಿ, ಸ್ವಿಟ್ಜರ್‌ಲ್ಯಾಂಡ್‌ನ ನಿರ್ಜನ ಕಣಿವೆಗಳು, ಧ್ಯಾನ ಕೇಂದ್ರಗಳು, ಐಷಾರಾಮಿ ವೆಲ್‌ನೆಸ್ ರೆಸಾರ್ಟ್‌ಗಳು ಮತ್ತು ಅತಿ ಕಡಿಮೆ ಜನಸಂದಣಿಯಿರುವ ಪರ್ವತ ಹಾದಿಗಳನ್ನು ಭಾರತೀಯ ಐಷಾರಾಮಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ವಿಐಪಿ ಪ್ರವಾಸಿಗರಿಗಾಗಿ ಸಂಪೂರ್ಣ ಪ್ರತ್ಯೇಕವಾದ ಮತ್ತು ಗೌಪ್ಯತೆಯಿಂದ ಕೂಡಿದ ಟೂರ್ ಪ್ಯಾಕೇಜ್‌ಗಳನ್ನು ಇಲ್ಲಿನ ಹೋಟೆಲ್‌ಗಳು ಮತ್ತು ಟೂರ್ ಆಪರೇಟರ್‌ಗಳು ರೂಪಿಸುತ್ತಿದ್ದಾರೆ.

ಭಾರತವು ಸ್ವಿಟ್ಜರ್‌ಲ್ಯಾಂಡ್‌ಗೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಪ್ರವಾಸಿ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಆಧುನಿಕ ಒತ್ತಡದ ಜೀವನದಿಂದ ದೂರ ಉಳಿಯಲು ಬಯಸುವ ಭಾರತೀಯ ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳಿಗೆ ಸ್ವಿಸ್ ಆಲ್ಪ್ಸ್ ಪರ್ವತಗಳ ನಿಶ್ಯಬ್ದ ಸೌಂದರ್ಯವು ಅತ್ಯುತ್ತಮ ರಿಫ್ರೆಶ್ಮೆಂಟ್ ತಾಣವಾಗಿ ಬದಲಾಗುತ್ತಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ