ಪ್ರವಾಸೋದ್ಯಮ ಬಲಪಡಿಸಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ ತೈವಾನ್
ಈ ಹೊಸ ಮಾರ್ಗಸೂಚಿಗಳ ಅನುಸಾರ ತೈವಾನ್ ದೇಶಕ್ಕೆ ಆಗಮಿಸುವ ಪ್ರವಾಸಿಗರಿಗೆ ಪ್ರಮುಖ ಪ್ರವಾಸಿ ತಾಣಗಳನ್ನು ಪರಿಚಯಿಸುವುದರ ಜತೆಗೆ ಸ್ಥಳೀಯ ಸಮುದಾಯದ ಸಂಸ್ಕೃತಿ, ಸಾಂಪ್ರದಾಯಿಕ ಜೀವನವನ್ನು ಅವರಿಗೆ ಪರಿಚಯಿಸುವ ಪ್ರಯತ್ನವನ್ನು ಇಲಾಖೆ ಮಾಡಲಿದೆ.
ತೈವಾನ್ ಪ್ರವಾಸೋದ್ಯಮ ವಲಯಕ್ಕೆ ಹೊಸ ಚೈತನ್ಯ ತುಂಬಲು ಪ್ರವಾಸೋದ್ಯಮ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.
ಈ ಹೊಸ ಮಾರ್ಗಸೂಚಿಗಳ ಅನುಸಾರ ತೈವಾನ್ ದೇಶಕ್ಕೆ ಆಗಮಿಸುವ ಪ್ರವಾಸಿಗರಿಗೆ ಪ್ರಮುಖ ಪ್ರವಾಸಿ ತಾಣಗಳನ್ನು ಪರಿಚಯಿಸುವುದರ ಜತೆಗೆ ಸ್ಥಳೀಯ ಸಮುದಾಯದ ಸಂಸ್ಕೃತಿ, ಸಾಂಪ್ರದಾಯಿಕ ಜೀವನವನ್ನು ಅವರಿಗೆ ಪರಿಚಯಿಸುವ ಪ್ರಯತ್ನವನ್ನು ಇಲಾಖೆ ಮಾಡಲಿದೆ. ಹಾಗೆಯೇ ಪ್ರವಾಸೋದ್ಯಮದಲ್ಲಿ ಡಿಜಿಟಲೀಕರಣ ಹೆಚ್ಚಿಸುವ ಮೂಲಕ, ಪಾರದರ್ಶಕತೆ, ಸುಗಮ ಸಂಚಾರ, ಡಿಜಿಟಲ್ ಮಾರ್ಕೆಟಿಂಗ್ ಇತ್ಯಾದಿ ಕ್ಷೇತ್ರಗಳನ್ನು ಬಲಪಡಿಸಿ, ಪ್ರವಾಸಿಗರಿಗೆ ಉತ್ತಮ ಅನುಭವವನ್ನು ನೀಡುವ ಯೋಜನೆಗಳನ್ನು ರೂಪಿಸಲಾಗಿದೆ.

ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು, ತೈವಾನ್ ಪ್ರವಾಸಕ್ಕೆ ಸಂಬಂಧಿತ ವಿಶಿಷ್ಟ ಪ್ಯಾಕೇಜ್‌ಗಳ ಬಗ್ಗೆ ಪ್ರಚಾರ ಮಾಡುವುದು ಮತ್ತು ತೈವಾನ್ ದೇಶದ ವಿಶಿಷ್ಟ ಸಂಸ್ಕೃತಿ, ಪರಂಪರೆಯನ್ನು ರ್ಯಾಲಿ, ಸಮಾವೇಶಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿಶ್ವದಾದ್ಯಂತ ಪ್ರಚಾರ ಕೈಗೊಳ್ಳುವ ನಿರ್ಧಾರವನ್ನು ತೈವಾನ್ ಪ್ರವಾಸೋದ್ಯಮ ಇಲಾಖೆ ತೆಗೆದುಕೊಂಡಿದೆ.
ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪ್ರವಾಸೋದ್ಯಮ ಕ್ಷೇತ್ರವನ್ನು ಬಲಪಡಿಸುವತ್ತ ಕೂಡ ತೈವಾನ್ ಹೆಜ್ಜೆಯನಿರಿಸಿದೆ.