ಭಾರತೀಯ ಪ್ರವಾಸಿಗರಿಗೆ ಥೈಲ್ಯಾಂಡ್‌ನ ಹೊಸ ನಿಯಮ
ಥೈಲ್ಯಾಂಡ್ ಪ್ರವಾಸಕ್ಕೆ ಸಿದ್ಧರಾಗಿರುವ ಭಾರತೀಯರಿಗೆ ಹೊಸ ನಿಯಮ ಜಾರಿಯಾಗಲಿದ್ದು, ವೀಸಾ ಮುಕ್ತವಾಗಿ ಉಳಿಯುವ ಅವಧಿ 60 ದಿನಗಳಿಗೆ ಇಳಿಕೆಯಾಗಲಿದೆ.
ಥೈಲ್ಯಾಂಡ್‌ಗೆ ಪ್ರವಾಸ ಹೋಗಲು ಯೋಜಿಸಿರುವ ಭಾರತೀಯರಿಗೆ ವೀಸಾ ಮುಕ್ತ ಪ್ರದೇಶ ಸೌಲಭ್ಯ ಮುಂದುವರಿದಿದೆ. ಆದರೆ, ದೇಶದಲ್ಲಿ ವೀಸಾ ಇಲ್ಲದೆ ಉಳಿಯಬಹುದಾದ ಗರಿಷ್ಠ ಅವಧಿಯನ್ನು 60 ದಿನಗಳಿಗೆ ಕಡಿತಗೊಳಿಸಲಾಗಿದೆ. ಈ ಬದಲಾವಣೆ ಸೆಪ್ಟೆಂಬರ್ 15ರಿಂದ ಜಾರಿಗೆ ಬರಲಿದೆ.
ಥೈಲ್ಯಾಂಡ್‌ನ ಗೃಹ ಸಚಿವಾಲಯವು ಆಗಸ್ಟ್ 31ರಂದು ರಾಯಲ್‌ಗೆಜೆಟ್‌ನಲ್ಲಿ ಹೊಸ ನಿಯಮವನ್ನು ಪ್ರಕಟಿಸಿದೆ. ಒಟ್ಟು 60 ದೇಶಗಳು ಮತ್ತು ಪ್ರದೇಶಗಳ ಪ್ರವಾಸಿಗರಿಗೆ ಈ ಪಟ್ಟಿಯಲ್ಲಿದೆ.
ಹೊಸ ನಿಯಮದಂತೆ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಪ್ರವಾಸೋದ್ಯಮ ಉದ್ದೇಶಕ್ಕಾಗಿ ಥೈಲ್ಯಾಂಡ್‌ಗೆ ಯಾವುದೇ ಪ್ರವಾಸಿ ವೀಸಾ ಪಡೆಯದೆ ಪ್ರವೆಶಿಸಬಹುದು. ಆದರೆ ವೀಸಾ ಪಡೆಯದೆ ಪ್ರವೇಶಿಸಬಹುದು.ಆದರೆ ವೀಸಾ ಮುಕ್ತವಾಗಿ ಗರಿಷ್ಠ 30 ದಿನಗಳವರೆಗೆ ಮಾತ್ರ ದೇಶದಲ್ಲಿ ಉಳಿಯಲು ಅವಕಾಶವಿರುತ್ತದೆ. ಅದಕ್ಕಿಂತ ಹೆಚ್ಚಿನ ಅವಧಿಗೆ ತಂಗಲು ಬಯಸುವವರು ಸೂಕ್ತ ವೀಸಾ ಅಥವಾ ಇತರ ಮಾನ್ಯಾ ವಲಸೆ ಅನುಮತಿಯನ್ನು ಪಡೆಯಬೇಕಾಗುತ್ತದೆ.

ಈ ಬದಲಾವಣೆ ವಿಮಾನದ ಮೂಲಕ ಥೈಲ್ಯಾಂಡ್ ಪ್ರವೇಶಿಸುವವರಿಗೆ ಮಾತ್ರವಲ್ಲದೆ,ಭೂ ಗಡಿ ಮಾರ್ಗದಿಂದ ಆಗಮಿಸುವವರಿಗೂ ಅನ್ವಯಿಸುತ್ತದೆ. ಭೂ ಗಡಿ ಮೂಲಕ ವೀಸಾ ಮುಕ್ತ ಪ್ರದೇಶ ಪಡೆಯುವವರಿಗೆ ವರ್ಷಕ್ಕೆ ಎರಡು ಬಾರಿ ಮಾತ್ರ ಅವಕಾಶವಿದೆ.
ಅಲ್ಪಾವಧಿಯಲ್ಲಿ ಥೈಲ್ಯಾಂಡ್‌ನಿಂದ ಹೊರಗೆ ತೆರಳಿ ಮತ್ತೆ ಪ್ರವೇಶಿಸುವ ಮೂಲಕ ವಾಸ್ತವ್ಯದ ಅವಧಿಯನ್ನು ಅನಗತ್ಯವಾಗಿ ವಿಸ್ತರಿಸುವೂದಕ್ಕೂ ನಿರ್ಬಂಧವಿದೆ. ಭಾರತ ಸೇರಿದಂತೆ ಅಮೆರಿಕ, ಬ್ರಿಟನ್, ಜಪಾನ್, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್, ಯುಇಎ ಮತ್ತು ಸ್ವಿಟ್ಜರ್‌ಲ್ಯಾಂಡ್‌ನ ಪ್ರವಾಸಿಗರು ಹೊಸ ನಿಯಮದ ವ್ಯಾಪ್ತಿಗೆ ಬರುತ್ತಾರೆ.
ಹೀಗಾಗಿ ಸೆಪ್ಟೆಂಬರ್ 15ರ ನಂತರ 30 ದಿನಗಳಿಗಿಂತ ಹೆಚ್ಚು ಕಾಲ ಥೈಲ್ಯಾಂಡ್‌ನಲ್ಲಿ ಉಳಿಯಲು ಯೋಜಿಸುವ ಭಾರತೀಯರು ಪ್ರಯಾಣಕ್ಕೂ ಮುನ್ನ ಅಗತ್ಯ ವೀಸಾ ಮತ್ತು ಅನುಮತಿಗಳ ಬಗ್ಗೆ ಪರಿಶೀಲಿಸುವುದು ಸೂಕ್ತ.