ಮುಂದಿನ ದಿನಗಳಲ್ಲಿ ಥೈಲ್ಯಾಂಡ್‌ನ ಸುಂದರ ಕಡಲತೀರಗಳಾದ ಫುಕೆಟ್, ಪಟ್ಟಾಯ ಅಥವಾ ರಾಜಧಾನಿ ಬ್ಯಾಂಕಾಕ್‌ಗೆ ಪ್ರವಾಸ ಹೋಗಲು ಯೋಜಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಥೈಲ್ಯಾಂಡ್ ಸರಕಾರವು ಈಗ ವಿದೇಶಿ ಪ್ರವಾಸಿಗರಿಗೆ 'ಕಡ್ಡಾಯ ವಿಮೆ' ನಿಯಮವನ್ನು ಜಾರಿಗೆ ತಂದಿದೆ.

ಇದನ್ನೂ ಓದಿ: ಥೈಲ್ಯಾಂಡ್ ಪ್ರವಾಸೋದ್ಯಮ ಬಿಕ್ಕಟ್ಟು

ಫುಕೆಟ್, ಪಟ್ಟಾಯ, ಬ್ಯಾಂಕಾಕ್ ಮತ್ತು ಕ್ರಾಬಿ ಸೇರಿದಂತೆ ಥೈಲ್ಯಾಂಡ್‌ನ ಎಲ್ಲಾ ಪ್ರಮುಖ ನಗರಗಳಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರಿಗೆ ಇದು ಅನ್ವಯವಾಗುತ್ತದೆ. ಪ್ರವಾಸದ ಅವಧಿಯಲ್ಲಿ ಯಾವುದೇ ಅನಾರೋಗ್ಯ ಅಥವಾ ಅಪಘಾತ ಸಂಭವಿಸಿದಲ್ಲಿ, ಅದರ ಚಿಕಿತ್ಸೆಯ ವೆಚ್ಚವನ್ನು ಈ ವಿಮೆ ಭರಿಸಲಿದೆ. ಪ್ರತಿ ವರ್ಷ ವಿದೇಶಿ ಪ್ರವಾಸಿಗರು ಪಾವತಿಸದ ವೈದ್ಯಕೀಯ ಬಿಲ್‌ಗಳಿಂದಾಗಿ ಥೈಲ್ಯಾಂಡ್ ಸರಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿತ್ತು. ಇದನ್ನು ತಡೆಯಲು ಈಗ ವಿಮೆಯನ್ನು ಕಡ್ಡಾಯಗೊಳಿಸಲಾಗಿದೆ.

ಪ್ರವಾಸಿಗರು ಏನು ಮಾಡಬೇಕು?

ಪ್ರವಾಸಿಗರು ಥೈಲ್ಯಾಂಡ್‌ಗೆ ಬರುವ ಮೊದಲೇ ಅಥವಾ ಅಲ್ಲಿನ ವಿಮಾನ ನಿಲ್ದಾಣಗಳಲ್ಲಿ ಅಧಿಕೃತ ವಿಮೆಯನ್ನು ಹೊಂದಿರಬೇಕು. ಇಮಿಗ್ರೇಷನ್ ಪ್ರಕ್ರಿಯೆಯ ಸಮಯದಲ್ಲಿ ಅಧಿಕಾರಿಗಳು ವಿಮಾ ದಾಖಲೆಗಳನ್ನು ಪರಿಶೀಲಿಸುವ ಸಾಧ್ಯತೆ ಇರುತ್ತದೆ. ಸರಕಾರ ನಿಗದಿಪಡಿಸಿದ ಕನಿಷ್ಠ ಮೊತ್ತದ ವೈದ್ಯಕೀಯ ಸೌಲಭ್ಯವನ್ನು ಈ ವಿಮೆ ಒಳಗೊಂಡಿರಬೇಕು.