ಸ್ಥಳೀಯ ಉದ್ಯಮಿಗಳಿಗಿರಲಿ ರಕ್ಷಣಾ ಚೌಕಟ್ಟು
ಪ್ರಾದೇಶಿಕ ಎಂಎಸ್‌ಎಂಇ ಗಳಿಗೆ ಕಡ್ಡಾಯಕ್ಕೆ ಆದ್ಯತೆ, ನಿರ್ದಿಷ್ಟ ಕೋಟಾ ಮತ್ತು ಹೊರರಾಜ್ಯದ ಕಂಪನಿಗಳ ಅತಿಯಾದ ಪ್ರಾಬಲ್ಯ ತಡೆಯಲು ಕಾನೂನುಬದ್ಧ ರಕ್ಷಣಾ ಚೌಕಟ್ಟು ಅನಿವಾರ್ಯ ಎಂದು ಒತ್ಫಾಯಿಸಿ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ ಮತ್ತು ಬೆಂಗಳೂರು ಹೊಟೇಲ್ ಮಾಲಕರ ಸಂಘ, ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ಸರಕಾರ ಕೈಗಾರಿಕಾ ನೀತಿ 2025-30 ಅನ್ನು ಘೋಷಿಸಿದ್ದು, ಸ್ಥಳೀಯರಿಗೆ ಉದ್ಯೋಗದಲ್ಲಿ 70% ಮೀಸಲಾತಿ ನೀಡಿದೆ. ಆದರೆ ಸೇವಾ ವಲಯ ಪ್ರವಾಸಿ ವಾಹನ, ಉದ್ಯೋಗಿ ಸಾರಿಗೆ, ಕ್ಯಾಫೆಟೀರಿಯಾ, ಆಹಾರ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಸ್ಥಳೀಯ ಎಂಎಸ್‌ಎಂಇ ಹಾಗೂ ಚಿಕ್ಕ ಉದ್ಯಮಿಗಳಿಗೆ ಸ್ಪಷ್ಟ ಆದ್ಯತೆ ನೀಡುವ ವ್ಯವಸ್ಥೆ ಕಾಣುತ್ತಿಲ್ಲ.ಈ ಕೊರತೆಯನ್ನು ಹೊರರಾಜ್ಯದ ಟ್ರಾವೆಲ್ಸ್ ಕಂಪನಿಗಳು ಹಾಗೂ ಆನ್‌ಲೈನ್ ಸೇವಾ ಸಂಸ್ಥೆಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿವೆ. ಇದರ ಪರಿಣಾಮವಾಗಿ ಸ್ಥಳೀಯ ಉದ್ಯಮಿಗಳು ಮಾರುಕಟ್ಟೆಯಲ್ಲಿ ಹಿಂದುಳಿಯುವ ಭೀತಿ ಉಂಟಾಗಿದೆ. ಜತೆಗೆ ಯುವಕರ ಉದ್ಯೋಗಾವಕಾಶಗಳಿಗೂ ಧಕ್ಕೆಯಾಗುತ್ತಿದೆ. ಇದನ್ನು ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ ಮತ್ತು ಬೆಂಗಳೂರು ಹೊಟೇಲ್ ಮಾಲಕರ ಸಂಘ ವಿರೋಧಿಸಿದ್ದು, ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಅಲ್ಲದೆ ಪ್ರಾದೇಶಿಕ ಎಂಎಸ್‌ಎಂಇ ಗಳಿಗೆ ಕಡ್ಡಾಯಕ್ಕೆ ಆದ್ಯತೆ, ನಿರ್ದಿಷ್ಟ ಕೋಟಾ, ಮತ್ತು ಹೊರರಾಜ್ಯದ ಕಂಪನಿಗಳ ಅತಿಯಾದ ಪ್ರಾಬಲ್ಯ ತಡೆಯಲು ಕಾನೂನುಬದ್ಧ ರಕ್ಷಣಾ ಚೌಕಟ್ಟು ಅನಿವಾರ್ಯ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ವೇಳೆ ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘದ ಅಧ್ಯಕ್ಷ ಕೆ ರಾಧಾಕೃಷ್ಣ ಹೊಳ್ಳ ಹಾಗೂ ಬೆಂಗಳೂರಿನ ಹೊಟೇಲ್ ಮಾಲಿಕರ ಸಂಘಟನೆಯ ಕಾರ್ಯದರ್ಶಿ ವೀರೇಂದ್ರ ಕಾಮತ್ ರವರು ಉದ್ಯಮಗಳಿಗೆ ಸೇವಾದಾರರ ಆಯ್ಕೆಯಲ್ಲಿ ಪ್ರಾದೇಶಿಕತೆಯ ಅವಶ್ಯಕತೆಯ ಬಗ್ಗೆಯೂ ಮನವಿ ಮಾಡಿದರು.