'ಗೇಮ್ ಚೇಂಜರ್' ಆಗಲಿದೆಯಾ ಪ್ರವಾಸೋದ್ಯಮ ಕ್ಷೇತ್ರ!
ಲಂಡನ್‌ನಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ಮಾರುಕಟ್ಟೆ (World Travel Market 2025) ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ, ಭಾರತೀಯ ಉನ್ನತ ಆಯೋಗದ ಆತಿಥ್ಯದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಮಾತನಾಡಿದ ಸಚಿವರು- “ಆಂಧ್ರಪ್ರದೇಶವು ತನ್ನ ವಿಶಿಷ್ಟ ನೈಸರ್ಗಿಕ ಸಂಪತ್ತು, ಸಾಂಸ್ಕೃತಿಕ ವೈಭವ ಮತ್ತು ಆತಿಥ್ಯ ಪರಂಪರೆಯೊಂದಿಗೆ ಜಾಗತಿಕ ಪ್ರವಾಸಿಗರನ್ನು ಆಕರ್ಷಿಸಲು ಸಿದ್ಧವಾಗಿದೆ” ಎಂದು ತಿಳಿಸಿದರು.
ಆಂಧ್ರಪ್ರದೇಶ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಕಂದೂಲ ದುರಗೇಶ್ ಅವರು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವು ಮುಂದಿನ ವರ್ಷಗಳಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆಗೆ ಪ್ರಮುಖ ಚಾಲಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲಂಡನ್‌ನಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ಮಾರುಕಟ್ಟೆ (World Travel Market 2025) ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ, ಭಾರತೀಯ ಉನ್ನತ ಆಯೋಗದ ಆತಿಥ್ಯದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಮಾತನಾಡಿದ ಅವರು, “ಆಂಧ್ರಪ್ರದೇಶವು ತನ್ನ ವಿಶಿಷ್ಟ ನೈಸರ್ಗಿಕ ಸಂಪತ್ತು, ಸಾಂಸ್ಕೃತಿಕ ವೈಭವ ಮತ್ತು ಆತಿಥ್ಯ ಪರಂಪರೆಯೊಂದಿಗೆ ಜಾಗತಿಕ ಪ್ರವಾಸಿಗರನ್ನು ಆಕರ್ಷಿಸಲು ಸಿದ್ಧವಾಗಿದೆ” ಎಂದು ತಿಳಿಸಿದರು.
ಅಲ್ಲದೆ, ”ರಾಜ್ಯದ ಪ್ರವಾಸೋದ್ಯಮ ನೀತಿಯಲ್ಲಿ ಕೈಗಾರಿಕಾ ಹೂಡಿಕೆಗಳಿಗೆ ಪ್ರೋತ್ಸಾಹ ನೀಡುವ ನೂತನ ಯೋಜನೆಗಳನ್ನು ಸೇರಿಸಲಾಗಿದ್ದು, ಪ್ರವಾಸೋದ್ಯಮವನ್ನು ಕೇವಲ ಮನರಂಜನೆಯ ಕ್ಷೇತ್ರವಲ್ಲ, ರಾಜ್ಯದ ಆರ್ಥಿಕ ಪುನರುಜ್ಜೀವನದ ಪ್ರಮುಖ ಅಂಶವನ್ನಾಗಿ ಪರಿವರ್ತಿಸುವ ಉದ್ದೇಶ ನಮ್ಮದು,” ಎಂದು ಅವರು ಹೇಳಿದರು.
ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕಳೆದ ಕೆಲವು ತಿಂಗಳಲ್ಲಿ ಸುಮಾರು 12,000 ಕೋಟಿ ರು.ಗಳಷ್ಟು ಹೂಡಿಕೆ ಹರಿದುಬಂದಿದೆ, ಇಕೋ ಟೂರಿಸಂ, ಸಾಹಸ ಪ್ರವಾಸೋದ್ಯಮ, ಕಡಲತೀರ ಪ್ರವಾಸೋದ್ಯಮ ಹಾಗೂ ಆರೋಗ್ಯಪರ ಪ್ರವಾಸೋದ್ಯಮ (ವೆಲ್‌ನೆಸ್ ಟೂರಿಸಂ) ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳಿವೆ ಎಂದೂ ಅವರು ತಿಳಿಸಿದರು.

ರಾಜ್ಯ ಸರ್ಕಾರವು ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೈಗಾರಿಕಾ ಹುದ್ದೆ ನೀಡಿದ್ದು, ಹೊಸ ನೀತಿಗಳ ಮೂಲಕ ಹೂಡಿಕೆದಾರರಿಗೆ ಸುಲಭವಾದ ಪ್ರಕ್ರಿಯೆ ಹಾಗೂ ಮೂಲಸೌಕರ್ಯ ಸೌಲಭ್ಯ ಒದಗಿಸಲು ಕ್ರಮ ಕೈಗೊಂಡಿದೆ. “ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ ಅವರ ದೃಷ್ಟಿಯಿಂದ ಪ್ರವಾಸೋದ್ಯಮ ರಾಜ್ಯದ ಭವಿಷ್ಯ ರೂಪಿಸುವ ಪ್ರಮುಖ ವಲಯವಾಗಲಿದೆ,” ಎಂದು ದುರ್ಗೇಶ್ ಹೇಳಿದರು.
ವಿಶಾಖಪಟ್ಟಣದಲ್ಲಿ ನವೆಂಬರ್ 14 ಮತ್ತು 15ರಂದು ನಡೆಯಲಿರುವ CII ಪಾರ್ಟ್ನರ್‌ಶಿಪ್ ಸಮಿಟ್‌ನಲ್ಲಿ ಜಾಗತಿಕ ಹೂಡಿಕೆದಾರರನ್ನು ಆಹ್ವಾನಿಸುವುದಾಗಿ ಅವರು ತಿಳಿಸಿದರು. “ಆಂಧ್ರಪ್ರದೇಶವನ್ನು ಭಾರತದ ಅತ್ಯಂತ ಆಕರ್ಷಕ ಪ್ರವಾಸೋದ್ಯಮ ರಾಜ್ಯವಾಗಿಸುವತ್ತ ನಮ್ಮ ಚಿತ್ತ” ಎಂದೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.