ಹೊಸ ಟ್ರೆಂಡ್ ಸೃಷ್ಟಿಸುತ್ತಿದೆ ‘ಕೋನ್‌ಬಿನಿ ಟೂರಿಸಂ’
ಜಪಾನ್‌ನಲ್ಲಿ ಇದೀಗ ‘ಕೋನ್‌ಬಿನಿ ಟೂರಿಸಂ’ ಎಂಬ ಹೊಸ ಪ್ರವಾಸಿ ಟ್ರೆಂಡ್ ವೇಗವಾಗಿ ಜನಪ್ರಿಯವಾಗುತ್ತಿದೆ. ದೇಶದಾದ್ಯಂತ ಇರುವ 24/7 ಕನ್ವಿನಿಯನ್ಸ್ ಸ್ಟೋರ್‌ಗಳನ್ನು ಇಲ್ಲಿಯ ಜನರು ಕೋನ್‌ಬಿನಿ ಎಂದು ಕರೆಯುತ್ತಾರೆ. ಈ ಸ್ಟೋರ್‌ಗಳು ಇದೀಗ ಪ್ರವಾಸಿಗರಿಗೆ ನೂತನ ಮತ್ತು ವಿಶಿಷ್ಟ ಅನುಭವವನ್ನು ನೀಡುತ್ತಿವೆ.
ಅರೆರೆ! ಇದೇನಿದು ಕೋನ್‌ಬಿನಿ ಟೂರಿಸಂ? ನಾವು ಇದುವರೆಗೆ ಮರೈನ್ ಟೂರಿಸಂ, ಮೆಡಿಕಲ್ ಟೂರಿಸಂ, ಟೆಂಪಲ್ ಟೂರಿಸಂ ಅಂತೆಲ್ಲ ವಿವಿಧ ರೀತಿಯ ಟೂರಿಸಂ ಬಗ್ಗೆ ಕೇಳಿದ್ದೀವಿ, ಇದೇನಿದು ಹೊಸದಾಗಿ ಕೋನ್‌ಬಿನಿ ಟೂರಿಸಂ ಅಂತ ತಲೆ ಕೆಡೆಸಿಕೊಳ್ಳುತ್ತಿದ್ದಿರಾ? ನಿಮ್ಮ ಗೊಂದಲಗಳಿಗೆ ಇಲ್ಲಿದೆ ಪರಿಹಾರ.
ಜಪಾನ್‌ನಲ್ಲಿ ಇದೀಗ ‘ಕೋನ್‌ಬಿನಿ ಟೂರಿಸಂ’ ಎಂಬ ಹೊಸ ಪ್ರವಾಸಿ ಟ್ರೆಂಡ್ ವೇಗವಾಗಿ ಜನಪ್ರಿಯವಾಗುತ್ತಿದೆ. ದೇಶದಾದ್ಯಂತ ಇರುವ 24/7 ಕನ್ವಿನಿಯನ್ಸ್ ಸ್ಟೋರ್‌ಗಳನ್ನು ಇಲ್ಲಿಯ ಜನರು ಕೋನ್‌ಬಿನಿ ಎಂದು ಕರೆಯುತ್ತಾರೆ. ಈ ಸ್ಟೋರ್‌ಗಳು ಇದೀಗ ಪ್ರವಾಸಿಗರಿಗೆ ನೂತನ ಮತ್ತು ವಿಶಿಷ್ಟ ಅನುಭವವನ್ನು ನೀಡುತ್ತಿವೆ.

ಸೆವನ್ ಇಲೆವೆನ್, ಲಾಸನ್, ಫ್ಯಾಮಿಲಿ ಮಾರ್ಟ್ ಮುಂತಾದ ಕೋನ್‌ಬಿನಿಗಳು ಕೇವಲ ಅಂಗಡಿಗಳಲ್ಲ; ಜಪಾನಿನ ಜೀವನಶೈಲಿ, ಆಹಾರ ಸಂಸ್ಕೃತಿ ಮತ್ತು ತಂತ್ರಜ್ಞಾನವನ್ನು ಪ್ರತಿಬಿಂಬಿಸುವ ವಿಶೇಷ ಸ್ಥಳಗಳಾಗಿ ಪರಿಣಮಿಸುತ್ತಿವೆ.
ಕೋನ್‌ಬಿನಿ ಟೂರಿಸಂ ವೈರಲ್ ಆಗುತ್ತಿರುವುದೇಕೆ?
- ಹೆಚ್ಚು ಆಯ್ಕೆ – ಕಡಿಮೆ ಬೆಲೆ: ಜಪಾನ್‌ನ ಎಲ್ಲಾ ಕೋನ್‌ಬಿನಿಗಳಲ್ಲೂ ರೆಡಿ-ಟು-ಈಟ್ ಊಟಗಳು, ಜಪಾನಿನ ವಿಶೇಷ ಬಂಟೋ ಬಾಕ್ಸ್‌ಗಳು, ಒನಿಗಿರಿ, ರೇಮನ್ ಹಾಗೂ ಸೀಸನಲ್ ಐಟಂಗಳು ಪ್ರಪಂಚದ ಪ್ರವಾಸಿಗರನ್ನು ಆಕರ್ಷಿಸುತ್ತಿವೆ ಮತ್ತು ಈ ಕೋನ್‌ಬಿನಿಗಳಲ್ಲಿ ಆಯ್ಕೆಗಳು ಹೆಚ್ಚಾಗಿದ್ದು, ಕಡಿಮೆ ಬೆಲೆಗೆ ದೊರೆಯುತ್ತಿರುವುದು ಪ್ರವಾಸಿಗರ ಸಂತಸಕ್ಕೆ ಕಾರಣವಾಗಿದೆ.
- ಎಲ್ಲಾ ಸೇವೆಗಳು ಒಂದೇ ಜಾಗದಲ್ಲಿ: ಪ್ರವಾಸಿಗರಿಗೆ ಬಹು ಉಪಯುಕ್ತವಾಗಿರುವ ಟ್ರೈನ್ ಟಿಕೆಟ್, ಬಿಲ್ ಪೇಮೆಂಟ್, ಪ್ರಿಂಟಿಂಗ್, ಪಾರ್ಸೆಲ್ ಮುಂತಾದ ವಿವಿಧ ಸೇವೆಗಳು ಒಂದೇ ಸೂರಿನಡಿ ಈ ಸ್ಟೋರ್‌ಗಳಲ್ಲಿ ದೊರೆಯುತ್ತಿರುವುದು ವಿಶೇಷ.
- 24/7 ತೆರೆದಿರುತ್ತವೆ: ದಿನದ 24 ಗಂಟೆಗಳಂತೆ ವಾರ ಪೂರ್ತಿ ತೆರೆದಿರುವ ಈ ಸ್ಟೋರ್‌ಗಳು ಪ್ರವಾಸಿಗರಿಗೆ ಬಹು ಅನುಕೂಲಕರವಾಗಿವೆ.
- ಈ ಸ್ಟೋರ್‌ಗಳಲ್ಲಿ ಸ್ವಚ್ಛತೆ ಮತ್ತು ಸೇವಾ ಗುಣಮಟ್ಟಕ್ಕೆ ಹೆಚ್ಚಿಗೆ ಆದ್ಯತೆ ನೀಡುತ್ತಿರುವುದರಿಂದ ಇವು ಪ್ರವಾಸಿಗರ ಫೇವರಿಟ್ ಸ್ಪಾಟ್‌ಗಳಾಗಿವೆ.
ಪ್ರವಾಸಿಗರು ಕೋನ್‌ಬಿನಿ ಫುಡ್ ಮತ್ತು ಸೀಸನಲ್ ಐಟಂಗಳ ಫೊಟೋ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದು, “ಕೋನ್‌ಬಿನಿ must-visit list” ಎಂಬ ಟ್ರೆಂಡ್ ಜೋರಾಗುತ್ತಿದೆ. ಅನೇಕ ಟ್ರಾವೆಲ್ ಇನ್‌ಫ್ಲುಯೆನ್ಸರ್‌ಗಳು “Japan Tourism=Konbini Tourism” ಎಂದು ಹೇಳುವಷ್ಟು ಇವುಗಳು ವಿಶೇಷವಾಗಿ ಪರಿಣಮಿಸಿವೆ.

ಸ್ಥಳೀಯ ಸಂಸ್ಕೃತಿ, ಆಹಾರ ಮತ್ತು ದೈನಂದಿನ ಜೀವನವನ್ನು ಪ್ರವಾಸಿಗರಿಗೆ ಪರಿಚಯಿಸುವ ಈ ವಿಶಿಷ್ಟ ಕೋನ್‌ಬಿನಿ ಸ್ಟೋರ್‌ಗಳು ಇದೀಗ ಜಗತ್ತಿನ ಗಮನ ಸೆಳೆಯುತ್ತಿವೆ.