ಭಾರತದಲ್ಲಿ ತಡೆರಹಿತ ಪ್ರವಾಸ ಅನುಭವಕ್ಕೆ ವೀಸಾ ಸುಧಾರಣೆ ಅಗತ್ಯ
ಭಾರತದಲ್ಲಿ ತಡೆರಹಿತ ಪ್ರವಾಸ ಅನುಭವಕ್ಕೆ ವೀಸಾ ಸುಧಾರಣೆ ಅಗತ್ಯವೆಂದು ಪ್ರವಾಸೋದ್ಯಮ ವಲಯದ ಒತ್ತಾಯ ಮಾಡಿದೆ.
ಭಾರತವು ಜಾಗತಿಕ ಪ್ರವಾಸೋದ್ಯಮದಲ್ಲಿ ಮುಂಚೂಣಿಯ ರಾಷ್ಟ್ರವಾಗಬೇಕಾದರೆ ಕೇವಲ ಹೊಸ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದಷ್ಟೇ ಸಾಲದು, ಪ್ರವಾಸಿಗರಿಗೆ ಆರಂಭದಿಂದ ಅಂತ್ಯದವರೆಗೆ ತಡೆರಹಿತ ಮತ್ತು ಸುಗಮ ಪ್ರಯಾಣದ ಅನುಭವ ಒದಗಿಸುವುದು ಅಗತ್ಯ ಎಂದು ಪ್ರವಾಸೋದ್ಯಮ ವಲಯದ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಭಾರತದ ಮೊದಲ ಹೈಡ್ರೋಜನ್ ರೈಲಿನ ಟಿಕೆಟ್ ದರ ಗೊತ್ತಾ?
ಇಂಡಿಯಾ ಟುಡೆ ಆಯೋಜಿಸಿದ್ದ FAITH ಟೂರಿಸಂ ಕಾನ್ಕ್ಲೇವ್–2026ರಲ್ಲಿ ಮಾತನಾಡಿದ ತಜ್ಞರು, ಭಾರತವು ವಿಶ್ವಮಟ್ಟದ ನೈಸರ್ಗಿಕ, ಸಾಂಸ್ಕೃತಿಕ ಹಾಗೂ ಪಾರಂಪರಿಕ ಸಂಪತ್ತನ್ನು ಹೊಂದಿದ್ದರೂ, ವೀಸಾ ಪ್ರಕ್ರಿಯೆಯ ಸಂಕೀರ್ಣತೆ, ನೀತಿ ಅಡೆತಡೆಗಳು, ಸಂಪರ್ಕ ವ್ಯವಸ್ಥೆಯ ಕೊರತೆ ಹಾಗೂ ಪ್ರವಾಸ ಅನುಭವದಲ್ಲಿನ ಲೋಪಗಳಿಂದ ವಿದೇಶಿ ಪ್ರವಾಸಿಗರನ್ನು ನಿರೀಕ್ಷಿತ ಪ್ರಮಾಣದಲ್ಲಿ ಆಕರ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ನೀತಿಗಳಲ್ಲಿ ಸ್ಥಿರತೆ, ವೀಸಾ ವ್ಯವಸ್ಥೆಯಲ್ಲಿ ಸುಧಾರಣೆ, ವರ್ಷಪೂರ್ತಿ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಗೂ ಸರಕಾರ–ಖಾಸಗಿ ವಲಯಗಳ ಸಮನ್ವಯ ಅತ್ಯಗತ್ಯ ಎಂದು ಒತ್ತಿ ಹೇಳಿದರು. ದೇಶೀಯ ಮತ್ತು ವಿದೇಶಿ ಪ್ರವಾಸೋದ್ಯಮಕ್ಕೆ ಪ್ರತ್ಯೇಕ ಕಾರ್ಯತಂತ್ರ ರೂಪಿಸಿ, ಪ್ರವಾಸಿಗರಿಗೆ ಸುಲಭ, ಸುರಕ್ಷಿತ ಮತ್ತು ನಿರಂತರ ಅನುಭವ ಕಲ್ಪಿಸಿದರೆ ಭಾರತವು ಜಾಗತಿಕ ಪ್ರವಾಸೋದ್ಯಮದ ಪ್ರಮುಖ ತಾಣವಾಗಿ ಹೊರಹೊಮ್ಮಬಹುದು.