Wednesday, May 13, 2026
Wednesday, May 13, 2026

ಗೋಲ್ಡನ್ ವೀಸಾ ಸ್ಟ್ರಿಕ್ಟ್ ರೂಲ್ಸ್ ಏನು?

ಗೋಲ್ಡನ್ ವೀಸಾದಿಂದಾಗಿ ಶ್ರೀಮಂತರು ಸುಲಭವಾಗಿ ಪೌರತ್ವ ಪಡೆಯುತ್ತಿದ್ದಾರೆ. ಇದು ದೇಶದ ಆರ್ಥಿಕತೆಗೆ ತಾತ್ಕಾಲಿಕ ಲಾಭ ತಂದರೂ ದೀರ್ಘಕಾಲದ ಸಾಮಾಜಿಕ ಅಸಮಾನತೆಗೆ ಕಾರಣವಾಗುತ್ತಿದೆ ಎಂಬ ವಾದ ಕೇಳಿಬರುತ್ತಿದೆ.

ಅನೇಕ ದೇಶಗಳು ಶ್ರೀಮಂತ ವಿದೇಶಿಯರನ್ನು ಆಕರ್ಷಿಸಲು ನೀಡುತ್ತಿದ್ದ 'ಹೂಡಿಕೆ ಮೂಲಕ ರೆಸಿಡೆನ್ಸಿ' (Residency by Investment) ಅಥವಾ 'ಗೋಲ್ಡನ್ ವೀಸಾ' ಯೋಜನೆಗಳನ್ನು ಈಗ ಕಟ್ಟುನಿಟ್ಟಿನ ನಿಯಮಗಳಿಗೆ ಒಳಪಡಿಸುತ್ತಿವೆ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುತ್ತಿವೆ.

ಭದ್ರತಾ ಕಾರಣಗಳು, ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ತಡೆಯಲು ಐರೋಪ್ಯ ಒಕ್ಕೂಟವು ತನ್ನ ಸದಸ್ಯ ರಾಷ್ಟ್ರಗಳ ಮೇಲೆ ಒತ್ತಡ ಹೇರುತ್ತಿದೆ. ಇದರಿಂದಾಗಿ ಪೋರ್ಚುಗಲ್, ಸ್ಪೇನ್ ಮತ್ತು ಗ್ರೀಸ್‌ನಂಥ ದೇಶಗಳು ತಮ್ಮ ಗೋಲ್ಡನ್ ವೀಸಾ ನಿಯಮಗಳನ್ನು ಗಣನೀಯವಾಗಿ ಬದಲಿಸಿವೆ.

ಇದನ್ನೂ ಓದಿ: ಚೀನಾದಲ್ಲಿ ಪಕ್ಷಿ ವೀಕ್ಷಣೆ ಏರಿಕೆ

ಈ ಹಿಂದೆ ಕೇವಲ ಮನೆ ಅಥವಾ ಆಸ್ತಿ ಖರೀದಿಸುವ ಮೂಲಕ ಗೋಲ್ಡನ್ ವೀಸಾ ಪಡೆಯಬಹುದಾಗಿತ್ತು. ಆದರೆ ಈಗ ಸ್ಥಳೀಯರಿಗೆ ಮನೆಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅನೇಕ ದೇಶಗಳು 'ರಿಯಲ್ ಎಸ್ಟೇಟ್ ಹೂಡಿಕೆ' ಮೂಲಕ ವೀಸಾ ನೀಡುವುದನ್ನು ನಿಲ್ಲಿಸಿವೆ ಅಥವಾ ಹೂಡಿಕೆಯ ಮೊತ್ತವನ್ನು ದುಪ್ಪಟ್ಟುಗೊಳಿಸಿವೆ.

ಗೋಲ್ಡನ್ ವೀಸಾದಿಂದಾಗಿ ಶ್ರೀಮಂತರು ಸುಲಭವಾಗಿ ಪೌರತ್ವ ಪಡೆಯುತ್ತಿದ್ದಾರೆ. ಇದು ದೇಶದ ಆರ್ಥಿಕತೆಗೆ ತಾತ್ಕಾಲಿಕ ಲಾಭ ತಂದರೂ ದೀರ್ಘಕಾಲದ ಸಾಮಾಜಿಕ ಅಸಮಾನತೆಗೆ ಕಾರಣವಾಗುತ್ತಿದೆ ಎಂಬ ವಾದ ಕೇಳಿಬರುತ್ತಿದೆ.

ಈ ಬದಲಾವಣೆಗಳಿಂದಾಗಿ ವಿದೇಶಗಳಲ್ಲಿ ನೆಲೆಸಲು ಯೋಜಿಸುತ್ತಿದ್ದ ಶ್ರೀಮಂತ ಭಾರತೀಯರು ಸೇರಿದಂತೆ ಜಾಗತಿಕ ಹೂಡಿಕೆದಾರರು ಈಗ ತಮ್ಮ ಯೋಜನೆಗಳನ್ನು ಮರುಪರಿಶೀಲಿಸುತ್ತಿದ್ದಾರೆ. ಈಗ ಹೂಡಿಕೆದಾರರು ನಾವೀನ್ಯತೆ, ಸಂಶೋಧನೆ ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಯಂಥ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದು ಅನಿವಾರ್ಯವಾಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ