ನಿಸರ್ಗದಿಂದಲೇ ಸಕಲ ರೋಗಗಳಿಗೂ ಮದ್ದು ಡಾ. ವೆಂಕಟರಮಣ ಹೆಗಡೆ ಬಿತ್ತಿದ ಬೀಜ ಇಂದು ಹೆಮ್ಮರ!
ಭರತ ಸಂಸ್ಕೃತಿಯ ವೇದಕಾಲದ ಪ್ರಕೃತಿ ಚಿಕಿತ್ಸಾ ಪದ್ಧತಿ ಹಾಗೂ ಆಯುರ್ವೇದ ಪಂಚಕರ್ಮ ಚಿಕಿತ್ಸೆಯನ್ನು ಅಳವಡಿಸಿಕೊಂಡಿರುವುದು ವೈಶಿಷ್ಟ್ಯ. ತಜ್ಞ ವೈದ್ಯರಾದ ಡಾ. ವೆಂಕಟರಮಣ ಹೆಗಡೆ, ಈ ನಿಟ್ಟಿನಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಆಹಾರದ ಮೂಲಕವೇ ಆರೋಗ್ಯ ಪಡೆಯುವ ವಿಷಯದಲ್ಲಿ ಪರಿಣಿತಿ ಹೊಂದಿರುವ ಡಾ. ಪ್ರವೀಣ್ ಜೇಕಬ್, ಹಾಗೂ ಆಯುರ್ವೇದ ಚಿಕಿತ್ಸೆಗಳಲ್ಲಿ ಅನುಭವಿಗಳಾದ ಡಾ. ವೆಂಕಟೇಶ್ ಗಾಂವ್ಕರ್ ಅವರ ಅಪಾರ ಅನುಭವವನ್ನು ಬಳಸಿಕೊಂಡು ರೋಗ ನಿರ್ವಹಣೆ ಮಾಡುವ ಸಂಕಲ್ಪ ತೊಟ್ಟಿದ್ದಾರೆ.
ಉತ್ತರ ಕನ್ನಡವೆಂದರೆ ತಕ್ಷಣಕ್ಕೆ ನಮಗೆಲ್ಲ ನೆನಪಾಗುವುದು ರಮಣೀಯವಾದ ನಿಸರ್ಗ. ಇನ್ನು ಆರೋಗ್ಯ ವೃದ್ದಿಯ ವಿಷಯ ಬಂದಾಗಲೂ ನಮ್ಮ ನೆನಪಿಗೆ ಬರುವುದು ನಿಸರ್ಗ ಚಿಕಿತ್ಸೆ. ನಿಸರ್ಗ ಚಿಕಿತ್ಸೆ ಎಂದರೆ ಪ್ರಕೃತಿಯಲ್ಲಿ ದೊರೆಯುವ ಬೇರು, ನಾರು, ಸೊಪ್ಪು, ರಸ, ಹಣ್ಣು, ಹೀಗೆ ಹತ್ತು ಹಲವು ವಸ್ತುಗಳಿಂದ ಕೂಡಿದ ಶುದ್ಧ ಪ್ರಕೃತಿದತ್ತ ಔಷಧರೂಪದ ಚಿಕಿತ್ಸೆ. ಇಂದಿನ ದಿನದಲ್ಲಿ ಎಲ್ಲರೂ ನಿಸರ್ಗದತ್ತ ವಾಲುತ್ತಿದ್ದಾರೆ. ಎಲ್ಲರಿಗು ನಮಗೇನು ಬೇಕು ಅದು ನಿಸರ್ಗದಲ್ಲೇ ದೊರೆಯುತ್ತದೆ ಎಂಬ ಜ್ಞಾನೋದಯವಾಗಿದೆ. ನಿಸರ್ಗ ಚಿಕಿತ್ಸೆಯ ಮೂಲಕವೇ ಸಕಲ ರೋಗಗಳಿಗೂ ಮದ್ದು ನೀಡುತ್ತಿರುವ ಮತ್ತು ದೇಶವ್ಯಾಪಿ ಪ್ರಸಿದ್ಧಿಯಾಗಿರುವ, ಉತ್ತರ ಕನ್ನಡದ ನಿಸರ್ಗ ಮನೆ ವೇದ ವೆಲ್‌ನೆಸ್ ಸೆಂಟರ್ ಬಗ್ಗೆ ತಿಳಿಸಿಕೊಡುತ್ತೇವೆ. ಇದು ವೆಲ್‌ನೆಸ್ ಪ್ರವಾಸ.
ನಿಸರ್ಗ ಮನೆಯಲ್ಲಿ ನಿಸರ್ಗ ಚಿಕಿತ್ಸೆ
ತೀರಾ ಕಾಡೂ ಅಲ್ಲದ ನಾಡೂ ಅಲ್ಲದ ಒಳಗೆ ಹೋಗುತ್ತಿದ್ದಂತೆ ನವಚೈತನ್ಯ ತುಂಬುವ ಧಾಮವೇ ನಿಸರ್ಗ ಮನೆ ವೇದ ವೆಲ್‌ನೆಸ್ ಸೆಂಟರ್. ವಿಶಾಲವಾದ ಐದು ಎಕರೆಯ ಸ್ಥಳದ ಪ್ರಕೃತಿ ಪ್ರಶಾಂತತೆಯ ಮಡಿಲು ಇದು. ಮನೆ ಮದ್ದಿನ ಘಮಲು ಮತ್ತು ಆಯುರ್ವೇದದ ಮಜಲು ಇಲ್ಲಿದೆ. ಕಾಸು ಕೊಟ್ಟು ದೇಹ ಕರಗಿಸಿಕೊಳ್ಳುವ ಬದಲು ಪ್ರಕೃತಿಯಲ್ಲಿಯೇ ಸಿಗುವ ದಿವ್ಯೌಷಧ ಇಲ್ಲಿಯ ಪದ್ದತಿಯಲ್ಲಿಯಲ್ಲಿ ಬೆರೆತ ಅಮೃತ.

ಇಲ್ಲಿ ದೊರಕುವ ಪ್ರಕೃತಿ ಚಿಕಿತ್ಸೆ, ಪಂಚಕರ್ಮ ಚಿಕಿತ್ಸೆಗಳ ಜತೆಗೆ ನಿಸರ್ಗದತ್ತ ಆಹಾರ, ಪ್ರಕೃತಿದತ್ತ ಕಾಟೇಜ್‌ಗಳು ಆರೋಗ್ಯದ ಪುನರುಜ್ಜೀವನಕ್ಕೆ ಅವಕಾಶ ಮಾಡಿಕೊಡುತ್ತದೆ. ಕಡಿಮೆ ಮಾಡಲು ಕಷ್ಟಕರವಾದ ಆಟೋ ಇಮ್ಯೂನ್ ಡಿಸಾರ್ಡರ್ ಗಳ ಯಶಸ್ವಿ ನಿರ್ವಹಣೆಗೂ ಡಾ. ವೆಂಕಟರಮಣ ಹೆಗಡೆಯವರಲ್ಲಿ ಹೊಸ ಉಪಾಯವಿದೆ. ಹಾಂ. ಅಂದಹಾಗೆ ವೆಂಕಟರಮಣ ಹೆಗಡೆಯವರೇ ಈ ನಿಸರ್ಗ ಮನೆಯ ರೂವಾರಿ. ಇದು ಅವರ ಕನಸಿನ ಕೂಸು. ಅವರೇ ಬಿತ್ತಿದ ಬೀಜ. ಹೆಗಡೆಯವರು ಪ್ರಸಿದ್ಧ ಆಯುಷ್ ವೈದ್ಯರು. ದೇಶ-ವಿದೇಶಗಳಲ್ಲಿ ಇವರು ಹೆಸರುವಾಸಿ. ವೆಂಕಟರಮಣರಿಗೆ ಹೊರ ದೇಶದಲ್ಲಿ ಬಂದು ನೆಲೆಸುವಂತೆ ಮತ್ತು ಅಲ್ಲಿಯೇ ವೃತ್ತಿ ನಿರ್ವಹಿಸುವಂತೆ ಕರೆ ಬಂದರೂ ತಾವಿದ್ದ ಜಾಗದಿಂದ ಅವರು ಕದಲಲಿಲ್ಲ. ಹೊರ ದೇಶವಿರಲಿ ನಗರಕ್ಕೂ ಹೋಗಿ ನೆಲೆಸದೆ ತಮ್ಮದೇ ಊರಿನಲ್ಲಿ ತಂದೆ ತಾಯಿಯ ಜತೆಗೆ ಇದ್ದು, ವೃತ್ತಿ, ಪ್ರವೃತ್ತಿಯನ್ನು ರಾಷ್ಟ್ರದೆತ್ತರಕ್ಕೆ ಕೊಂಡೊಯ್ದ ಯಶೋಗಾಥೆ ಡಾ. ವೆಂಕಟರಮಣ ಹೆಗಡೆಯವರದ್ದು. ಇವರ ಸಹಧರ್ಮಿಣಿ ಸಂಗೀತಾ ಹೆಗಡೆ ಇವರ ಪ್ರತಿ ಕೆಲಸಗಳಿಗೂ ಬೆನ್ನೆಲುಬು. ಅವರ ಸಾಧನೆಗಳಿಗೆ ಪ್ರೇರಣೆ.
ಜೀರೋ ಟು ಹಿರೋ
ಶೂನ್ಯದಿಂದ ವೃತ್ತಿ ಬದುಕು ಆರಂಭಿಸಿದ ಹೆಗಡೆಯವರ ಬೆನ್ನಿಗೆ ಹಿಂದಿನಿಂದ ಇರಿದವರಿದ್ದಾರೆ, ಬೆನ್ನು ತಟ್ಟಿದವರೂ ಇದ್ದಾರೆ. ಆದರೆ ಹೆಗಡೆಯವರದ್ದು ಗಟ್ಟಿ ಧ್ಯೇಯ. ಸುಂದರ ಪ್ರಕೃತಿ ಮಡಿಲಲ್ಲಿ ಬೆಳೆದವರು ಉತ್ತಮವಾದ ಕಾರ್ಯ ಮಾಡಿ ಸಮಾಜಕ್ಕೆ ಒಳಿತನ್ನು ಮಾಡಿ, ಉತ್ತಮ ಆರೋಗ್ಯವನ್ನು ಎಲ್ಲರಿಗೂ ನೀಡಬೇಕು ಎಂಬ ಉದ್ಧೇಶದಿಂದ ಆರಂಭವಾದದ್ದೇ ನಿಸರ್ಗ ಮನೆ ವೇದ ವೆಲ್‌ನೆಸ್ ಸೆಂಟರ್. ವೆಂಕಟರಮಣ ಹೆಗಡೆಯವರು ಇಂದಿಗೆ ಎಲ್ಲ ವಾಹಿನಿಗಳ, ಪತ್ರಿಕೆಯ ಬೇಡಿಕೆಯ ವೈದ್ಯ. ದೇಶ ವಿದೇಶಗಳಲ್ಲಿಯೂ ಇವರ ವೈದ್ಯಕೀಯ ಸೇವೆ ಇದೆ. ಇವರು ಉಚಿತವಾಗಿ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಉಚಿತ ಆರೋಗ್ಯ ಮಾರ್ಗದರ್ಶನ ಸೇವೆಯನ್ನೂ ನೀಡುತ್ತಿದ್ದಾರೆ. ಸ್ಟಾರ್ ನಟರಿದ್ದಂತೆ ಇವರೂ ಸ್ಟಾರ್ ವೈದ್ಯರು.

ಬರಹದ ಮೂಲಕವೂ ಚಿಕಿತ್ಸೆ
ವಿಜಯವಾಣಿಯ ಧನ್ವಂತರಿ ಅಂಕಣ, ಉದಯ ಟಿವಿಯ ನಾಟಿವೈದ್ಯ, ಸುವರ್ಣ ವಾಹಿನಿಯ ಆಹಾ ಆರೋಗ್ಯ ಮತ್ತು ಪ್ರಜಾ ಟಿವಿಯ ಆಹಾರದಲ್ಲಿ ಆರೋಗ್ಯ ಕಾರ್ಯಕ್ರಮದ ಮೂಲಕ ಲಕ್ಷಾಂತರ ಜನರಿಗೆ ಮನೆಯಲ್ಲಿಯೇ ರೋಗ ನಿರ್ಮೂಲನೆ ಮಾಡಿಕೊಳ್ಳಲು ನೆರವಾಗಿದ್ದಾರೆ ತಜ್ಞ ವೈದ್ಯ ಡಾ. ವೆಂಕಟರಮಣ ಹೆಗಡೆ. ಅಲ್ಲದೇ, ಆರೋಗ್ಯ ಕಾಳಜಿಯ ಏಳು ಪುಸ್ತಕಗಳು, ಎರಡು ಸಾವಿರಕ್ಕೂ ಅಧಿಕ ಲೇಖನಗಳನ್ನು ಕರ್ನಾಟಕದ ಪ್ರಮುಖ ಪತ್ರಿಕೆಗಳಿಗೆ ಬರೆದು, ಆರೋಗ್ಯ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಕೃತಿ ಔಷಧ ಮತ್ತು ಪೌಷ್ಠಿಕ ಆಹಾರದ ಮೂಲಕ ಕಷ್ಟಕರವಾದ, ಕಡಿಮೆ ಮಾಡಲು ಅಸಾಧ್ಯವಾದ ರೋಗಗಳನ್ನು ಗುಣಪಡಿಸುತ್ತ, ನಿಸರ್ಗಮನೆ ಆಸ್ಪತ್ರೆಯನ್ನು ಸಮರ್ಥವಾಗಿ ಮುನ್ನೆಡೆಸುತ್ತಿದ್ದಾರೆ.
ವಿಧ ವಿಧವಾದ ಚಿಕಿತ್ಸೆ
ಆಯುರ್ವೇದದ ಪಂಚಕರ್ಮ ಚಿಕಿತ್ಸೆ
ನಿಸರ್ಗ ಚಿಕಿತ್ಸೆಗಳು, ಔಷಧಿಗಳು ಇಲ್ಲಿ ಲಭ್ಯ.
ಇಲ್ಲಿ ಎಲ್ಲದಕ್ಕೂ ತಜ್ಞ ವೈದ್ಯರ ತಂಡವೇ ಲಭ್ಯವಿದೆ.
ಸುಂದರ ವಸುಂಧರೆಯ ಮಡಿಲಿನಲ್ಲಿ ಆರೋಗ್ಯವೆಂಬುದು ಮಗುವಾಗಿ ನಗುವರಳಿಸಲಿ ಎಂಬ ಆಶಯದೊಂದಿಗೆ ಸ್ವಸ್ಥ ಸಮಾಜದ ನಿರ್ಮಾಣದ ಕನಸಿನೊಂದಿಗೆ, ನಿಸರ್ಗದತ್ತ ಚಿಕಿತ್ಸೆ ನೀಡುವ ಪರಮೋದ್ದೇಶದಿಂದ ನಿಸರ್ಗಮನೆಯಲ್ಲಿ ಸುಸಜ್ಜಿತವಾದ ಆರೋಗ್ಯ ಕೇಂದ್ರ ಸಿದ್ಧವಾಗಿದೆ.
ಪರಂಪರೆಯ ಚಿಕಿತ್ಸೆ
ವೇದ ಕಾಲದಿಂದಲೂ ನಮ್ಮ ಭಾರತೀಯ ಚಿಕಿತ್ಸಾ ಪದ್ಧತಿಯು ರೋಗಗಳಿಗೆ ಪರಿಹಾರ ಕಲ್ಪಿಸುವಲ್ಲಿ ಒಂದು ಹೆಜ್ಜೆ ಮುಂದೆಯೇ ಇದೆ. ಅದರಲ್ಲಿಯೂ ಇಂದಿನ ದಿನಗಳಲ್ಲಿ ಹೆಚ್ಚೆಚ್ಚು ಕಾಡುತ್ತಿರುವ ಈ ಆಟೋ ಇಮ್ಯೂನ್ ಖಾಯಿಲೆಗಳ ನಿರ್ವಹಣೆ ಮಾಡುವುದು ಹಾಗೂ ಅದನ್ನು ಗುಣಪಡಿಸಲು ಅನೇಕಾನೇಕ ಪರಿಣಾಮಕಾರಿ ಜ್ಞಾನ, ತಂತ್ರಜ್ಞಾನ ಚಿಕಿತ್ಸೆಗಳು ನಿಸರ್ಗ ಮನೆಯ ವೇದ ವೆಲ್‌ನೆಸ್ ಸೆಂಟರ್‌ನಲ್ಲಿ ಲಭ್ಯವಿದೆ.
ಭರತ ಸಂಸ್ಕೃತಿಯ ವೇದಕಾಲದ ಪ್ರಕೃತಿ ಚಿಕಿತ್ಸಾ ಪದ್ಧತಿ ಹಾಗೂ ಆಯುರ್ವೇದ ಪಂಚಕರ್ಮ ಚಿಕಿತ್ಸೆಯನ್ನು ಅಳವಡಿಸಿಕೊಂಡಿರುವುದು ವೈಶಿಷ್ಟ್ಯ. ತಜ್ಞ ವೈದ್ಯರಾದ ಡಾ. ವೆಂಕಟರಮಣ ಹೆಗಡೆ, ಈ ನಿಟ್ಟಿನಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಆಹಾರದ ಮೂಲಕವೇ ಆರೋಗ್ಯ ಪಡೆಯುವ ವಿಷಯದಲ್ಲಿ ಪರಿಣಿತಿ ಹೊಂದಿರುವ ಡಾ. ಪ್ರವೀಣ್ ಜೇಕಬ್, ಹಾಗೂ ಆಯುರ್ವೇದ ಚಿಕಿತ್ಸೆಗಳಲ್ಲಿ ಅನುಭವಿಗಳಾದ ಡಾ. ವೆಂಕಟೇಶ್ ಗಾಂವ್ಕರ್ ಅವರ ಅಪಾರ ಅನುಭವವನ್ನು ಬಳಸಿಕೊಂಡು ರೋಗ ನಿರ್ವಹಣೆ ಮಾಡುವ ಸಂಕಲ್ಪ ತೊಟ್ಟಿದ್ದಾರೆ.

ಮನರಂಜನೆಯ ಚಿಕಿತ್ಸೆ
ಇಡೀ ದಿನ ಒಂದಿಲ್ಲೊಂದು ಚಿಕಿತ್ಸೆ ಪಡೆದವರು ದೇಹದ ಆರೋಗ್ಯದ ಜತೆಗೆ ಮನಸ್ಸಿನ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಇಲ್ಲಿ ಮನರಂಜನೆ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ. ಪ್ರತಿದಿನ ರಾತ್ರಿ ಒಂಬತ್ತರಿಂದ ಹತ್ತು ಗಂಟೆಯವರೆಗೆ ಮನರಂಜನೆ ಕಾರ್ಯಕ್ರಮವನ್ನು ನಿಸರ್ಗಮನೆ ಆಯೋಜಿಸುತ್ತದೆ. ಸಂಗೀತ, ಯಕ್ಷಗಾನ, ಹಾಸ್ಯ, ಜಾದೂ ಹೀಗೆ ಹತ್ತಾರು ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ. ಇದು ನಿಸರ್ಗಮನೆಯ ಹೊಸ ಪರಿಕಲ್ಪನೆ. ರಾಜ್ಯದಲ್ಲೆಲ್ಲೂ ಈ ಬಗೆಯ ಪರಿಕಲ್ಪನೆ ಇಲ್ಲ ಎನ್ನಬಹುದು. ಈ ಪರಿಕಲ್ಪನೆಯಿಂದಾಗಿ ಇಲ್ಲಿ ಬಂದವರಿಗೆ ನಾವು ಚಿಕಿತ್ಸೆಗೆ ಬಂದಿದ್ದೇವೆ ಎನ್ನುವ ಭಾವನೆಯೂ ಇರದು. ಯಾಕೆಂದರೆ ಎಲ್ಲ ರೀತಿಯ ಆಹ್ಲಾದಕರ ವಾತಾವರಣ ಇಲ್ಲಿದೆ.
ಪ್ರಸಿದ್ಧ ಕಲಾವಿದರು, ಚಿತ್ರ ತಾರೆಯರು, ಮಠಾಧೀಶರು, ಸಚಿವರು, ಶಾಸಕರು, ಅಧಿಕಾರಿಗಳು, ಉದ್ಯಮಿಗಳು ಮತ್ತು ಜನ ಸಾಮಾನ್ಯರು ತಮ್ಮ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ನಿಸರ್ಗಮನೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಯೋಗ ಚಿಕಿತ್ಸೆ
ನಿಸರ್ಗ ಮನೆಯಲ್ಲಿ ಯೋಗ ಚಿಕಿತ್ಸೆಯೂ ಇದೆ. ಯೋಗದಿಂದಲೂ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಅಂತಾರಾಷ್ಟ್ರೀಯ ಖ್ಯಾತಿಯ ಮತ್ತು ಮೂರು ಬಾರಿ ರಾಷ್ಟ್ರೀಯ ಯೋಗ ಚಾಂಪಿಯನ್ ಆಗಿ ಹೊರ ಹೊಮ್ಮಿರುವ, ಡಾ. ಅನನ್ಯ ಪ್ರತಿ ದಿನ ಒಂದು ಗಂಟೆ ಯೋಗ ತರಬೇತಿಯನ್ನು ನೀಡುತ್ತಾರೆ. ನಿಸರ್ಗ ಮನೆಯ ಪ್ರತಿ ರೋಗಿಗಳೂ ಯೋಗದಲ್ಲಿ ಪಾಲ್ಗೊಳ್ಳುತ್ತಾರೆ. ದೇಹವನ್ನು ದಂಡಿಸಿ ಖಾಯಿಲೆಗಳಿಂದ ಗುಣಮುಖರಾಗುತ್ತಾ, ಮನಸ್ಸನ್ನು ಹಗುರಾಗಿಸಿಕೊಳ್ಳುತ್ತಿದ್ದಾರೆ. ಕೋಣೆಯಿಂದ ಎದ್ದು ಹೊರಬರಲಾಗದ ರೋಗಿಗಳಿಗೆ ಅವರಿರುವ ಜಾಗಕ್ಕೇ ಹೋಗಿ ಯೋಗವನ್ನು ಕಲಿಸಿಕೊಡಲಾಗುತ್ತದೆ. ನಿಸರ್ಗ ಮನೆಯಲ್ಲಿ ವ್ಯಾವಹಾರಿಕತೆ ಇಲ್ಲ. ಅಲ್ಲಿರುವುದು ಪ್ರಾಮಾಣಿಕವಾದ ಆರೋಗ್ಯ ಸೇವೆ. ಅಲ್ಲಿರುವ ವೈದ್ಯರದ್ದೂ ಜನಾರ್ಧನ ಸೇವೆ. ರೋಗಿಗಳ ಸೇವೆಯನ್ನೇ ಧ್ಯೇಯವಾಗಿಸಿಕೊಂಡಿರುವ ನಿಸರ್ಗ ಮನೆ ಇಂದು ನಾಡಿನ ಮನೆ ಮಾತಾಗಿದೆ. ಡಾ. ವೆಂಕಟರಮಣ ಹೆಗಡೆಯವರೂ ಮನೆ ಮಗನಾಗಿದ್ದಾರೆ.
ಆರೋಗ್ಯ ಜಾಗೃತಿ
ಡಾ. ವೆಂಕಟರಮಣ ಹೆಗಡೆ ಮತ್ತು ಅವರ ತಂಡದ ವೈದ್ಯರು ಬಹಳ ನಿಸ್ವಾರ್ಥದಿಂದ ವಾರದಲ್ಲಿ ಎರಡು ದಿನ ರಾಜ್ಯದಾದ್ಯಂತ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸಾಮಾನ್ಯವಾಗಿ ಎಲ್ಲ ರೋಗಿಗಳೂ ವೈದ್ಯರಿದ್ದ ಜಾಗಕ್ಕೆ ಹೋಗಿ ಸಾವಿರಾರು ರುಪಾಯಿ ಶುಲ್ಕ ಭರಿಸಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಹೆಗಡೆ ಅವರ ತಂಡ ಆಯಾ ಜಿಲ್ಲೆಗಳ ಪ್ರಮುಖ ಸ್ಥಳಗಳಿಗೆ ಹೋಗಿ ಶಿಬಿರಗಳನ್ನು ಆಯೋಜಿಸುತ್ತಿದೆ. ರೋಗ ಬರುವ ಮುಂಚೆಯೇ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿಕೊಡುತ್ತಾರೆ ಇವರ ತಂಡವು ಒಂದು ವಾರ ಶಿವಮೊಗ್ಗದಲ್ಲಿದ್ದರೆ ಮತ್ತೊಂದು ವಾರ ರಾಯಚೂರಿನಲ್ಲಿರುತ್ತದೆ. ಗ್ರಾಮ, ಕುಗ್ರಾಮಗಳಿಗೂ ಭೇಟಿಕೊಟ್ಟು ಅಲ್ಲಿನ ಬಡ ಜನರಿಗೆ ಆರೋಗ್ಯ ಮಾಹಿತಿಯನ್ನು ಒದಗಿಸುತ್ತಾ ಅರಿವು ಮೂಡಿಸುತ್ತಿದ್ದಾರೆ. ಈ ರೀತಿ ವೆಂಕಟರಮಣ ಹೆಗಡೆ ಅವರು ಸದ್ದಿಲ್ಲದೆ, ಸುದ್ದಿಯನ್ನೂ ಕೊಡದೆ ಹತ್ತು ಹಲವು ಸೇವೆಗಳನ್ನು ನೀಡುತ್ತಿದ್ದಾರೆ. ಕಳೆದ ಎರಡೂವರೆ ದಶಕಗಳಿಂದ ಅವರು ಜನರಿಗಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ ಎಂದರೆ ಖಂಡಿತ ಅತಿಶಯೋಕ್ತಿ ಆಗಲಾರದು.
ಆನ್ ಲೈನ್ ಉಚಿತ ಸಂದರ್ಶನ
ಕೋವಿಡ್ ನಂತರದ ದಿನಗಳಲ್ಲಿ ಡಾ. ವೆಂಕಟರಮಣ ಹೆಗಡೆ ಮತ್ತು ಹತ್ತು ಜನ ವೈದ್ಯರು ದೂರವಾಣಿ ಕರೆಯ ಮೂಲಕವೇ ಲಕ್ಷಾಂತರ ರೋಗಿಗಳಿಗೆ ಆರೋಗ್ಯ ಸೇವೆ ನೀಡುತ್ತಿದ್ದಾರೆ. ನುರಿತ ಸಿಬ್ಬಂದಿಗಳು ಈ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ರೋಗಿಗಳ ಕರೆಯನ್ನು ಸ್ವೀಕರಿಸುತ್ತಾರೆ. 7406853563 ಈ ನಂಬರಿಗೆ ರೋಗಿಗಳು ಒಂದು ಮಿಸ್ಡ್ ಕಾಲ್ ಕೊಟ್ಟರೆ ಸಾಕು ಸಿಬ್ಬಂದಿಗಳು ಮತ್ತೆ ಕರೆಮಾಡಿ ಸಂದರ್ಶನದ ದಿನವನ್ನು ಹೇಳುತ್ತಾರೆ. ನಂತರ ವೈದ್ಯರಾದ ಡಾ. ವೆಂಕಟರಮಣ ಮತ್ತು ಇನ್ನಿತರ ಅನುಭವಿ ವೈದ್ಯರು ರೋಗಿಗಳ ಸಮಸ್ಯೆಗಳನ್ನು ಕೂಲಕಂಷವಾಗಿ ಕೇಳಿಕೊಂಡು ಪರಿಹಾರ ನೀಡುತ್ತಾರೆ. ಆಹಾರ ಪಟ್ಟಿ ಮತ್ತು ಮನೆಮದ್ದಿನ ಮೂಲಕ ರೋಗವನ್ನು ಗುಣಪಡಿಸುವ ಬಗೆಯನ್ನು ಹೇಳಿಕೊಡುತ್ತಾರೆ. ರೋಗಿಗಳ ಸಮಸ್ಯೆಯನ್ನು ಅರಿತುಕೊಂಡು ಅವರ ಮನೆಯ ವಿಳಾಸಕ್ಕೆ ಕೊರಿಯರ್ ಮೂಲಕ ಔಷಧವನ್ನು ಕಳುಹಿಸಿಕೊಡುತ್ತಾರೆ. ವೈದ್ಯರ ಸಂದರ್ಶನಕ್ಕೆ ಯಾವುದೇ ವೆಚ್ಚವನ್ನು ಭರಿಸಬೇಕಿಲ್ಲ. ಔಷಧಕ್ಕೆ ಮಾತ್ರ ಹಣವನ್ನು ಪಾವತಿಸಬೇಕಾಗುತ್ತದೆ. ನಿಸರ್ಗ ಮನೆಯ ಹೊರತಾಗಿ ಮತ್ಯಾರೂ ಈ ರೀತಿಯ ಸೇವೆಯನ್ನು ನೀಡುತ್ತಿಲ್ಲ. ಸಾಮಾಜಿಕ ಜಾಲತಾಣದ ಮೂಲಕವೂ ನಿಸರ್ಗ ಮನೆಯ ವೈದ್ಯರು ಆರೋಗ್ಯ ಜಾಗೃತಿ ಮೂಡಿಸುತ್ತಿದ್ದಾರೆ. ಯೂಟ್ಯೂಬ್ ನಲ್ಲಿ ನಿಸರ್ಗ ಮನೆ ಬರೋಬ್ಬರಿ ಏಳು ಲಕ್ಷ ಹಿಂಬಾಲಕರನ್ನು ಹೊಂದಿದೆ. ಸೇವೆಯಿಂದಲೇ ನಿಸರ್ಗ ಮನೆ ಈ ಜನಪ್ರಿಯತೆಯನ್ನು ಗಳಿಸಲು ಸಾಧ್ಯವಾಗಿದೆ.

ಏನೇನಿದೆ?
ವೇದ ವೆಲ್‌ನೆಸ್ ಸೆಂಟರ್ ನಲ್ಲಿ ಅಕ್ಯೂಪಂಚರ್, ಅಕ್ಯೂ ಪ್ರೇಷರ್ ಮಣ್ಣಿನ ಚಿಕಿತ್ಸೆ, ಮಸಾಜ್ ಚಿಕಿತ್ಸೆ, ಹಿಪ್ ಬಾತ್, ಸೌನಾಬಾತ್, ಸ್ಟೀಮ್ ಬಾತ್, ಸೈನಲ್ ಬಾತ್, ಫಿಸಿಯೊಥೆರಪಿ, ಆಹಾರ ಚಿಕಿತ್ಸೆ, ರಿಪ್ಲೆಕಾಲೊಜಿ, ಯೋಗ ಚಿಕಿತ್ಸೆ, ವೈಟ್ರೋ ಮಸಾಜ್, ಅಂಡರ್ ವಾಟರ್ ಮಸಾಜ್ ಮುಂತಾದ ಪ್ರಕೃತಿ ಚಿಕಿತ್ಸೆಗಳು ಇಲ್ಲಿಯ ಪರಿಶುದ್ಧವಾದ ಪ್ರಕೃತಿ ನಿರ್ಮಿತ ವಾತಾವರಣದಲ್ಲಿ ದೊರೆಯುತ್ತಿದೆ.
ಕಡೆಮೆಯಾಗಲಾರದ ಸೋರಿಯಾಸಿಸ್ ಅನ್ನೂ ಇಲ್ಲಿ ಕಡಿಮೆ ಮಾಡಿದ ಉದಾಹರಣೆಯಿದೆ. ತಲೆನೋವು. ಅರೆತಲೆಶೂಲೆ, ನಿದ್ರಾಹೀನತೆ, ಖಿನ್ನತೆ, ಮಾನಸಿಕ ಒತ್ತಡ, ಅಲರ್ಜಿ, ನೆಗಡಿ, ಸೈನಸೈಟಿಸ್, ಪಾರ್ಶ್ವವಾಯು, ಚರ್ಮ ರೋಗಗಳು, ಅಧಿಕ ರಕ್ತದೊತ್ತಡ, ಕುತ್ತಿಗೆ ನೋವು, ಸಂದು ನೋವು, ಸೊಂಟನೋವು, ನರಗಳ ದೌರ್ಬಲ್ಯ, ದಮ್ಮು, ಅಜೀರ್ಣ, ಮಲಬದ್ಧತೆ, ಹೈಪರ್ ಅಸಿಡಿಟಿ, ಹೊಟ್ಟೆಹುಣ್ಣು, ಕ್ರಿಮಿಬಾಧೆ, ಮೂಲವ್ಯಾಧಿ, ಆಮಶಂಕೆ, ಮಧುಮೇಹ, ಮುಟ್ಟಿನ ತೊಂದರೆಗಳು, ರಕ್ತಹೀನತೆ ಇತ್ಯಾದಿಗಳನ್ನು ನಿರ್ವಹಿಸುವ ಚಿಕಿತ್ಸೆಗಳು ಹಾಗೂ ಪ್ರಮುಖವಾಗಿ ಆಟಿಸಮ್, ಪಿಸಿಓಡಿ, ಐಬಿಸ್, ಅಮವಾತ, ಫ್ಯಾಟಿಲಿವರ್, ಮೂರ್ಛೆ ರೋಗ, ವೆರಿಕೋಸ್ ವೇನ್ಸ್ ಅಲ್ಪರೇಟಿವ್ ಕೊಲೈಟಿಸ್ ಗಳಿಗೂ ನಿಸರ್ಗ ಮನೆಯ ವೇದ ವೆಲ್‌ನೆಸ್ ಸೆಂಟರ್‌ನಲ್ಲಿ ಪರಿಹಾರವಿದೆ. ಇದರ ಸಂಪೂರ್ಣ ಪ್ರಯೋಜನವನ್ನು ಪೆಡೆದು ಸ್ವಾಸ್ಥ್ಯದಿಂದ ಬದುಕುವ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಬಹುದು.
ಬೆಳಗ್ಗೆ 6 ಗಂಟೆಗೆ ಕಣ್ಣಿಗೆ ತಂಪು ಪಟ್ಟಿ ಹಾಗೂ ಹೊಟ್ಟೆಗೆ ಮಣ್ಣಿನ ಪ್ಯಾಕ್‌ನೊಂದಿಗೆ ದಿನ ಆರಂಭವಾದರೆ ಜ್ಯೂಸ್ ನ್ಯಾಚುರಲ್ ಬ್ರೇಕ್ ಫಾಸ್ಟ್, ಇಡೀ ದಿನ ಚಿಕಿತ್ಸೆ, ನಂತರ ಯೋಗ ತರಬೇತಿ ನಡೆಯುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವಂತೆ ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ, ಅದ್ಯಾತ್ಮಿಕವಾಗಿ ಸಾಮಾಜಿಕವಾಗಿ ಆರೋಗ್ಯವನ್ನು ನಿಸರ್ಗ ಮನೆ ಆರೋಗ್ಯ ಕೇಂದ್ರ ನೀಡುತ್ತಿದೆ.
ನಮ್ಮ ಆರೋಗ್ಯಕ್ಕೆ ಭದ್ರ ಅಡಿಪಾಯವನ್ನು ನಿಸರ್ಗಮನೆ ಕೇಂದ್ರ ನೀಡಲಿದ್ದು, ಈ ಮೂಲಕ ನಮ್ಮ ಸುಂದರ ಆರೋಗ್ಯವರ್ಧಕ ಜೀವನದ ಅರಮನೆಯನ್ನು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ.

ಇನ್ನು ಅನೇಕ ವರ್ಷಗಳಿಂದ ಪ್ರಕೃತಿ ಚಿಕಿತ್ಸೆ, ಆಯುರ್ವೇದ, ಭಾರತೀಯ ಚಿಕಿತ್ಸೆ, ಆಯುಷ್ ಪದ್ದತಿಯ ಮೂಲಕ ಅಂಕ್ಯುಪಂಕ್ಚರ್, ಬಣ್ಣದ ಚಿಕಿತ್ಸೆ, ಬೆಳಕಿನ ಚಿಕಿತ್ಸೆ, ಉಗಿ ಚಿಕಿತ್ಸೆ, ಆಯಸ್ಕಾಂತದ ಚಿಕಿತ್ಸೆ, ಮಣ್ಣಿನ ಚಿಕಿತ್ಸೆ, ಆಹಾರದ ಚಿಕಿತ್ಸೆ, ಓಝೋನ್ ಚಿಕಿತ್ಸೆ, ನೀರಿನ ಚಿಕಿತ್ಸೆ ಹೀಗೆ ಲಕ್ಷಾಂತರ ಜನರಿಗೆ ಉತ್ತಮವಾದ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಒಟ್ಟು 25 ರೀತಿಯ ಚಿಕಿತ್ಸೆಗಳು ಇಲ್ಲಿದೆ. ಸುಮಾರು 15 ವೈದ್ಯರ ತಂಡ ಮತ್ತು 70 ಜನ ಚಿಕಿತ್ಸಕರ ತಂಡವು ನಿಸರ್ಗ ಮನೆಯಲ್ಲಿದ್ದು, ಹತ್ತು ದಿನಗಳ ಕಾಲ ಊಟ, ವಸತಿ, ಔಷಧ ಎಲ್ಲವನ್ನೂ ಒದಗಿಸಲಾಗುತ್ತದೆ. ಇಲ್ಲಿಗೆ ಬಂದು ಆರೋಗ್ಯ ವೃದ್ಧಿಸಿಕೊಂಡು ಹೋದವರೆಲ್ಲ ರೋಗಿಗಳಲ್ಲದೆ ಸಾಧಕರಾಗಿದ್ದಾರೆ. ಅವರ ಆರೋಗ್ಯ ಸರಿಪಡಿಸಿಕೊಳ್ಳಲು ಸಾಧನೆ ಮಾಡಿ ಗುಣಮುಖರಾಗಿದ್ದಾರೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶದ ಜನರೂ ನಿಸರ್ಗ ಮನೆ ಕೇಂದ್ರಕ್ಕೆ ಬರುತ್ತಾರೆ. ತಮ್ಮ ಪ್ರಾಮಾಣಿಕ ಆರೋಗ್ಯ ಸೇವೆಯಿಂದಲೇ ಡಾ. ವೆಂಕಟರಮಣ ಹೆಗಡೆ ಅವರು ಆರೋಗ್ಯ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡುತ್ತಿದ್ದಾರೆ. ನಿಸರ್ಗ ಮನೆ ಕೇವಲ ಉತ್ತರ ಕನ್ನಡಕ್ಕೆ ಸೀಮಿತವಾಗದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಛಾಪು ಮೂಡಿಸಿದೆ.
ನಮ್ಮ ದೇಶ ಆರ್ಥಿಕವಾಗಿ ಸದೃಢವಾಗಿದೆ. ಆದರೆ ಆರೋಗ್ಯದ ವಿಷಯದಲ್ಲಿ ದುರ್ಬಲವಾಗಿದೆ. ನಮ್ಮ ಅರ್ಧ ವರಮಾನ ಆಸ್ಪತ್ರೆಯ ಬಿಲ್ ತುಂಬಲು ಖರ್ಚಾಗುತ್ತಿದೆ. ಬಿಪಿ, ಮಧುಮೇಹ, ಹೃದಯ ಸಮಸ್ಯೆ, ಬೊಜ್ಜು ಮತ್ತು ಇನ್ನಿತರ ಸಮಸ್ಯೆಗಳಿಂದ ನಮ್ಮ ಜನರು ಬಳಲುತ್ತಿದ್ದಾರೆ. ಎಲ್ಲ ಖಾಯಿಲೆಗಳಿಗೂ ಚಿಕಿತ್ಸೆಯಿದೆ. ಆದರೆ ಜೀವನ ಶೈಲಿಯ ಖಾಯಿಲೆಗೆ ಔಷಧಿ ಒಂದೇ ಸಾಲದು. ಆಹಾರ ಪದ್ಧತಿ ಬಹಳ ಮುಖ್ಯ. ನಾವು ನಿಸರ್ಗ ಮನೆಯಲ್ಲಿ ಎಲ್ಲ ಸಾಧಕರಿಗೆ(ರೋಗಿಗಳು) ಜೀವನ ಶೈಲಿಯ ಆರೋಗ್ಯವನ್ನು ಹೇಳಿಕೊಡುತ್ತೇವೆ. ಒಬ್ಬ ಸಾಧಕ ನಮ್ಮ ಮನೆಗೆ ಕಾಲಿಟ್ಟರೆ ಅವನು ಪರಿಪೂರ್ಣ ಆರೋಗ್ಯವನ್ನು ಗಳಿಸುವುದರೊಂದಿಗೆ ತನ್ನವರನ್ನೂ ಆರೋಗ್ಯವಂತರನ್ನಾಗಿಸುತ್ತಾನೆ. ನಮ್ಮಲ್ಲಿಗೆ ಬಂದವರು ಎಲ್ಲ ರೋಗಗಳಿಂದಲೂ ಮುಕ್ತರಾಗಿದ್ದಾರೆ. ಕೈಗೆಟುಕುವ ಬೆಲೆಯಲ್ಲಿ ಮತ್ತು ಆನ್ ಲೈನ್ ಮೂಲಕ ಉಚಿತ ಆರೋಗ್ಯ ಸೇವೆಯನ್ನು ನೀಡುತ್ತಾ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ನಾವು ಸಂಪೂರ್ಣವಾಗಿ ಯಶಸ್ವಿಯಾಗಿದ್ದೇವೆ.
- ಡಾ. ವೆಂಕಟರಮಣ ಹೆಗಡೆ
-ತಜ್ಞ ವೈದ್ಯರು, ನಿಸರ್ಗ ಮನೆ ವೇದ ವೆಲ್ ನೆಸ್ ಸೆಂಟರ್
ನಿಸರ್ಗಮನೆ ಅಂದರೆ ಕೇವಲ ಆರೋಗ್ಯ ಭಾಗ್ಯ ನೀಡುವ ನೆಲೆಯಲ್ಲ. ಬದಲಿಗೆ ಇಲ್ಲಿನ ಚಿಕಿತ್ಸೆ ಜತೆ ಸಿಬ್ಬಂದಿಗಳ, ಚಿಕಿತ್ಸಕರ, ವೈದ್ಯರ, ಮುಖ್ಯಸ್ಥರಾದ ಡಾ. ವೆಂಕಟರಮಣ ಹೆಗಡೆ ಅವರ ಸೇವೆ ಇದೆಯಲ್ಲ, ಅದು ತವರು ಮನೆಯ ಫೀಲಿಂಗ್ ನೀಡುತ್ತದೆ. ಹತ್ತು ದಿನಗಳ ಚಿಕಿತ್ಸೆ ಮುಗಿಸಿ ವಾಪಸ್ ಊರಿಗೆ ಹೊರಡುವಾಗ ದೇಹದ ನೋವು, ಸಂಕಷ್ಟ ಮಾಯವಾಗಿ ತವರು ಬಿಟ್ಟು ಹೊರಟ ಅನುಭವ, ನೋವು ಮನಸ್ಸಿಗೆ ಕಾಡುತ್ತದೆ.
ಆರತಿ ಎಸ್.
ಮಹಾರಾಷ್ಟ್ರ
ದಾರಿ ಹೇಗೆ?
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಗಣೇಶ ನಗರ ರಸ್ತೆಯಲ್ಲಿ ಸಾಗಿದರೆ, ಮುಂದೆಲ್ಲ ನಿಸರ್ಗ ಮನೆಗೆ ಹೋಗುವ ರೂಟ್ ಮಾರ್ಗದರ್ಶಿ ಫಲಕಗಳು ಕಾಣುತ್ತವೆ. ಶಿರಸಿಯಿಂದ ಕೇವಲ ಮೂರು ಕಿಮೀ ದೂರದಲ್ಲಿಯೇ ಇದು ಸಿಗಲಿದ್ದು, ಎಲ್ಲ ಆಟೋಗಳು ನಿಸರ್ಗ ವೇದ ವೆಲ್‌ನೆಸ್ ಸೆಂಟರ್ ಗೆ ಕರೆದುಕೊಂಡು ಹೋಗುತ್ತವೆ.
ಸಂಪರ್ಕ:
ನಿಸರ್ಗ ಮನೆ ವೇದ ವೆಲ್‌ನೆಸ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯಲು,
15 ದಿನ ಮೊದಲು ಸ್ಥಳ ಕಾಯ್ದಿರಿಸಲು ಕರೆ ಮಾಡಿ -9483978177
ಉಚಿತ ಆನ್ಲೈನ್ ಸಂದರ್ಶನಕ್ಕಾಗಿ ಮಿಸ್ಡ್ ಕಾಲ್ ನೀಡಿ -9448729434,
7406853563
ವೆಬ್‌ಸೈಟ್ : www.nisargamane.com
ಯೂಟ್ಯೂಬ್ : Nisarga Mane sirsi
ಫೇಸ್‌ಬುಕ್ : Nisarga Mane sirsi
ಇಮೇಲ್ : nisargamane6@gmail.com