ಜೆರುಸೆಲೆಂ: ಸುಸ್ಥಿರತೆ ಮತ್ತು ಕಡಲತೀರಗಳ ಸಂರಕ್ಷಣೆಯ ವಿಷಯದಲ್ಲಿ ಟೆಲ್ ಅವಿವ್(Tel Aviv) ಯಾಫೊದ ಕರಾವಳಿಯು ಮತ್ತೊಮ್ಮೆ 2025 ರ ಪ್ರತಿಷ್ಠಿತ ಬ್ಲೂ ಫ್ಲ್ಯಾಗ್ ಮಾನ್ಯತೆಯನ್ನು ಗಳಿಸಿದೆ. ಐಕಾನಿಕ್ ಗಾರ್ಡನ್ ಬೀಚ್‌ನಿಂದ ಹಿಡಿದು ಪ್ರಶಾಂತವಾದ ಅಲ್ಮಾ ಪ್ರದೇಶದವರೆಗಿನ ಎಲ್ಲಾ 13 ಕಡಲತೀರಗಳು ಪರಿಸರ ಗುಣಮಟ್ಟ, ಸುರಕ್ಷತೆ ಮತ್ತು ಪ್ರವೇಶ ಸಾಧ್ಯತೆಗಾಗಿ ಅತ್ಯುನ್ನತ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪೂರೈಸುತ್ತವೆ. ಈ ಮೂಲಕ ಇಸ್ರೇಲ್‌ ನಗರದ ಪ್ರವಾಸೋದ್ಯಮವನ್ನು ಉತ್ತೇಜಿಸಲಾಗುತ್ತದೆ. ಬೀಚ್‌ಗಳು ಪರಿಸರ ಸ್ನೇಹಿಯಾಗಿದ್ದರೆ ಈ ಮಾನ್ಯತೆ ಸಿಗುತ್ತದೆ ಎಂಬ ಮಾಹಿತಿಯಿದೆ.

ಫೌಂಡೇಷನ್‌ ಫಾರ್‌ ಎನ್‌ವಾರ್ನಮೆಂಟಲ್‌ ಎಜುಕೇಷನ್ (FEE) ಪ್ರತಿಷ್ಠಾನದಿಂದ ಪ್ರಶಸ್ತಿ ಪಡೆದ ಮತ್ತು ಇಕೋಓಷನ್ ಇಸ್ರೇಲ್‌ನಲ್ಲಿ ಜಾರಿಗೆ ತಂದಿರುವ ಬ್ಲೂ ಫ್ಲ್ಯಾಗ್ ಬೀಚ್‌ಗಳಿಗೆ ನೀಡುವ ಎನ್‌ವಾರ್ನಮೆಂಟಲ್‌ ಮಾನ್ಯತೆಯಾಗಿದೆ. ಸುಸ್ಥಿರ ಅಭಿವೃದ್ಧಿಗೂ ಇದು ಪೂರಕವಾಗಿದೆ. ಇನ್ನು ಟೆಲ್‌ ಅವಿವ್‌ನಲ್ಲಿರುವ ಬಹುತೇಕ ಕಡಲ ತೀರಗಳು ಪ್ರವಾಸಿಗರನ್ನು ಸದಾ ಸೆಳಯುತ್ತದೆ. ವಿಶ್ವದಾದ್ಯಂತ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.