Sunday, June 15, 2025
Sunday, June 15, 2025

ಮೂರು ಸೆಕೆಂಡುಗಳಲ್ಲಿ ಮೂರು ದೇಶ ನೋಡುವ ಅದೃಷ್ಟ!

ಮೂರು ಸೆಕೆಂಡುಗಳಲ್ಲಿ ಮೂರು ದೇಶವನ್ನು ನೋಡುವ ಅಪೂರ್ವ ಅವಕಾಶವನ್ನು ಯಾರೊಬ್ಬರೂ ಕಳೆದುಕೊಳ್ಳಲಾರರು. ಮೂರು ದೇಶ ಸುತ್ತಿ ಬರಲಿಕ್ಕೆ ಲಕ್ಷಾಂತರ ರುಪಾಯಿ ಹಣಬೇಕು. ಆದರೆ ಕೂತಲ್ಲೇ ಮೂರು ದೇಶ ನೋಡಬಹುದು ಎಂದರೆ ನೀವು ನಂಬುತ್ತೀರಾ?

ಕೇವಲ 3 ಸೆಕೆಂಡುಗಳಲ್ಲಿ 3 ದೇಶಗಳನ್ನು ನೋಡುವ ಅವಕಾಶವನ್ನು ಯಾರಾದರೂ ಮಿಸ್‌ ಮಾಡ್ಕೊತಾರ? ನಿಮಗೆ ಆಶ್ಚರ್ಯ ಅನ್ನಿಸಬಹುದು. ಯಾವುದೇ ಸಿನಿಮಾ ಕಥೆ ಅಂಥಲೂ ನೀವು ಅಂದುಕೊಳ್ಳಬಹುದು. ಆದರೆ 3 ಸೆಕೆಂಡುಗಳಲ್ಲಿ ಮೂರು ದೇಶವನ್ನು ಪ್ರಯಾಣಿಸುವ ವಿಷಯವಂತೂ ಬರೀ ಸತ್ಯವಲ್ಲ. ಪರಮ ಸತ್ಯ. ಅತ್ಯಂತ ಕಡಿಮೆ ವೆಚ್ಚದಲ್ಲಿ ನೀವು ಪ್ರವಾಸ ಮಾಡಬಹುದು. ಅದೊಂದೇ ಜಾಗದಲ್ಲಿ ಕುಳಿತು ಮೂರು ದೇಶಗಳನ್ನು ಕಾಣಬಹುದು. ಅಲ್ಲಿ ಬೇರೆಲ್ಲಿಯೂ ಸಿಗದ ಅನುಭವ ನಿಮಗೆ ಸಿಗುತ್ತದೆ.

3 countries

ಪ್ರತಿಯೊಬ್ಬರಿಗೂ ಹತ್ತಾರು ದೇಶಗಳಿಗೆ ಹೋಗಬೇಕು. ಆಯಾ ದೇಶದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ. ವಿದೇಶ ಪ್ರವಾಸಕ್ಕೆ ವೀಸಾ, ಪಾಸ್‌ಪೋರ್ಟ್‌ ಮತ್ತು ಲಕ್ಷಗಟ್ಟಲೆ ಹಣಬೇಕು. ಅಷ್ಟೇ ಅಲ್ಲ ದೇಶಗಳ ಸುತ್ತಾಟವೆಂದರೆ ತುಂಬಾ ಸಮಯ ಕೂಡ ಹಿಡಿಯುತ್ತೆ. ಯಾಕೆಂದರೆ ಒಂದೊಂದು ದೇಶ ಒಂದೊಂದು ಕಡೆ ಇರುತ್ತೆ. ಒಂದು ದೇಶದಿಂದ ಮತ್ತೊಂದು ದೇಶವು ಸಾವಿರಾರು ಕಿಲೋ ಮೀಟರ್​​ನಷ್ಟು ದೂರದಲ್ಲಿರುತ್ತದೆ. ಆದರೆ ಇದೊಂದು ಸ್ಥಳದಲ್ಲಿ ಕೂತು ಕೇವಲ 3 ಸೆಕೆಂಡ್​​ನಲ್ಲಿ 3 ದೇಶಕ್ಕೆ ಪ್ರಯಾಣಿಸಬಹುದು.

3 cpountry

ನಾವು ಒಂದೇ ಸಮಯದಲ್ಲಿ ಮೂರು ವಿಭಿನ್ನ ದೇಶಗಳಲ್ಲಿ ಕೂತು ಮಾತನಾಡಬಹುದು ಎಂದರೆ ನೀವು ನಂಬುತ್ತೀರಾ? ನೀವು ಅಮೆರಿಕದಲ್ಲಿ ಕುಳಿತು ನಿಮ್ಮ ಗೆಳತಿಯೊಂದಿಗೆ ಹರಟಬಹುದು, ಅಟ್‌ ದಿ ಸೇಮ್‌ ಟೈಮ್ ಲಂಡನ್‌ನಲ್ಲಿ ಕುಳಿತು ಸ್ನೇಹಿತರೊಂದಿಗೆ ಚಾಟ್‌ ಮಾಡಬಹುದು ಮತ್ತು ಸಿಯೋಲ್‌ನಲ್ಲಿ ನಾಟಕದ ಸೆಟ್ ವೀಕ್ಷಿಸಬಹುದು. ಇದೆಲ್ಲವೂ ಅಸಾಧ್ಯ ಎಂದು ಸಹಜವಾಗಿ ಎಲ್ಲರಿಗೂ ಅನ್ನಿಸುತ್ತದೆ. ಆದರೆ ಈ ಸ್ಥಳ ಇದೆಲ್ಲವನ್ನು ಸಾಧ್ಯ ಎಂದು ತೋರಿಸುತ್ತದೆ.

ಒಂದು ಮಿರಾಕಲ್ ಜಾಗದ ಬಗ್ಗೆ ನಾವು ಹೇಳುತ್ತೇವೆ. ಅಲ್ಲಿ ನೀವು 3 ಸೆಕೆಂಡುಗಳಲ್ಲಿ 3 ದೇಶಗಳಿಗೆ ಪ್ರಯಾಣಿಸಬಹುದು ಅಥವಾ ಎಲ್ಲಾ ಸ್ಥಳಗಳಿಗೆ ಒಂದೇ ಸಮಯದಲ್ಲಿ ಭೇಟಿ ನೀಡಬಹುದು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊವೊಂದು ಸಖತ್‌ ವೈರಲ್‌ ಆಗುತ್ತಿದೆ. ಅದರಲ್ಲಿ ನೀವು ಮಧ್ಯ ಯುರೋಪಿನ ಒಂದು ಮೂಲೆಯಲ್ಲಿ ಕುರ್ಚಿ ಮೇಲೆ ಕುಳಿತ ತಕ್ಷಣ ಮೂರು ದೇಶಗಳನ್ನು ನೋಡಬಹುದು. ಈ ಟೇಬಲ್ ಅನ್ನು ತ್ರಿಕೋನಗಳ ಥೀಮ್ ನಲ್ಲಿ ನಿರ್ಮಿಸಲಾಗಿದ್ದು, ಅಂತರರಾಷ್ಟ್ರೀಯ ಕಲಾವಿದರೊಬ್ಬರು ವಿನ್ಯಾಸಗೊಳಿಸಿದ್ದಾರೆ. ಫೋಟೊದಲ್ಲಿ ಕಾಣುವಂತೆ ಈ ಟೇಬಲ್ ಅನ್ನು ಮೂರು ದೇಶಗಳಲ್ಲಿ ಆಸನಗಳನ್ನು ಹೊಂದಿರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ವಿಶೇಷವಾಗಿ ಗಡಿಯ ಸುತ್ತಲೂ, ಒಂದು ಬೇಲಿ ಇದೆ. ಅದಕ್ಕೆ ಒಂದು ದ್ವಾರವಿದ್ದು, ಇಲ್ಲಿ ಆಸ್ಟ್ರಿಯಾ, ಸ್ಲೋವಾಕಿಯಾ ಮತ್ತು ಹಂಗೇರಿಯ ಗಡಿಯನ್ನು ಕಾಣಬಹುದು. ಅದು ಮೇಜಿನಿಂದ ಸಂಪರ್ಕ ಹೊಂದಿದೆ. ಪ್ರಶಾಂತವಾದ ವಾತಾವರಣದ ಮಧ್ಯೆ ಮೇಜನ್ನು ವಿನ್ಯಾಸಗೊಳಿಸಲಾಗಿದೆ. ಸಾಮಾಜಿಕ ಜಾಲತಾಣದ ಬಳಕೆದಾರರು ಕಲಾವಿದನ ಚಮತ್ಕಾರಕ್ಕೆ ಉಘೇ ಎಂದಿದ್ದಾರೆ. ನೆಟ್ಟಿಗರು ಕೂಡ ಫಿದಾ ಆಗಿದ್ದು, ಆ ಜಾಗಕ್ಕೆ ಆದಷ್ಟು ಬೇಗ ಭೇಟಿಕೊಡಬೇಕೆಂದು ಬಯಸಿದ್ದಾರೆ. ಮೂರು ಸೆಕೆಂಡುಗಳಲ್ಲಿ ಮೂರು ದೇಶವನ್ನು ಕಾಣುವ ಅವಕಾಶವನ್ನು ಮಿಸ್‌ ಮಾಡಿಕೊಳ್ಳಬೇಡಿ. ನೀವು ಯುರೋಪ್‌ ಪ್ರವಾಸದಲ್ಲಿದ್ದರೆ ಅಥವಾ ಪ್ಲ್ಯಾನ್‌ ಮಾಡಿದ್ದರೆ ಆ ಜಾಗಕ್ಕೆ ತಪ್ಪದೇ ಹೋಗಿ.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!