ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ(India-Pakistan Tensions) ಬೆನ್ನಲ್ಲೇ ದೇಶದ ಪ್ರಮುಖ 32ವಿಮಾನ ನಿಲ್ದಾಣಗಳನ್ನು ಬಂದ್‌ (32 Airports)ಮಾಡಲಾಗಿತ್ತು. ಇದೀಗ ಉಭಯ ರಾಷ್ಟ್ರಗಳು ಮತ್ತೆ ಕದನ ವಿರಾಮದತ್ತ ಮುಖ ಮಾಡಿದ್ದು, ಶಾಂತಿ ಸುವ್ಯವಸ್ಥೆ ನಿಧಾನವಾಗಿ ಮರಳುತ್ತಿದೆ. ಹೀಗಾಗಿ ಕಾರ್ಯಾಚರಣೆ ಸ್ಥಗಿತಗೊಂಡಿದ್ದ 32ವಿಮಾನ ನಿಲ್ದಾಣಗಳನ್ನು ಮತ್ತೆ ತೆರೆಯಲಾಗಿದೆ. ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ನಾಗರಿಕ ವಿಮಾನಯಾನ ಪುನರಾರಂಭಗೊಂಡಿದೆ.

Airport

ವಿಮಾನ ಪ್ರಯಾಣಿಕರೇ ಗಮನಿಸಿ... 32 ವಿಮಾನ ನಿಲ್ದಾಣಗಳನ್ನು ನಾಗರಿಕ ವಿಮಾನ ಕಾರ್ಯಾಚರಣೆಗಳಿಗಾಗಿ ಮೇ 15, 2025 ರ 05:29 ಗಂಟೆಗಳವರೆಗೆ ತಾತ್ಕಾಲಿಕವಾಗಿ ಮುಚ್ಚಲು ಉಲ್ಲೇಖ ಸೂಚನೆ ನೀಡಲಾಗಿತ್ತು. ಈ ವಿಮಾನ ನಿಲ್ದಾಣಗಳು ಈಗ ತಕ್ಷಣದಿಂದ ಜಾರಿಗೆ ಬರುವಂತೆ ನಾಗರಿಕ ವಿಮಾನ ಕಾರ್ಯಾಚರಣೆಗಳಿಗೆ ಲಭ್ಯವಿದೆ ಎಂದು AAI ನೋಟಾಮ್‌ ಹೊರಡಿಸಿದೆ. ನೋಟಾಮ್ ಹೊರಡಿಸಿದ ನಂತರ, ಚಂಡೀಗಢ ವಿಮಾನ ನಿಲ್ದಾಣವು ಶಹೀದ್ ಭಗತ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ವಿಮಾನ ಸೇವೆಗಳು ಮೇ 12, 2025 ರಂದು ಬೆಳಿಗ್ಗೆ 10:30 ರಿಂದ ಪುನರಾರಂಭಗೊಂಡಿವೆ ಎಂದು ತಿಳಿಸಿದೆ.

ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಪ್ರದೇಶಗಳಲ್ಲಿ ಉಗ್ರರ ನೆಲೆಯನ್ನು ಗುರಿಯಾಗಿಸಿ ಸೇನೆ ಕೈಗೊಂಡ ಆಪರೇಷನ್‌ ಸಿಂದೂರ ಕೈಗೊಂಡ ನಂತರ ಗಡಿಯಲ್ಲಿ ಭಾರೀ ಉದ್ವಿಗ್ನತೆ ಹೆಚ್ಚಾಗಿತ್ತು. ಉಭಯ ದೇಶಗಳ ನಡುವೆ ದಾಳಿ ಪ್ರತಿದಾಳಿ ನಿರಂತರವಾಗಿ ನಡೆಯುತ್ತಲೇ ಇತ್ತು. ಇದೀಗ ಕೊಂಚ ಪರಿಸ್ಥಿತಿ ಸುಧಾರಿಸಿ ಶಾಂತಿ ನೆಲೆಸುವ ಲಕ್ಷಣ ದಟ್ಟವಾಗಿದೆ.