Friday, June 13, 2025
Friday, June 13, 2025

ಸೆಲೆಬಿ ಜೊತೆ ಒಪ್ಪಂದ ಕಡೆದುಕೊಂಡ ಅದಾನಿ ಸಂಸ್ಥೆ

ಭಾರತದ ಅದಾನಿ ಸಂಸ್ಥೆ, ಟರ್ಕಿಯ ಅವಿಯೇಷನ್ ಕಂಪನಿ ಸೆಲೆಬಿಗೆ ಕೇಂದ್ರ ಸರಕಾರದ ಭದ್ರತಾ ಅನುಮತಿ ರದ್ದುಗೊಳಿಸಿದ ನಂತರ ತನ್ನ ಒಪ್ಪಂದಗಳನ್ನು ಮುರಿದುಕೊಂಡಿದೆ.

ಮುಂಬೈ: ಟರ್ಕಿಯ ಅವಿಯೇಷನ್ ಕಂಪನಿ ಸೆಲೆಬಿಗೆ (Celebi) ಕೇಂದ್ರ ಸರಕಾರದ ಭದ್ರತಾ ಅನುಮತಿ (Security Clearance) ರದ್ದುಗೊಳಿಸಿದ ನಂತರ, ಅದಾನಿ ಗ್ರೂಪ್ನ (Adani Group) ನಿಯಂತ್ರಣದಲ್ಲಿರುವ ಮುಂಬೈ ಹಾಗೂ ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ Celebi ಜೊತೆಗಿನ ಗ್ರೌಂಡ್ ಹ್ಯಾಂಡ್ಲಿಂಗ್ ಒಪ್ಪಂದಗಳನ್ನು ರದ್ದುಗೊಳಿಸಿದೆ.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (CSMIA) ಮತ್ತು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (SVPIA)ಗಳಲ್ಲಿ Celebi ಕಂಪನಿ ಇದುವರೆಗೆ ಗ್ರೌಂಡ್ ಹ್ಯಾಂಡ್ಲಿಂಗ್ ಸೇವೆಗಳನ್ನು ನೀಡುತ್ತಿತ್ತು. ಈ ವಿಮಾನ ನಿಲ್ದಾಣಗಳನ್ನು ಈಗ ಅದಾನಿ ಏರ್ಪೋರ್ಟ್ ಸಂಸ್ಥೆ (Adani Airport Holdings Limited (AAHL)) ನಿರ್ವಹಿಸುತ್ತಿದೆ.

"ಭದ್ರತಾ ಅನುಮತಿ ರದ್ದಾದ ಹಿನ್ನೆಲೆಯಲ್ಲಿ, ನಾವು Celebi ಜೊತೆಗಿನ ಗ್ರೌಂಡ್ ಹ್ಯಾಂಡ್ಲಿಂಗ್ ಒಪ್ಪಂದಗಳನ್ನು ರದ್ದುಗೊಳಿಸಿದ್ದೇವೆ. ಈಗಲೇ ಗ್ರೌಂಡ್ ಹ್ಯಾಂಡ್ಲಿಂಗ್ ಮೂಲಸೌಕರ್ಯಗಳನ್ನು ನಮಗೆ ಹಸ್ತಾಂತರಿಸಲು Celebiಗೆ ಸೂಚನೆ ನೀಡಲಾಗಿದೆ, ಅದರ ಜೊತೆಗೆ ನಿರ್ವಹಣೆಯಲ್ಲಿ ಯಾವುದೇ ಅಡಚಣೆ ಆಗದಂತೆ ನೋಡಿಕೊಳ್ಳಲಾಗುತ್ತದೆ," ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

"ಇದರಿಂದ ವಿಮಾನ ನಿಲ್ದಾಣದ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ನಾವು ಹೊಸ ಗ್ರೌಂಡ್ ಹ್ಯಾಂಡ್ಲಿಂಗ್ ಏಜೆನ್ಸಿಗಳನ್ನು ಆಯ್ಕೆಮಾಡಿ, ಎಲ್ಲಾ ಏರ್‌ಲೈನ್ಗಳಿಗೆ ನಿರಂತರ ಹಾಗೂ ನಿಖರ ಸೇವೆ ನೀಡುವಲ್ಲಿ ಬದ್ಧರಾಗಿದ್ದೇವೆ. Celebi ಸಂಸ್ಥೆಯಲ್ಲಿ ಈಗಿರುವ ಎಲ್ಲಾ ಉದ್ಯೋಗಿಗಳನ್ನು ಹೊಸ ಏಜೆನ್ಸಿಗಳಲ್ಲಿ ಅವರ ಹಿಂದಿನ ಶರತ್ತುಗಳಂತೆಯೇ ವರ್ಗಾಯಿಸಲಾಗುತ್ತದೆ," ಎಂದು ಅವರು ಹೇಳಿದರು.

ವಿಮಾನ ನಿಲ್ದಾಣದ ನಿರ್ವಹಣೆ ಪಕ್ಕಾ ಭರವಸೆ ನೀಡಿದ್ದು, ಯಾವುದೇ ತೊಂದರೆಯಿಲ್ಲದೆ ಕಾರ್ಯಾಚರಣೆ ಮುಂದುವರಿಯಲಿದೆ ಎಂಬುದನ್ನು ದೃಢಪಡಿಸಿದೆ. "ದೇಶದ ಹಿತಾಸಕ್ತಿಯನ್ನು ಮತ್ತು ಉನ್ನತ ಮಟ್ಟದ ಸೇವಾ ಮಾನದಂಡಗಳನ್ನು ಕಾಪಾಡಲು ನಾವು ಸಂಪೂರ್ಣ ಬದ್ಧರಾಗಿದ್ದೇವೆ," ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!