ಪವಿತ್ರ ಅಮರನಾಥ ಯಾತ್ರೆಯು ಇದೇ ವರ್ಷ ಜುಲೈ ತಿಂಗಳ 3 ನೇ ತಾರೀಖಿನಂದು ಆರಂಭವಾಗಲಿದೆ. ಈ ಯಾತ್ರೆ ಕೈಗೊಳ್ಳಲು ಜಗತ್ತಿನ ನಾನಾ ಭಾಗಗಳಿಂದ ಭಕ್ತರು ಬರುತ್ತಾರೆ. ಅಮರನಾಥ ಗುಹೆಯಲ್ಲಿ ಕೆತ್ತಿದ ಶಿವಲಿಂಗವನ್ನು ಪೂಜಿಸಲಾಗುತ್ತದೆ. ವಿಶೇಷವೆಂದರೆ ಅಮರನಾಥ ಯಾತ್ರೆಯು ಜಮ್ಮು ಮತ್ತು ಕಾಶ್ಮೀರದ ಪವಿತ್ರ ಯಾತ್ರೆಯಾಗಿದೆ. ಜುಲೈ ತಿಂಗಳಲ್ಲಿ ಪ್ರಾರಂಭವಾಗುವ ಈ ಯಾತ್ರೆ ಆಗಸ್ಟ್ ತಿಂಗಳಿನಲ್ಲಿ ಮುಗಿಯುತ್ತದೆ. ಈ ಯಾತ್ರೆಗಾಗಿ ಭಕ್ತಾದಿಗಳು ಮೊದಲೇ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಪ್ರಕ್ರಿಯೆಯ ಕುರಿತಾದ ಮಾಹಿತಿ ಇಲ್ಲಿದೆ.

ನೋಂದಣಿ ಆರಂಭ
ಅಮರನಾಥ ಯಾತ್ರೆ 2025 ರ ನೋಂದಣಿ ಪ್ರಕ್ರಿಯೆಯು ಏಪ್ರಿಲ್ 14, 2025 ರಂದು ಪ್ರಾರಂಭವಾಗಿದೆ. ಯಾತ್ರೆಗೆ ಹೋಗ ಬಯಸುವ ಯಾತ್ರಾರ್ಥಿಗಳು ಅಧಿಕೃತ ಶ್ರೀ ಅಮರನಾಥಜಿ ಶ್ರೈನ್ ಬೋರ್ಡ್ (SASB) ವೆಬ್‌ಸೈಟ್ jksasb.nic.in ಅಥವಾ ಆಫ್‌ಲೈನ್ ಮೂಲಕ ದೇಶದಾದ್ಯಂತ 540 ಕ್ಕೂ ಹೆಚ್ಚು ಅಧಿಕೃತ ಬ್ಯಾಂಕ್ ಶಾಖೆಗಳಲ್ಲಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.

ಆನ್ಲೈನ್ ನೋಂದಣಿ ಹೇಗೆ?

  • ಮೊದಲು SASB jksasb.nic.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು "ಆನ್‌ಲೈನ್ ಸೇವೆಗಳು" ಕ್ಲಿಕ್ ಮಾಡಬೇಕು.
  • ಡ್ರಾಪ್‌ಡೌನ್ ಮೆನುವಿನಿಂದ "ಯಾತ್ರಾ ಪರವಾನಗಿ ನೋಂದಣಿ" ಆಯ್ಕೆಮಾಡಬೇಕು. ಹೆಸರು, ಪ್ರಯಾಣದ ದಿನಾಂಕ, ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯವಿರುವ ಎಲ್ಲಾ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು.
  • ಪಾಸ್‌ಪೋರ್ಟ್ ಸೈಜ್ ಫೋಟೋ ಮತ್ತು ಆರೋಗ್ಯ ಪ್ರಮಾಣಪತ್ರದ (CHC) ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಬೇಕು.
  • ನೋಂದಾಯಿತ ಸಂಖ್ಯೆಗೆ ಕಳುಹಿಸಲಾದ OTP ಬಳಸಿಕೊಂಡು ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಬೇಕು. ನೋಂದಣಿ ಶುಲ್ಕವಾಗಿ 220 ರೂಪಾಯಿ ಪಾವತಿಸಬೇಕಾಗುತ್ತದೆ.

    ಆನ್‌ಲೈನ್‌ನಲ್ಲಿ ನೋಂದಾಯಿಸಲು ಸಾಧ್ಯವಾಗದಿದ್ದರೆ, ಆಫ್‌ಲೈನ್‌ನಲ್ಲಿ ಕೂಡ ನೋಂದಣಿ ಮಾಡಿಸಬಹುದು. ಯಾತ್ರಾರ್ಥಿಗಳು ನೋಂದಣಿ ಕೇಂದ್ರಗಳು ಅಥವಾ ನಿರ್ದಿಷ್ಟವಾದ ಬ್ಯಾಂಕ್ ಶಾಖೆಗಳಲ್ಲಿ ನೋಂದಣಿ ಮಾಡಬಹುದು. ವೈಷ್ಣವಿ ಧಾಮ, ಪಂಚಾಯತ್ ಭವನ ಮತ್ತು ಮಹಾಜನ್ ಹಾಲ್‌ನಂತಹ ಸ್ಥಳಗಳಲ್ಲಿ ಟೋಕನ್ ಸ್ಲಿಪ್‌ಗಳನ್ನು ನೀಡಲಾಗುತ್ತದೆ. ಅಧಿಕೃತ ನೋಂದಣಿ ಮತ್ತು ವೈದ್ಯಕೀಯ ತಪಾಸಣೆಗಾಗಿ ಯಾತ್ರಾರ್ಥಿಗಳು ಮಾರನೆಯ ದಿನ ಸರಸ್ವತಿ ಧಾಮಕ್ಕೆ ಭೇಟಿ ನೀಡಬೇಕು, ಇದಲ್ಲದೆ, ಜಮ್ಮುವಿನ ನೋಂದಣಿ ಕೇಂದ್ರದಿಂದ ತಮ್ಮ RFID ಕಾರ್ಡ್‌ಗಳನ್ನು ಪಡೆಯಬೇಕು.

    ಈ ದಾಖಲೆಗಳಿದ್ದರೆ ಸೇಫ್
    ಅಮರನಾಥ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳ ಬಳಿ ಈ ಕೆಳಗಿನ ದಾಖಲೆಗಳಿದ್ದರೆ ಅನುಕೂಲ.
  • ವೈದ್ಯಕೀಯ ಪ್ರಮಾಣಪತ್ರ
  • ಡ್ರೈವಿಂಗ್‌ ಲೈಸೆನ್ಸ್
  • RFID ಕಾರ್ಡ್: ಎಲ್ಲಾ ಯಾತ್ರಾರ್ಥಿಗಳಿಗೆ ಕಡ್ಡಾಯ; ಟ್ರ್ಯಾಕಿಂಗ್ ಮತ್ತು ಭದ್ರತಾ ಉದ್ದೇಶಗಳಿಗಾಗಿ‌ ಇದನ್ನು ಬಳಸಲಾಗುತ್ತದೆ.
  • ಆಧಾರ್ ಕಾರ್ಡ್: ಭಾರತೀಯ ನಾಗರಿಕರಿಗೆ ಅಗತ್ಯವಿದೆ; ಎನ್‌ಆರ್‌ಐಗಳು ತಮ್ಮ ಪಾಸ್‌ಪೋರ್ಟ್‌ಗಳನ್ನು ತೋರಿಸಬೇಕು.
  • ಫೊಟೋ: ಅಧಿಕೃತ ದಾಖಲೆಗಳಿಗಾಗಿ 6 ​​ಇತ್ತೀಚೆಗಿನ ಪಾಸ್‌ಪೋರ್ಟ್ ಗಾತ್ರದ ಫೋಟೊಗಳನ್ನು ಹೊಂದಿರಬೇಕು.