ಅಮೆರಿಕಾ ಪ್ರವಾಸವನ್ನು ಕೈಗೊಳ್ಳಬೇಕೆನ್ನುವುದು ಬರೀ ಭಾರತೀಯ ಕನಸಲ್ಲ. ಯುರೋಪ್, ಕೆನಡಾ ಮತ್ತು ಏಷ್ಯಾದಿಂದಲೂ ಸಾಕಷ್ಟು ಪ್ರವಾಸಿಗರು ಅಮೆರಿಕಾವನ್ನು ಸಂದರ್ಶಿಸುತ್ತಿದ್ದರು. ಆದರೀಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೊಸ ವೀಸಾ ನೀತಿಯ ಕಾರಣದಿಂದ ಅಮೆರಿಕಾ ಸುತ್ತುವ ಆಸೆಯನ್ನೇ ಕೈಬಿಟ್ಟಿರುವ ಪ್ರವಾಸಿಗರು ಯುಎಇ ಮತ್ತು ಗಲ್ಫ್ ಪ್ರದೇಶಗಳತ್ತ ಮುಖ ಮಾಡಿದ್ದಾರೆ.

ಹೌದು, ಪ್ರಮುಖ ಜಾಗತಿಕ ಪ್ರವಾಸಿ ತಾಣವಾದ ಅಮೆರಿಕವನ್ನು ಭೇಟಿ ಮಾಡುವಲ್ಲಿ ಯುರೋಪ್, ಕೆನಡಾ ಮತ್ತು ಏಷ್ಯಾ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ವಿಶೇಷವಾಗಿ ಯುರೋಪಿಯನ್ ದೇಶಗಳಿಂದ ಬರುವವರನ್ನೂ ತಪ್ಪಿಸುತ್ತಿದ್ದಾರೆ. ಇತ್ತೀಚೆಗೆ, ಕೆಲವು ಯುರೋಪಿಯನ್ ರಾಷ್ಟ್ರಗಳು ಅಮೆರಿಕಕ್ಕೆ ಪ್ರಯಾಣಿಸಲು ತಯಾರಿ ನಡೆಸುವ ತಮ್ಮ ನಾಗರಿಕರಿಗೆ ಸಲಹೆಗಳ ಪಟ್ಟಿಯನ್ನೇ ಬಿಡುಗಡೆ ಮಾಡಿವೆಯಂತೆ. ಮುಖ್ಯವಾಗಿ ಎಲೆಕ್ಟ್ರಾನಿಕ್ ಸಿಸ್ಟಮ್ ಫಾರ್ ಟ್ರಾವೆಲ್ (ESTA) ಅಮೆರಿಕಕ್ಕೆ ಪ್ರವೇಶವನ್ನು ನಿರ್ಬಂಧಿಸುತ್ತಿದ್ದು, ವೀಸಾ ಅವಧಿ ಮುಗಿದಿರುವಂತಹ ಸಂದರ್ಭಗಳಲ್ಲಿ ಕ್ರಿಮಿನಲ್ ಆರೋಪಗಳು ಹಾಗೂ ಬಂಧನ ಇಲ್ಲವೇ ಗಡಿಪಾರು ಮಾಡಬಹುದೆಂಬುದಾಗಿಯೂ ಎಚ್ಚರಿಸಿದೆ.

usa-best-places-new-york

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸೆ ಮತ್ತು ವೀಸಾ ನೀತಿಗಳ ಬಗ್ಗೆ ಕಠಿಣ ನಿಲುವು ತೆಗೆದುಕೊಂಡ ನಂತರ, ಅಮೆರಿಕದ ವಲಸೆಯಲ್ಲಿ ಎದುರಾಗುವ ಅಡೆತಡೆಗಳಿಂದಾಗಿ ಪ್ರವಾಸಿಗರು ಅಮೆರಿಕಕ್ಕೆ ಹೋಗುವಲ್ಲಿ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಇದರಿಂದಾಗಿ ವಿಮಾನಯಾನ ಸಂಸ್ಥೆಗಳು ಸಹ ನಷ್ಟದಲ್ಲಿದ್ದು, ಅಷ್ಟಾಗಿ ವಿಮಾಣ ಪ್ರಯಾಣಕ್ಕೆ ಮುಂದಾಗುತ್ತಿಲ್ಲ.

ಅಲ್ಮೋಸಾಫರ್‌ನ ಸಿಇಒ ಮುಝಮ್ಮಿಲ್ ಅಹುಸ್ಸೇನ್ ಹೇಳುವಂತೆ, ಪ್ರಸ್ತುತವಿರುವ ಸುಂಕ - ಪರಿಸ್ಥಿತಿಯಿಂದಾಗಿ ಯುರೋಪ್ ಮತ್ತು ಅಮೆರಿಕಾ ದೇಶಗಳಿಗೆ ಭೇಟಿ ನೀಡಲು ಬೇಡಿಕೆ ಕಡಿಮೆಯಾಗುತ್ತಿದೆ. ಅದೇ ವೇಳೆ, ಸೌದಿ ಅರೇಬಿಯಾ ಹಾಗೂ ಗಲ್ಫ್‌ ದೇಶಗಳಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಕಾಣುತ್ತಲಿದೆ ಎಂದಿದ್ದಾರೆ.

ಅಲ್ಲದೆ ಗಲ್ಫ್‌ ರಾಷ್ಟ್ರಗಳಲ್ಲಿ ಆಂತರಿಕ ಸಂಘರ್ಷಗಳಿವೆಯಾದರೂ ಅದರಿಂದ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗಿಲ್ಲ. ಸೌದಿ ಅರೇಬಿಯಾ, ಯುಎಇ ಅಥವಾ ಕತಾರ್‌ಗೆ ಹೋದಾಗ ಪ್ರವಾಸಿಗರು ಯಾವಾಗಲೂ ಸುರಕ್ಷಿತರೆಂಬ ಭಾವನೆ ಹೊಂದುತ್ತಾರೆ ಎಂದು ಅಲ್ಮೋಸಾಫರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಳಿದರು.

united-states-and-united-arab-emirates-flags-together-seamless-looping-background-looped-bump-texture-cloth-waving-slow-motion-3d-rendering-free-video

ಅಲ್ಲದೆ ಅಮೆರಿಕಾ ಗಡಿಗಳಲ್ಲೇ ಸಂದರ್ಶಕರನ್ನು ತಡೆದು ಗಡೀಪಾರು ಮಾಡಲಾಗುತ್ತಿದೆ. ವೀಸಾವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬಂತಹ ಅನೇಕ ವರದಿಗಳು ಇಂದು ಮಾಧ್ಯಮಗಳ ಮೂಲಕ ತಿಳಿದುಬರುತ್ತಿದೆ. ಗಮನಿಸಬೇಕಿರುವ ಅಂಶವೆಂದರೆ, ಕೆನಡ ಪ್ರವಾಸೋದ್ಯಮದಿಂದಾಗಿ ಅಮೆರಿಕಾದ ಬಲ ಹೆಚ್ಚಿಸುತ್ತಿತ್ತು. ಪ್ರವಾಸೋದ್ಯಮ ಕುಸಿಯುತ್ತಿರುವುದರಿಂದ ಬೇಸಿಗೆಯಲ್ಲಿ ವೆಸ್ಟ್-ಜೆಟ್ ಮತ್ತು ಏರ್ ಕೆನಡಾ ಎರಡೂ ಯುಎಸ್‌ಗೆ ವಿಮಾನಗಳ ಹಾರಾಟವನ್ನು ಕಡಿಮೆ ಮಾಡುತ್ತಿವೆ ಎಂಬ ಸುದ್ದಿಯನ್ನೂ ಇತ್ತೀಚೆಗಷ್ಟೇ ಕೇಳಿದ್ದೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದರು.