ಟ್ರಂಪ್ (Trump) ಆಡಳಿತದ ವ್ಯಾಪಾರ ನೀತಿಗಳ (Trade Policy) ತೀವ್ರ ಪರಿಣಾಮದಿಂದಾಗಿ ಅಮೆರಿಕದ ಪ್ರವಾಸೋದ್ಯಮ ಕ್ಷೇತ್ರ (America Tourism) ಬೃಹತ್ ಆರ್ಥಿಕ ಹಿಂಜರಿಕೆ ಅನುಭವಿಸಲಿದೆ ಎನ್ನುವ ಎಚ್ಚರಿಕೆಯನ್ನು ಹೂಡಿಕೆ ಸಂಸ್ಥೆಗಳು ನೀಡಿದ್ದಾವೆ.

"ಅಮೆರಿಕ ವಿರೋಧಿ ಮನೋಭಾವ ಪ್ರವಾಸಕ್ಕೆ ಕಡಿತ ಉಂಟುಮಾಡುತ್ತಿದೆ. ಇದು ಸೇವಾ ರಫ್ತುಗಳಿಗೆ ಹೊಡೆತವಾಗಿದೆ," ಎಂದು ಜೆ.ಪಿ.ಮಾರ್ಗನ್ ಎಚ್ಚರಿಸಿದೆ. ಗೋಲ್ಡ್ಮನ್ ಸಾಚ್ಸ್ (Goldman Sachs) ಮತ್ತು J.P. ಮೊರ್ಗನ್ (J.P.Morgan) ಸಂಸ್ಥೆಗಳು 2025ರಲ್ಲಿ ಅಂತಾರಾಷ್ಟ್ರೀಯ ಪ್ರವಾಸ ಖರ್ಚುಗಳ ಕಡಿತವು ಅಮೆರಿಕದ GDPಯಲ್ಲಿ ಶೇ. 0.1 ಇಳಿಕೆ ತರಬಹುದು ಎಂದಿವೆ. ಆ ಶೇ. 0.1 ರಷ್ಟು ಪ್ರಮಾಣ $23 ಬಿಲಿಯನ್ ರಿಂದ $71 ಬಿಲಿಯನ್ ನಷ್ಟಾಗಬಹುದು!

ಡೆಲ್ಟಾ ಏರ್‌ಲೈನ್ಸ್ ತನ್ನ ವಾರ್ಷಿಕ ಲಾಭ ನಿರೀಕ್ಷೆಯನ್ನು ಹಿಂದಕ್ಕೆ ಪಡೆದು, ಪ್ರವಾಸ ಬೇಡಿಕೆ "ಸ್ಥಗಿತಗೊಂಡಿದೆ" ಎಂದು ಹೇಳಿದೆ. ಅಮೆರಿಕನ್ ಏರ್‌ಲೈನ್ಸ್, ಆಲಾಸ್ಕಾ ಏರ್, ಫ್ರಂಟೀಯರ್ ಕೂಡ ಕೊಂಚಮಟ್ಟಿನ ನಷ್ಟದಲ್ಲಿದ್ದಾವೆ. ಯುನೈಟೆಡ್ ಏರ್‌ಲೈನ್ಸ್ ಸಹ ತೀವ್ರ ಅನಿಶ್ಚಿತತೆಗೆ ತುತ್ತಾಗಿದೆ.

Airbnb ತನ್ನ ಎರಡನೇ ತ್ರೈಮಾಸಿಕ ಆದಾಯ ನಿರೀಕ್ಷೆಗಳನ್ನು ಕಡಿಮೆ ಮಾಡಿದರೆ, Hilton ಹೋಟೆಲ್ ನಿಂದ ನೋಡು ಮತ್ತು ನಿರ್ಧರಿಸಿ ಸ್ಥಿತಿಗೆ ಪ್ರವಾಸಿಗರು ಬಂದಿದ್ದಾರೆ ಎಂದು ಹೇಳಿದೆ.

2024 ರಲ್ಲಿ ವಿದೇಶಿ ಪ್ರವಾಸಿಗರಿಂದ ಬಂದ ಖರ್ಚು GDP ಯಲ್ಲಿ ಶೇ.0.7 ($215 ಬಿಲಿಯನ್) ಅಂದಾಜಿಸಲಾಗಿದೆ. ಆದರೆ ಶೇ.10 ರಷ್ಟು ಇಳಿಕೆ GDP ಗೆ ಶೇ.0.07ರಷ್ಟು ನೇರ ಹೊಡೆತವನ್ನುಂಟುಮಾಡಬಹುದು ಎಂದು ಜೆಪಿಎಂ ಎಚ್ಚರಿಸಿದೆ.

ಅಮೆರಿಕ ಆರ್ಥಿಕತೆ ಕಳೆದ ಮೂರು ವರ್ಷಗಳಲ್ಲಿ ಮೊಟ್ಟಮೊದಲ ಬಾರಿ ಕುಸಿತ ಕಂಡಿದ್ದು, ಮಾರ್ಚ್ 22ರ ತನಕ ಬ್ಯಾಂಕ್ ಆಫ್ ಅಮೆರಿಕದ ಡೇಟಾ ಪ್ರಕಾರ ಪ್ರವಾಸ, ಹೋಟೆಲ್ ಹಾಗೂ ವಿಮಾನ ಸಂಸ್ಥೆಗಳಲ್ಲಿ ಖರ್ಚು ಇಳಿಕೆಯಾಗಿದೆ. ಏಪ್ರಿಲ್‌ನಲ್ಲಿ ಗ್ರಾಹಕರ ಭರವಸೆ ಕೂಡ ಕಡಿಮೆಯಾಗಿದೆ.