ಅಮುರ್ ಫಾಲ್ಕನ್ 'ಚಿಯುಲುವಾನ್ 2' ಹಕ್ಕಿಯು ಸೊಮಾಲಿಯಾದಿಂದ ಭಾರತಕ್ಕೆ ಕೇವಲ 93 ಗಂಟೆಗಳಲ್ಲಿ 3,800 ಕಿಮೀ ಪ್ರಯಾಣದಲ್ಲಿ ಕ್ರಮಿಸಿದೆ. ಅಮುರ್ ಫಾಲ್ಕನ್‌ಗಳು ವಲಸೆ ಬಂದಿದೆ. ಪಕ್ಷಿಗಳ ಸಂರಕ್ಷಣೆ ಕುರಿತಾದ ಕಾಳಜಿ ಕೆಲಸ ಇದಾಗಿದೆ ಎಂಬ ಮಾಹಿತಿಯಿದೆ.

ಸೈಬೀರಿಯಾ, ಉತ್ತರ ಚೀನಾ ಮತ್ತು ಮಂಗೋಲಿಯಾದಲ್ಲಿನ ತಮ್ಮ ಸಂತಾನೋತ್ಪತ್ತಿ ಸ್ಥಳಗಳು ಮತ್ತು ದಕ್ಷಿಣ ಆಫ್ರಿಕಾದಲ್ಲಿ ಚಳಿಗಾಲದ ಆವಾಸಸ್ಥಾನಗಳ ನಡುವೆ, ಅಮುರ್ ಫಾಲ್ಕನ್‌ಗಳು ಸಾಮಾನ್ಯವಾಗಿ ವರ್ಷಕ್ಕೆ ಸುಮಾರು 20,000 ಕಿ.ಮೀ ಪ್ರಯಾಣಿಸುತ್ತವೆ ಎನ್ನಲಾಗಿದೆ. ಇದು ಪಕ್ಷಿ ಪ್ರಪಂಚದಲ್ಲಿ ದೀರ್ಘ ವಲಸೆಗಳಲ್ಲಿ ಒಂದಾಗಿದೆ. 'ಚಿಯುಲುವಾನ್ 2' ಯಶಸ್ವಿಯಾಗಿದೆ. ಸ್ಯಾಟಲೈಟ್‌ನ ಕಣ್ಗಾವಲಿನಿಂದಾಗಿ ವಿಜ್ಞಾನಿಗಳಿಗೆ ಹಕ್ಕಿಗಳ ವಲಸೆ ಮಾರ್ಗಗಳು, ವಿಶ್ರಾಂತಿ ತಾಣಗಳು ಮತ್ತು ಹಾರಾಟದ ಸಮಯದಲ್ಲಿ ಅವು ಎದುರಿಸುವ ತೊಂದರೆಗಳ ಬಗ್ಗೆ ಪ್ರಮುಖ ಮಾಹಿತಿ ದೊರೆತಿದೆ.

ಮಣಿಪುರ ಅರಣ್ಯ ಇಲಾಖೆ, ಭಾರತೀಯ ವನ್ಯಜೀವಿ ಸಂಸ್ಥೆ (WII) ಮತ್ತು ಸ್ಥಳೀಯ ಸಮುದಾಯಗಳ ಸಹಯೋಗದ ಅಧ್ಯಯನದ ಭಾಗವಾಗಿ ಈ ಕೆಲಸ ನಡೆದಿದೆ. 'ಚಿಯುಲುವಾನ್ 2' ಎಂಬ ಗಂಡು ಅಮುರ್ ಫಾಲ್ಕನ್ ಅನ್ನು ನವೆಂಬರ್ 2024 ರಲ್ಲಿ ಮಣಿಪುರದ ತಮೆಂಗ್ಲಾಂಗ್ ಜಿಲ್ಲೆಯಲ್ಲಿ ರೇಡಿಯೋ-ಟ್ಯಾಗ್ ಮಾಡಲಾಯಿತು. ದಕ್ಷಿಣ ಆಫ್ರಿಕಾದಲ್ಲಿ ಸುಮಾರು 114 ದಿನಗಳನ್ನು ಕಳೆದ ನಂತರ, ಪಕ್ಷಿಯು ಏಪ್ರಿಲ್ 8, 2025 ರಂದು ಬೋಟ್ಸ್ವಾನಾದಿಂದ ಉತ್ತರಕ್ಕೆ ವಲಸೆ ಹೋಗಲು ಪ್ರಾರಂಭಿಸಿತು ಎಂಬ ಮಾಹಿತಿಯಿದೆ.

ಈ ಪಕ್ಷಿಯು ಅರೇಬಿಯನ್ ಸಮುದ್ರದ ಮೇಲೆಯೂ ಹಾರಿದೆ. ಕೇವಲ 93 ಗಂಟೆಗಳಲ್ಲಿ ಸುಮಾರು 3,800 ಕಿ.ಮೀ.ಗಳನ್ನು ಕ್ರಮಿಸಿದೆ. ವಲಸೆಯ ಈ ಹಂತದಲ್ಲಿ 'ಚಿಯುಲುವಾನ್ 2' ಭಾರತದ ಗುಜರಾತ್‌ ರಾಜ್ಯಕ್ಕೆ ಆಗಮಿಸಿದೆ. ಅಷ್ಟೇ ಅಲ್ಲದೆ ಈಶಾನ್ಯ ಪ್ರದೇಶದ ಕಡೆಗೆ ತನ್ನ ಪ್ರಯಾಣವನ್ನು ಮುಂದುವರಿಸಿದೆ ಎಂದು ಹೇಳಲಾಗಿದೆ.