ಕಡಿಮೆ ಹಣದಲ್ಲಿಯೇ ನಾಲ್ಕು ದೇಶಗಳನ್ನು ಸುತ್ತಿಬನ್ನಿ
ಐಷಾರಾಮಿ ಹೊಟೇಲುಗಳು, ಕಡಲತೀರ, ಪುರಾತನ ದೇವಾಲಯಗಳು ಪ್ರವಾಸಿಗರ ಮನಸೂರೆಗೊಳಿಸುತ್ತದೆ. ಅಲ್ಲಿ ಖರೀದಿಸುವ ವಸ್ತುಗಳು ಮತ್ತು ಅಲ್ಲಿನ ಊಟ ಕೂಡ ಕೈಗೆಟಕುವ ಬೆಲೆಯಲ್ಲಿಯೇ ಇದೆ
ವಿದೇಶ ಪ್ರವಾಸ ಎಂಬುದು ಎಲ್ಲರ ಕನಸು. ದೇಶ ದೇಶ ಸುತ್ತಬೇಕು ಎಂದು ಹಂಬಲಿಸುವವರಿದ್ದಾರೆ. ಅಲ್ಲಿ ಸಿಗುವ ಅನುಭವವನ್ನು ಹಂಚಿಕೊಳ್ಳಲೂ ಹಾತೊರೆಯುತ್ತಾರೆ. ಆದರೆ ಹಲವರು ವಿದೇಶ ಪ್ರವಾಸ ಎಂದರೆ ಹೆದರುತ್ತಾರೆ. ವಿದೇಶ ಸುತ್ತಲು ಕೋಟಿಗಟ್ಟಲೆ ಹಣಬೇಕು ಎಂದುಕೊಳ್ಳುತ್ತಾರೆ. ಆದರೆ ಕೆಲವೇ ಲಕ್ಷಗಳಲ್ಲಿ ಸಾಕಷ್ಟು ದೇಶಗಳನ್ನು ಸುತ್ತಬಹುದು. ಹಾಗಾದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಹೋಗಿ ಬರಬಹುದಾದ ದೇಶಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಸಿಂಗಾಪುರ
ಸಾಕಷ್ಟು ಜನರು ಭಾರತದಿಂದ ಸಿಂಗಾಪುರಕ್ಕೆ ಪ್ರವಾಸ ಹೋಗಲು ಬಯಸುತ್ತಾರೆ. ಸಿಂಗಾಪುರ ಹೊರದೇಶಗಳಿಗೆ ಪ್ರವಾಸ ಕೈಗೊಳ್ಳುವವರ ಕನಸಿನ ದೇಶವಾಗಿದೆ. ಅತ್ಯಂತ ಕಡಿಮೆ ಹಣದಲ್ಲಿ ಅತ್ಯಾಕರ್ಷಕವಾದ ಸಿಂಗಾಪುರ ದೇಶವನ್ನು ವೀಕ್ಷಿಸಿ ಪ್ರವಾಸಿಗರು ಖುಷಿಪಡಬಹುದು. ಸಿಂಗಾಪುರದಲ್ಲಿ ಸಾಕಷ್ಟು ಅದ್ಭುತವಾದ ತಾಣಗಳಿವೆ. ಅಲ್ಲಿನ ಪರಿಸರ ಸ್ನೇಹಿ ಐಷಾರಾಮಿ ಹೊಟೇಲುಗಳು, ಕಡಲತೀರ, ಪುರಾತನ ದೇವಾಲಯಗಳು ಪ್ರವಾಸಿಗರ ಮನಸೂರೆಗೊಳಿಸುತ್ತದೆ. ಅಲ್ಲಿ ಖರೀದಿಸುವ ವಸ್ತುಗಳು ಮತ್ತು ಅಲ್ಲಿನ ಊಟ ಕೂಡ ಕೈಗೆಟಕುವ ಬೆಲೆಯಲ್ಲಿಯೇ ಇದೆ.

ಸಿಂಗಾಪುರ ಆಕರ್ಷಣೀಯ ತಾಣಗಳು
ಸಿಂಗಾಪುರ್ ಮೃಗಾಲಯ
ಸೆಂಟೋಸಾ ಐಲ್ಯಾಂಡ್
ಅಂಡರ್ ವಾಟರ್ ವರ್ಲ್ಡ್
ಲಿಟಲ್ ಇಂಡಿಯಾ
ಆರ್ಚರ್ಡ್ ರೋಡ್
ಮಲೇಷಿಯಾ
ಬಜೆಟ್ ಸ್ನೇಹಿ ವಿದೇಶ ಪ್ರವಾಸಗಳಲ್ಲಿ ಮಲೇಷಿಯಾ ಕೂಡ ಒಂದು. ಕಡಿಮೆ ಹಣದಲ್ಲಿ ಆರಾಮವಾಗಿ ಪ್ರವಾಸ ಕೈಗೊಳ್ಳಬಹುದು. ಆ ದೇಶದಲ್ಲೂ ಹತ್ತಾರು ಪ್ರವಾಸಿ ಆಕರ್ಷಣೆಯ ತಾಣಗಳಿವೆ . ಕಡಲತೀರಗಳು, ದ್ವೀಪಗಳು, ಅದ್ಭುತವಾದ ಗಿರಿಧಾಮಗಳು ಎಲ್ಲವೂ ಇಲ್ಲಿದೆ. ಹಿತವಾದ ವಾತಾವರಣವು ಜಗತ್ತಿನ ಅಷ್ಟೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಮಲೇಷಿಯಾ ಆಕರ್ಷಣೆಯ ತಾಣಗಳು
ತಮನ್ ನೆಗರಾ
ಇಪೋಹ್
ಕೌಲಾಲಂಪುರ್
ರೆಡಾಂಗ್ ದ್ವೀಪ
ಜಪಾನ್
ಜಪಾನ್ ದೇಶಕ್ಕೂ ಕೂಡ ಕಡಿಮೆ ವೆಚ್ಚದಲ್ಲಿ ಅಚ್ಚುಕಟ್ಟಾಗಿ ಪ್ರವಾಸ ಕೈಗೊಳ್ಳಬಹುದು. ಜಪಾನ್ ತನ್ನ ವಿಶಿಷ್ಟವಾದ ಸಂಸ್ಕೃತಿ ಹಾಗೂ ಭವ್ಯವಾದ ಪ್ರವಾಸಿ ಸ್ಥಳಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಜಪಾನ್‌ನಲ್ಲಿ ಟೋಕಿಯೋ, ಕೋಬ್, ಯೋಕೋಹಾಮಾ, ನವೋಶಿಮಾ, ಕ್ಯೋಟೋ, ಹಿರೋಷಿಮಾ, ಶಿಬುಯಾ, ಮೌಂಟ್ ಫ್ಯೂಜಿ. ಈ ಸ್ಥಳಗಳಿಗೆ ಭೇಟಿ ಕೊಡಬಹುದು.

ಇಂಡೋನೇಷ್ಯಾ
ಇಂಡೋನೇಷ್ಯಾ ಭಾರತೀಯರಿಗೆ ಅತ್ಯಂತ ಪ್ರಿಯವಾದ ದೇಶ. ಅದರಲ್ಲೂ ನವ ಜೋಡಿಗಳ ಹನಿಮೂನ್‌ಗೆ ಪರ್ಫೇಕ್ಟ್ ಸ್ಥಳ. ಇಂಡೋನೇಷ್ಯಾದಲ್ಲಿನ ಪ್ರಶಾಂತವಾದ ವಾತಾವರಣ ಎಂಥವರನ್ನೂ ಸೆಳೆಯುತ್ತದೆ. ಪುರಾತನ ದೇವಾಲಯಗಳು ಮತ್ತು ಕಡಲತೀರಗಳಿಗೆ ಭೇಟಿ ನೀಡಬಹುದು.

ಇಂಡೋನೇಷ್ಯಾ ಆಕರ್ಷಣೆಯ ತಾಣಗಳು
ಸುಮಾತ್ರಾ
ಬಾಲಿ
ಜಕಾರ್ತಾ
ಯೋಗ್ಯಕರ್ತಾ
ಜಾವಾ