ಪ್ರವಾಸಿಗರನ್ನು ಚಿಲ್ ಆಗಿಸುವ ಕೂರ್ಗ್‌ನ ಚೇಲಾವರ ಫಾಲ್ಸ್!
ಕೂರ್ಗ್ ತನ್ನ ರಮಣೀಯ ಸೌಂದರ್ಯದಿಂದಲೇ ಪ್ರವಾಸಿಗರನ್ನು ಸೆಳೆಯುತ್ತದೆ. ಕೂರ್ಗ್ ಎಲ್ಲರ ಅಚ್ಚುಮೆಚ್ಚಿನ ತಾಣ. ಕೂರ್ಗ್‌ನಂತಹ ಸ್ವರ್ಗ ಸದೃಶ ಜಾಗದಲ್ಲಿ ಪ್ರವಾಸಿಗರನ್ನು ಚಿಲ್ ಆಗಿಸುವ ಚೇಲಾವರ ಫಾಲ್ಸ್ ಇದೆ.
ಕೂರ್ಗ್ ತನ್ನ ರಮಣೀಯ ಸೌಂದರ್ಯದಿಂದಲೇ ಪ್ರವಾಸಿಗರನ್ನು ಸೆಳೆಯುತ್ತದೆ. ಕೂರ್ಗ್ ಎಲ್ಲರ ಅಚ್ಚುಮೆಚ್ಚಿನ ತಾಣ. ಕೂರ್ಗ್‌ನಂತಹ ಸ್ವರ್ಗ ಸದೃಶ ಜಾಗದಲ್ಲಿ ಪ್ರವಾಸಿಗರನ್ನು ಚಿಲ್ ಆಗಿಸುವ ಚೇಲಾವರ ಫಾಲ್ಸ್ ಇದೆ.
ಭಾರತದ ಸ್ಕಾಟ್ಲೆಂಡ್ಎಂದೇ ಕೂರ್ಗ್ ಪ್ರಸಿದ್ಧಿಯಾಗಿದೆ. ಪ್ರವಾಸಿಗರಿಗೆ ಕೂರ್ಗ್ ಫೇವರಿಟ್ ತಾಣ. ಕೂರ್ಗ್ ಸ್ವರ್ಗ ಸೌಂದರ್ಯವನ್ನು ಮೈಗೆ ಮೆತ್ತಿಕೊಂಡು ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ವೀಕೆಂಡ್‌ನಲ್ಲಿ ಮಜಾ ಮಾಡಲು ಗೆಳೆಯರೊಟ್ಟಿಗೆ ಭೇಟಿ ನೀಡಬಹುದು. ಕೂರ್ಗ್ ಹಾಗು ಮಡಿಕೇರಿಯಲ್ಲಿ ನಿಸರ್ಗಧಾಮ, ತಲಕಾವೇರಿ, ಗೋಲ್ಡನ್ ಟೆಂಪಲ್, ದುಬಾರೆ ಶಿಬಿರ, ಜಲಪಾತಗಳು, ಕಾಫಿ ತೋಟಗಳು ಸೇರಿದಂತೆ ಇನ್ನು ಹತ್ತಾರು ಪ್ರವಾಸಿ ಆಕರ್ಷಣೆಗಳಿವೆ. ಇನ್ನು ಕೂರ್ಗ್‌ನ ಅತ್ಯದ್ಭುತವಾದ ಜಲಪಾತಗಳಲ್ಲಿ ಚೇಲವಾರ ಜಲಪಾತವು ಒಂದಾಗಿದೆ. ಅಷ್ಟಕ್ಕೂ ಈ ಚೇಲವಾರ ಎಲ್ಲಿದೆ? ಆ ಜಲಪಾತದ ವಿಶೇಷತೆ ಏನು? ಪ್ರವಾಸಿಗರು ಅಲ್ಲಿಗೆ ಯಾಕೆ ಹೋಗಬೇಕು? ಇಲ್ಲಿದೆ ಮಾಹಿತಿ.
ಅದ್ಭುತವಾದ ಚೇಲಾವರ ಜಲಪಾತವು ಕಾವೇರಿ ನದಿಯ ಉಪನದಿಯಿಂದ ರೂಪುಗೊಂಡಿದೆ. ವಿರಾಜಪೇಟೆ ನಗರದಿಂದ ಕೇವಲ 16 ಕಿ.ಮೀ ದೂರದಲ್ಲಿ ಈ ಜಲಪಾತವಿದೆ. ಕೂರ್ಗ್‌ಗೆ ಪ್ರವಾಸ ಕೈಗೊಳ್ಳುವವರು ಇಲ್ಲಿಗೆ ತಪ್ಪದೇ ಭೇಟಿಯಾಗಬೇಕು. ಸರಿ ಸುಮಾರು 150 ಅಡಿ ಎತ್ತರದಿಂ ನೀರು ಧುಮ್ಮಿಕ್ಕುತ್ತದೆ. ಈ ಫಾಲ್ಸ್ ಅಪಾಯಕಾರಿಯೂ ಹೌದು. ಕೊಳದ ಬಳಿ ಹೋಗಲು ಪ್ರವಾಸಿಗರಿಗೆ ಅವಕಾಶವಿಲ್ಲ.
ಇನ್ನು ಈ ಜಲಪಾದ ಸೌಂದರ್ಯವನ್ನು ಮಳೆಗಾಲದಲ್ಲಿಯೇ ನೋಡಬೇಕು. ಆ ಸಮಯದಲ್ಲಿ ಮೈದುಂಬಿ ಧುಮ್ಮಿಕ್ಕುತ್ತದೆ. ಪ್ರವಾಸಿಗರು ಈ ಚೇಲಾವರ ಜಲಪಾತದ ಮೋಡಿ ಮಾಡುವ ಸೊಬಗನ್ನು ಕಂಡು ಆನಂದಿಸಬಹುದು. ಜಲಪಾತದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಅಲ್ಲಲ್ಲಿ ಆಮೆಯ ಆಕಾರದಲ್ಲಿರುವ ಬಂಡೆಗಳು. ಅದರಿಂದಲೇ ಜಲಪಾದ ಸೌಂದರ್ಯ ಇಮ್ಮಡಿಯಾಗಿದೆ. ಇಂತಹ ಅದ್ಭುತವಾದ ತಾಣದಲ್ಲಿ ಪ್ರವಾಸಿಗರು ಬೆಟ್ಟದ ತುದಿಗೆ ಹೋಗಿ ಕುಟುಂಬ ಅಥವಾ ಸ್ನೇಹಿತರ ಜೊತೆ ಪಿಕ್ನಿಕ್ ಕೈಗೊಳ್ಳಬಹುದು. ಫೋಟೋಶೂಟ್, ಟ್ರೆಕ್ಕಿಂಗ್ ಮಾಡಲು ಇದು ಪರ್ಫೆಕ್ಟ್ ಸ್ಥಳವಾಗಿದೆ.
ಭೇಟಿಯ ಸಮಯ
ಚೇಲಾವರ ಜಲಪಾತಕ್ಕೆ ಪ್ರವಾಸಿಗರು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ.