ದಕ್ಷಿಣ ಭಾರತವು ತನ್ನ ಪ್ರಾಕೃತಿಕ ಸೌಂದರ್ಯದಿಂದಲೇ ಪ್ರವಾಸಿಗರನ್ನು ಸದಾ ಕೈ ಬೀಸಿ ಕರೆಯುತ್ತದೆ. ಇಲ್ಲಿ ಹತ್ತಾರು ಮನಮೋಹಕ ತಾಣಗಳಿವೆ. ನಿಸರ್ಗದ ಸೊಬಗನ್ನು ಸವಿಯಲೆಂದೇ ದೇಶ-ವಿದೇಶಗಳಿಂದ ಪ್ರವಾಶಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಬಹುಮುಖ್ಯವಾಗಿ ದಕ್ಷಿಣ ಭಾರತದ ಕೆಲವು ತಾಣಗಳು ರಣ ಬೇಸಿಗೆಯಲ್ಲೂ ತಂಪಾಗಿರುತ್ತದೆ. ಅಂತಹ ತಾಣಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ಲಂಬಸಿಂಗಿ
ಆಂಧ್ರಪ್ರದೇಶದ ಕಾಶ್ಮೀರ ಎಂದು ಕರೆಯಲ್ಪಡುವ ಲಂಬಸಿಂಗಿ ವರ್ಷದ ಅಷ್ಟು ದಿನವೂ ಹಿತವಾದ ಅನುಭವ ನೀಡುತ್ತದೆ. ಲಂಬಸಿಂಗಿ ವಿಶಾಖಪಟ್ಟಣಂ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದ್ದು, ಪ್ರಶಾಂತವಾದ ವಾತಾವರಣವನ್ನು ಹೊಂದಿದೆ. ಡಿಸೆಂಬರ್ ಹಾಗು ಜನವರಿ ತಿಂಗಳ ಮಧ್ಯ ಭಾಗದಲ್ಲಿ ಲಂಬಸಿಂಗಿ 0 ಡ್ರಿಗ್ರಿ ಹವಾಮಾನ ಹೊಂದಿರುತ್ತದೆ.ವಿಶೇಷವೆಂದರೆ ದಕ್ಷಿಣ ಭಾರತದಲ್ಲಿ ಹಿಮಪಾತವಾಗುವ ಏಕೈಕ ಸ್ಥಳ ಲಂಬಸಿಂಗಿಯಾಗಿದೆ. ಇಂತಹ ಅಪರೂಪ ಮತ್ತು ಅದ್ಭುತವಾದ ಪ್ರವಾಸಿ ತಾಣಕ್ಕೆ ಪ್ರವಾಸಿಗರು ಭೇಟಿ ನೀಡಲೇಬೇಕು.

Lambasingi

ಅರಕು ಕಣಿವೆ
ಅರಕು ಕಣಿವೆ ಅಥವಾ ಅರಕು ವ್ಯಾಲಿ ವಿಶಾಖಪಟ್ಟಣನಿಂದ ಸರಿ ಸುಮಾರು 120 ಕಿ.ಮೀ ದೂರದಲ್ಲಿರುವ ಸುಂದರವಾದ ಗಿರಿಧಾಮವಾಗಿದೆ. ಪ್ರಕೃತಿಯ ಮಡಿಲಿನಲ್ಲಿ ಕಾಲ ಕಳೆದು ಚಿಲ್‌ ಆಗಲು ಬಯಸುವ ಮಂದಿಗೆ ಈ ತಾಣ ಅಕ್ಷರಶಃ ಸ್ವರ್ಗ. ಈ ಕಣಿವೆಗೆ ರೈಲಿನಲ್ಲಿ ಹೋಗುವಾಗ 58 ಸುರಂಗಗಳು, 84 ಸೇತುವೆಗಳ ಮೇಲೆ ಹಾದು ಹೋಗುತ್ತದೆ. ಒಂದು ತೆರನಾದ ರೋಮಾಂಚನಕಾರಿ ಅನುಭವದೊಂದಿಗೆ ಅರಕು ಕಣಿವೆಗೆ ತಲುಪಬಹುದು. ಇಲ್ಲಿ ಬೋರಾ ಗುಹೆಗಳು, ಕಟಿಕಿ ಜಲಪಾತ ಸೇರಿದಂತೆ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ.

Araku Valley

ಕೊಡೈಕೆನಾಲ್
ಕೊಡೈಕೆನಾಲ್‌ ತಮಿಳುನಾಡಿನ ಅತ್ಯಂತ ಆಕರ್ಷಣೀಯ ಗಿರಿಧಾಮವಾಗಿದೆ. ದಕ್ಷಿಣ ಭಾರತದಲ್ಲಿಯೇ ಹೆಚ್ಚು ತಂಪಾಗಿರುವ ಗಿರಿಧಾಮಗಳ ಪಟ್ಟಿಯಲ್ಲಿ ಕೊಡೈಕೆನಾಲ್‌ ಟಾಪ್‌ ಲಿಸ್ಟ್‌ನಲ್ಲಿದೆ. ಇಲ್ಲಿನ ಲೇಕ್‌ಸೈಡ್ ರೆಸಾರ್ಟ್‌ಗಳಲ್ಲಿ ಕೆಲವು ದಿನಗಳು ಆರಾಮವಾಗಿ ಕಾಲ ಕಳೆಯಬಹುದು. ಶಾಂತವಾದ ಕೊಡೈ ಸರೋವರವು ಮನಸೂರೆಗೊಳಿಸುತ್ತದೆ. ದೋಣಿ ವಿಹಾರವು ಥ್ರಿಲ್ಲಾದ ಅನುಭವ ನೀಡುತ್ತದೆ.ಉರಿ ಬೇಸಿಗೆಯಲ್ಲಿ ತಂಪಾದ ಗಾಳಿಯನ್ನು ಆಸ್ವಾದಿಸಲು ಕೊಡೈಕೆನಾಲ್ ಬೆಸ್ಟ್ ಗಿರಿಧಾಮವಾಗಿದೆ.

Kodaikenal

ಕುದುರೆಮುಖ
ಕುದುರೆಮುಖ ಕರ್ನಾಟಕದ ಅದ್ಭುತವಾದ ಗಿರಿದಾಮಗಳಲ್ಲಿ ಒಂದಾಗಿದೆ. ಇದು ತನ್ನ ಎತ್ತರ ಮತ್ತು ವಿಶಾಲವಾದ ಪರ್ವತ, ಅನನ್ಯವಾದ ನೈಸರ್ಗಿಕ ಸೊಬಗಿನಿಂದ ಪ್ರಸಿದ್ಧಿಪಡೆದಿದೆ. ಬೆಂಗಳೂರಿನಿಂದ ಸುಮಾರು 340 ಕಿ.ಮೀ ದೂರದಲ್ಲಿರುವ ಕುದುರೆಮುಖ ಬೆಸ್ಟ್ ವಾರಾಂತ್ಯದ ತಾಣವಾಗಿದೆ. ಹಿತವಾದ ಅನುಭವ ನೀಡಬಲ್ಲ ಕಾಫಿ ಹಾಗು ಚಹಾದ ತೋಟಗಳು ಕೂಡ ಇಲ್ಲಿವೆ. ಬೆರಗುಗೊಳಿಸುವ ಗುಹೆಗಳು, ಕಚಗುಳಿ ಇಡುವ ಜುಳು ಜುಳು ಹರಿಯುವ ನದಿಗಳು ಕುದುರೆಮುಖದ ಸೌಂದರ್ಯವನ್ನು ದುಪ್ಪಟ್ಟುಗೊಳಿಸಿದೆ. ಇಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನವಿದೆ

Kuduremukh