ಕಾಳಿಂಗ ಸರ್ಪಗಳು ಕಾಣಸಿಗುವ ದೇಶಗಳು ಯಾವುವು ಗೊತ್ತಾ ?
ಹಾವುಗಳೆಂದರೆ ಬೆಚ್ಚಿಬೀಳದವರಿಲ್ಲ. ಆದರೆ ಹಾವುಗಳಲ್ಲೇ ಅತಿ ವಿಷಕಾರಿಯೆನ್ನಿಸಿಕೊಂಡಿರುವ ಕಾಳಿಂಗ ಸರ್ಪವೆಂದರಂತೂ ಭಯಪಡಲೇಬೇಕು. ಭಾರತದ ಹೊರತಾಗಿ ಬೇರೆ ಯಾವೆಲ್ಲಾ ದೇಶಗಳಲ್ಲಿ ಕಿಂಗ್ ಕೋಬ್ರಾ ಕಾಣಸಿಗುತ್ತವೆ ಗೊತ್ತಾ?
ಜಗತ್ತಿನಾದ್ಯಂತ 3900ಕ್ಕೂ ಹೆಚ್ಚು ಬಗೆಯ ಹಾವುಗಳಿವೆ. ಆದರೆ ಹಾವುಗಳ ರಾಜನೆಂದು ಗುರುತಿಸಿಕೊಂಡಿರುವ ಕಿಂಗ್ ಕೋಬ್ರಾ, ಮೊದಲ ನೋಟದಲ್ಲೇ ಭಯಬೀಳುವಂತೆ ಮಾಡುತ್ತದೆ. ತನ್ನ ಉದ್ದನೆಯ ದೇಹ, ಸ್ಥಿರವಾದ ನೋಟದಿಂದಲೇ ಎಲ್ಲರನ್ನು ಬೆಚ್ಚಿಬೀಳುವಂತೆ ಮಾಡುತ್ತವೆ. ಸುಮಾರು 5.6 ಮೀಟರ್ ಗಳವರೆಗೆ ಬೆಳೆಯುವ ವಿಶ್ವದ ಅತಿ ಉದ್ದದ ವಿಷಪೂರಿತ ಹಾವುಗಳವು.

ಕಾಡಿನಲ್ಲಿ, ಈ ಹಾವುಗಳು ಎರಡು ದಶಕಗಳಿಗಿಂತ ಹೆಚ್ಚು ಕಾಲ ಬದುಕಬಲ್ಲವು. ಅವು ಆಹಾರವಿಲ್ಲದೆ ದೀರ್ಘಕಾಲ ಬದುಕುವುದು ಮಾತ್ರವಲ್ಲದೆ ಅವುಗಳಿಗೆ ಹೆಚ್ಚು ನೀರಿನ ಅಗತ್ಯವಿಲ್ಲದ ಕಾರಣ, ಇತರ ಪ್ರಾಣಿಗಳು ಮತ್ತು ಸರೀಸೃಪಗಳಂತೆ ಅವು ಬರ, ಆಹಾರದ ಕೊರತೆ ಅಥವಾ ಇತರ ನೈಸರ್ಗಿಕ ವಿಕೋಪಗಳಿಗೆ ಹೆಚ್ಚು ಒಳಗಾಗುವುದಿಲ್ಲ.
ಭಾರತದ ಕೆಲವು ಭಾಗಗಳ ಅರಣ್ಯ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವ ಈ ವಿಷಕಾರಿ ಹಾವುಗಳು ಭಾರತದಾಚೆಗೆ ಹಲವಾರು ದೇಶಗಳಲ್ಲಿಯೂ ಕಾಣಸಿಗುತ್ತವೆ.
ಭಾರತ
ಭಾರತವು ಪಶ್ಚಿಮ ಘಟ್ಟಗಳು, ಈಶಾನ್ಯ ಭಾರತ ಮತ್ತು ಪೂರ್ವ ಹಿಮಾಲಯದ ಕಾಡುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಳಿಂಗ ಸರ್ಪಗಳು ಕಾಣಸಿಗುತ್ತವೆ. . ಆದರೆ ಇತ್ತೀಚಿನ ದಿನಗಳಲ್ಲಿ ಕಾಡಿನ ನಾಶದಿಂದಾಗಿ ಕಾಳಿಂಗ ಸರ್ಪಗಳ ಸಂಖ್ಯೆಯಲ್ಲೂ ಇಳಿಕೆ ಕಂಡುಬಂದಿದೆ. ಭಾರತೀಯ ಸಂಸ್ಕೃತಿಯಲ್ಲಿ ಪೂಜಿಸಲಾಗುತ್ತಿದ್ದು, ಹೆಚ್ಚಾಗಿ ಹಿಂದೂ ಪುರಾಣಗಳೊಂದಿಗೆ ಇದು ಸಂಬಂಧ ಹೊಂದಿದೆ
ಬಾಂಗ್ಲಾದೇಶ
ಬಾಂಗ್ಲಾದೇಶದ ಚಿತ್ತಗಾಂಗ್ ಬೆಟ್ಟ, ಗುಡ್ಡಗಾಡು, ಅರಣ್ಯ ಪ್ರದೇಶಗಳಲ್ಲಿ ಕಿಂಗ್ ಕೋಬ್ರಾಗಳು ವಾಸಿಸುತ್ತವೆ. ಅದರಲ್ಲೂ ಹೆಚ್ಚಾಗಿ ಸ್ಥಳೀಯ ಬುಡಕಟ್ಟು ಜನಾಂಗದವರು ಅಥವಾ ಅರಣ್ಯ ಕೆಲಸಗಾರರು ಹೆಚ್ಚಾಗಿ ಕಾಣಸಿಗುವ ಕೋಬ್ರಾಗಳು, ನರಭಕ್ಷಕ ಎಂಬುದಾಗಿಯೂ ಕರೆಸಿಕೊಂಡಿದೆ.

ನೇಪಾಳ
ನೇಪಾಳದ ದಕ್ಷಿಣ ಟೆರೈ ಪ್ರದೇಶ ಮತ್ತು ಹಿಮಾಲಯದ ತಪ್ಪಲಿನಲ್ಲಿ ಕಿಂಗ್ ಕೋಬ್ರಾಗಳು ಹೆಚ್ಚಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ ಸಾಲ್ ಕಾಡುಗಳಲ್ಲಿ ಮತ್ತು ಸಿಹಿನೀರಿನ ಮೂಲಗಳ ಬಳಿ ಕಾಳಿಂಗ ಸರ್ಪಗಳು ಕಾಣಸಿಗುತ್ತವೆ.
ಥೈಲ್ಯಾಂಡ್
ಥೈಲ್ಯಾಂಡ್, ಕಿಂಗ್ ಕೋಬ್ರಾ ಸಂರಕ್ಷಣೆ ಮತ್ತು ಸಂಶೋಧನೆಗೆ ಪ್ರಮುಖ ದೇಶವಾಗಿದೆ. ಥೈಲ್ಯಾಂಡ್ನ ಅರಣ್ಯ ಪ್ರದೇಶಗಳಲ್ಲಿ ಕೋಬ್ರಾಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಸ್ಥಳೀಯ ವನ್ಯಜೀವಿ ಸಂರಕ್ಷಣಾ ಮತ್ತು ಜಾಗೃತಿ ಕಾರ್ಯಕ್ರಮಗಳಲ್ಲಿಯೂ ಪ್ರದರ್ಶನಕ್ಕಿಡಲಾಗುತ್ತದೆ.
ಇಂಡೋನೇಷ್ಯಾ
ಇಂಡೋನೇಷ್ಯಾದ ಸುಮಾತ್ರಾ ಮತ್ತು ಕಾಲಿಮಂಟನ್ (ಬೋರ್ನಿಯೊ) ದ್ವೀಪಗಳಲ್ಲಿ ಕಿಂಗ್ ಕೋಬ್ರಾಗಳು ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತವೆ. ಅವು ಉಷ್ಣವಲಯದ ಮಳೆಕಾಡುಗಳಲ್ಲಿ ವಾಸಿಸುತ್ತವೆ ಮತ್ತು ಹೆಚ್ಚಾಗಿ ನೀರಿರುವ ಪ್ರದೇಶಗಳ ಬಳಿ ವಾಸಿಸುತ್ತವೆ. ಸದ್ಯ ಕೋಬ್ರಾಗಳಿಗೆ ಸರಿಯಾದ ನೆಲೆ ಲಭ್ಯವಾಗದ ಕಾರಣ, ಅವುಗಳ ಸಂತತಿ ಅಳಿವಿನಂಚಿನಲ್ಲಿದೆ.

ಮ್ಯಾನ್ಮಾರ್
ಉತ್ತರ ಮತ್ತು ಮಧ್ಯ ಮ್ಯಾನ್ಮಾರ್ನ ಅರಣ್ಯ ಪ್ರದೇಶಗಳಲ್ಲಿ ವಾಸವಾಗಿರುವ ಕಿಂಗ್ ಕೋಬ್ರಾಗಳು, ತಗ್ಗು ಪ್ರದೇಶ ಮತ್ತು ಪರ್ವತ ಕಾಡುಗಳಲ್ಲಿ ಹೆಚ್ಚಿಗೆ ಕಾಣಸಿಗುತ್ತವೆ. ಆದರೆ ಅಭಿವೃದ್ಧಿ ಕೆಲಸಗಳಿಗಾಗಿ ಅರಣ್ಯ ನಾಶದಂತಹ ಸಂದರ್ಭಗಳು ಕಾಳಿಂಗ ಸರ್ಪಗಳ ನೆಲೆಯನ್ನೇ ಇಲ್ಲವಾಗಿಸುತ್ತಿವೆ.
ಭೂತಾನ್
ಭೂತಾನ್ನ ಕಾಡು ಪ್ರದೇಶಗಳು ಕಿಂಗೋ ಕೋಬ್ರಾಗಳ ವಾಸಸ್ಥಾನವಾಗಿದೆ. ಅವು ಭಾರತದ ಗಡಿಯ ಸಮೀಪವಿರುವ ತಗ್ಗು ಪ್ರದೇಶ, ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತವೆ. ಥೈಲ್ಯಾಂಡ್ನಂತೆ ಕಿಂಗ್ ಕೋಬ್ರಾ ಸಂರಕ್ಷಣೆ ಮಾಡುವ ದೇಶಗಳ ಪೈಕಿ ಭೂತಾನ್ ಸಹ ಪ್ರಮುಖ ಪಾತ್ರ ವಹಿಸುತ್ತದೆ.