ಹೈದರಾಬಾದ್: ಡೆಹ್ರಾಡೂನ್‌ (Dehradun)ನಿಂದ ಹೈದರಾಬಾದ್ (Hyderabad)ಗೆ ಇಂಡಿಗೋ (Indigo) ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 74 ವರ್ಷದ ಪ್ರಯಾಣಿಕನನ್ನು ವೈದ್ಯರು ರಕ್ಷಿಸಿದ್ದಾರೆ. ಮಲ್ಲಾರೆಡ್ಡಿ ವಿಶ್ವ ವಿದ್ಯಾಪೀಠದ ವೈದ್ಯೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಡಾ. ಪ್ರೀತಿ ರೆಡ್ಡಿ ಅವರು ವೃದ್ಧ ಪ್ರಯಾಣಿಕ 39000 ಅಡಿ ಎತ್ತರದಲ್ಲಿ ಇದ್ದಕ್ಕಿದ್ದಂತೆ ತೀವ್ರವಾಗಿ ಅಸ್ವಸ್ಥರಾದಾಗ ಅವರು ಕಾರ್ಯಪ್ರವೃತ್ತರಾದರು.

ಹಾರಾಟದ ಸಮಯದಲ್ಲಿ ತುರ್ತು ಪರಿಸ್ಥಿತಿ

ಒಬ್ಬಂಟಿಯಾಗಿ ಹಾರುತ್ತಿದ್ದ ಪ್ರಯಾಣಿಕನಿಗೆ ಅರೆನಿದ್ರಾವಸ್ಥೆ, ಜೊಲ್ಲು ಸುರಿಸುವಿಕೆ, ಮೂತ್ರಕೋಶದ ನಿಯಂತ್ರಣ ಕಳೆದುಕೊಳ್ಳುವಂತಹ ಆತಂಕಕಾರಿ ಲಕ್ಷಣಗಳು ಕಂಡುಬಂದವು ಆಗ ಡಾ. ರೆಡ್ಡಿ ಅವರು, ವೃದ್ಧನ ದುರ್ಬಲ ನಾಡಿಮಿಡಿತ ಮತ್ತು ಕಡಿಮೆ ರಕ್ತದೊತ್ತಡವನ್ನು ಸರಿಪಡಿಸುವಲ್ಲಿ ಯಶಸ್ವಿಯಾದರು.

ಕ್ಷಣಾರ್ಧದಲ್ಲಿ ಸಿಪಿಆರ್ ಮಾಡಿ ವೃದ್ಧನಿಗೆ ವೈದ್ಯೆ ಮರುಜೀವನ ನೀಡಿದರು. ಪ್ರಜ್ಞೆ ಮರಳಿದ ನಂತರ, ಆ ವ್ಯಕ್ತಿ ತನ್ನ ಅಧಿಕ ರಕ್ತದೊತ್ತಡ ಮತ್ತು ಹಿಂದಿನ ಹೃದಯ ಆಂಜಿಯೋಪ್ಲ್ಯಾಸ್ಟಿಯ ವಿಚಾರವನ್ನು ತಿಳಿಸಿದರು. ಇದೇ ಸಮಯದಲ್ಲಿ ಇಂಡಿಗೋ ವಿಮಾನ ಸಿಬ್ಬಂದಿ ಹೈದರಾಬಾದ್ ವಿಮಾನ ನಿಲ್ದಾಣದ ಕಮಾಂಡ್ ಸೆಂಟರ್‌ನೊಂದಿಗೆ ಸಮನ್ವಯ ಸಾಧಿಸಿ ವಿಮಾನದಿಂದ ಇಳಿದ ತಕ್ಷಣದ ಸಹಾಯಕ್ಕಾಗಿ ಆಂಬ್ಯುಲೆನ್ಸ್, ವೀಲ್‌ಚೇರ್ ಮತ್ತು ತುರ್ತು ವೈದ್ಯರನ್ನು ವ್ಯವಸ್ಥೆ ಮಾಡಲಾಯಿತು.

ವೈದ್ಯರು, ಕ್ಯಾಬಿನ್ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರ ನಡುವಿನ ಸಹಯೋಗದ ಪ್ರಯತ್ನವು ಹೈದರಾಬಾದ್ ವಿಮಾನ ನಿಲ್ದಾಣವನ್ನು ತಲುಪುವ ಮೊದಲು ವೃದ್ಧನನ್ನು ಸರಿಪಡಿಸಲಾಗಿತ್ತು. ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಡಾ. ರೆಡ್ಡಿ ಅವರ ತ್ವರಿತ ಪ್ರತಿಕ್ರಿಯೆಯನ್ನು ಇಂಡಿಗೊ ತಂಡ ಮತ್ತು ಪ್ರಯಾಣಿಕರು ಶ್ಲಾಘಿಸಿದರು.