ಫಿಜಿ (Fiji) ತನ್ನ ಪ್ರವಾಸೋದ್ಯಮದಲ್ಲಿ (Tourism) ಇತಿಹಾಸ ನಿರ್ಮಿಸಿದೆ. 2024ರ ಒಳಗಡೆ ದಕ್ಷಿಣ ಪೆಸಿಫಿಕ್‌ನ (South Pacific) ಈ ಸೌಂದರ ದ್ವೀಪ ರಾಷ್ಟ್ರ ಮೊದಲ ಬಾರಿಗೆ 10 ಲಕ್ಷಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಿ ದಾಖಲೆಯ ಸಂಖ್ಯೆಯನ್ನು ತಲುಪಿದೆ. ಈ ದಾಖಲೆಯಲ್ಲೇ ಮತ್ತೊಂದು ದಾಖಲೆ ಎಂದರೆ — ಭಾರತ ಈಗ ಫಿಜಿಯ ಟಾಪ್ 10 ಪ್ರವಾಸಿ ಮೂಲ ದೇಶಗಳ ಪಟ್ಟಿ ಸೇರಿದೆ.

ಫಿಜಿಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಿಂದ ಫಿಜಿಗೆ ಆಗುವ ಪ್ರವಾಸದ ಪ್ರಮಾಣ ಶೇ.6 ವಾರ್ಷಿಕ ಬೆಳವಣಿಗೆಯೊಂದಿಗೆ ದೇಶದ ಒಟ್ಟಾರೆ ಪ್ರವಾಸಿ ಬೆಳವಣಿಗೆಗಿಂತಲೂ ಮೇಲುಗೈ ಸಾಧಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಫಿಜಿಯ ಏರಿಕೆಯ ಹಿಂದೆ ಮಾದರಿಯಾಗಿರುವ ಮಾರುಕಟ್ಟೆ ತಂತ್ರಗಳು ಸರಿಯಾಗಿಯೇ ಕಾರ್ಯನಿರ್ವಹಿಸುತ್ತಿವೆ ಎಂದು ಊಹಿಸಲಾಗಿದೆ.

ಭಾರತೀಯ ಪಾಸ್ಪೋರ್ಟ್‌ದಾರರಿಗೆ 'Happy Passport' ಅಭಿಯಾನದಂತೆ ವಿಶಿಷ್ಟವಾದ ಜಾಹಿರಾತು ತಂತ್ರ, ವೀಸಾ ಮುಕ್ತ ಪ್ರವೇಶ, ಬಾಲಿವುಡ್ ಸೆಲೆಬ್ರಿಟಿಗಳ ಪ್ರಚಾರ, ಸಿಂಗಪುರ್ ಮತ್ತು ಹಾಂಗ್‌ಕಾಂಗ್ ಮೂಲಕ ಸುಧಾರಿತ ವಿಮಾನ ಸಂಪರ್ಕ ಎಲ್ಲವೂ ಫಿಜಿಯ ವೈಭವವನ್ನು ಭಾರತೀಯ ಪ್ರವಾಸಿಗರ ಕನಸಿನಲ್ಲಿ ನಾಟಿವೆ.

ಟೂರಿಸಂ ಫಿಜಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬ್ರೆಂಟ್ ಹಿಲ್ “ಭಾರತ ಈಗ ನಮಗೆ ಅತಿ ಪ್ರಮುಖ ಮಾರುಕಟ್ಟೆಯಾಗಿದೆ. ನಾವು ಭಾರತದ ಪ್ರವಾಸಿ ಏಜೆಂಟ್‌ಗಳು, ಮಾಧ್ಯಮ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ವಿಮಾನ ಸಂಪರ್ಕವನ್ನೂ ಏಷ್ಯನ್ ಹಬ್‌ಗಳ ಮೂಲಕ ವಿಸ್ತರಿಸಲು ಸರ್ಕಾರವೂ ಮುಂದಾಗಿದೆ.” ಎಂದು ಅಭಿಪ್ರಾಯಪಟ್ಟಿದ್ದಾರೆ.

ಫಿಜಿ ಏಕೆ ಭಾರತೀಯರ ಮೆಚ್ಚಿನ ಸ್ಥಳವಾಗುತ್ತಿದೆ?

ಸಾಂಸ್ಕೃತಿಕ ನಂಟು:

ಫಿಜಿಯ ಶೇ.40 ಜನಸಂಖ್ಯೆ ಭಾರತೀಯ ಮೂಲದ್ದಾಗಿದೆ. ಹಿಂದಿ ಮಾತನಾಡುವವರು, ಭಾರತೀಯ ಆಹಾರ, ದೀಪಾವಳಿ, ಹೊಳಿ ಹಬ್ಬಗಳ ಆಚರಣೆ — ಫಿಜಿಯಲ್ಲೇ ಒಂದು ಭಾರತವನ್ನು ಕಾಣಬಹುದು.

ವೀಸಾ ಮುಕ್ತ ಪ್ರವೇಶ:

ವೀಸಾ ಲಭ್ಯತೆ ಭಾರತೀಯ ಪ್ರವಾಸಿಗರಿಗೆ ಅಡ್ಡಿಯಿಲ್ಲದೆ ತಕ್ಷಣದ ಯೋಜನೆ ಮಾಡಿಕೊಳ್ಳಲು ಅನುಕೂಲ ಮಾಡಿದೆ.

ಅನುರೂಪಿತ ಅನುಭವಗಳು:

ವೆಲ್‌ನೆಸ್, ಸಾಹಸಮಯ ಕ್ರಿಯೆಗಳು, ಹನಿಮೂನ್ ಪ್ಯಾಕೇಜುಗಳು, MICE ಪ್ಲ್ಯಾನಿಂಗ್ — ಎಲ್ಲಾ ಭಾರತೀಯ ರುಚಿಗೆ ತಕ್ಕಂತೆ ಡಿಸೈನ್ ಮಾಡಲಾಗಿದೆ.

ಬಾಲಿವುಡ್ ಮತ್ತು ಸೋಷಿಯಲ್ ಮೀಡಿಯಾ ಪ್ರಭಾವ:

ಫಿಜಿಯ ನೈಸರ್ಗಿಕ ಸೌಂದರ್ಯ ಈಗ ಇನ್‌ಸ್ಟಾಗ್ರಾಂ ರೀಲ್ಸ್‌ನ ಹಾಟ್‌ಸ್ಪಾಟ್. ಬಾಲಿವುಡ್ ಸ್ಟಾರ್‌ಗಳ ಮದುವೆ, ವೆಕೆಷನ್ ಫೋಟೋಗಳು ಫಿಜಿಯ ರೋಮಾಂಚನವನ್ನು ಜಾಗತಿಕ ಬಾನಿನಲ್ಲಿ ತೋರಿಸಿವೆ.