Friday, June 13, 2025
Friday, June 13, 2025

ಸೊಲೋ ಟ್ರಿಪ್‌ ಸಾಕು.. ಗುಂಪಿನಲ್ಲಿ ಒಮ್ಮೆ ಟ್ರಿಪ್‌ಗೆ ಹೋಗಿ ಮಜಾ ಇರುತ್ತೆ!

ನಮ್ಮಲ್ಲಿ ಹಲವರು ಸೊಲೋ ಟ್ರಿಪ್‌ ಹೋಗಲು ಬಯಸುತ್ತಾರೆ. ಸೊಲೋ ಟ್ರಿಪ್‌ ಥ್ರಿಲ್ಲಾದ ಅನುಭವ ನೀಡುತ್ತದೆ. ಬೇಕೆಂದೆಡೆಗೆ ಬೇಕಾದ ಸಮಯದಲ್ಲಿ ಆರಾಮವಾಗಿ ಸುತ್ತಾಡಬಹುದು. ಜಂಜಾಟವಿರುವುದಿಲ್ಲ. ಫುಲ್‌ ಎಂಜಾಯ್‌ ವೈಬ್‌ ಅದು. ಆದರೆ ಗ್ರೂಪ್‌ ಟ್ರಿಪ್‌ನಲ್ಲೂ ಮಜಾವಿದೆ. ಸೊಲೋ ಟ್ರಿಪ್‌ ಹೋಗುವವರು ಒಮ್ಮೆಯಾದರೂ ಗ್ರೂಪ್‌ ಟ್ರಿಪ್‌ ಹೋದರೆ ಮಜಾ ಇರುತ್ತದೆ.

'Go Solo' ಎಂಬಂಥ ಮಾತಿದೆ. ಹಲವರಿಗೆ ಸೊಲೋವಾಗಿ ಇರುವುದು ಎಂದರೆ ಹೆಚ್ಚು ಇಷ್ಟ. ಅದು ಏಕಾಂಗಿತನವಲ್ಲ ಎನ್ನುವವರಿದ್ದಾರೆ. ಅಂಥವರು ಟ್ರಿಪ್‌ಗೂ ಸೊಲೋ ಹೋಗಲು ಬಯಸುತ್ತಾರೆ. ಸೊಲೋ ಟ್ರಿಪ್‌ ಥ್ರಿಲ್ಲಾದ ಅನುಭವ ನೀಡುತ್ತದೆ. ಬೇಕೆಂದೆಡೆಗೆ ಬೇಕಾದ ಸಮಯದಲ್ಲಿ ಆರಾಮವಾಗಿ ಸುತ್ತಾಡಬಹುದು. ಮೈ ಕೈ ಅರಳಿಸಿಕೊಂಡು ಕುಣಿಯಬಹುದು. ಯಾವುದೇ ಜಂಜಾಟವಿರುವುದಿಲ್ಲ. ಫುಲ್‌ ಎಂಜಾಯ್‌ ವೈಬ್‌ ಅದು. ಆದರೆ ಗ್ರೂಪ್‌ ಟ್ರಿಪ್‌ನಲ್ಲೂ ಮಜಾವಿದೆ. ಸೊಲೋ ಟ್ರಿಪ್‌ ಹೋಗುವವರು ಒಮ್ಮೆಯಾದರೂ ಗ್ರೂಪ್‌ ಟ್ರಿಪ್‌ ಹೋದರೆ ಮಜಾ ಇರುತ್ತದೆ.

ಸೊಲೋ ಟ್ರಿಪ್‌ನಲ್ಲಿ ಒಳ್ಳೆಯ ಅನುಭವ ಸಿಗುತ್ತದಾದರೂ ಗ್ರೂಪ್‌ ಟ್ರಿಪ್‌ನಿಂದಲು ಹಲವು ಅನುಕೂಲಗಳಿವೆ. ಪ್ರವಾಸದಲ್ಲಿ ನಮ್ಮ ಜೊತೆಗೆ ಗೆಳೆಯರಿದ್ದರೆ ಅದರ ಮಜಾವೇ ಬೇರೆ. ದಾರಿ ಎಷ್ಟು ಸವೆದರೂ ಗೊತ್ತಾಗುವುದಿಲ್ಲ. ಗುಂಪಿನ ಪ್ರವಾಸದಲ್ಲಿ ಸಾರ್ಥಕ ಭಾವವಿರುತ್ತದೆ. ನೆನಪುಗಳು ನಮ್ಮನ್ನು ಕಾಡಬೇಕೆಂದರೆ ಜೊತೆಗೆ ಯಾರಾದರೂ ಇರಬೇಕಲ್ಲವೇ? ನಾವು ಏಕಾಂಗಿಯಾಗಿ ಇಡೀ ಜಗತ್ತನ್ನು ಸುತ್ತಬಹುದು. ಆದರೆ ಗೆಳೆಯರೊಂದಿಗೆ ಸುತ್ತಿದ ಪ್ರವಾಸವೇ ನಮ್ಮಲ್ಲಿ ಶಾಶ್ವತವಾಗಿ ಉಳಿಯುವ ನೆನಪು. ಬಹುಕಾಲ ಕಾಡುವ ನೆನಪು. ಗುಂಪು ಪ್ರವಾಸವನ್ನು ದಿ ಬೆಸ್ಟ್‌ ಪ್ರವಾಸ ಎನ್ನಬಹುದು.

ಅಂದಹಾಗೆ ಗುಂಪು ಪ್ರವಾಸದಿಂದ ಎಲ್ಲಾ ರೀತಿಯ ಉಪಯೋಗಗಳಿವೆ. ಅವು ಯಾವುವು? ಇಲ್ಲಿದೆ ಮಾಹಿತಿ.

ಗ್ರೂಪ್‌ ಪವರ್
ಜಗತ್ತು ಬಹಳ ದೊಡ್ಡದು. ಇಲ್ಲಿ ಮನೋಭಾವನೆಯುಳ್ಳ ವ್ಯಕ್ತಿಗಳಿದ್ದಾರೆ. ಹೀಗಿರುವಾಗ ಸೊಲೋ ಟ್ರಿಪ್‌ನ ಮಾತೇಕೆ? ನಮಗೆ ಯಾವ ರೀತಿಯ ಸಮಸ್ಯೆಗಳಿದ್ದರೂ ನಮ್ಮ ಸುತ್ತಲಿರುವ ಜನರು ನಮಗೆ ಧೈರ್ಯ ತುಂಬುತ್ತಾರೆ. ಹೆಗಲ ಗೆಳೆಯರಂತೆ ಸಾಂತ್ವನ ಹೇಳುತ್ತಾರೆ. ಗುಂಪಿನಲ್ಲಿ ಅಗಾಧವಾದ ಶಕ್ತಿ ಇರುತ್ತದೆ. ನಮ್ಮನ್ನು ಅದೆಷ್ಟೋ ಒತ್ತಡಗಳು ಬಾಧಿಸುತ್ತವೆ. ಒತ್ತಡದಿಂದ ಆಚೆ ಬರಲು ಗ್ರೂಪ್‌ ಟ್ರಿಪ್‌ ದಿವ್ಯೌಷಧ.

ಉಳಿತಾಯ
ಗುಂಪಿನಲ್ಲಿ ಪ್ರವಾಸಕ್ಕೆ ಹೊರಟಾಗ ವಸತಿ, ಆಹಾರ, ಫ್ಲೈಟ್ ಬುಕಿಂಗ್ ಇತ್ಯಾದಿಗಳಿಗೆ ಕಡಿಮೆ ಖರ್ಚು ತಗಲುತ್ತದೆ. ಶೇರಿಂಗ್‌ ಇರುವುದರಿಂದ ಪ್ರತಿಯೊಬ್ಬರ ಮೇಲಿನ ಭಾರವೂ ಕಡಿಮೆಯಾಗುತ್ತದೆ. ಹೀಗಾಗಿ ಗುಂಪಿನಲ್ಲಿ ಟ್ರಾವೆಲ್ ಮಾಡುವುದು ಪ್ರಯಾಣ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ನು ಅನೇಕ ಪ್ರವಾಸಿ ತಾಣಗಳಲ್ಲಿ ಗುಂಪಿನಲ್ಲಿ ಬರುವವರಿಗೆ ಪ್ರವೇಶ ಶುಲ್ಕವು ಒಂದು ಟಿಕೆಟ್‌ಗಿಂತ ಕಡಿಮೆಯಿರುತ್ತದೆ. ಹೀಗೆ ಪ್ರತಿಯೊಂದರಲ್ಲೂ ಉಳಿತಾಯವಾಗುತ್ತದೆ. ಹಾಗಾಗಿ ನಿಮ್ಮ ಆಯ್ಕೆ ಗ್ರೂಪ್‌ ಟ್ರಿಪ್‌ ಆಗಿರಲಿ.

ಸುರಕ್ಷತೆ
ಸೊಲೋ ಟ್ರಿಪ್‌ನಲ್ಲಿ ಮಜಾ ಇರುತ್ತದೆಯಾದರೂ ಸುರಕ್ಷತೆ ಇರುವುದಿಲ್ಲ. ಗುಂಪಿನಲ್ಲಿ ಪ್ರಯಾಣಿಸುವುದು ಹೆಚ್ಚು ಸುರಕ್ಷಿತ. ಪ್ರಯಾಣದ ವಿವರಗಳನ್ನು ತಿಳಿದುಕೊಳ್ಳುವುದು, ವಿದೇಶಿ ಸಾರಿಗೆ ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳಲು ಒಬ್ಬರಿಂದ ಸಾಧ್ಯವಿಲ್ಲ. ಗುಂಪಿನಲ್ಲಿ ಹಲವರು ಇರಬೇಕು. ಕೆಲವೊಮ್ಮೆ ಭಾಷೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಗುಂಪು ಪ್ರವಾಸದಲ್ಲಿ ಅಂತಹ ಸಮಸ್ಯೆಗಳು ಕಡಿಮೆ. ಎಷ್ಟೋ ಬಾರಿ ಸೊಲೋ ಟ್ರಿಪ್‌ನಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ಅಷ್ಟೇ ಅಲ್ಲದೆ ಯಾವ ಜಾಗದಲ್ಲಿ ಅದ್ಯಾವ ಅಪಘಾತ ಎದುರಾಗುತ್ತದೆ ಎಂಬುದು ತಿಳಿಯುವುದಿಲ್ಲ. ಗುಂಪು ಪ್ರವಾಸದಲ್ಲಿ ಒಬ್ಬರಿಗೆ ಆಘಾತವಾದರೆ ಉಳಿದವರು ನೆರವಿಗೆ ಬರುತ್ತಾರೆ. ಉಪಚರಿಸುತ್ತಾರೆ.

ಗುಂಪು ಪ್ರವಾಸದಲ್ಲಿ ಇಷ್ಟೆಲ್ಲಾ ಅನುಕೂಲಗಳಿವೆ. ಮೋಜು ಮಸ್ತಿಯೊಂದಿಗೆ ಗೆಳೆಯರೊಡನೆ ಅಮೂಲ್ಯ ಸಮಯವನ್ನು ಕಳೆಯುವ ಅವಕಾಶವನ್ನು ಮಿಸ್‌ ಮಾಡಿಕೊಳ್ಳಬೇಡಿ. ನಾಳೆಯೇ ಹೊರಡಿ. ನಿಮ್ಮೊಂದಿಗೆ ಗುಂಪಿದೆ. ಜಗತ್ತೂ ಇದೆ.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!