ನಿಮ್ಮ ಸಂಗಾತಿಯೊಂದಿಗೆ ವೀಸಾ ಇಲ್ಲದೆಯೇ ಪ್ರಯಾಣಿಸುವ ಬೆಸ್ಟ್ ರೊಮ್ಯಾಂಟಿಕ್ ಸ್ಪಾಟ್ ಇಲ್ಲಿದೆ!
ಹನಿಮೂನ್ ಅಂದರೆ ವಿದೇಶ ಪ್ರಯಾಣ ಎಂಬಂತಾಗಿದೆ ಇಂದಿನ ಜಮಾನ. ಹನಿಮೂನ್‌ಗೆಂದೇ ಪ್ರಸಿದ್ಧವಾಗಿರುವ ಪ್ರವಾಸಿ ತಾಣಗಳಿದ್ದು, ಹೆಚ್ಚಿನ ಕಪಲ್ಸ್ ವಿದೇಶದಲ್ಲಿನ ರೊಮ್ಯಾಂಟಿಕ್ ತಾಣಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಹಜ. ಹಾಗಾಗಿ ವಿದೇಶಕ್ಕೆ ಪ್ರಯಾಣ ಮಾಡಬೇಕಾದರೆ ಮುಂಚಿತವಾಗಿಯೇ ವೀಸಾ ಪಡೆಯಬೇಕು. ಆದರೆ, ನೀವು ಆಯಾ ದೇಶಕ್ಕೆ ಹೋದ ನಂತರವೂ ವೀಸಾ ಪಡೆಯುವ ಅವಕಾಶವೂ ಇರಲಿದ್ದು ನೀವು ಹೋಗಬೇಕಾದ ದೇಶದ ಏರ್ ಪೋರ್ಟ್ ಗೆ ಹೋಗಿ ವೀಸಾ ಪಡೆದು ಪ್ರಯಾಣ ಬೆಳೆಸಬಹುದು. ಇಂತಹ ಬೆಸ್ಟ್ ಆಯ್ಕೆಗಳಿರುವ ಪ್ರಮುಖ ಹನಿಮೂನ್ ಸ್ಪಾಟ್ಗಳ ಮಾಹಿತಿ ಇಲ್ಲಿದೆ.
ನವದೆಹಲಿ: ಮದುವೆಯಾದ ನವ ಜೋಡಿಗಳು ಹನಿಮೂನ್‌ಗೆ ವಿದೇಶ ಪ್ರಯಾಣ ಮಾಡಲು ಒಲವು ತೋರಿಸುತ್ತಾರೆ. ಹನಿಮೂನ್‌ಗೆಂದು ಪ್ರಸಿದ್ಧಿಯಾಗಿರುವ (Honeymoon Places) ಪ್ರಮುಖ ಪ್ರವಾಸಿ ತಾಣಗಳು ಇದ್ದು ಹೆಚ್ಚಿನ ಕಪಲ್ಸ್ ವಿದೇಶದಲ್ಲಿನ ರೊಮ್ಯಾಂಟಿಕ್ ತಾಣಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಹಜ. ಹಾಗಾಗಿ ವಿದೇಶಕ್ಕೆ ಪ್ರಯಾಣ ಮಾಡಬೇಕಾದರೆ ಮುಂಚಿತವಾಗಿಯೇ ವೀಸಾ ಪಡೆಯಬೇಕು. ಆದರೆ, ನೀವು ಆಯಾ ದೇಶಕ್ಕೆ ಹೋದ ನಂತರವೂ ವೀಸಾ ಪಡೆಯುವ ಅವಕಾಶವೂ ಇರಲಿದ್ದು ನೀವು ಹೋಗಬೇಕಾದ ದೇಶದ ಏರ್‌ಪೋರ್ಟ್‌ಗೆ ಹೋಗಿ ವೀಸಾ ಪಡೆದು ಪ್ರಯಾಣ ಬೆಳೆಸಬಹುದು. ಇಂತಹ ಬೆಸ್ಟ್ ಆಯ್ಕೆಗಳಿರುವ ಪ್ರಮುಖ ಹನಿಮೂನ್ ಸ್ಪಾಟ್ಗಳ ಮಾಹಿತಿ ಇಲ್ಲಿದೆ.
ಮಾರಿಷಸ್:
ಮಾರಿಷಸ್ ಒಂದು ನೈಸರ್ಗಿಕ ಸೌಂದರ್ಯ ತಾಣವಾಗಿದ್ದು ಕಡಲತೀರಗಳಲ್ಲಿ ವಿಶ್ರಾಂತಿ ಪಡೆಯಲು ಬಯಸುವ ದಂಪತಿಗಳಿಗೆ ಸೂಕ್ತವಾದ ಪ್ಲೇಸ್ ಆಗಿದೆ. ಇಲ್ಲಿ ಸ್ನಾರ್ಕ್ಲಿಂಗ್ ಮತ್ತು ಸ್ಕೂಬಾ ಡೈವಿಂಗ್‌ನಿಂದ ವಿಂಡ್‌ಸರ್ಫಿಂಗ್ ಮಾಡುವ ಚಟುವಟಿಕೆಯೊಂದಿಗೆ ಐಷಾರಾಮಿ ರೆಸಾರ್ಟ್‌ಗಳು ಕೂಡ ಇರಲಿದೆ. ದ್ವೀಪ ವಿಹಾರವನ್ನು ಮಾಡ ಬಯಸುವ ಪ್ರಯಾಣಿಕರಿಗೆ ಮಾರಿಷಸ್ ಬಜೆಟ್ ಸ್ನೇಹಿ ಆಯ್ಕೆಯಾಗಿದ್ದು, ನವ ದಂಪತಿಗಳಿಗೆ ಪ್ರಯಾಣ ಮಾಡಲು ಬೆಸ್ಟ್ ಆಯ್ಕೆಯಾಗಿದೆ.

ಮಾಲ್ಡೀವ್ಸ್ :
ಈ ದ್ವೀಪವು ಜಗತ್ತಿನ ಅತ್ಯಂತ ವಿಭಿನ್ನವಾದ ವಾಸವಾಗಿದ್ದು ಮಾಲ್ಡೀವ್ಸ್ ವಿವಿಧ ದೃಶ್ಯ ವೀಕ್ಷಣೆಯ ಹಾಗು ಮನರಂಜನಾ ಆಯ್ಕೆಯ ಸ್ಥಳವಾಗಿದೆ. ಇಲ್ಲಿನ ಆಹ್ಲಾದಕರವಾದ ವಾತಾವರಣ, ಸುಂದರವಾದ ನೋಟ ಪ್ರವಾಸಿಗರನ್ನು ಆಕರ್ಷಣೆ ಮಾಡುವಂತಿದೆ. ಹನಿಮೂನ್‌ಗೆ ತೆರಳಲು ಈ ಸ್ಥಳವು ಬೆಸ್ಟ್ ಆಗಿದ್ದು ಇಲ್ಲಿ ಕೃತಕ ಬೀಚ್ ಇರಲಿದ್ದು ಈಜು, ಕಯಾಕಿಂಗ್ ಮತ್ತು ವೇಕ್‌ಬೋರ್ಡಿಂಗ್ ಎಂಜಾಯ್ ಮಾಡಬಹುದು.
ಸೆಶೆಲ್ಸ್:
ಸೆಶೆಲ್ಸ್ ಈ ಸ್ಥಳವು ನವಜೋಡಿಗೆ ಪ್ರಯಾಣ ಮಾಡುವ ಬೆಸ್ಟ್ ಆಯ್ಕೆಯಾಗಿದ್ದು ಯಾವುದೇ ವೀಸಾ ಅವಶ್ಯಕತೆಗಳಿಲ್ಲದೆ ಹೆಚ್ಚಿನ ಅನುಕೂಲತೆಯೊಂದಿಗೆ ಪ್ರಯಾಣ ಮಾಡಬಹುದು. ಇಲ್ಲಿ ಮರಳಿನ ಆಕರ್ಷಿತ ಕಡಲತೀರ, ನೈಸರ್ಗಿಕ ಸೌಂದರ್ಯದ ಅನುಭವ ಪಡೆಯಬಹುದು. ಸೆಶೆಲ್ಸ್ ಅತ್ಯಂತ ಸುಂದರ ತಾಣಕ್ಕೆ ಹೆಸರುವಾಸಿಯಾಗಿದ್ದು ನಿಮ್ಮ ಸಂಗಾತಿಯೊಂದಿಗೆ ಪ್ರಶಾಂತ ಕ್ಷಣಗಳನ್ನು ಆನಂದಿಸುವ ಸ್ಥಳವಾಗಿದೆ.

ದುಬೈ:
ದುಬೈ ಕೂಡ ಒಂದು ಅತ್ಯಾಕರ್ಷಕ ಮತ್ತು ಆಧುನಿಕ ತಾಣವಾಗಿದ್ದು ಕಪಲ್ಸ್‌ಗೆ ಬೆಸ್ಸ್ ಪ್ರವಾಸಿ ತಾಣ. ಐಷಾರಾಮಿ ಹೋಟೆಲ್, ಶಾಪಿಂಗ್ ಮಾಲ್, ರೆಸಾರ್ಟ್‌ಗಳು ಪ್ರವಾಸಿಗರಿಗೆ ಆಕರ್ಷಣೀಯವಾಗಿದ್ದು ಸುಲಭವಾಗಿ ಪ್ರಯಾಣ ಮಾಡಬಹುದಾದ ಸ್ಥಳ ವಾಗಿದೆ. ದುಬೈನಲ್ಲಿ ಮಾಲ್ ಆಫ್ ದಿ ಎಮಿರೇಟ್ಸ್ ಅದ್ಭುತವಾದ ಶಾಪಿಂಗ್ ರೆಸಾರ್ಟ್ ಆಗಿದ್ದು ದುಬೈನ ಅತ್ಯಂತ ಸುಂದರವಾದ ಪ್ರವಾಸಿ ಆಕರ್ಷಣೆಗಳಲ್ಲಿ ಇದು ಕೂಡ ಒಂದು.
ಕಾಂಬೋಡಿಯ:
ಭಾರತೀಯರು ಹೆಚ್ಚಾಗಿ ಭೇಟಿ ನೀಡುವ ವಿದೇಶ ಪ್ರವಾಸಗಳಲ್ಲಿ ಕಾಂಬೋಡಿಯಾ ಕೂಡ ಒಂದಾಗಿದೆ. ಇಲ್ಲಿನ ಅಂಕೋರ್‌ವಾಟ್ ದೇಗುಲ ಹಾಗೂ ಇಲ್ಲಿರುವ ಅನೇಕ ಅದ್ಭುತ ದೇಗುಲಗಳ ವೀಕ್ಷಣೆ ಮನಸ್ಸಿಗೆ ಬಲು ಆನಂದವನ್ನು ನೀಡಲಿದೆ. ಸಿಹಾನೌಕ್ವಿಲ್ಲೆ ಬೀಚ್‌ನಲ್ಲಿ ವಿಶ್ರಾಂತಿ ಪಡೆಯಲು, ಸಮುದ್ರ ವಿಹಾರವನ್ನು ಆನಂದಿಸಲು, ಸ್ನಾರ್ಕ್ಲಿಂಗ್ ಅಥವಾ ಸ್ಕೂಬಾ ಡೈವಿಂಗ್‌ನಲ್ಲಿ ಪಾಲ್ಗೊಳ್ಳಲು ಸೂಕ್ತ ತಾಣವಾಗಿದೆ.

ಥೈಲ್ಯಾಂಡ್ :
ಈ ತಾಣವು ಅತ್ಯಂತ ಐಷಾರಾಮಿ ಹಾಗು ಬಜೆಟ್ ಸ್ನೇಹಿ ವಾಸ್ತವ್ಯಕ್ಕೆ ಹೆಸರುವಾಸಿಯಾಗಿದ್ದು ಸಂಗಾತಿಗಳಿಗೆ ಪ್ರಯಾಣ ಬೆಳೆಸುವ ಉತ್ತಮ ಸ್ಥಳವಾಗಿದೆ. ಇಲ್ಲಿ ಅನೇಕ ಬೀಚ್ ತಾಣಗಳು ಉತ್ಸಾಹಭರಿತ ವಾತಾವರಣದೊಂದಿಗೆ ಬೀಚ್ ಪಾರ್ಟಿಗಳನ್ನು ಆಯೋಜನೆ ಮಾಡುವ ಅವಕಾಶವು ಇದೆ.
ನೇಪಾಳ:
ಭಾರತೀಯರಿಗೆ ಬಜೆಟ್ ಸ್ನೇಹಿ ಪ್ರವಾಸ ಮಾಡಲು ನೇಪಾಳ ದೇಶ ಬೆಸ್ಟ್ ಆಗಿದ್ದು ರೊಮ್ಯಾಂಟಿಕ್ ಪ್ರವಾಸ ಮಾಡುವವರಿಗೆ, ನೈಸರ್ಗಿಕ ಸೌಂದರ್ಯ ಇಷ್ಟ ಪಡುವವರಿಗೆ ಉತ್ತಮ ಪ್ಲೇಸ್ ಇದಾಗಿದೆ. ಈ ತಾಣವು ವಾರಾಂತ್ಯದ ವಿಹಾರಕ್ಕೆ ಅತ್ಯಂತ ಸೂಕ್ತವಾಗಿದ್ದು ಇಲ್ಲಿ ಪ್ರಮುಖವಾಗಿ ಮೋಜು ಮತ್ತು ಉತ್ಸಾಹದ ಚಟುವಟಿಕೆಯನ್ನು ಕೈಗೊಳ್ಳಬಹುದು.

ಹಾಂಗ್ ಕಾಂಗ್ :
ಭಾರತೀಯರ ಅಚ್ಚುಮೆಚ್ಚಿನ ತಾಣವಾಗಿದ್ದು, ಇಲ್ಲಿನ ವೈವಿಧ್ಯಮಯ ದಿನಸಿ ಮತ್ತು ಬೀದಿ ಆಹಾರ ಪದ್ದತಿಯು ಜನರನ್ನು ಕೈಬೀಸಿ ಕರೆಯುತ್ತಿದೆ. ನವದಂಪತಿಗೆ ಹನಿಮೂನ್ ಹೋಗಲು ಈ ಸ್ಥಳವು ಉತ್ತಮ ಆಯ್ಕೆಯಾಗಿದ್ದು ವೀಸಾ ಇಲ್ಲದೆಯೇ ನೀವು ಪ್ರಯಾಣ ಮಾಡಲು ಇಲ್ಲೂ ಅವಕಾಶ ಇದೆ.