ಜಗತ್ತಿನಲ್ಲಿ ಒಂದೇ ಒಂದು ಸೊಳ್ಳೆಯೂ ಇಲ್ಲದ ದೇಶವಿದೆ ಅಂದರೆ ನೀವು ನಂಬಲೇಬೇಕು
ಐಸ್ಲ್ಯಾಂಡ್ ದೇಶದಲ್ಲಿ ಹುಡುಕಿದರೂ ಒಂದು ಸೊಳ್ಳೆಯೂ ಕಾಣಸಿಗುವುದಿಲ್ಲ. ಅಲ್ಲಿ ಸೊಳ್ಳೆಗಳು ಮಾತ್ರವಲ್ಲ, ಕೀಟಗಳು ಮತ್ತು ಹಾವುಗಳು ಸಹ ಇಲ್ಲವೆಂದರೆ ನಂಬುತ್ತೀರಾ ?
ಪ್ರಪಂಚದಾದ್ಯಂತ ಜನರು ಸೊಳ್ಳೆಗಳ ಭಯದಿಂದಲೇ ಕಾಲ ಕಳೆಯುತ್ತಾರೆ..ಮನೆ, ಆಫೀಸು, ಮಾರ್ಕೆಟ್, ಪಾರ್ಕ್ ಹೀಗೆ ಎಲ್ಲೆಂದರಲ್ಲಿ ಸೊಳ್ಳೆ ಕಾಟದಿಂದ ತತ್ತಿರಿಸಹೋಗಿದ್ದಾರೆ. ಸೊಳ್ಳೆಯ ಭಯದಿಂದ, ರೋಗ ಹರಡಬಹುದೆಂಬ ಭೀತಿಯಿಂದ ಸೊಳ್ಳೆ ಪರದೆ, ಸೊಳ್ಳೆ ಬತ್ತಿ, ಮಸ್ಕ್ಯುಟೊ ಬ್ಯಾಟ್ ಗಳನ್ನು ಬಳಸಿಕೊಂಡು ದಿನ ಕಳೆಯುತ್ತಾರೆ. ಆದರೆ ಜಗತ್ತಿನಲ್ಲಿ ಒಂದೇ ಒಂದು ಸೊಳ್ಳೆಯೂ ಇಲ್ಲದ ದೇಶವಿದೆ ಎಂದು ಹೇಳಿದರೆ ನೀವು ನಂಬುತ್ತೀರಾ ?
ಹೌದು, ಇಲ್ಲಿ ಸೊಳ್ಳೆಗಳು ಮಾತ್ರವಲ್ಲ, ಯಾವುದೇ ಕೀಟಗಳೂ ಸಹ ಕಾಣ ಸಿಗುವುದಿಲ್ಲ. ಮತ್ತು ಹಾವುಗಳೇ ಇಲ್ಲ. ಸೊಳ್ಳೆಗಳ ಬಗ್ಗೆ ಹೇಳುವುದಾದರೆ, ಇಲ್ಲಿನ ಜನರಿಗೆ ಬಹುಶಃ ಸೊಳ್ಳೆಗಳು ಏನೆಂದು ತಿಳಿದಿರುವುದಿಲ್ಲ. ಆ ದೇಶದ ಮಾಹಿತಿ ಇಲ್ಲಿದೆ.

ಐಸ್ಲ್ಯಾಂಡ್ ನಲ್ಲಿ ಹುಡುಕಿದರೂ ಸೊಳ್ಳೆ ಸಿಗದು:
ಯುರೋಪ್ನ ಖಂಡ ಭಾಗ ಮತ್ತು ಗ್ರೀನ್‍ಲ್ಯಾಂಡ್ಗಳ ಮಧ್ಯೆ ಅಟ್ಲಾಂಟಿಕ್ ಮಹಾಸಾಗರದಲ್ಲಿ ದೇಶ ಐಸ್ಲ್ಯಾಂಡ್. ವರ್ಲ್ಡ್ ಅಟ್ಲಾಸ್ ಪ್ರಕಾರ, ಈ ವಿರಳ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಸುಮಾರು 1300 ಜಾತಿಯ ಜೀವಿಗಳು ವಾಸಿಸುತ್ತವೆ. ಆದರೆ ಸೊಳ್ಳೆಗಳ ಒಂದು ಕುರುಹು ಕೂಡ ಇಲ್ಲಿಲ್ಲ. ಆದರೆ ಗಮನಿಸಬೇಕಿರುವ ಅಂಶವೆಂದರೆ ಗ್ರೀನ್‌ಲ್ಯಾಂಡ್, ಸ್ಕಾಟ್ಲೆಂಡ್ ಮತ್ತು ಡೆನ್ಮಾರ್ಕ್‌ನಂತಹ ನೆರೆಯ ರಾಷ್ಟ್ರಗಳಲ್ಲಿ ನೀವು ಸಾಕಷ್ಟು ಸೊಳ್ಳೆಗಳನ್ನು ಕಾಣಬಹುದು. ಆದರೆ ಐಸ್ಲ್ಯಾಂಡ್‌ನಲ್ಲಿ ಸೊಳ್ಳೆಗಳು ಇಲ್ಲದಿರುವುದು ಅನೇಕ ಸಂಶೋಧಕರಿಗೆ ಆಸಕ್ತಿಯ ವಿಷಯವಾಗಿಯೇ ಉಳಿದಿದೆ.
ಸೊಳ್ಳೆಗಳು ಸಂತಾನೋತ್ಪತ್ತಿಗೆ ಅವಕಾಶ ಇಲ್ಲಿಲ್ಲ:
ಐಸ್ಲ್ಯಾಂಡ್‌ನಲ್ಲಿ ಸೊಳ್ಳೆಗಳ ಈ ಸಂಗತಿಯ ಬಗ್ಗೆ ಹಲವು ರೀತಿಯ ಮಾಹಿತಿಗಳು ಹೊರಬರುತ್ತವೆ. ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಲು ಆಳವಿಲ್ಲದ ಕೊಳಗಳು ಮತ್ತು ಇತರ ಜಲಮೂಲಗಳಲ್ಲಿ ನಿಂತ ನೀರು ಬೇಕಾಗುತ್ತದೆ. ಅಲ್ಲಿ ಮೊಟ್ಟೆಗಳು ಹುಳುಗಳಾಗಿ ಹೊರಬರುತ್ತವೆ. ನಂತರ ಲಾರ್ವಾಗಳಿಗೆ ನಿರ್ದಿಷ್ಟ ಸಮಯದವರೆಗೆ ನಿರ್ದಿಷ್ಟ ತಾಪಮಾನದಲ್ಲಿ ನಿಂತ ನೀರು ಬೇಕಾಗುತ್ತದೆ. ಈ ಸಂಪೂರ್ಣ ಚಕ್ರದಲ್ಲಿ, ಸೊಳ್ಳೆಗಳು ಅಭಿವೃದ್ಧಿ ಹೊಂದಲು ಸಮಯ ನೀಡುವಷ್ಟರ ಮಟ್ಟಿನ ಯಾವುದೇ ನಿಶ್ಚಲವಾದ ಜಲಮೂಲಗಳು ಐಸ್ಲ್ಯಾಂಡ್‌ನಲ್ಲಿ ಇಲ್ಲ.

ಇನ್ನೊಂದು ಕಾರಣವೆಂದರೆ ಐಸ್ಲ್ಯಾಂಡ್ ಅತ್ಯಂತ ಕಡಿಮೆ ತಾಪಮಾನವನ್ನು ಹೊಂದಿದ್ದು, ಕೆಲವೊಮ್ಮೆ -38 ಡಿಗ್ರಿ ಸೆಲ್ಸಿಯಸ್ ಅನ್ನು ಸಹ ತಲುಪುತ್ತದೆ. ಇಲ್ಲಿನ ನೀರು ಬೇಗನೆ ಗಟ್ಟಿಯಾಗಿಬಿಡುತ್ತದೆ. ಈ ವೇಳೆ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುವುದು ಅಸಾಧ್ಯವಾಗಿದೆ.. ಅಲ್ಲದೆ, ಐಸ್ಲ್ಯಾಂಡ್‌ನ ನೀರು, ಮಣ್ಣು ಮತ್ತು ಸಾಮಾನ್ಯ ಪರಿಸರ ವ್ಯವಸ್ಥೆಯ ರಚನೆಯು ಸೊಳ್ಳೆಗಳು ವೃದ್ಧಿಯಾಗುವುದು ಹಾಗಿರಲಿ, ವಾಸಕ್ಕೂ ಯೋಗ್ಯವಲ್ಲದ ಸ್ಥಳವಾಗಿದೆ.
ಹಾವುಗಳಿಲ್ಲ, ಕೀಟಗಳಂತೂ ಇಲ್ಲವೇ ಇಲ್ಲ :
ಐಸ್ಲ್ಯಾಂಡ್ ನಲ್ಲಿ ಸೊಳೆಗಳಷ್ಟೇ ಅಲ್ಲ, ಯಾವ ಕೀಟಗಳನ್ನೂ ಸಹ ಕಾಣಸಿಗುವುದಿಲ್ಲ. ಹಾವಿನ ಭಯವಂತೂ ಇಲ್ಲಿನವರಿಗಿಲ್ಲ. ಯಾಕೆಂದರೆ ಹಾವುಗಳಿಗೆ ಯೋಗ್ಯವಾದ ವಾತಾವರಣ ಇಲ್ಲಿಲ್ಲ. ಇಲ್ಲಿನ ಹವಾಮಾನವು ಅವುಗಳ ಬೆಳವಣಿಗೆಗೆ ಅನುಕೂಲಕರವಾಗಿಲ್ಲ.

ಸೊಳ್ಳೆಗಳು ಹೆಚ್ಚಿರುವ ದೇಶಗಳಿವು:
ಬ್ರೆಜಿಲ್, ಇಂಡೋನೇಷ್ಯಾ, ಮಲೇಷ್ಯಾ, ಥೈಲ್ಯಾಂಡ್, ಆಸ್ಟ್ರೇಲಿಯಾ ಮತ್ತು ಫಿಲಿಪೈನ್ಸ್ ದೇಶಗಳು ಬೆಚ್ಚಗಿನ ವಾತಾವರಣವನ್ನು ಹೊಂದಿದ್ದು, ಹೇರಳವಾದ ಜೌಗು ಪ್ರದೇಶಗಳು ಮತ್ತು ಹೆಚ್ಚಿನ ಸಸ್ಯವರ್ಗಗಳನ್ನು ಹೊಂದಿದೆ. ಇದು ಸೊಳ್ಳೆಗಳ ಬೆಳವಣಿಗೆಗೆ ಪೂರಕವೂ ಆಗಿರುವುದರಿಂದ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೊಳ್ಳೆಗಳು ಕಾಣಸಿಗುತ್ತವೆ.