Friday, June 13, 2025
Friday, June 13, 2025

ʻಫ್ಲೈಯಿಂಗ್‌ ಫೋಬಿಯಾʼ ನಿಮ್ಮನ್ನು ಕಾಡುತ್ತಿದ್ದರೆ, ಈ ಸಲಹೆಗಳನ್ನು ಅನುಸರಿಸಿ ನೋಡಿ...

ವಿಮಾನ ಯಾನ ಮಾಡಲೇಬೇಕು. ಆದರೆ ವಿಮಾನದೊಳಗೆ ಹೋಗುತ್ತಿದ್ದಂತೆ ಹೃದಯದ ಬಡಿತ ಹೆಚ್ಚಾಗುತ್ತದೆ, ಮನಸ್ಸಿನಲ್ಲಿ ಏನೋ ಭಯ. ಹೊಟ್ಟೆಯೊಳಗೆ ನೋವಿನ ಅನುಭವ. ನೀವು ನರ್ವಸ್ ಪ್ಲೈಯರ್ ಎಂದಾದರೆ ವಿಮಾನ ಪ್ರಯಾಣದಲ್ಲಿ ಸುಖಕರವಾಗಿಸಲು ಈ ಮಾಹಿತಿಗಳನ್ನು ತಿಳಿದುಕೊಳ್ಳಿ.

ಅನೇಕರಿಗೆ ವಿಮಾನದಲ್ಲಿ ಪ್ರಯಾಣ ಮಾಡುವುದೆಂದರೆ ಏನೋ ಖುಷಿ, ರೋಮಾಂಚನವನ್ನುಂಟು ಮಾಡುತ್ತದೆ. ಆದರೆ ಇನ್ನೂ ಅನೇಕರಿಗೆ ವಿಮಾನ ಹತ್ತುವ ಮುನ್ನವೇ ಮನದೊಳಗೆ ಪ್ರಾರಂಭವಾಗುವ ಆತಂಕ ವಿಮಾನದಲ್ಲಿ ಸೀಟ್‌ ನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಮತ್ತಷ್ಟು ಹೆಚ್ಚಾಗುತ್ತದೆ. ಸಾಮಾನ್ಯ ಕ್ಯಾಬಿನ್ ಶಬ್ದಗಳನ್ನು ಕೇಳುವುದೂ ಸಹ ಭಯಕ್ಕೆ ಕಾರಣವಾಗಿಬಿಡುತ್ತದೆ. ವಿಮಾನ ಟೇಕ್‌ ಆಫ್‌ ಆಗುತ್ತಿದ್ದಂತೆ ಉಸಿರಾಡುವುದೂ ಕಷ್ಟವೇನೋ ಎಂಬಂಥ ಸ್ಥಿತಿಯಲ್ಲಿರುತ್ತದೆ. ಇಂತಹ ವ್ಯಕ್ತಿಗಳನ್ನು ʻನರ್ವಸ್‌ ಪ್ಲೈಯರ್‌ʼ ಅಥವಾ ʻಫ್ಲೈಯಿಂಗ್‌ ಫೋಬಿಯಾʼ ಇರುವವರಾಗಿ ಗುರುತಿಸಲಾಗುತ್ತದೆ.

ಆದರೆ ಇಂದು ವಿಮಾನ ಪ್ರಯಾಣವು ಅತ್ಯಂತ ಸುರಕ್ಷಿತವಾಗಿದೆ. ಆದರೆ ಕೆಲವು ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮೊಳಗಿರುವ ಭಯದಿಂದ ಹೊರಬಂದು, ನಿಮ್ಮ ಮುಂದಿನ ಪ್ರಯಾಣವನ್ನು ಹೆಚ್ಚು ಸುಗಮವಾಗಿಸಿಕೊಳ್ಳಬಹುದು.

ʻಫ್ಲೈಯಿಂಗ್‌ ಫೋಬಿಯಾʼ ದಿಂದ ಹೊರಬರಲು ಈ 5 ಸಲಹೆಗಳನ್ನು ಅನುಸರಿಸಿ:

ಆಳವಾದ ಉಸಿರಾಟ ಎಲ್ಲದಕ್ಕೂ ಪರಿಹಾರ

ಸಾಮಾನ್ಯವಾಗಿ ಆಳವಾದ ಉಸಿರಾಟ ಇಲ್ಲವೇ ಡೀಪ್‌ ಬ್ರೀದಿಂಗ್‌ ಮಾಡುವುದರಿಂದ ಆರೊಗ್ಯದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಾಣಲು ನೆರವಾಗುತ್ತದೆ. ಹೃದಯ ಬಡಿತವನ್ನು ನಿಯಂತ್ರಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಟೇಕ್-ಆಫ್ ಮಾಡುವ ಮೊದಲು, ನಿಮ್ಮ ಕಣ್ಣುಗಳನ್ನು ಮುಚ್ಚಿ, ಚಿತ್ತವನ್ನು ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಿ. ನಾಲ್ಕು ಎಣಿಕೆಗಳವರೆಗೆ ಆಳವಾಗಿ ಉಸಿರಾಡಿ. ಹೀಗೆ ಮಾಡುವುದರಿಂದ ನಿಮ್ಮೊಳಗಿರುವ ಆತಂಕ ಕಡಿಮೆಯಾಗುತ್ತದೆ.

Take-A-Deep-Breath

ಆರಾಮದಾಯಕವೆನಿಸುವ ಆಸನವನ್ನು ಆಯ್ಕೆಮಾಡಿಕೊಳ್ಳಿ.

ಆಶ್ಚರ್ಯಕರವೆನ್ನಿಸಿದರೂ ನಂಬಲೇಬೇಕಿರುವ ವಿಚಾರವೊಂದಿದೆ. ನೀವು ಎಲ್ಲಿ ಕುಳಿತುಕೊಳ್ಳುತ್ತೀರಿ ಎಂಬುದು ವಾಸ್ತವವಾಗಿ ನೀವು ಎಷ್ಟು ಆತಂಕಕ್ಕೊಳಗಾಗುತ್ತೀರಿ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಪ್ರಯಾಣಿಕರಿಗೆ ಗೊತ್ತಿರದ ವಿಚಾರವೆಂದರೆ ವಿಮಾನದ ರೆಕ್ಕೆ(wings)ಯ ಬಳಿ ಕುಳಿತುಕೊಳ್ಳುವುದು ಮನಸ್ಸನ್ನು ಶಾಂತವಾಗಿಸುತ್ತದೆಯಂತೆ. ಮುಂಚಿತವಾಗಿಯೇ ಸೀಟ್‌ ಬುಕ್ಕಿಂಗ್‌ ಮಾಡುವ ಅವಕಾಶ ವಿಮಾನ ಯಾನ ಪ್ರಯಾಣಿಕರಿಗೆ ಇರುವುದರಿಂದ ಹತ್ತುವ ಮೊದಲು ಕೊನೆಯ ನಿಮಿಷದ ಒತ್ತಡವನ್ನು ಕಡಿಮೆ ಮಾಡಬಹುದು.

ಪ್ರಯಾಣಕ್ಕೆ ಮುನ್ನ ಕೆಫೀನ್ ಮತ್ತು ಭಾರೀ ಆಹಾರ ಸೇವಿಸದಿರಿ

ವಿಮಾನ ಪ್ರಯಾಣದಲ್ಲಿ ಆತಂಕವನ್ನು ಕಡಿಮೆ ಮಾಡಿಕೊಳ್ಲಬೇಕೆಂದಿದ್ದರೆ ಪ್ರಯಾಣಕ್ಕೂ ಮುನ್ನ ಅತಿಯಾದ ಆಹಾರ ಸೇವನೆ ಅಥವಾ ಕೆಫೀನ್‌ ಸೇವನೆಯನ್ನೂ ಮಾಡದಿರುವುದು ಉತ್ತಮ. ಕೆಫೀನ್ ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತದೆ.. ಬದಲಾಗಿ ನೀರನ್ನು ಹೆಚ್ಚಾಗಿ ಕುಡಿಯಬಹುದು. ಅಥವಾ ಕ್ಯಾಮೊಮೈಲ್ ನಂತಹ ಗಿಡಮೂಲಿಕೆ ಚಹಾಗಳನ್ನು ಸೇವಿಸುವುದರಿಂದ ಮನಸ್ಸನ್ನು ಶಾಂತಗೊಳಿಸಬಹುದು.

what-to-eat-the-night-before-a-flight-1024x683

ಮನಸ್ಸನ್ನು ಬೇರೆ ವಿಚಾರಗಳಲ್ಲಿ ಕೇಂದ್ರೀಕರಿಸಿ

ವಿಮಾನದಲ್ಲಿ ಶಾಂತವಾಗಿರಲು ಸುಲಭವಾದ ಮಾರ್ಗವೆಂದರೆ ನಿಮ್ಮ ಮೆದುಳನ್ನು ಕಾರ್ಯನಿರತವಾಗಿರಿಸಿಕೊಳ್ಳುವುದು. ಹತ್ತುವ ಮೊದಲು ನಿಮ್ಮ ನೆಚ್ಚಿನ ಆಡಿಯೋಬುಕ್‌ಗಳು ಅಥವಾ ಪಾಡ್‌ಕಾಸ್ಟ್‌ಗಳನ್ನು ಡೌನ್‌ಲೋಡ್ ಮಾಡಿ. ನಿಮ್ಮ ನೆಚ್ಚಿನ ಕಾದಂಬರಿ ಅಥವಾ ಕಥೆ ಪುಸ್ತಕವು ಸಮಯ ಕಳೆಯಲು ಸಹಾಯ ಮಾಡುತ್ತದೆ. ನಿಮ್ಮ ಗಮನವನ್ನು ಆತಂಕದ ಆಲೋಚನೆಗಳಿಂದ ದೂರವಿಟ್ಟು ಬೇರೆ ವಿಚಾರಗಳತ್ತ ಹೊರಳುವಂತೆ ಮಾಡಿ ನೋಡಿ.

ನಿಮ್ಮ ಆತಂಕದ ಬಗ್ಗೆ ಕ್ಯಾಬಿನ್ ಸಿಬ್ಬಂದಿಗೆ ತಿಳಿಸಿ

ವಿಮಾನ ಪ್ರಯಾಣವು ನಿಮ್ಮನ್ನು ಆತಂಕಕ್ಕೀಡುಮಾಡಿದರೆ ಕ್ಯಾಬಿನ್ ಸಿಬ್ಬಂದಿಗೆ ಅದನ್ನು ಹೇಳಿಕೊಳ್ಳಲು ಹಿಂಜರಿಯಬೇಡಿ. ಅವರು ಇಂತಹ ಪರಿಸ್ಥಿತಿಯಲ್ಲಿರುವ ಪ್ರಯಾಣಿಕರನ್ನು ನಿಭಾಯಿಸುವ ತರಬೇತಿ ಪಡೆದಿರುತ್ತಾರೆ ಮತ್ತು ಸೂಕ್ತ ಸಂದರ್ಭದಲ್ಲಿ ನಿಮ್ಮ ನೆರವಿಗೆ ಬರುತ್ತಾರೆ.

ʻಫ್ಲೈಯಿಂಗ್‌ ಫೋಬಿಯಾʼ ನಿಮ್ಮನ್ನು ಕಾಡುತ್ತಿದ್ದರೆ, ಪರಿಣಾಮಕಾರಿಯಾಗಿರುವ ಈ ಸಲಹೆಗಳನ್ನು ಅನುಸರಿಸಿ ನೋಡಿ. ಈ ಮೂಲಕ ಮುಂದಿನ ಬಾರಿ ನೀವು ವಿಮಾನದಲ್ಲಿ ಪ್ರಯಾಣಿಸುವಾಗ ಅದೆಷ್ಟು ಬದಲಾವಣೆಯಾಗಲಿದೆ ಎಂಬುದನ್ನು ನೀವೇ ಗಮನಿಸಬಹುದು.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!