Sunday, June 15, 2025
Sunday, June 15, 2025

FASTag ಗೆ ಮುಕ್ತಿ; ಮೇ ಒಂದರಿಂದ ಹೊಸ ಮಾದರಿಯ ಟೋಲ್ ಸೇವೆ

FASTag ಬದಲಿಗೆ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ; ಮೇ ಒಂದರಿಂದ ಚಾಲನೆ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಫಾಸ್ಟ್‌ಟ್ಯಾಗ್ (FASTag) ವ್ಯವಸ್ಥೆಯನ್ನು ಹಂತಹಂತವಾಗಿ ರದ್ದುಗೊಳಿಸಿ ಅದನ್ನು GPS-ಆಧಾರಿತ ಟೋಲ್ ಸಂಗ್ರಹ ವಿಧಾನದೊಂದಿಗೆ ಬದಲಾಯಿಸುತ್ತಿದೆ. ಅದಕ್ಕಾಗಿ ಮೇ 1 ರಿಂದ ರಸ್ತೆ ಪ್ರಯಾಣವನ್ನು ಸುಗಮ, ವೇಗ ಮತ್ತು ಹೆಚ್ಚು ಪಾರದರ್ಶಕವಾಗಿಸುವ ಸಲುವಾಗಿ ಹೊಸ ಕ್ರಮವನ್ನು ಜಾರಿಗೆ ತರುತ್ತಿದೆ.

ಬದಲಾವಣೆ ಏಕೆ?

ಈಗ ಫಾಸ್ಟ್‌ಟ್ಯಾಗ್ ಟೋಲ್ ಬೂತ್‌ಗಳಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ, ಆದರೆ ಅದು ಪರಿಪೂರ್ಣವಾಗಿಲ್ಲ. ದೀರ್ಘ ಸರತಿ ಸಾಲುಗಳು, ತಾಂತ್ರಿಕ ದೋಷಗಳು ಮತ್ತು ಟ್ಯಾಗ್‌ಗಳ ದುರುಪಯೋಗವು ಇನ್ನೂ ಸಮಸ್ಯೆಯಾಗಿಯೇ ಉಳಿದಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಜಾಗತಿಕ ಮಾನದಂಡಗಳಿಗೆ ಸಮಾನವಾಗಿ ಟೋಲ್‌ಗಳನ್ನು ತರಲು, ಸರಕಾರವು ಉಪಗ್ರಹ ಬೆಂಬಲಿತ ಟೋಲ್ ವ್ಯವಸ್ಥೆಗೆ ಬದಲಾಯಿಸುತ್ತಿದೆ.

ಹೊಸ ವ್ಯವಸ್ಥೆ ವಿನ್ಯಾಸ: ನಿಮ್ಮ ಗಾಡಿಯನ್ನು ಎಷ್ಟು ಚಾಲನೆ ಮಾಡುತ್ತೀರಿ ಎಂಬುದರ ಆಧಾರದ ಮೇಲೆ ಸುಂಕಗಳನ್ನು ವಿಧಿಸುವುದು, ಬೂತ್‌ಗಳಲ್ಲಿ ಗಾಡಿ ನಿಲ್ಲಿಸುವ ಅಗತ್ಯತೆಯನ್ನು ತೆಗೆದುಹಾಕುವ ಮೂಲಕ ಬೂತ್ ಗಳಲ್ಲಿ ಕಾಯುವ ಸಮಯವನ್ನು ಕಡಿತಗೊಳಿಸಿ, ಸಂಪರ್ಕರಹಿತ ಚಾಲನೆಯ ಅನುಭವವನ್ನು ಸಕ್ರಿಯಗೊಳಿಸಲು ಯೋಜಿಸಲಾಗಿದೆ.

ಈ ಹೊಸ ಮಾದರಿಯು ಹೆದ್ದಾರಿಯಲ್ಲಿ ನಿಮ್ಮ ವಾಹನದ ಚಲನೆಯನ್ನು ಟ್ರ್ಯಾಕ್ ಮಾಡಲು GPS ತಂತ್ರಜ್ಞಾನವನ್ನು ಬಳಸುತ್ತದೆ. ಇದು Real Time ನಲ್ಲಿ ಟೋಲ್ ಶುಲ್ಕಗಳನ್ನು ಲೆಕ್ಕಾಚಾರ ಮಾಡಲು ANPR (ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ) ಕ್ಯಾಮೆರಾಗಳು ಮತ್ತು ವಾಹನಗಳಿಗೆ ಅಳವಡಿಸಲಾದ GPS ಸಾಧನಗಳನ್ನು ಸಹ ಬಳಸುತ್ತದೆ. ಅಂದರೆ: ನೀವು ಇನ್ನು ಮುಂದೆ ಟೋಲ್ ಬೂತ್ ಗಳಲ್ಲಿ ಅವರು ಹೇಳಿದಷ್ಟು ಹಣವನ್ನು ಪಾವತಿಸುವಂತಿಲ್ಲ – ಇನ್ನೂ ಮೇಲೆ ಶುಲ್ಕಗಳು ನಿಮ್ಮ ಗಾಡಿ ಪ್ರಯಾಣಿಸಿದ ಕಿಲೋಮೀಟರ್‌ಗಳನ್ನು ಆಧರಿಸಿರುತ್ತವೆ. ಮತ್ತೆ ಅದಕ್ಕಾಗಿ ನೀವು ಟೋಲ್ ಪ್ಲಾಜಾಗಳಲ್ಲಿ ನಿಲ್ಲಿಸುವುದು ಬೇಕಿಲ್ಲ ಅಥವಾ ನಿಧಾನಗೊಳಿಸುವುದೂ ಬೇಕಿಲ್ಲ ಟೋಲ್ ಮೊತ್ತವನ್ನು ನೀವು ಲಿಂಕ್ ಮಾಡಿದ ಬ್ಯಾಂಕ್ ಖಾತೆಯಿಂದ ನೇರವಾಗಿ ಕಡಿತಗೊಳಿಸಲಾಗುತ್ತದೆ ನಿಮ್ಮ ಪ್ರಯಾಣ ಮತ್ತು ಪಾವತಿಗಳನ್ನು ಡಿಜಿಟಲ್ ಆಗಿ ಟ್ರ್ಯಾಕ್ ಮಾಡಲು ನಿಮಗೆ ಸಾಧ್ಯವಾಗುತ್ತದೆ.

ನೀವು ಈಗಾಗಲೇ FASTag ಬಳಸುತ್ತಿದ್ದರೆ, ಚಿಂತಿಸಬೇಡಿ - ಏಪ್ರಿಲ್ 30, 2025 ರವರೆಗೆ FASTag ಬಳಸುವುದನ್ನು ಮುಂದುವರಿಸಿ ಅದರ ನಂತರ, ನಿಮ್ಮ ವಾಹನದಲ್ಲಿ ಸರ್ಕಾರದಿಂದ ಅನುಮೋದಿತ GPS ಸಾಧನವನ್ನು ಸ್ಥಾಪಿಸಿ ನಿಮ್ಮ ಬ್ಯಾಂಕ್ ಖಾತೆಯನ್ನು ಈ ಹೊಸ ವ್ಯವಸ್ಥೆಗೆ ಲಿಂಕ್ ಮಾಡಿ ಸಂಪೂರ್ಣವಾಗಿ ಆನ್‌ಬೋರ್ಡ್ ಮಾಡಿದ ನಂತರ, ನಿಮ್ಮ FASTag ಸ್ಟಿಕ್ಕರ್ ಅನ್ನು ತೆಗೆದುಹಾಕಿ.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!