ಭಾರತೀಯ ರೈಲ್ವೆ ಹೊಸ ನಿಯಮದ ಜಾರಿಗೆ ಮುಂದಾಗಿದ್ದು, ವೈಟಿಂಗ್‌ ಲಿಸ್ಟ್‌ನಲ್ಲಿರುವ ಪ್ರಯಾಣಿಕರಿಗೆ ಶಾಕ್‌ ನೀಡಿದೆ. ಹೌದು, ಮೇ 1, 2025 ರಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿರುವ ಭಾರತೀಯ ರೈಲ್ವೆ, ವೇಟಿಂಗ್ ಲಿಸ್ಟ್ ನಲ್ಲಿರುವ ಪ್ರಯಾಣಿಕರನ್ನು ಸ್ಲೀಪರ್ ಅಥವಾ ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವುದನ್ನು ರದ್ದುಗೊಳಿಸಿದೆ. ಸಾಮಾನ್ಯ ಕೋಚ್‌ಗಳಲ್ಲಿ ಮಾತ್ರ ಪ್ರಯಾಣಿಸಬಹುದೆಂದು ತಿಳಿಸಿದೆ. ದೃಢೀಕೃತ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಅನುಕೂಲಕರ ಮತ್ತು ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಲು ಈ ನಿಯಮವನ್ನು ಜಾರಿಮಾಡಲಾಗಿದ್ದು, ನಿಯಮ ಉಲ್ಲಂಘಿಸಿದರಿಗೆ ದಂಡ ಹಾಕುವ ಎಚ್ಚರಿಕೆ ನೀಡಿದೆ. ಅಲ್ಲದೆ ಮುಂಗಡ ಬುಕಿಂಗ್ ಅವಧಿ ಈಗ 120 ದಿನಗಳಿಂದ 60 ದಿನಗಳಿಗೆ ಇಳಿಕೆ ಮಾಡಿದ್ದು, ಪ್ರಯಾಣಿಕರು ಈಗ ನಾಲ್ಕು ತಿಂಗಳ ಬದಲು ಎರಡು ತಿಂಗಳ ಮುಂಚಿತವಾಗಿ ಟಿಕೆಟ್‌ಗಳನ್ನು ಖರೀದಿಸಬಹುದು.

railway

ಇದುವರೆಗೆ ನಿಯಮ ಬೇರೆಯೇ ಇತ್ತು:

ಭಾರತೀಯ ರೈಲ್ವೆ ಇದುವರಿಗೆ ಪ್ರಯಾಣಿಕರಿಗಾಗಿ ನಿಯಮಗಳನ್ನು ಸಡಿವಾಗಿಸಿಬಿಟ್ಟಿತ್ತು. ಕೌಂಟರ್‌ಗಳಲ್ಲಿ ಟಿಕೆಟ್ ಬುಕಿಂಗ್ ಮಾಡಿದ್ದರೂ ವೇಟಿಂಗ್ ಲಿಸ್ಟ್‌ನಲ್ಲಿ ಹೆಸರಿದ್ದರೂ ಅವರು ಸ್ಲೀಪರ್ ಮತ್ತು ಎಸಿ ಕೋಚ್‌ಗಳಲ್ಲಿ ಪ್ರಯಾಣ ಮಾಡಬಹುದಾಗಿತ್ತು. ಆದರೆ, ನಾಳೆಯಿಂದ ಈ ನಿಯಮದಲ್ಲಿ ಬದಲಾವಣೆ ಆಗಲಿದ್ದು, ಇನ್ನು ಮುಂದೆ ಕೌಂಟರ್ ಟಿಕೆಟ್ ಬುಕಿಂಗ್ ಮಾಡಿದವರು ಜನರಲ್ ಬೋಗಿಯಲ್ಲೇ ಪ್ರಯಾಣ ಮಾಡುವುದು ಅನಿವಾರ್ಯವಾಗಿದೆ ಎಂಬುದಾಗಿ ನಾರ್ತ್ ವೆಸ್ಟರ್ನ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಕ್ಯಾಪ್ಟನ್ ಶಶಿ ಕಿರಣ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

cr-20250429tn68109f967c6d9

ರೂಲ್ಸ್‌ ಬ್ರೇಕ್ ಮಾಡಿದರೆ ಭಾರೀ ದಂಡ:

ವೇಟಿಂಗ್ ಟಿಕೆಟ್ ಹೊಂದಿರುವ ಯಾವುದೇ ಪ್ರಯಾಣಿಕರು ಸ್ಲೀಪರ್ ಅಥವಾ ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುತ್ತಿರುವುದು ಗಮನಕ್ಕೆ ಬಂದರೆ ಟಿಕೆಟ್ ತಪಾಸಣಾಧಿಕಾರಿ (TTE) ಅವರಿಗೆ ದಂಡ ವಿಧಿಸುವ ಅಥವಾ ಸಾಮಾನ್ಯ ಕೋಚ್‌ಗೆ ಸ್ಥಳಾಂತರಿಸುವ ಹಕ್ಕು ಇರುತ್ತದೆ. ಬೋರ್ಡಿಂಗ್ ಪಾಯಿಂಟ್‌ನಿಂದ ಮುಂದಿನ ನಿಲ್ದಾಣಕ್ಕೆ ಪ್ರಯಾಣ ದರದ ಜೊತೆಗೆ ಸ್ಲೀಪರ್ ವರ್ಗಕ್ಕೆ 250 ರೂಪಾಯಿವರೆಗೆ ಮತ್ತು ಎಸಿ ವರ್ಗಕ್ಕೆ 440 ರೂಪಾಯಿವರೆಗೆ ದಂಡ ವಿಧಿಸಲಾಗುವುದು.

ಆನ್‌ಲೈನ್ ಬುಕಿಂಗ್‌ಗಳಿಗೆ OTP ಪರಿಶೀಲನೆ:

ಭದ್ರತೆಯನ್ನು ಹೆಚ್ಚಿಸಲು ಮತ್ತು ದುರುಪಯೋಗವನ್ನು ತಡೆಗಟ್ಟಲು, IRCTC ಎಲ್ಲಾ ಆನ್‌ಲೈನ್ ಟಿಕೆಟ್ ಬುಕಿಂಗ್‌ಗಳಿಗೆ ಒಂದು-ಬಾರಿ ಪಾಸ್‌ವರ್ಡ್ (OTP) ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ.