Wednesday, February 4, 2026
Wednesday, February 4, 2026

ಪಾಸ್ ಪೋರ್ಟ್ ಪುಟ ಹರಿದರೆ ಜೈಲು?

ನಿಮ್ಮ ಪಾಸ್‌ಪೋರ್ಟ್ ನಲ್ಲಿ ಇರುವ ಫೊಟೋದಲ್ಲಿ ನೀವು ಕನ್ನಡಕ ಧರಿಸಿರುವುದು ಕಂಡು ಬಂದರೆ ಅದೂ ಕೂಡ ನಿಮ್ಮ ವಿದೇಶ ಪ್ರವಾಸಕ್ಕೆ ತಡೆಯಾಗಿ ನಿಲ್ಲಬಹುದು. 2016ರಿಂದ ಅಮೆರಿಕ ಮತ್ತು ಇತರ ಹಲವು ದೇಶಗಳು ಪಾಸ್‌ಪೋರ್ಟ್ ಫೊಟೋಗಳಲ್ಲಿ ಕನ್ನಡಕ ಧರಿಸಿರುವುದನ್ನು ಅನುಮತಿಸುತ್ತಿಲ್ಲ.

- ವಿ.ದೇಶಿಕಾಚಾರ್

ಪಾಸ್‌ಪೋರ್ಟ್ ಒಂದು ಕೈಯಲ್ಲಿ ಇದ್ದರೆ ಸಾಕು ಆರಾಮವಾಗಿ ಹೊರ ದೇಶಗಳನ್ನು ಸುತ್ತಿಕೊಂಡು ಬರಬಹುದು ಎಂಬುದು ಸಾಕಷ್ಟು ಜನರ ಅಭಿಪ್ರಾಯ. ಆದರೆ ವ್ಯಕ್ತಿಯ ಗುರುತು ಮತ್ತು ರಾಷ್ಟ್ರೀಯತೆಯ ಪುರಾವೆಯಾಗಿ ಕಾರ್ಯನಿರ್ವಹಿಸುವ ಈ ಪಾಸ್‌ಪೋರ್ಟ್ ಅನ್ನು ನೀವು ಜೋಪಾನವಾಗಿಡುವುದು ಕೂಡ ಅಷ್ಟೇ ಮುಖ್ಯ. ಪಾಸ್‌ಪೋರ್ಟ್ ವಿಷಯದಲ್ಲಿ ನೀವು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ನಿಮ್ಮ ವಿದೇಶ ಪ್ರಯಾಣದ ಕನಸನ್ನು ಕನಸಾಗಿಯೇ ಉಳಿಯುವಂತೆ ಮಾಡಬಹುದು.
ಇದನ್ನೂ ಓದಿ: ಹೆನ್ಲಿ ಪಾಸ್‌ಪೋರ್ಟ್‌ ಸೂಚ್ಯಾಂಕದಲ್ಲಿ 80ಕ್ಕೆ ಏರಿದ ಭಾರತ

ಯಾಕೆಂದರೆ ಸರಕಾರವು ನೀಡುವ ಈ ಅಧಿಕೃತ ದಾಖಲೆಯ ಕೆಲವು ಪುಟಗಳನ್ನು ನೀವು ಹರಿದು ಹಾಕಿದರೆ ಅಥವಾ ಅದಕ್ಕೆ ಹಾನಿ ಮಾಡಿದರೆ ಭಾರತೀಯ ನ್ಯಾಯ ಸಂಹಿತಾ(BNS) ಮತ್ತು ಪಾಸ್‌ಪೋರ್ಟ್ ಕಾಯ್ದೆಯಡಿ ಪ್ರಕರಣ ದಾಖಲಾಗಬಹುದು. ಇತ್ತೀಚೆಗಷ್ಟೇ ಇದೇ ರೀತಿಯ ವಿಷಯಕ್ಕೆ 51 ವರ್ಷದ ಪುಣೆ ನಿವಾಸಿಯೊಬ್ಬರನ್ನು ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಕಾರಣ ಇಷ್ಟೇ, ಈ ಆಸಾಮಿ ತಾನು ಬ್ಯಾಂಕಾಕ್‌ಗೆ ಹೋಗಿರುವುದು ತನ್ನ ಕುಟುಂಬಕ್ಕೆ ಗೊತ್ತಾಗಬಾರದು ಎಂದು ಪಾಸ್‌ಪೋರ್ಟ್‌ನ ಕೆಲವು ಪುಟಗಳನ್ನು ಹರಿದು ಹಾಕಿದ್ದ.

ಪಾಸ್‌ಪೋರ್ಟ್ ವಿಷಯದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳುವುದು ಅತ್ಯಗತ್ಯ.

ಹರಿದ ಪಾಸ್‌ಪೋರ್ಟ್ ಬಳಸಬೇಡಿ

ಸ್ವಲ್ಪ ಹರಿದ ಅಥವಾ ಸವೆದ ಪಾಸ್‌ಪೋರ್ಟ್ ನಿಮ್ಮ ಕಣ್ಣಿಗೆ ಚೆನ್ನಾಗಿ ಕಂಡರೂ ಕೂಡ, ಯುಎಸ್, ಯುಕೆ ಮತ್ತು ಷೆಂಗೆನ್‌ನಂಥ ಅನೇಕ ದೇಶಗಳು ಅಂಥ ಪಾಸ್‌ಪೋರ್ಟ್‌ನೊಂದಿಗೆ ಪ್ರವೇಶವನ್ನು ನಿರಾಕರಿಸಬಹುದು. ಪಾಸ್‌ಪೋರ್ಟ್ ತುಂಬಾ ಸವೆದಿದ್ದರೆ, ಹರಿದಿದ್ದರೆ ಅಥವಾ ನೀರಿನಿಂದ ಹಾನಿಗೊಳಗಾಗಿದ್ದರೆ ವಿಮಾನಯಾನ ಸಂಸ್ಥೆಗಳು ಬೋರ್ಡಿಂಗ್ ಅನ್ನು ನಿರಾಕರಿಸುವ ಸಾಧ್ಯತೆ ಹೆಚ್ಚಿದೆ.

ಕಳೆದುಹೋದರೆ ಕಥೆ ಮುಗೀತು!

ಕೆಲಮೊಮ್ಮೆ ಪಾಸ್‌ಪೋರ್ಟ್ ಎಲ್ಲಿ ಇಟ್ಟಿರುತ್ತೇವೆಂದು ತಿಳಿಯದೇ ಹುಡುಕಿ ಹುಡುಕಿ ಸಾಕಾಗಿ ನಂತರ ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ ಹೊಸ ಪಾಸ್‌ಪೋರ್ಟ್ ಬಂದ ನಂತರ ಹಳೆಯ ಕಳೆದುಹೋದ ಪಾಸ್‌ಪೋರ್ಟ್ ಪತ್ತೆಯಾಗಿಬಿಡುತ್ತದೆ. ಆಗ ಅದನ್ನು ಬಳಸಬೇಡಿ. ಏಕೆಂದರೆ ನಿಮ್ಮ ಆ ಹಳೆಯ ಪಾಸ್‌ಪೋರ್ಟ್ ಬಳಸಲು ಸಾಧ್ಯವಿಲ್ಲ. ಅದು ಈಗಾಗಲೇ ಅಮಾನ್ಯವಾಗಿರುತ್ತದೆ.

6 ತಿಂಗಳ ಅವಧಿಗೆ ಮಾನ್ಯ!

ಥೈಲ್ಯಾಂಡ್, ಇಂಡೋನೇಷ್ಯಾ ಮತ್ತು ಯುಎಇಯಂಥ ಅನೇಕ ದೇಶಗಳಲ್ಲಿ, ನಿಮ್ಮ ಪ್ರಯಾಣ ಎಷ್ಟೇ ಚಿಕ್ಕದಾಗಿದ್ದರೂ, ನಿಮ್ಮ ಪಾಸ್‌ಪೋರ್ಟ್ ನಿಮ್ಮ ಪ್ರಯಾಣದ ದಿನಾಂಕದಿಂದ ಕನಿಷ್ಠ 6 ತಿಂಗಳವರೆಗೆ ಮಾನ್ಯವಾಗಿರುವುದು ಅಗತ್ಯ ಎಂದು ಹೇಳುತ್ತದೆ. ನೀವು ಒಂದು ವಾರದ ಟ್ರಿಪ್ ಹೊರಟರೂ ಕೂಡ 6 ತಿಂಗಳವರೆಗೆ ಮಾನ್ಯವಾಗಿರುವುದು ತುಂಬಾ ಅಗತ್ಯ.

ಕನ್ನಡಕ ಧರಿಸಿದ ಪಾಸ್‌ಪೋರ್ಟ್ ಫೊಟೋ

ನಿಮ್ಮ ಪಾಸ್‌ಪೋರ್ಟ್ ನಲ್ಲಿ ಇರುವ ಫೊಟೋದಲ್ಲಿ ನೀವು ಕನ್ನಡಕ ಧರಿಸಿರುವುದು ಕಂಡು ಬಂದರೆ ಅದೂ ನಿಮ್ಮ ವಿದೇಶ ಪ್ರವಾಸಕ್ಕೆ ತಡೆಯಾಗಿ ನಿಲ್ಲಬಹುದು. 2016ರಿಂದ ಅಮೆರಿಕ ಮತ್ತು ಇತರ ಹಲವು ದೇಶಗಳು ಪಾಸ್‌ಪೋರ್ಟ್ ಫೊಟೋಗಳಲ್ಲಿ ಕನ್ನಡಕ ಧರಿಸಿರುವುದನ್ನು ಅನುಮತಿಸುತ್ತಿಲ್ಲ. ಕೆಲವು ಸಂದರ್ಭಗಳಲ್ಲಿ ನಿಮಗೆ ವಿನಾಯಿತಿಗಳನ್ನು ನೀಡಬಹುದು.

ಮಕ್ಕಳ ಪಾಸ್‌ಪೋರ್ಟ್‌ ಬಗ್ಗೆ ಗಮನವಿರಲಿ

ಸಾಮಾನ್ಯವಾಗಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪಾಸ್‌ಪೋರ್ಟ್‌ಗಳ ಸಿಂಧುತ್ವವು ಸಾಮಾನ್ಯವಾಗಿ 5 ವರ್ಷಗಳಿರುತ್ತವೆ. ಅದೇ ಸಮಯದಲ್ಲಿ ವಯಸ್ಕರ ಪಾಸ್‌ಪೋರ್ಟ್‌ಗಳ ಸಿಂಧುತ್ವವು 10 ವರ್ಷಗಳವರೆಗೆ ಇರುತ್ತದೆ. ಆದ್ದರಿಂದ ನೀವು ಹೊರದೇಶಕ್ಕೆ ಭೇಟಿ ನೀಡಲು ಯೋಚಿಸುವ ಮೊದಲು ನಿಮ್ಮ ಪಾಸ್‌ಪೋರ್ಟ್ ಗಿಂತ ಮೊದಲು ಮಕ್ಕಳ ಪಾಸ್‌ಪೋರ್ಟ್ ಅವಧಿಯನ್ನು ಚೆಕ್ ಮಾಡಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!