ಜಪಾನ್‌ನಲ್ಲಿ ನಂಬರ್ '4' ಅನ್ ಲಕ್ಕಿ: ಮತ್ತಷ್ಟು ಆಸಕ್ತಿಕರ ಸಂಗತಿಗಳು!
ಜಪಾನ್‌ನಲ್ಲಿ ಸಾಕಷ್ಟು ಸ್ವಾರಸ್ಯಕರ ಸಂಗತಿಗಳಿವೆ. ಅಲ್ಲಿನ ಹೊಟೇಲ್‌ಗಳಲ್ಲಿ ಸೂಪ್ ಅನ್ನು ಸೊರ್ ಮಾಡಿಯೇ ಕುಡಿಯಬೇಕು. ಅಲ್ಲಿ ವಕ್ರ ಹಲ್ಲಿದ್ದವರೇ ಬ್ಯೂಟಿ ಕ್ವೀನ್. ಹಾಗೆಯೇ ಜಪಾನ್ ದೇಶದಲ್ಲಿ ಸಂಖ್ಯೆ 4 ಅನ್ನು ಅನ್ ಲಕ್ಕಿ ಎಂದು ಪರಿಗಣಿಸಲಾಗಿದೆ.
ಜಪಾನ್‌ನಲ್ಲಿ ಸಾಕಷ್ಟು ಸ್ವಾರಸ್ಯಕರ ಸಂಗತಿಗಳಿವೆ. ಅಲ್ಲಿನ ಹೊಟೇಲ್‌ಗಳಲ್ಲಿ ಸೂಪ್ ಅನ್ನು ಸೊರ್ ಮಾಡಿಯೇ ಕುಡಿಯಬೇಕು. ನೀವು ಸೊರ್ ಮಾಡಿ ಕುಡಿಯದಿದ್ದರೆ ವೇಯಿಟರ್‌ಗಳು ಗುರ್ರ್ ಎನ್ನುತ್ತಾರೆ. ನೀವು ಜೋರಾಗಿ ಸೊರ್ ಮಾಡಿ ಕುಡಿದಷ್ಟು ಅವರು ಹಿಗ್ಗಿ ಹಿರೇಕಾಯಿ ಆಗುತ್ತಾರೆ. ಅದು ನೀವು ಅವರಿಗೆ ಕೊಡಬಹುದಾದ ರಾಷ್ಟ್ರ ಪ್ರಶಸ್ತಿ. ಇನ್ನು ಅಲ್ಲಿನ ವೇಯಿಟರ್‌ಗಳಿಗೆ ಟಿಪ್ಸ್ ಕೊಡುವಂತಿಲ್ಲ. ಹಾಗೆಯೇ ಅಲ್ಲಿ ವಕ್ರ ಹಲ್ಲಿದ್ದ ಹುಡುಗಿಯರೇ ಬ್ಯೂಟಿ ಕ್ವೀನ್. ಹಾಗೆಯೇ ಜಪಾನ್ ದೇಶದಲ್ಲಿ ಸಂಖ್ಯೆ ʼ4ʼ ಅನ್ನು ಅನ್ ಲಕ್ಕಿ ಎಂದು ಪರಿಗಣಿಸಲಾಗಿದೆ. ಹೀಗೆ ಜಪಾನ್‌ನಲ್ಲಿ ನೂರಾರು ಆಸಕ್ತಿಕರ ವಿಷಯಗಳಿವೆ. ಕೆಲವೊಂದನ್ನು ಹೆಕ್ಕಿ ತೆಗೆಯಲಾಗಿದೆ.
ಸಂಖ್ಯೆ ʼ4ʼ ಜಪಾನಿಯರಿಗೆ ಅನ್ ಲಕ್ಕಿ!
ಜಪಾನಿಯರಿಗೆ ಸಂಖ್ಯೆ 4 ಆಗಿ ಬರುವುದಿಲ್ಲ. ಮುಂದುವರೆದ ದೇಶದಲ್ಲೂ ಮೂಢನಂಬಿಕೆಯಿದೆ. ಆದರೆ ಅವರು ಅದನ್ನು ಮೂಢನಂಬಿಕ ಎನ್ನುವುದಿಲ್ಲ. ನಂಬಿಕೆಯೆಂದು ಭಾವಿಸಿದ್ದಾರೆ. ಜಪಾನಿಗಳು ನಾಲ್ಕನ್ನು "ಶಿ" ಎಂದು ಉಚ್ಚರಿಸುತ್ತಾರೆ. ನಾಲ್ಕನೇ ಸಂಖ್ಯೆಯನ್ನು ಅವರು ದುರದೃಷ್ಟಕರವೆಂದು ಕರೆಯುತ್ತಾರೆ. ಅಲ್ಲಿನ ಜನರು ಆ ಉಚ್ಚಾರಣೆಯು ಸಾವು ಎಂಬ ಅರ್ಥವನ್ನು ಹೋಲುತ್ತದೆ ಎನ್ನುತ್ತಾರೆ. ಜಪಾನಿಯರು ತಮ್ಮ ಕಾರಿನ ನಂಬರ್, ಫೋನ್ ನಂಬರ್, ಅಪಾರ್ಟ್‌ಮೆಂಟಿನ ಕೊಠಡಿ ಸಂಖ್ಯೆ ಯಾವುದಕ್ಕೂ ಸಂಖ್ಯೆ ʼ4ʼ ಅನ್ನು ಬಳಸುವುದಿಲ್ಲ ಎನ್ನಲಾಗುತ್ತದೆ. ಅಲ್ಲಿನ ಎಷ್ಟೋ ಕಟ್ಟಡಗಳು ಮೂರು ಅಂತಸ್ತಷ್ಟೇ ಇರುತ್ತದೆ. ನಾಲ್ಕನೇ ಅಂತಸ್ತಿಗೆ ದಾಟುವುದಿಲ್ಲ. ಅರೆ.. ಬರಿಯ ನಂಬರ್ ಅಲ್ಲಿ ಏನಿದೆ? ಎನ್ನಬಹುದು. ಆದರೆ ಜಪಾನಿಯರು ನಂಬರ್‌ನಲ್ಲೇ ಇಡೀ ಭವಿಷ್ಯವಿದೆ ಎನ್ನುತ್ತಾರೆ. ಅವರಿಗೆ ಸಂಖ್ಯಾಶಾಸ್ತ್ರದಲ್ಲಿಯೂ ನಂಬಿಕೆಯಿದೆ.

ಜಪಾನಿಯರಿಗೆ ಆಯಸ್ಸು ಹೆಚ್ಚು!
ಜಪಾನಿಯರು ಹೆಚ್ಚು ಜೀವಿತಾವಧಿ ಬದುಕುವ ಆಸಾಮಿಗಳು. ದೈಹಿಕವಾಗಿ ಗಟ್ಟಿ ಇರುತ್ತಾರೆ. ಜಪಾನಿಯರು ನೂರು, ನೂರು ಹತ್ತು ವರ್ಷಗಳ ಕಾಲ ಬದುಕುತ್ತಾರೆ. ಅತೀ ಹೆಚ್ಚು ಶತಾಯುಷಿಗಳಿರುವ ದೇಶ ಎಂಬ ಕೀರ್ತಿಗೆ ಜಪಾನ್ ಪಾತ್ರವಾಗಿದೆ. ಜಪಾನ್ ದೇಶದಲ್ಲಿ ಹತ್ತರಲ್ಲಿ ಕನಿಷ್ಠ ಎರಡು ಮನೆಗಳಲ್ಲಾದರೂ ಶತಾಯುಷಿ ಅಜ್ಜ-ಅಜ್ಜಿಯಂದಿರುತ್ತಾರೆ. ಜಪಾನ್ ದೇಶವನ್ನು ಮುದುಕರ ದೇಶವೆನ್ನಬಹುದು. ಆದರೆ ಅವರ ಬುದ್ಧಿವಂತಿಕೆ. ಆತ್ಮಸ್ಥೈರ್ಯವನ್ನು ಅಲ್ಲಗಳೆಯುವಂತಿಲ್ಲ. ಜಪಾನ್ ಪ್ರತಿ ಕ್ಷಣವೂ ಅಭಿವೃದ್ಧಿ ಪಥದತ್ತ ಸಾಗುತ್ತದೆ.
ಅತಿ ಹಚ್ಚು ದ್ವೀಪಗಳಿರುವ ಏಕೈಕ ದೇಶ!
ಜಪಾನ್ ಪ್ರವಾಸಿಗರಿಗೆ ಆಕರ್ಷಣೆಯ ತಾಣ. ಅಲ್ಲಿ ಹತ್ತಾರು ಅದ್ಭುತವಾದ ಪ್ರವಾಸಿ ತಾಣಗಳಿವೆ. ವಾರಗಟ್ಟಲೆ ವಿಸ್ಮಯವಾದ ಜಾಗಗಳಿಗೆ ಭೇಟಿ ಕೊಡಬಹುದು. ಅದರಲ್ಲೂ ಜಪಾನ್ ಅತಿ ಹೆಚ್ಚು ದ್ವೀಪಗಳಿರುವ ಏಕೈಕ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಹುತೇಕರಿಗೆ ಹೊನ್ಶು, ಹೊಕ್ಕೈಡೊ, ಕ್ಯುಶು ಮತ್ತು ಶಿಕೊಕು ಮುಖ್ಯ ದ್ವೀಪಗಳ ಬಗ್ಗೆ ತಿಳಿದಿದೆ. ಆದರೆ ಜಪಾನ್ ನಲ್ಲಿ ಬರೋಬ್ಬರಿ 6,800 ಕ್ಕೂ ಹೆಚ್ಚು ದ್ವೀಪಗಳಿವೆ. ಈ ದ್ವೀಪಸಮೂಹವು ಉತ್ತರದಲ್ಲಿ ಓಖೋಟ್ಸ್ಕ್ ಸಮುದ್ರದಿಂದ ದಕ್ಷಿಣದಲ್ಲಿ ಪೂರ್ವ ಚೀನಾ ಸಮುದ್ರದವರೆಗೆ 3,000 ಕಿಲೋಮೀಟರ್ (ಸುಮಾರು 1,860 ಮೈಲುಗಳು) ವ್ಯಾಪಿಸಿದೆ. ನಿಸರ್ಗದ ಅಷ್ಟೂ ಸೌಂದರ್ಯವನ್ನು ಮೈಗೆ ಮೆತ್ತಿಕೊಂಡು ಸದಾ ಕಂಗೊಳಿಸುತ್ತವೆ.