136 ಮಾರ್ಗಗಳಲ್ಲಿ ವಂದೇ ಭಾರತ್ ರೈಲು (Vande Bhart Train)ಗಳು ಸೇವೆ ಸಲ್ಲಿಸುತ್ತಿವೆ. ಆದರೆ ಈ ಏಪ್ರಿಲ್ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿರುವ ರೈಲು ವಿಭಿನ್ನವಾಗಿರುವುದಲ್ಲದೆ, ವಿಶೇಷವೂ ಹೌದು. ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಏಪ್ರಿಲ್ 16 ರಂದು ಕಾಶ್ಮೀರ (Kashmir) ಕ್ಕಾಗಿ ವಂದೇ ಭಾರತ್ ಚೇರ್ ಕಾರ್ (Vande Bharat chair car) ಅನ್ನು ಉದ್ಘಾಟಿಸಲಿದ್ದಾರೆ. ಇದು ಕತ್ರಾ (Katra) ಮತ್ತು ಶ್ರೀನಗರ (Srinagar) ನಡುವಿನ ದೂರವನ್ನು ಕೇವಲ ಮೂರು ಗಂಟೆಗಳಲ್ಲಿ ಕ್ರಮಿಸುತ್ತದೆ.

ಉಧಮ್‌ಪುರ ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆ (USBRL) ಪೂರ್ಣಗೊಂಡ ನಂತರ ಜಮ್ಮು ಮತ್ತು ಕಾಶ್ಮೀರ ನಡುವೆ ರೈಲು ಸಂಚಾರಕ್ಕೆ ಅವಕಾಶ ಸಿಕ್ಕಿದೆ. ಇಲ್ಲಿಯವರೆಗೆ, ಶ್ರೀನಗರ ಮತ್ತು ಸಂಗಲ್ದನ್ ರೈಲು ನಿಲ್ದಾಣಗಳ ನಡುವೆ ರೈಲುಗಳು ಕಾರ್ಯನಿರ್ವಹಿಸುತ್ತಿತ್ತು. ಈಗ, ಸಂಗಲ್ಡನ್ ಮತ್ತು ಕತ್ರಾ ನಡುವಿನ ವಿಭಾಗ ಪೂರ್ಣಗೊಂಡ ನಂತರ, ಈ ಪ್ರದೇಶಗಳ ನಡುವೆ ರೈಲುಗಳು ಕಾರ್ಯನಿರ್ವಹಿಸಲಿವೆ. ಪ್ರಧಾನ ಮಂತ್ರಿ ಅವರು ಏಪ್ರಿಲ್ 16 ರಂದು ಈ ವಿಭಾಗವನ್ನು ಉದ್ಘಾಟಿಸಲಿದ್ದಾರೆ.

ಯುಎಸ್‌ಬಿಆರ್‌ಎಲ್ ಯೋಜನೆಯನ್ನು 1994-95ರಲ್ಲಿ ಯೋಜಿಸಿ ಘೋಷಿಸಲಾಯಿತು ಆದರೆ ಕಾಶ್ಮೀರ ಕಣಿವೆಯ ಭಾಗವಾದ ಖಾಜಿಗುಂಡ್‌ನಿಂದ ಬಾರಾಮುಲ್ಲಾವರೆಗೆ 2009ರ ಹೊತ್ತಿಗೆ ಕಾರ್ಯರೂಪಕ್ಕೆ ಬಂದರೂ, ಕಣಿವೆಯ ಆಚೆಗಿನ ರೈಲ್ವೆ ಜಾಲಕ್ಕೆ ಸಂಪರ್ಕವು ಕನಸಾಗಿಯೇ ಉಳಿಯಿತು. ಈಗ, ಅಂಜಿ ಖಾಂಡ್ ಸೇತುವೆ ಮತ್ತು ಚೆನಾಬ್ ಸೇತುವೆ ಪೂರ್ಣಗೊಂಡ ನಂತರ, ಕಣಿವೆಯು ರೈಲುಗಳ ಮೂಲಕ ದೇಶದ ಉಳಿದ ಭಾಗಕ್ಕೆ ಸಂಪರ್ಕ ಹೊಂದಿದೆ.

136 ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಸೇವೆ ಸಲ್ಲಿಸುತ್ತಿವೆ. ಆದರೆ ಈ ಏಪ್ರಿಲ್ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿರುವ ರೈಲು ವಿಭಿನ್ನವಾಗಿರುವುದಲ್ಲದೆ, ವಿಶೇಷವೂ ಹೌದು. ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 16 ರಂದು ಕಾಶ್ಮೀರಕ್ಕಾಗಿ ವಂದೇ ಭಾರತ್ ಚೇರ್ ಕಾರ್ ಅನ್ನು ಉದ್ಘಾಟಿಸಲಿದ್ದಾರೆ. ಇದು ಕತ್ರಾ ಮತ್ತು ಶ್ರೀನಗರ ನಡುವಿನ ದೂರವನ್ನು ಕೇವಲ ಮೂರು ಗಂಟೆಗಳಲ್ಲಿ ಕ್ರಮಿಸುತ್ತದೆ.

vande-bharat 1

ವಿಶೇಷವಾಗಿ ವಿನ್ಯಾಸಗೊಳಿಸಿದ ವಂದೇ ಭಾರತ್

ವಿಂಡ್‌ಶೀಲ್ಡ್‌, ನೀರಿನಲ್ಲಿ ಸಿಲಿಕಾನ್ ಪ್ಯಾಡ್‌ಗಳು ಮತ್ತು ಬಯೋ-ಟಾಯ್ಲೆಟ್ ಟ್ಯಾಂಕ್‌ಗಳು, ಬಿಸಿಮಾಡಿದ ಪ್ಲಂಬಿಂಗ್ ಪೈಪ್‌ಲೈನ್‌ಗಳು ಮತ್ತು ಭಾರತೀಯ ಶೌಚಾಲಯಗಳಲ್ಲಿ ಹೀಟರ್‌ಗಳು ಇರುವುದು ಈ ರೈಲಿನ ವಿಶೇಷತೆ.

ವಂದೇ ಭಾರತ್‌ನಲ್ಲಿನ ಈ ನವೀಕರಣಗಳು ಈ ಚೇರ್ ಕಾರ್ ರೈಲುಗಳು ಕಾಶ್ಮೀರ ಮೈ ಕೊರೆಯುವ ಚಳಿಗಾಲದಲ್ಲಿಯೂ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಎಂಟು ಬೋಗಿಗಳ ಈ ರೈಲಿನಲ್ಲಿ ಎರಡು ಕ್ಲಾಸ್ ಗಳಿವೆ - ಒಂದು ಎಕ್ಸಿಕ್ಯೂಟಿವ್ ಕ್ಲಾಸ್ ಕೋಚ್ ಮತ್ತು ಏಳು ಎಸಿಗಳಿರುವ ಚೇರ್ ಕಾರ್ ಕೋಚ್‌ಗಳು.

ರೈಲು ಟಿಕೆಟ್‌ನ ಬೆಲೆ ಚೇರ್ ಕಾರ್‌ಗೆ 1,000 ರೂ. - 1,500 ರೂ. ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್‌ಗೆ 2,000 ರೂ. - 2,500 ರೂಪಾಯಿಯ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ.

ರೈಲುಗಳು ರಿಯಾಸಿ, ಸಂಗಲ್ಡನ್, ಬನಿಹಾಲ್ ಮತ್ತು ಅನಂತ್‌ನಾಗ್‌ನಲ್ಲಿ ನಿಲ್ಲುತ್ತವೆ ಮತ್ತು ಹಗಲಿನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತವೆ.