Thursday, October 30, 2025
Thursday, October 30, 2025

ಮಲರಿಕ್ಕಲ್‌ ವಾಟರ್‌ ಲಿಲ್ಲಿ ಫೆಸ್ಟಿವಲ್‌

ಮಲರಿಕ್ಕಲ್‌ ಗ್ರಾಮದಲ್ಲಿ ಸುಮಾರು 650 ಎಕರೆ ಭತ್ತದ ಗದ್ದೆಗಳೇ ಪ್ರತಿ ಆಗಸ್ಟ್‌, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ ತಿಂಗಳ ಪ್ರಾರಂಭದವರೆಗೂ ಪಿಂಕ್‌ ಲೇಕ್‌ ಗಳಾಗಿ ಗುರುತಿಸಿಕೊಂಡುತ್ತವೆ. ಇಲ್ಲಿ ಸುಂದರವಾಗಿ ಅರಳಿ ನಿಲ್ಲುವ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಗುಲಾಬಿ ಮತ್ತು ಬಿಳಿ ಬಣ್ಣದ ವಾಟರ್ ಲಿಲ್ಲಿಗಳು ಮತ್ತು ಕಮಲದ ಹೂವುಗಳಿಂದ ತುಂಬಿಕೊಂಡು ಪ್ರವಾಸಿಗರ ಕಣ್ಣಿಗೆ ಹಬ್ಬದ ಅನುಭವ ನೀಡುತ್ತದೆ.

ಸೂರ್ಯಕಾಂತಿ, ಚೆಂಡು ಹೂವು,ಗುಲಾಬಿ ಹೂದೋಟಗಳ ನಡುವೆ ನೀವು ವಿಹರಿಸಿರಬಹುದು.ಆದರೆ ದೋಣಿಯಲ್ಲಿ ತಾವರೆ ಕೊಳದ ನಡುವೆ ಸಾಗಿಬಂದ ಅನುಭವ ನಿಮಗಿದೆಯಾ..? ಇಂಥ ವಿಶೇಷ ಅನುಭವವನ್ನು ಪಡೆಯಬೇಕಾದರೆ ದೇವರ ನಾಡು ಎಂದೇ ಕರೆಸಿಕೊಂಡಿರುವ ಕೇರಳದ ಕೊಟ್ಟಾಯ ಜಿಲ್ಲೆಯ ಮಲರಿಕ್ಕಲ್‌ ಗ್ರಾಮದಲ್ಲಿ ನಡೆಯುವ ವಾಟರ್ ಲಿಲ್ಲಿ ಫೆಸ್ಟ್ ಗೆ ಈ ಕೂಡಲೇ ನೀವು ಭೇಟಿ ನೀಡಬೇಕು.

malarikkal lake 3

ನೈಸರ್ಗಿಕ ಅದ್ಭುತಗಳಿಗೆ ಹೆಸರುವಾಸಿಯಾಗಿರುವ ಕೇರಳ ರಾಜ್ಯ, ಪ್ರಾಕೃತಿಕ ದೃಶ್ಯಾವಳಿಗಳಿಂದ ತುಂಬಿರುವ ಅಸಂಖ್ಯಾತ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಅದರಲ್ಲೂ ಮಳೆಗಾಲ ಬಂದರಂತೂ ಇಲ್ಲಿನ ಪ್ರವಾಸೋದ್ಯಮ ಬಲು ಚುರುಕಾಗಿಬಿಡುತ್ತದೆ..ಮಳೆ, ಸರೋವರ, ಜಲಪಾತಗಳನ್ನೇ ಪ್ರವಾಸಿಗರನ್ನು ಆಕರ್ಷಿಸುವ ಅಸ್ತ್ರವನ್ನಾಗಿಸುತತಾರೆ. ಅಂಥ ಸೀಸನಲ್‌ ಟೂರಿಸಂ ಪೈಕಿ ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವುದು ಮಲರಿಕ್ಕಲ್‌ ಗ್ರಾಮದ ಸುಂದರವಾಗಿ ಪಿಂಕ್‌ ಲೇಕ್.

malarikkal lake 4

ಮಲರಿಕ್ಕಲ್‌ ಗ್ರಾಮದಲ್ಲಿ ಸುಮಾರು 650 ಎಕರೆ ಭತ್ತದ ಗದ್ದೆಗಳೇ ಪ್ರತಿ ಆಗಸ್ಟ್‌, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ ತಿಂಗಳ ಪ್ರಾರಂಭದವರೆಗೂ ಪಿಂಕ್‌ ಲೇಕ್‌ ಗಳಾಗಿ ಗುರುತಿಸಿಕೊಂಡುತ್ತವೆ. ಇಲ್ಲಿ ಸುಂದರವಾಗಿ ಅರಳಿ ನಿಲ್ಲುವ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಗುಲಾಬಿ ಮತ್ತು ಬಿಳಿ ಬಣ್ಣದ ವಾಟರ್ ಲಿಲ್ಲಿಗಳು ಮತ್ತು ಕಮಲದ ಹೂವುಗಳಿಂದ ತುಂಬಿಕೊಂಡು ಪ್ರವಾಸಿಗರ ಕಣ್ಣಿಗೆ ಹಬ್ಬದ ಅನುಭವ ನೀಡುತ್ತದೆ. ಆದರೆ ಸೂರ್ಯ ನೆತ್ತಯಮೇಲೆ ಬರುತ್ತಲೇ ಅರಳಿ ನಿಂತಿರುವ ಕಮಲಗಳು ಮುದುಡಿಬಿಡುವುದರಿಂದ ದಿನದ ಪ್ರಾರಂಭದಲ್ಲಿ ಅಂದರೆ, ಬೆಳಗ್ಗೆ 5.30ರಿಂದ 11 ಗಂಟೆಯ ಒಳಗಾಗಿ ಈ ಪರಿಸರದಲ್ಲಿ ನೀವು ಇರಲೇಬೇಕು. ಪ್ರತಿ ವ್ಯಕ್ತಿಗೆ ಸುಮಾರು 100 ರು.ಅಂತೆ ಸಣ್ಣ ದೋಣಿಗಳಲ್ಲಿ ಲಿಲ್ಲಿ ಹೊಲಗಳಿಗೆ ತೆರಳಬಹುದು.

ಫೋಟೋ ಕ್ಲಿಕ್ಕಿಸಿ ನೋಡಿ...

ಸ್ಥಳೀಯರನ್ನಷ್ಟೇ ಅಲ್ಲದೆ ದೇಶ-ವಿದೇಶಗಳಿಂದಲೂ ಪ್ರವಾಸಿಗರು ಭೇಟಿ ನೀಡುವ ವಾಟರ್‌ ಲಿಲ್ಲಿ ಫೆಸ್ಟಿವಲ್‌ ನಲ್ಲಿ ಫೋಟೋ ಶೂಟ್‌ ಗೂ ಅವಕಾಶವಿದೆ. ಗುಲಾಬಿ ಬಣ್ಣದ ತಾವರೆ ಕೊಳದ ನಡುವೆ ನಿಂತು ಫೋಟೋ ತೆಗೆಸಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿಕೊಂಡವರ ಸಂಖ್ಯೆಯಂತೂ ಲೆಕ್ಕಕ್ಕೆ ಸಿಗದು. ನೀವು ಛಾಯಾಗ್ರಹಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರೆ ತಪ್ಪದೇ ಒಮ್ಮೆ ಭೇಟಿ ನೀಡಿ.

malarikkal lake

ಪಿಂಕ್‌ ಲೇಕ್‌ ಇರುವುದೆಲ್ಲಿ ?

ಆಲಪ್ಪಿಯಿಂದ ಕೇವಲ 45 ಕಿಮೀ. ದೂರದಲ್ಲಿರುವ ಮಲರಿಕ್ಕಲ್‌, ಕೊಟ್ಟಾಯಂ ನಿಂದ ಸುಮಾರು 8 ಕಿಮೀ ಅಂತರದಲ್ಲಿದೆ. ಸ್ಥಳೀಯ ದೋಣಿ ವಿಹಾರಿಗಳು ಲಭ್ಯವಿರುವ ಈ ಸ್ಥಳವನ್ನು ನೀವು ಭೇಟಿ ನೀಡಬಯಸಿದರೆ ಗೂಗಲ್ ನಕ್ಷೆಗಳಲ್ಲಿ “ಮಲರಿಕ್ಕಲ್ ಟೂರಿಸಂ ವಾಟರ್ ಲಿಲ್ಲಿ ವ್ಯೂ ಪಾಯಿಂಟ್” ಅನ್ನು ಹುಡುಕಿ!

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!