ಚೆಲುವ ನಾರಾಯಣನ ಸನ್ನಿಧಿಗೆ ಕೆಎಸ್‌ಟಿಡಿಸಿ ಪ್ರವಾಸ ರಥ
ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿಯ ದೇವಸ್ಥಾನದಿಂದಲೇ ವಿಶ್ವವಿಖ್ಯಾತವಾಗಿದೆ ಎಂದರೆ ಅದು ತಪ್ಪಾಗದು. ಇದು ವಿಷ್ಣು ದೇವರಿಗೆ ಅರ್ಪಿತವಾಗಿರುವ ದೇವಸ್ಥಾನ. ಇದರ ಆಕಾರ ಮತ್ತು ಇತಿಹಾಸದಿಂದಾಗಿ ಇದಕ್ಕೆ ದಕ್ಷಿಣದ ಬದರಿನಾಥ ಎನ್ನುವ ಅನ್ವರ್ಥನಾಮವೂ ಇದಕ್ಕಿದೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ವೈರಮುಡಿ ಉತ್ಸವ ನೋಡಲು ದೇಶ-ವಿದೇಶಗಳಿಂದ ಭಕ್ತ ಮತ್ತು ಪ್ರವಾಸಿಗರ ಸಾಗರವೇ ಹರಿದು ಬರುತ್ತದೆ. ಇಲ್ಲಿಲ ನೆಲೆ, ಜಲ, ವಾಯುವಿನಲ್ಲೂ ಚೆಲುವ ನಾರಾಯಣನಿದ್ದಾನೆ ಎನ್ನುವುದು ಇಲ್ಲಿನ ಜನರ ನಂಬಿಕೆ.
ಮಹಿಳೆಯರು, ಮಕ್ಕಳು, ಯುವಕರು, ವೃದ್ಧರು ಎಲ್ಲರಿಗೂ ಪ್ರವಾಸ ಹೋಗುವ ಮನಸಿರುವುದು ಸಹಜ. ಹಲವು ಕಾರಣಗಳಿಂದ ಅವು ಕೆಲವೊಮ್ಮೆ ಕೈಗೂಡದಿರಬಹುದು. ಪುಟ್ಟ ಮಕ್ಕಳಿದ್ದಾರೆ, ಮನೆಕೆಲಸ ಸಾಕಷ್ಟಿವೆ, ಈಗ ಬೇಡ, ದೂರದ ಊರು ಹೀಗೆ ಹಲವು ಕಾರಣಗಳು ಪ್ರವಾಸಕ್ಕೆ ಅಡ್ಡಿಯಾಗುತ್ತಲೇ ಇರುತ್ತವೆ. ಆದರೆ ನೆನಪಿನಲ್ಲಿಡಿ ಡಾಕ್ಟರ್‌ಗಳೂ ಸಹ ʻಪ್ರವಾಸ ದಿ ಬೆಸ್ಟ್ ಟ್ರೀಟ್‌ಮೆಂಟ್ʼ ಎಂದು ಒಪ್ಪಿಕೊಳ್ಳುತ್ತಾರೆ. ಪ್ರವಾಸದಲ್ಲಿ ನೋಡುವ ಪ್ರವಾಸಿ ತಾಣಗಳು ಮತ್ತು ಆ ಸನ್ನಿವೇಶಗಳು ನಿಮ್ಮನ್ನು ಗಟ್ಟಿಯಾಗಿಸುತ್ತವೆ. ಮನಸಿನ ಭಾರಗಳನ್ನು ಮರೆಯಲು ಸಹಕಾರಿಯಾಗುತ್ತವೆ. ಹಾಗಾಗಿಯೇ ಸಾಧ್ಯವಾದಾಗಲೆಲ್ಲ ಡಾಕ್ಟರ್‌ಗಳೂ ಪ್ರವಾಸ ಮಾಡುತ್ತಾರೆ.
ಇದನ್ನೂ ಓದಿ: ಜೆಎಲ್‌ಆರ್‌ನವರ ಆನೆಝರಿ ನೇಚರ್ ಕ್ಯಾಂಪ್
ಅರಿತುಕೊಳ್ಳಿ ಪ್ರವಾಸ ಎಂದರೆ ಒಂದಷ್ಟು ಊರುಗಳನ್ನು ಸಾಯುವುದರೊಳಗೆ ನೋಡಿಬಿಡಬೇಕು ಎಂದು ಕಾಲುಕಿತ್ತು ಹೊರಟು ನೋಡಿಬರುವುದಲ್ಲ. ಅಲ್ಲಿ ನೋಡುವುದನ್ನೆಲ್ಲ ನಿಮ್ಮ ಮನಸು ದಾಖಲಿಸಿಕೊಳ್ಳುತ್ತದೆ. ಹಾಗಾಗಿ ಯಾವುದನ್ನು ನೋಡಬೇಕು? ಅಲ್ಲಿ ಏನನ್ನು ಮಾಡಬೇಕು, ವಾಸ್ತವ್ಯ ಎಲ್ಲಿ ಹೂಡಬೇಕು ಎಂದು ಮೊದಲೇ ತಿಳಿದಿರಬೇಕು. ಹಸಿರು ನೋಡಿದಷ್ಟೂ ಕಣ್ಣಿಗೆ ಒಳ್ಳೆಯದು, ಚಾರಣ ಮಾಡಿದಷ್ಟೂ ದೇಹಕ್ಕೆ ಒಳ್ಳೆಯದು. ವಿವಿಧ ಆಚರಣೆಗಳಲ್ಲಿ ಭಾಗಿಯಾದಷ್ಟೂ ಮನಸಿಗೆ ತುಂಬಾ ಒಳ್ಳೆಯದು. ಮನೆ ಮತ್ತು ನಿಮ್ಮ ಮನದ ಜಂಜಡಗಳಿಂದ ದೂರವಾಗಲು ಅನುವು ಮಾಡಿಕೊಡುವುದು ಇಂಥ ಪ್ರವಾಸ ಮಾತ್ರ. ಅಲ್ಲಿ ನೀವು ನೋಡುವುದಕ್ಕಿಂತ ಹೆಚ್ಚಾಗಿ ಅರಿತುಕೊಳ್ಳುತ್ತೀರಿ. ಮನದಲ್ಲಿನ ಬೇಡದ ಬೇಜಾರುಗಳನ್ನು ಹೊರಹಾಕಿ ಆತ್ಮೀಯ ಮತ್ತು ಸಂತಸದ ಕ್ಷಣಗಳನ್ನು ತುಂಬಿಕೊಳ್ಳುತ್ತೀರಿ. ಪ್ರವಾಸದಲ್ಲಿ ಸಂತಸರಸ ತೃಷೆಯಾಗಿ ತುಂತುಂಬಿ ಹರಿಯುತ್ತದೆ. ಈ ತೃಷೆಯಲ್ಲಿ ನಿಮ್ಮನ್ನು ಮಿಂದೇಳಿಸಲು ನಮ್ಮ ನಾಡಿನ ಪ್ರವಾಸೋದ್ಯಮ ನಿಗಮ ಸಜ್ಜಾಗಿದೆ. ಹೊಸ ಪ್ಯಾಕೇಜ್ ಅನ್ನೂ ಹೊರತಂದಿದೆ. ಎರಡೇ ದಿನಗಳ ಬಿಡುವು ಮಾಡುಕೊಂಡು ನೀವು ಸಜ್ಜಾಗಿ ಸಾಕು. ನಮ್ಮ ನಾಡು, ನುಡಿಗಳನ್ನು ಕೆಎಸ್‌ಟಿಡಿಸಿಗಿಂತ ಹೆಚ್ಚಾಗಿ ಅರಿತ ಯಾರುತಾನೆ ಬಲ್ಲರು. ಅದರ ಕೈ ಹಿಡಿದು ಮೇಲುಕೋಟೆಗೆ ಪ್ರವಾಸ ಮಾಡಿಬರಬಹುದು.

ಎರಡೇ ದಿನದ ಪ್ರವಾಸ ಇದಾಗಿರುವುದರಿಂದ ಹೆಚ್ಚು ಯೋಚಿಸಬೇಕಿಲ್ಲ. ದೊಡ್ಡ ಲಗೇಜ್ ಕಟ್ಟಬೇಕಿಲ್ಲ. ರಜೆ ಇಲ್ಲ, ಖರ್ಚು ಹೆಚ್ಚಾಗುತ್ತದೆ, ಮಕ್ಕಳ ಶಾಲೆ ತಪ್ಪುತ್ತದೆ ಎಂದು ಕಾರಣ ಹುಡುಕುವ ಅಗತ್ಯವಿಲ್ಲ. ವಾರಾತ್ಯದ ರಜೆಯೇ ಇದಕ್ಕೆ ಸಾಕು. ಆಗ ಶಾಲೆಗಳಿಗೂ ರಜೆ ಇರುತ್ತದೆ. ಹಾಗಾಗಿ ಮಕ್ಕಳನ್ನೂ ಕರೆದುಕೊಂಡು ಬಂದೆನಪ್ಪೋ ಗುರುವೇ ಚೆಲುವ ನಾರಾಯಣ ಪ್ರಭುವೆ ಎಂದು ಹೋಗಿ ಬರಬಹುದು.
ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ
ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿಯ ದೇವಸ್ಥಾನದಿಂದಲೇ ವಿಶ್ವವಿಖ್ಯಾತವಾಗಿದೆ ಎಂದರೆ ಅದು ತಪ್ಪಾಗದು. ಇದು ವಿಷ್ಣು ದೇವರಿಗೆ ಅರ್ಪಿತವಾಗಿರುವ ದೇವಸ್ಥಾನ. ಇದರ ಆಕಾರ ಮತ್ತು ಇತಿಹಾಸದಿಂದಾಗಿ ಇದಕ್ಕೆ ದಕ್ಷಿಣದ ಬದರಿನಾಥ ಎನ್ನುವ ಅನ್ವರ್ಥನಾಮವೂ ಇದಕ್ಕಿದೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ವೈರಮುಡಿ ಉತ್ಸವ ನೋಡಲು ದೇಶ-ವಿದೇಶಗಳಿಂದ ಭಕ್ತ ಮತ್ತು ಪ್ರವಾಸಿಗರ ಸಾಗರವೇ ಹರಿದು ಬರುತ್ತದೆ. ಇಲ್ಲಿಲ ನೆಲೆ, ಜಲ, ವಾಯುವಿನಲ್ಲೂ ಚೆಲುವ ನಾರಾಯಣನಿದ್ದಾನೆ ಎನ್ನುವುದು ಇಲ್ಲಿನ ಜನರ ನಂಬಿಕೆ. ವಿಶಾಲ ದೇವಸ್ಥಾನ, ಇಲ್ಲಿನ ವಾಸ್ತುಶಿಲ್ಪ, ಶಿಲ್ಪಕಲೆ, ಇತಿಹಾಸದ ಕುರುಹುಗಳು ಮತ್ತು ದೈವಿಕ ನಂಬಿಕೆಯಿಂದಾಗಿ ಮೇಲುಕೋಟೆ ಅಕ್ಷರಶಃ ಸರ್ವ ಕೋನಗಳಲ್ಲೂ ನೋಡುಗರನ್ನು ಮಂತ್ರಮುಗ್ದರನ್ನಾಗಿಸುವ ಪ್ರವಾಸಿ ತಾಣವಾಗಿದೆ.
ಪ್ಯಾಕೇಜ್
ದಿನ-1
ಮಧ್ಯಾಹ್ನ 2:00 ಗಂಟೆಗೆ ಬೆಂಗಳೂರಿನ ಯಶವಂತಪುರದಿಂದ ನಿರ್ಗಮನ
ಸಂಜೆ 4:00 – 4:30 ರವರೆಗೆ ಚನ್ನಪಟ್ಟಣ, ಅಂಬೆಕಲ್ಲು ಕೃಷ್ಣ ದೇವಸ್ಥಾನಕ್ಕೆ ಭೇಟಿ
ಸಂಜೆ 5:15 – 5:45 ರವರೆಗೆ ಮದ್ದೂರು ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ
ಸಂಜೆ 7:00 ಗಂಟೆಗೆ ಮೇಲುಕೋಟೆ ತಲುಪುವುದು
ಸಂಜೆ 7:00 – ಬೆಳಗ್ಗೆ 3.00 ರವರೆಗೆ ವೈರಮುಡಿ ಮೆರವಣಿಗೆ ಮತ್ತು ದೇವಸ್ಥಾನಕ್ಕೆ ಭೇಟಿ
ದಿನ- 2
ಬೆಳಗ್ಗೆ 3:00 ಗಂಟೆಗೆ ಮೇಲುಕೋಟೆಯಿಂದ ನಿರ್ಗಮನ
ಬೆಳಗ್ಗೆ 6:00 ಗಂಟೆಗೆ ಪ್ರವಾಸ ಬೆಂಗಳೂರಿನಲ್ಲಿ ಕೊನೆಗೊಳ್ಳುತ್ತದೆ

ಇಲ್ಲಿ ಗಮನಿಸಿ
ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.
ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಮತ್ತು ಸುಖಕರ ಪ್ರಯಾಣ.
ಆಯ್ಕೆ ಮಾಡಿಕೊಂಡ ಪ್ಯಾಕೇಜ್ ಅನ್ವಯ ಪ್ರವಾಸ
ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ
ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ
ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದೆ.
ಪ್ರವಾಸಿಗರಿಗೆ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜಿತ ಪ್ರವಾಸದ ಭರವಸೆಯನ್ನು ನೀಡುತ್ತದೆ.
ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.
ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.
ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನತಣಿಯುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.
ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಪ್ರವಾಸ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.
ಮಯೂರ ಪೈನ್ ಟಾಪ್ ನಂದಿ ಹಿಲ್ಸ್‌ನಲ್ಲಿ ಮಯೂರ ಆತಿಥ್ಯ
ಪ್ರವಾಸಕ್ಕೆ ಹೋದಾಗ ಅದರಲ್ಲೂ ಮನಶಾಂತಿಗಾಗಿ ಪ್ರವಾಸ ಹೋದಾಗ ಯಾವುದಾದರೂ ಹೊಟೇಲ್‌ನಲ್ಲಿ ಉಳಿದರಾಯಿತು ಎಂದು ಎಂದಿಗೂ ಯೋಚಿಸಬೇಡಿ. ಏಕೆಂದರೆ ಪ್ರವಾಸದಲ್ಲಿ ವಾಸ್ತವ್ಯಕ್ಕೂ ಒಂದು ಆಧ್ಯತೆ ಇದೆ. ಅದು ನಿಮ್ಮ ನೆನಪುಗಳನ್ನು ಅದರ ಜತೆಗೆ ನಿಮ್ಮ ಮನಶಾಂತಿಯನ್ನು ಮರೆಯಲಾಗದಂತೆ ಮನದಲ್ಲಿ ಉಳಿಸಿಬಿಡುತ್ತದೆ. ಮನೆಯಲ್ಲಿ ಇದ್ದಾಗಿನ ಗೋಳಾಟ ಹೊರಗೆ ಬಂದು ಹಣ ತೆತ್ತು ಉಳಿದಲ್ಲೂ ಇದ್ದರೆ ಅಂಥ ಅನುಭವಕ್ಕಾಗಿ ಪ್ರವಾಸ ಹೋಗುವುದರಲ್ಲಿ ಅರ್ಥವಿಲ್ಲದಂತಾಗುತ್ತದೆ. ಹಾಗಾಗಿ ಮನಶಾಂತಿಗಾಗೇ ನೀವು ಪ್ರವಾಸ ಮಾಡಿರುತ್ತೀರಿ ಎಂದಾದರೆ ಮಯೂರದಂಥ ಅನುಭವಿ ಹೊಟೇಲ್‌ಗಳಲ್ಲಿ ಉಳಿದುಕೊಳ್ಳಿ. ಅಲ್ಲಿ ಯಾವ ಸಮಸ್ಯೆಗಳೂ ನಿಮ್ಮನ್ನು ಭಾದಿಸುವುದಿಲ್ಲ. ಬದಲಿಗೆ ಉತ್ತಮ ಆತಿಥ್ಯ, ಆಹಾರ ಜತೆಗೆ ವಾಸ್ತವ್ಯವೇ ಒಂದು ಪ್ರವಾಸಿ ತಾಣದಂತೆ ಖುಷಿ ನೀಡುವ ವಾತಾವರಣವಿರುತ್ತದೆ. ನಿಮ್ಮನ್ನು ರಾಜರಂತೆ ಸತ್ಕರಿಸುತ್ತದೆ.

ಈಗಾಗಲೇ ಮಯೂರ ಹೊಟೇಲ್ ಕನ್ನಡ ನಾಡಿನ ತುಂಬೆಲ್ಲಾ ಅದರಲ್ಲೂ ಮುಖ್ಯವಾಗಿ ಪ್ರವಾಸಿ ತಾಣಗಳಲ್ಲಿ ತಳವೂರಿ ನಿಂತಿದೆ. ಹತ್ತಾರು ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಪಳಗಿರುವುದರಿಂದ ಪ್ರವಾಸಿಗರನ್ನು ಹೇಗೆ ಸತ್ಕರಿಸಬೇಕು ಎಂದು ಅದು ಬಲ್ಲದು. ಸರಳವಾಗಿ ಅರ್ಥಮಾಡಿಕೊಳ್ಳಬೇಕೆಂದರೆ, ವಿದೇಶಿಗರು ಕರ್ನಾಟಕದಲ್ಲಿ ಕಡಿಮೆ ಬಜೆಟ್‌ನಲ್ಲಿ ಉಳಿಯುವ ಹೊಟೇಲ್ ಯಾವುದು ಎಂದು ಹುಡುಕಿ ನೋಡಿ. ಹೆಚ್ಚಾನುಹೆಚ್ಚು ಅವರ ಆಯ್ಕೆ ಮಯೂರವೇ ಆಗಿರುತ್ತದೆ. ಅವರಿಗೆ ಮಯೂರ ಮತ್ತು ಅದರ ಆತಿಥ್ಯದ ಕುರಿತು ನಮ್ಮ ನಿಮ್ಮೆಲ್ಲರಿಗಿಂತ ತುಂಬಾ ಚೆನ್ನಾಗಿ ತಿಳಿದಿದೆ. ಏಕೆಂದರೆ ಅವರೆಲ್ಲಾ ತಿಂಗಳಾನುಗಟ್ಟಲೆ ಪ್ರವಾಸ ಮಾಡುವ ಮಂದಿ. ಹಾಗಾಗಿ ಪ್ರವಾಸದಲ್ಲಿ ಏನು ಮಾಡಬೇಕು, ಎಲ್ಲಿ ಉಳಿಯಬೇಕು, ಹೇಗೆ ಎಂಜಾಯ್ ಮಾಡಬೇಕು ಎಂದು ಅರಿತು ಅನುಭವಿಗಳಾಗಿದ್ದಾರೆ. ಆದ್ದರಿಂದ ಹೇಳುತ್ತಿದ್ದೇವೆ, ಬಾಂದಳದ ಹಕ್ಕಿಯಂತೆ ಪ್ರವಾಸಿ ತಾಣಗಳನ್ನು ಸುತ್ತಲು ಹೊರಡುವ ನೀವು ಬೆಚ್ಚನೆಯ ವಾಸ್ತವ್ಯಕ್ಕಾಗಿ ಜತೆಗೆ ಮತ್ತೆ ಪ್ರವಾಸಿ ಹುರುಪು ತುಂಬುವ ಹೊಟೇಲ್ ಮಯೂರದಲ್ಲಿ ಉಳಿದುಕೊಳ್ಳಿ. ಮಯೂರವೆಂದರೆ ಅದು ಅನುಭವಿ, ಬಜೆಟ್ ಮತ್ತು ಪ್ರವಾಸಿ ಸ್ನೇಹಿ ಹೊಟೇಲ್. ಕೆಎಸ್‌ಟಿಡಿಸಿ ಮೂಲಕ ಪ್ರವಾಸ ಕೈಗೊಳ್ಳುವ ಪ್ರತಿ ಪ್ರವಾಸಿಗನಿಗೂ ಮಯೂರ ವಾಸ್ತವ್ಯದ ವರ.
ಇದನ್ನೂ ಓದಿ: ಅಂಬಾರಿ ಹೊರೋ ಆನೆಗಳು ಇಲ್ಲೇ ಇವೆ!
ಅಲ್ಲಿನ ಸಿಬ್ಬಂದಿ ನಿಮ್ಮನ್ನು ಆತ್ಮೀಯವಾಗಿ ಸತ್ಕರಿಸುತ್ತಾರೆ, ಆಹಾರ ಮತ್ತು ಪ್ರವಾಸಿಗನ ಆದ್ಯತೆಗಳನ್ನು ಪೂರೈಸುತ್ತಾರೆ. ಅದರಲ್ಲೂ ನೀವು ಒಮ್ಮೆ ನಂದಿ ಬೆಟ್ಟದಲ್ಲಿನ ಹೊಟೇಲ್ ಮಯೂರದಲ್ಲಿ ಉಳಿದರೆ ಖಂಡಿತ ಮತ್ತೊಮ್ಮೆ ಮಯೂರ ನಿಮ್ಮನ್ನು ತಾನಾಗಿ ಕರೆಸಿಕೊಳ್ಳುತ್ತದೆ. ಅಂದರೆ ನೀವು ಅಲ್ಲಿನ ವಾಸ್ತವ್ಯಕ್ಕೆ ಮನಸೋತು ಮತ್ತೊಮ್ಮೆ ಅಲ್ಲಿಗೆ ಭೇಟಿ ನೀಡುತ್ತೀರಿ ಎಂದರ್ಥ. ನಂದಿ ಬೆಟ್ಟವೇ ಒಂದು ಸುಂದರ ಗಿರಿಧಾಮ. ಟಿಪ್ಪು ಸುಲ್ತಾನ್ ಮತ್ತು ಬ್ರಿಟೀಷರು ತಮ್ಮ ಬೇಸಗೆ ದಿನಗಳನ್ನು ಕಳೆಯಲು ಈ ದಿರಿಧಾಮವನ್ನು ಆರಿಸಿಕೊಂಡಿದ್ದರು ಎಂದಮೇಲೆ ಇಲ್ಲಿನ ಪರಿಸರ ವಾಸ್ತವ್ಯಕ್ಕೆ ಎಷ್ಟು ಸೂಕ್ತವಾಗಿರಬೇಕು ಒಮ್ಮೆ ನೀವೇ ಕಲ್ಪನೆ ಮಾಡಿಕೊಳ್ಳಿ. ಇಲ್ಲಿ ನೆಲೆ ನಿಂತಿರುವ ಮಯೂರವೂ ಸುಂದರವಾಗಿದೆ. ಸಮುದ್ರ ಮಟ್ಟದಿಂದ 1455 ಮೀಟರ್ ಎತ್ತರದಲ್ಲಿದೆ. ಹಾಗಾಗಿ ಥೇಟ್ ಬಾಂದಳದ ಪಕ್ಷಿಯಂತೆ ಸುತ್ತಲಿನ ಪರಿಸರವನ್ನು ನೋಡಲು ಅವಕಾಶ ಸಿಗುತ್ತದೆ. ಈ ಹೊಟೇಲ್‌ನಲ್ಲಿ ಒಟ್ಟು 17 ಕೊಠಡಿಗಳು ಇವೆ. ಅವುಗಳಲ್ಲಿ ಡಿಲಕ್ಸ್ ಮತ್ತು ಡಬಲ್ ಬೆಡ್‌ರೂಮ್ ಕೊಠಡಿಗಳೂ ಸೇರಿವೆ. ರುಚಿಯಾದ ಆಹಾರ ತಯಾರಿಸಿ ಬಡಿಸುವ ಒಂದು ರೆಸ್ಟೋರೆಂಟ್ ಮತ್ತು ಪ್ರವಾಸದ ಮಧ್ಯೆ ಒಂಚೂರು ಮತ್ತೇರಿಸಿಕೊಳ್ಳಲು ಬಾರ್ ಇದೆ. ಆಯ್ಕೆ ನಿಮ್ಮ ನಿಮ್ಮ ಅಗತ್ಯಕ್ಕೆ ಬಿಟ್ಟದ್ದು.
ಸಂಪರ್ಕ:
Yogesh. MK
Manager (Tours)
Mob No: +91 960 6987 822 | Email ID: tour.manager@kstdc.co
Karnataka State Tourism Development Corporation Ltd. (KSTDC)
Corporate Office: 5th Floor | Indhana Bhavan|Race Course Road | Opposite to Renaissance Hotel,
Bangalore- 560009 | Karnataka | India
Office: 080-43344334 | Fax: 080-43344376
Email: feedback@kstdc.co | info@kstdc.co | website: www.kstdc.co | www.goldenchariot.org