ಕೆಲವರಿಗೆ ಜೀವನದಲ್ಲಿ ಒಮ್ಮೆಯಾದರೂ ಐಷಾರಾಮಿ ಹೋಟೆಲ್‌ನಲ್ಲಿ ಒಂದು ರಾತ್ರಿ ಕಳೆಯಬೇಕು ಎಂಬ ಕನಸಿರುತ್ತದೆ. ಬಹುತೇಕರಿಗೆ ತಿಳಿದಿರುವಂತೆ ಐಷಾರಾಮಿ ಹೊಟೇಲ್‌ ಎಂದಮೇಲೆ ದುಬಾರಿಯಾಗಿರುತ್ತದೆ. ಆದರೆ ಅಲ್ಲಿನ ಸೌಲಭ್ಯಗಳು ಚೆನ್ನಾಗಿರುತ್ತವೆ. ಮನಸೆಳೆಯುವ ಫರ್ನಿಚರ್ಸ್,ಲೈಟಿಂಗ್ಸ್‌, ಈಜುಕೊಳ, ವಿಶೇಷ ಔತಣ ಹೀಗೆ ಎಲ್ಲಾ ರೀತಿಯ ಸೌಕರ್ಯಗಳಿರುತ್ತವೆ.

ನಿಮ್ಮಲ್ಲಿ ಹಲವರು ಜಗತ್ತಿನ ಅನೇಕ ಐಷಾರಾಮಿ ಹೋಟೆಲ್‌ಗಳನ್ನು ನೋಡಿರುತ್ತೀರಿ ಮತ್ತು ಕೇಳಿರುತ್ತೀರಿ. ಅವುಗಳಲ್ಲಿ ಬುರ್ಜ್ ಅಲ್ ಅರಬ್ ಹೋಟೆಲ್ ತೀರಾ ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಇದು ತನ್ನ ಐಷಾರಾಮಿ ಸೌಲಭ್ಯಗಳಿಗೆ ಹೆಸರುವಾಸಿಯಾಗಿದ್ದು, ವಿಶ್ವದ ಅತ್ಯಂತ ದುಬಾರಿ ಮತ್ತು ಚಿನ್ನದಿಂದ ಮಾಡಲ್ಪಟ್ಟ ಹೋಟೆಲ್ ಎಂದು ಖ್ಯಾತಿ ಹೊಂದಿದೆ.

ಬುರ್ಜ್‌ ಅಲ್ ಅರಬ್‌ ಹೊಟೇಲ್‌ ಬಗ್ಗೆ ನಿಮಗೆ ಗೊತ್ತಾ?
ದುಬೈನ ಜುಮೇರಾ ಬುರ್ಜ್ ಅಲ್ ಅರಬ್ ತನ್ನ ಚಿನ್ನದ ಅಲಂಕಾರಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ. ಹೋಟೆಲ್ 24-ಕ್ಯಾರೆಟ್ ಚಿನ್ನದ ಹೊದಿಕೆಯನ್ನು ಹೊಂದಿದೆ. ಇಲ್ಲಿ ಅತಿಥಿಗಳು ಗೋಲ್ಡನ್ ಅನುಭವ ಪಡೆಯಬಹುದು. ಹೋಟೆಲ್‌ನ ಉಳಿದ ಭಾಗಗಳಲ್ಲಿ ಚಿನ್ನದ ಅಲಂಕಾರಗಳನ್ನು ಸಹ ಕಾಣಬಹುದು. ಈ ಹೊಟೇಲ್ ಐಷಾರಾಮಿಯಾಗಿದ್ದು ವಿಶೇಷವಾಗಿದೆ.

48 ಲಕ್ಷವಿದ್ದರೆ ಒಳಗೆ ಬನ್ನಿ
ದುಬೈನ ಜುಮೇರಾ ಬುರ್ಜ್ ಅಲ್ ಅರಬ್ ಹೋಟೆಲ್‌ನಲ್ಲಿ ತಂಗಲು ಒಂದು ದಿನಕ್ಕೆ ಸುಮಾರು 48 ಲಕ್ಷ ರೂಪಾಯಿ ಖರ್ಚಾಗುತ್ತದೆ ಅಂದರೆ ಬರೋಬ್ಬರಿ ಅರ್ಧಕೋಟಿ. ಇದು ತೀರಾ ಐಷಾರಾಮಿ ಹೋಟೆಲ್‌ ಆಗಿದ್ದು, ಇಲ್ಲಿರುವ ಪ್ರತಿಯೊಂದು ವಸ್ತುವು ಚಿನ್ನದಿಂದ ಮಾಡಲ್ಪಟ್ಟಿದೆ. ಬಾತ್ರೂಮ್ಗೆ ಹೋದರೂ ಅಥವಾ ಕೋಣೆಯಲ್ಲಿನ ಹಾಸಿಗೆಯನ್ನು ನೋಡಿದರೂ, ಕೆಲವು ವಸ್ತುಗಳನ್ನು ಚಿನ್ನದಿಂದ ಕೆತ್ತಲಾಗಿದೆ. ಆ ಹೊಟೇಲ್‌ನಲ್ಲಿ ರಾಜ ಮತ್ತು ರಾಣಿ ಸ್ನಾನಗೃಹಗಳಿವೆ.. ಕೋಣೆಯ ಮುಂಭಾಗದ ನೋಟವು ಸಮುದ್ರದಿಂದ ಆವೃತವಾಗಿದೆ.

ಮಲಗಲು ಬಗೆಬಗೆಯ ಸೂಟ್‌ಗಳು

  • ಡ್ಯುಪ್ಲೆಕ್ಸ್ ಒಂದು ಮಲಗುವ ಕೋಣೆ ಸೂಟ್
  • ಡ್ಯುಪ್ಲೆಕ್ಸ್ ಸ್ಕೈ ಒನ್ ಬೆಡ್‌ರೂಮ್ ಸೂಟ್
  • ಡ್ಯುಪ್ಲೆಕ್ಸ್ ಒನ್ ಬೆಡ್‌ರೂಮ್ ಫ್ಯಾಮಿಲಿ ಸೂಟ್
  • ಡ್ಯುಪ್ಲೆಕ್ಸ್ ಪನೋರಮಿಕ್ ಸೂಟ್
  • ಡ್ಯುಪ್ಲೆಕ್ಸ್ ಕ್ಲಬ್ ಸೂಟ್
  • ಡ್ಯುಪ್ಲೆಕ್ಸ್ ಎರಡು ಮಲಗುವ ಕೋಣೆ ಸೂಟ್
  • ಡ್ಯುಪ್ಲೆಕ್ಸ್ ಸ್ಕೈ ಎರಡು ಬೆಡ್‌ರೂಮ್ ಫ್ಯಾಮಿಲಿ ಸೂಟ್
  • ಡ್ಯುಪ್ಲೆಕ್ಸ್ ರಾಜತಾಂತ್ರಿಕರ ಮೂರು ಬೆಡ್‌ರೂಮ್ ಸೂಟ್

    ಆ ಹೊಟೇಲ್‌ನಲ್ಲಿ ಎಂದಾದರೂ ಒಮ್ಮೆ ತಂಗುವ ಭಾಗ್ಯ ನಮ್ಮದಾಗಲಿ. ಏನಂತೀರಾ?