ಹಲವು ಪ್ರವಾಸಿಗರಿಗೆ ಕಡಲ ತೀರಗಳೆಂದರೆ ಬಹಳ ಇಷ್ಟ. ಮತ್ತೆ ಕೆಲವರು ಗುಡ್ಡ, ಕಾಡುಮೇಡುಗಳನ್ನು ಅಲೆಯುವುದರಲ್ಲಿ ಥ್ರಿಲ್‌ ಇದೆ ಎನ್ನುತ್ತಾರೆ. ಈ ಮಧ್ಯೆ ಇನ್ನೂ ಕೆಲವರು ಹೌಸ್‌ ಬೋಟಿಂಗ್‌ ಅನ್ನು ಎಂಜಾಯ್‌ ಮಾಡುತ್ತಾರೆ. ಹೌಸ್‌ ಬೋಟಿಂಗ್‌ ನಿಜಕ್ಕೂ ಅದ್ಭುತವಾದ ಅನುಭವವನ್ನು ನೀಡುತ್ತದೆ. ಇಡೀ ಪ್ರವಾಸ ಅದರಿಂದಾಗಿ ರಂಗೇರುತ್ತದೆ. ಅಲ್ಲಿ ಕಳೆಯುವ ಪ್ರತಿ ಕ್ಷಣವೂ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಪ್ರತಿಯೊಬ್ಬರೂ ಹೌಸ್‌ ಬೋಟಿಂಗ್‌ನಲ್ಲಿ ಮಜಾ ಮಾಡಬೇಕೆಂದು ಬಯಸುತ್ತಾರೆ. ಕಡಿಮೆ ಬಜೆಟ್‌ನಲ್ಲಿ ಎಂಜಾಯ್‌ ಮಾಡಬಹುದಾ? ಭಾರತದಲ್ಲಿ ಹೌಸ್‌ ಬೋಟಿಂಗ್‌ ಎಲ್ಲೆಲ್ಲಿ ಇವೆ? ಇಲ್ಲಿದೆ ಮಾಹಿತಿ.

ಕರ್ನಾಟಕ
ಹೌಸ್‌ ಬೋಟಿಂಗ್‌ ಎಂದರೆ ಎಲ್ಲರ ಆಯ್ಕೆ ಕೇರಳವಾಗಿರುತ್ತದೆ. ಆದರೆ ಕರ್ನಾಟಕದಲ್ಲೂ ಹೌಸ್‌ಬೋಟ್‌ಗಳಿವೆ. ಉಡುಪಿ ಪ್ರವಾಸ ಕೈಗೊಳ್ಳುವವರು ಅಲ್ಲಿಯೇ ಇರುವ ಹೌಸ್‌ ಬೋಟಿಂಗ್‌ನಲ್ಲಿ ಆನಂದಿಸಬಹುದು. ಪ್ರವಾಸಿಗರು ಬಜೆಟ್‌ಗೆ ತಕ್ಕ ಹಾಗೆ ಬೋಟಿಂಗ್‌ನಲ್ಲಿ ಎಂಜಾಯ್‌ ಮಾಡಲು ಅವಕಾಶವಿದೆ. ಅಂದಾಜು 3 ಸಾವಿರದಿಂದ 9 ಸಾವಿರ ರೂ.ವರೆಗೆ ಬೋಟಿಂಗ್‌ ದರ ಇರುತ್ತದೆ. ಪಾಂಚಜನ್ಯ ಕ್ರೂಸ್ ಹೆಸರಿನ ಹೌಸ್‌ ಬೋಟ್‌ ಕೋಡಿ-ಬೆಂಗ್ರೆ ಎಂಬ ಹಳ್ಳಿಯಲ್ಲಿ ಸ್ವರ್ಣಾ ನದಿಯ ಹಿನ್ನೀರಿನಲ್ಲಿದೆ. ಒಂದು ಕಡೆ ಸಮುದ್ರ ತೀರ ಮತ್ತು ಇನ್ನೊಂದು ಬದಿಯಲ್ಲಿ ಸ್ವರ್ಣ ನದಿಯ ಪ್ರಶಾಂತವಾದ ನೋಟವನ್ನು ಕಣ್ತುಂಬಿಕೊಳ್ಳಬಹುದು.

Udupi House boating


ಕೇರಳ
ಪ್ರವಾಸಿಗರಿಗೆ ಕೇರಳ ಅದಾ ಅಚ್ಚುಮೆಚ್ಚು. ಅಲ್ಲಿನ ಹಚ್ಚ ಹಸುರಿನ ವಾತಾವರಣ ಎಲ್ಲರ ಮನಸೂರೆಗೊಳಿಸುತ್ತದೆ. ಹಾಗಾಗಿ ಪ್ರವಾಸಿಗರ ಮೊದಲ ಆದ್ಯತೆ ಕೇರಳವಾಗಿರುತ್ತದೆ. ಕೇರಳದಲ್ಲೂ ವಿಸ್ಮಯ ಅನ್ನಿಸುವ ಹೌಸ್‌ ಬೋಟಿಂಗ್‌ಗಳಿವೆ. ಬೋಟಿಂಗ್‌ನಲ್ಲಿ ಆಸಕ್ತಿ ಇರುವವರು ಕೇರಳದ ಆಲಪ್ಪುಳ, ವೆಂಬನಾಡ್ ಮತ್ತು ಕೊಲ್ಲಂಗೆ ಭೇಟಿ ನೀಡಬೇಕು. ಅಲ್ಲಿ ಐಷಾರಾಮಿ ಮತ್ತು ಬಜೆಟ್‌ ಸ್ನೇಹಿ ಹೌಸ್‌ ಬೋಟ್‌ಗಳಿವೆ. ಬೋಟಿಂಗ್‌ ದರ ಸರಿ ಸುಮಾರು 5 ರಿಂದ 35 ಸಾವಿರ ರೂ.ವರೆಗೆ ಇರುತ್ತದೆ.

Azapulla Kerala


ಮಹಾರಾಷ್ಟ್ರ
ಮಹಾರಾಷ್ಟ್ರ ಅತ್ಯಂತ ಸುಂದರವಾದ ರಾಜ್ಯ. ಇಲ್ಲಿ ಅನೇಕ ಬಾಲಿವುಡ್‌ ತಾರೆಯರು ನೆಲೆಸಿದ್ದಾರೆ. ಸಿಂಧುದುರ್ಗ ಜಿಲ್ಲೆಯಲ್ಲಿರುವ ತರ್ಕರ್ಲಿ ಈ ರಾಜ್ಯದ ಒಂದು ಸಣ್ಣ ಹಳ್ಳಿ. ತರ್ಕರ್ಲಿಯು ಕಡಲತೀರಕ್ಕೆ ಸಾಕಷ್ಟು ಪ್ರಸಿದ್ಧವಾಗಿದೆ. ಅನೇಕ ಜನರು ತಮ್ಮ ವೀಕೆಂಡ್‌ ರಜೆ ಕಳೆಯಲು ಇಲ್ಲಿಗೆ ಬರುತ್ತಾರೆ. ಅಲ್ಲಿನ ಹೌಸ್‌ಬೋಟ್ ಅದ್ಭುತವಾಗಿರುತ್ತದೆ. ಬೋಟ್ ದರವು 8 ಸಾವಿರದಿಂದ 10 ಸಾವಿರದವರೆಗೆ ಇರುತ್ತದೆ.

Maharashtra boating


ಗೋವಾ
ಗೋವಾ ಪ್ರವಾಸಿಗರ ಹಾಟ್‌ ಸ್ಪಾಟ್.‌ ಪ್ರವಾಸದ ಹುಚ್ಚಿರುವ ಪ್ರತಿ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಹೋಗುತ್ತಾರೆ. ಗೋವಾದ ಬೀಚ್‌ಗಳು ಮತ್ತು ಇನ್ನಿತರ ತಾಣಗಳು ವಿಸ್ಮಯವಾಗಿವೆ. ಅದರಲ್ಲೂ ಗೋವಾದಲ್ಲಿರುವ ಹೌಸ್‌ಬೋಟ್‌ಗಳು ಪ್ರವಾಸಿಗರನ್ನು ಬೇರೆಯದ್ದೇ ಲೋಕಕ್ಕೆ ಕರೆದೊಯ್ಯುತ್ತದೆ. ಅಲ್ಲಿನ ಹೌಸ್‌ ಬೋಟಿಂಗ್‌ಗಳು ಬಜೆಟ್‌ ಸ್ನೇಹಿಯಾಗಿದ್ದು 4,500 ರಿಂದ 20,000 ರೂಗಳವರೆಗೆ ದರವಿರುತ್ತದೆ.

Goa House boating


ಕೋಲ್ಕತ್ತಾ
ಕೋಲ್ಕತ್ತಾ ಭಾರತದ ಅತ್ಯಂತ ಸುಂದರವಾದ ನಗರ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಇಲ್ಲಿ ಅನೇಕ ಅದ್ಭುತ ತಾಣಗಳಿವೆ. ಪ್ರವಾಸ ಕಳೆಕಟ್ಟಲು ಅಲ್ಲಿನ ಸುಂದರ್‌ಬನ್‌ನಲ್ಲಿರುವ ಹೌಸ್‌ಬೋಟ್‌ಗಳಲ್ಲಿ ಎಂಜಾಯ್ ಮಾಡಬೇಕು. ಇಲ್ಲಿನ ಹೌಸ್‌ಬೋಟ್‌ಗಳು 15 ರಿಂದ 30 ಸಾವಿರ ರೂ.ಗೆ ದೊರೆಯಲಿವೆ.

Kolakata House boating