Saturday, July 26, 2025
Saturday, July 26, 2025

ಸರೋವರಕ್ಕೆ ಕಸ ಎಸೆದ ಪ್ರವಾಸಿಗನನ್ನು ತರಾಟೆಗೆ ತೆಗೆದುಕೊಂಡ ವ್ಯಕ್ತಿ

ಉತ್ತರಾಖಂಡದ ಯುವ ಪ್ರವಾಸಿಯೊಬ್ಬ ನೈನಿತಾಲ್ ಸರೋವರಕ್ಕೆ ತಾನು ಬಳಸಿದ್ದ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ಎಸೆದಿದ್ದಕ್ಕಾಗಿ ಕರಣ್ ವರ್ಮಾ ಎಂಬ ಸ್ಥಳೀಯ ವ್ಯಕ್ತಿ ಆತನನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿದ್ದಾನೆ. ಮತ್ತು ಅದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.

  • ಪವಿತ್ರ

ಡೆಹ್ರಡೂನ್: ಇತ್ತೀಚಿಗೆ ಸಾರ್ವಜನಿಕ ಸ್ಥಳದಲ್ಲಿ ಐಸ್‌ಕ್ರೀಂ ಪೇಪರ್‌ ಎಸೆದ ಇಬ್ಬರು ವ್ಯಕ್ತಿಗಳನ್ನು ವಿದೇಶಿ ಮಹಿಳೆಯೊಬ್ಬಳು ತರಾಟೆಗೆ ತೆಗೆದುಕೊಂಡ ವಿಡಿಯೊವೊಂದು ವೈರಲ್‌ ಆಗಿತ್ತು. ಇದೀಗ ಉತ್ತರಾಖಂಡದ ಯುವ ಪ್ರವಾಸಿಯೊಬ್ಬ ನೈನಿತಾಲ್ ಸರೋವರದ ಬಳಿ ಕಸ ಎಸೆದು ಪರಿಸರವನ್ನು ಕಲುಷಿತಗೊಳಿಸಿದ್ದಕ್ಕಾಗಿ ಸ್ಥಳೀಯನೊಬ್ಬ ಆತನನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡು ಮುಜುಗರಕ್ಕೀಡಾಗುವಂತೆ ಮಾಡಿದ್ದಾನೆ. ಆ ವ್ಯಕ್ತಿ ಪ್ರವಾಸಿಗನನ್ನು ಟೀಕಿಸುತ್ತಿರುವ ವಿಡಿಯೊವನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನಂತರ ಅದು ಎಲ್ಲರ ಗಮನಸೆಳೆದು ವೈರಲ್ (Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ, ಪ್ರವಾಸಿಗನು ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ನೈನಿತಾಲ್ ಸರೋವರಕ್ಕೆ ಎಸೆದಿದ್ದು, ಆತನನ್ನು ಮತ್ತೊಬ್ಬ ವ್ಯಕ್ತಿ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಸೆರೆಯಾಗಿದೆ. ಪ್ರವಾಸಿಗನನ್ನು ತರಾಟೆಗೆ ತೆಗೆದುಕೊಂಡ ವ್ಯಕ್ತಿಯನ್ನು ಕರಣ್ ವರ್ಮಾ ಎಂದು ಗುರುತಿಸಲಾಗಿದೆ.ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ 1,41,529ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.

ಈ ಹಿಂದೆ ಭಾರತಕ್ಕೆ ಭೇಟಿ ನೀಡಿದ ವಿದೇಶಿ ಮಹಿಳೆಯೊಬ್ಬಳು ಕಸವನ್ನು ರಸ್ತೆಯಲ್ಲಿ ಎಸೆದ ಸ್ಥಳೀಯ ಯುವಕರ ಬೆವರಿಳಿಸಿದ್ದಳು. ಕಸವನ್ನು ತೆಗೆದು ಡಸ್ಟ್‌ಬಿನ್‌ಗೆ ಹಾಕುವಂತೆ ಸಲಹೆ ನೀಡಿದ್ದಳು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆಕೆಯ ದಿಟ್ಟ ನಿಲುವು ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆ ಮತ್ತು ಚರ್ಚೆ ಎರಡನ್ನೂ ಹುಟ್ಟುಹಾಕಿತ್ತು. ಅನುಚಿತ ವರ್ತನೆಯನ್ನು ಖಂಡಿಸಿದ್ದಕ್ಕಾಗಿ ಅನೇಕರು ಅವಳನ್ನು ಹೊಗಳಿದ್ದರು. ವಿಡಿಯೊದಲ್ಲಿ ಮಹಿಳೆ, ʼʼಅದು ನಿಮ್ಮ ಕಾಗದವೇ?" ಎಂದು ನೆಲದ ಮೇಲೆ ಬಿದ್ದಿರುವ ಐಸ್ ಕ್ರೀಮ್ ಕವರ್ ಅನ್ನು ತೋರಿಸುತ್ತಾ ಕೇಳಿದ್ದಳು. ಒಬ್ಬ ವ್ಯಕ್ತಿ ತಲೆಯಾಡಿಸಿ "ಹೌದು" ಎಂದು ಹೇಳಿದ್ದಾನೆ. ನಂತರ ಅವಳು, "ಅದನ್ನು ಎತ್ತಿಕೊಂಡು ಕಸದ ಬುಟ್ಟಿಗೆ ಹಾಕು" ಎಂದು ಹೇಳಿದ್ದಾಳೆ. ವಿಡಿಯೊದ ಕೊನೆಯಲ್ಲಿ, ಪಕ್ಕದಲ್ಲಿ ಕಸದ ಬುಟ್ಟಿ ಇಟ್ಟಿದ್ದರೂ ಸಹ, ಜನರು ಕಸ ಹಾಕುವುದರ ಬಗ್ಗೆ ಅವಳು ತನ್ನ ಹತಾಶೆಯನ್ನು ವ್ಯಕ್ತಪಡಿಸಿದ್ದಳು.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!